ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಶುಭಾಶಯಗಳ ಮಹಾಪೂರ

ತಮಿಳು ನಟ ಸೂರ್ಯ ಅವರಿಗೆ ಕರ್ನಾಟಕದಲ್ಲೂ ಅಭಿಮಾನಿ ಬಳಗವೆ ಇದೆ. ಕಳೆದ ವರ್ಷ ಸೂರರೈ ಪೊಟ್ರು ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟ ಈ ಬಾರಿ ’ಜೈ ಭೀಮ್’ ಎನ್ನುತ್ತಾ ಕನ್ನಡಿಗರ ಮನಗಳಿಗೆ ಲಗ್ಗೆ ಇಡಲು ಪ್ರವೇಶಿಸುತ್ತಿದ್ದಾರೆ. ಹೌದು ಸೂರ್ಯ ಅವರ ಮುಂದಿನ ಚಿತ್ರವೇ ’ಜೈ ಭೀಮ್’.

ಜುಲೈ 23 ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ’ಜೈ ಭೀಮ್’ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದ್ದು, ಹೊಸ ಚಿತ್ರದ ಫಸ್ಟ್ ಲುಕ್ ಅಭಿಮಾನಿಗಳಲ್ಲಿ ಪುಳಕ ಮೂಡಿಸಿದೆ. ‌ಐದು ಭಾಷೆಗಳಲ್ಲಿ ತೆರೆ ಕಾಣಲಿರುವ ಚಿತ್ರದಲ್ಲಿ ನಟ ಸೂರ್ಯ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

’ಜೈ ಭೀಮ್’ ಎಂಬ ಹೆಸರೇ ಕನ್ನಡಿಗರಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುಗೊಳಿಸಿದೆ. ನಿರ್ದೇಶಕ ಜ್ಞಾನವೇಲ್ ನಿರ್ದೇಶನದಲ್ಲಿ ಸೂರ್ಯ ನಟಿಸುತ್ತಿದ್ದು, ನಟಿ ರಜೀಶಾ ವಿಜಯನ್ ಸೂರ್ಯ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಿರುವ ನಟ ಸೂರ್ಯ ’ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ: ಪದ್ಮಶ್ರಿ ಪ್ರಶಸ್ತಿ ನೀಡಿ ಅಭಿಯಾನ: ವೈಜನಾಥ ಬಿರಾದಾರರವರ ಎರಡು ಹಾಸ್ಯ ‘ಸ್ವಗತಗಳು’

 

ಶೀರ್ಷಿಕೆ ಮತ್ತು ಫಸ್ಟ್ ಲುಕ್ ನೋಡಿದರೆ ಜಾತಿ ವ್ಯವಸ್ಥೆಯಂತಹ ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುವ ಸಾಧ್ಯತೆಯಿದೆ. ಚಿತ್ರದ ಪೋಸ್ಟರ್‌ನಲ್ಲಿ ನ್ಯಾಯಾಲಯದ ಕಟ್ಟದ, ಬುಡಕಟ್ಟು ಸಮುದಾಯದ ಜನ ಮತ್ತು ಕಪ್ಪು ಕೋಟ್ ಧರಿಸಿ, ಗಂಭೀರವಾಗಿ ಚಿಂತಿಸುತ್ತಿರುವ ಸೂರ್ಯ ಅವರ ಚಿತ್ರಣವಿದೆ.

ಜೈಭೀಮ್ ಚಿತ್ರ ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ನಟ ಸೂರ್ಯ ಅವರ 2 ಡಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಇದು ಅವರ ನಟನೆಯ 39ನೇ ಸಿನಿಮಾವಾಗಿದ್ದು, ಸೂರ್ಯ ಜೊತೆಗೆ ಪ್ರಕಾಶ್ ರಾಜ್,‌ ರಜಿಶಾ ವಿಜಯನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೀನ್‌ ರೋಲ್ಡನ್‌ ಸಂಗೀತ ನಿರ್ದೇಶನ, ಜನಪ್ರಿಯ ಆಕ್ಷನ್-ಕೊರಿಯೋಗ್ರಾಫರ್ ಅನ್ಬರೀವ್ ಸಾಹಸ ಚಿತ್ರಕ್ಕಿದೆ.

ಜೈ ಭೀಮ್ ಚಿತ್ರಕ್ಕೆ ಕನ್ನಡ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ. ಕನ್ನಡದಲ್ಲೂ ನಾಡಿನ ವಾಸ್ತವವನ್ನು ತಿಳಿಸುವ ಇಂತಹ ಚಿತ್ರಗಳು ಬರಬೇಕು ಎಂದು ಸಿನಿ ಪ್ರೇಕ್ಷಕರು ಒತ್ತಾಯಿಸಿದ್ದಾರೆ.

“ತಮಿಳಿನಲ್ಲಿ ವೆಟ್ರಿ ಮಾರನ್, ಪ.ರಂಜಿತ್, ಮಾರಿ ಸೆಲ್ವರಾಜ್, ಲೆನಿನ್ ಭಾರತಿ ಅಂತವರು ಪ್ರೇಕ್ಷಕ ಮತ್ತು ಅವರ ಅಭಿರುಚಿ ಮೇಲೆ ನಂಬಿಕೆ ಇಟ್ಟು, ವಾಸ್ತವದಲ್ಲಿ ಯಾವುದನ್ನ ಪ್ರೇಕ್ಷಕರ ಮುಂದೆ ಪ್ರಸ್ತುಪಡಿಸಬೇಕು ಎಂಬುದರ ಬಗ್ಗೆ ನಿರ್ದಿಷ್ಟ ಆಯ್ಕೆಗಳನ್ನಿಟ್ಟುಕೊಂಡು ಬಹಳ ಧೈರ್ಯದಿಂದ, ಇದುವರೆಗೂ ಭಾರತೀಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ವಾಸ್ತವಗಳನ್ನ ತಮ್ಮ ಸಿನಿಮಾಗಳಲ್ಲಿ ಹೇಳುತ್ತಿದ್ದಾರೆ. ಈ ಮೂಲಕ ಇವರು ಪ್ರೇಕ್ಷಕರನ್ನು ಬಹಳ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ” ಎಂದು ಬರಹಗಾರ ಯದುನಂದನ್ ಕೀಲಾರ ಬರೆದಿದ್ದಾರೆ.


ಇದನ್ನೂ ಓದಿ: ’ಮಹಾನಾಯಕ’ನಿಗೆ ಒಂದು ವರ್ಷ: ಧಾರಾವಾಹಿಯನ್ನು ಜನ ಅಪ್ಪಿಕೊಂಡ ಬಗೆ…

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

LEAVE A REPLY

Please enter your comment!
Please enter your name here