Homeಮುಖಪುಟಪದ್ಮಶ್ರಿ ಪ್ರಶಸ್ತಿ ನೀಡಿ ಅಭಿಯಾನ: ವೈಜನಾಥ ಬಿರಾದಾರರವರ ಎರಡು ಹಾಸ್ಯ 'ಸ್ವಗತಗಳು'

ಪದ್ಮಶ್ರಿ ಪ್ರಶಸ್ತಿ ನೀಡಿ ಅಭಿಯಾನ: ವೈಜನಾಥ ಬಿರಾದಾರರವರ ಎರಡು ಹಾಸ್ಯ ‘ಸ್ವಗತಗಳು’

ಎಂ.ಎಸ್.ಸತ್ಯು ನಿರ್ದೇಶನದ ‘ಬರ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಬಿರಾದರ ಮೂಲತಃ ವೃತ್ತಿ ರಂಗಭೂಮಿ ಕಲಾವಿದ...

- Advertisement -
- Advertisement -

ಸೆಪ್ಟೆಂಬರ್‌ 15 ರ ವರೆಗೆ ಪದ್ಮಶ್ರಿ ಪ್ರಶಸ್ತಿಗೆ ಸಾಧಕರ ಹೆಸರನ್ನು ಸೂಚಿಸುವಂತೆ ಪ್ರಧಾನಿ ಮೋದಿ ಕಳೆದ ಭಾನುವಾರ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಪದ್ಮಶ್ರಿ ಪ್ರಶಸ್ತಿ ನೀಡಬೇಕೆಂದು ಅಭಿಯಾನ ಪ್ರಾರಂಭವಾಗಿದ್ದವು. ಆದರೆ ಇದೀಗ ಕನ್ನಡ ಮತ್ತೊಬ್ಬ ಪ್ರತಿಭಾನ್ವಿತ ನಟ, ಕನ್ನಡ ಸಿನಿಮಾಗಳಲ್ಲಿ ಬಡವರ ಪ್ರತಿನಿಧಿ ವೈಜನಾಥ ಬಿರಾದಾರ ಅವರಿಗೆ ಪದ್ಮಶ್ರೀ ಸಿಗಬೇಕು ಎಂದು ಆನ್‌ಲೈನ್‌ ಅಭಿಯಾನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವೈಜನಾಥ ಬಿರಾದರ ಅವರ ಬಗ್ಗೆ ಶಶಿಧರ ಚಿತ್ರದುರ್ಗರವರು ಬರೆದ ಲೇಖನವನ್ನು ಮರು ಪ್ರಕಟಿಸುತ್ತಿದ್ದೇವೆ.

‘ವೈಜನಾಥ ಬಿರಾದಾರ’ ಎಂದಾಕ್ಷಣ ತೆರೆಯ ಮೇಲಿನ ಶೋಷಿತ ವ್ಯಕ್ತಿಯೊಬ್ಬನ ಚಿತ್ರ ಕಣ್ಮುಂದೆ ಬರುತ್ತದೆ. ಅವಮಾನ, ಬಡತನ, ಸಂಕಟಗಳನ್ನೆಲ್ಲಾ ಹೊಟ್ಟೆಯಲ್ಲಿಟ್ಟುಕೊಂಡು ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪಾತ್ರಗಳಲ್ಲೇ ಅವರು ಹೆಚ್ಚಾಗಿ ಕಾಣಿಸಿಕೊಂಡದ್ದು. ಹಿರಿಯ ನಟನಿಗೆ ಪದ್ಮಶ್ರಿ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗುತ್ತಿದೆ.

ಕಳೆದ ಮೂರೂವರೆ ದಶಕಗಳಿಂದ ವೃತ್ತಿರಂಗಭೂಮಿ ಮತ್ತು ಕನ್ನಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಟ ‘ವೈಜನಾಥ ಬಿರಾದಾರ’. ಅವರ ಹುಟ್ಟೂರು ಬೀದರ್ ಜಿಲ್ಲೆಯ ತೆಗಾಂಪೂರ್. ಎಂ.ಎಸ್.ಸತ್ಯು ನಿರ್ದೇಶನದ ‘ಬರ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಬಿರಾದರ ಮೂಲತಃ ವೃತ್ತಿ ರಂಗಭೂಮಿ ಕಲಾವಿದ. ನಟಿಸಿದ ಚಿತ್ರಗಳ ಸಂಖ್ಯೆ ಐನೂರರ ಆಸುಪಾಸಿನಲ್ಲಿದೆ. ತಮ್ಮ ‘ಬಿರಾದಾರ ಮಿತ್ರ ಮಂಡಳಿ’ ತಂಡದೊಂದಿಗೆ ಇಂದಿಗೂ ಅವರು ನಾಟಕಗಳನ್ನು ಪ್ರದರ್ಶಿಸುತ್ತಾರೆ. ಗಿರೀಶ್ ಕಾಸರವಳ್ಳಿಯವರ ‘ಕನಸೆಂಬೋ ಕುದುರೆಯನೇರಿ’ ಬಿರಾದಾರ ಅವರ ಮಹತ್ವದ ಚಿತ್ರಗಳಲ್ಲೊಂದು. ಸ್ಪೇನ್‍ನ ಮ್ಯಾಡ್ರಿಡ್ ‘ಇಂಡಿಯಾ ಇಮ್ಯಾಜಿನ್’ ಚಿತ್ರೋತ್ಸವದಲ್ಲಿ (2011) ಈ ಚಿತ್ರ ಪ್ರದರ್ಶನಗೊಂಡಿತ್ತು. ಚಿತ್ರೋತ್ಸವ ಕೊಡಮಾಡುವ ಅತ್ಯುತ್ತಮ ನಟ ಪುರಸ್ಕಾರ ಬಿರಾದಾರ ಅವರಿಗೆ ಸಂದಿದೆ.

ಸದ್ಯ ಕೊರೋನಾ ಸಂಕಟದಿಂದಾಗಿ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದರಿಂದಾಗಿ ತೊಂದರೆಗೀಡಾಗಿರುವುದು ಅವರ ಮಾತುಗಳಲ್ಲಿ ವೇದ್ಯವಾಗುತ್ತದೆ. “ಕಲಾವಿದರಿಗೆ ಸಂಕಷ್ಟ ಯಾವಾಗ ತಪ್ಪಿದೆ? ಕೊರೋನಾ ಕಾಲ ಕಲಾವಿದರಿಗೆ ಸಂಕಷ್ಟ ತಂದಿದೆ. ನಮಗೆ ಕಲೆ ಇದೆ, ಖಾಯಂ ನೆಲೆ ಇಲ್ಲ. ಹೀಗೇ ಜೀವನ ನಡೆಸಿಕೊಂಡು ಹೋಗ್ತಾ ಇರೋದು ಅಷ್ಟೆ” ಎನ್ನುತ್ತಾರವರು.

ಕನ್ನಡಿಗರು ತಮ್ಮ ಮೇಲಿಟ್ಟಿರುವ ಅಭಿಮಾನ, ಪ್ರೀತಿಗೆ ಋಣಿ ಎನ್ನುತ್ತಾರವರು. ಮುಂದೆ ಮತ್ತಷ್ಟು ವೈವಿಧ್ಯಮಯ ಪಾತ್ರಗಳಲ್ಲಿ ತೊಡಗಿಸಿಕೊಳ್ಳುವ ಇರಾದೆ ಅವರದ್ದು. ಈ ಸಂದರ್ಭದಲ್ಲಿ ಅವರು ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿನ ಎರಡು ಶೂಟಿಂಗ್ ಸೋಜಿಗಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ. (ಬಿರಾದಾರ್ ಅವರು ಹೇಳಿಕೊಂಡಂತೆ…)

ಅದೇ ಡಬ್ಬಿಂಗ್ ಕಣೋ!

‘ಶಂಖನಾದ’ ಚಿತ್ರದಲ್ಲಿ ನಟಿಸಿದ ನಂತರ ನಿರ್ದೇಶಕ ಉಮೇಶ್ ಕುಲಕರ್ಣಿ, ‘ಏನ್ ಬ್ರದರ್ ಡಬ್ಬಿಂಗ್ ಮಾಡ್ತಿಯೇನಪ್ಪ?’ ಎಂದು ಕೇಳಿದರು. ಅದಿನ್ನೂ ನನಗೆ ಎರಡನೇ ಸಿನಿಮಾ ಆದ್ದರಿಂದ ಡಬ್ಬಿಂಗ್ ಏನೆಂದೇ ಗೊತ್ತಿರಲಿಲ್ಲ. ಹಾಗಾಗಿ, ‘ಇಲ್ಲ ಸಾರ್’ ಅಂದೆ. ‘ಆಯ್ತು, ಬೆಳಗ್ಗೆ ಚಾಮುಂಡೇಶ್ವರಿ ಸ್ಟುಡಿಯೋಗೆ ಬಾ. ಅಲ್ಲಿ ನೋಡ್ಕೋವಂತೆ’ ಎಂದರು ಕುಲಕರ್ಣಿ. ಬೆಳಕ್ಕೆ 8ಕ್ಕೆ ಹೋಗಿ ತಿಂಡಿ ತಿಂದು ಸ್ಟುಡಿಯೋದಲ್ಲಿ ಕುಳಿತುಕೊಂಡೆ. ಮಧ್ಯಾಹ್ನ ಒಂದೂವರೆಗೆ ಊಟವೂ ಆಯ್ತು. ‘ಏನಪ್ಪಾ, ಡಬ್ಬಿಂಗ್ ನೋಡಿಕೊಂಡ್ಯಾ?’ ಅಂತ ಕೇಳಿದರು ಕುಲಕರ್ಣಿ. ನಾನು ಇಲ್ಲವೆಂದೆ. ‘ಮತ್ತೆ, ಬೆಳಗ್ಗೆಯಿಂದ ಇಲ್ಲಿ ಏನು ಮಾಡಿದೆ?’ ಎಂದರು ನಿರ್ದೇಶಕರು. ‘ನೀವು ಏನೇನೋ ಮಾಡ್ತಿದ್ರಲ್ಲಾ, ನೋಡ್ತಾ ಕುಳಿತಿದ್ದೆ’ ಎಂದೆ. ‘ಏ ದಡ್ಡಾ ಅದೇ ಡಬ್ಬಿಂಗ್ ಕಣೋ!’ ಅಂದ್ರು ಉಮೇಶ್ ಕುಲಕರ್ಣಿ.

ಫೋಟೋ ಕೃಪೆ: ಮನು

ಮೆಜಸ್ಟಿಕ್‍ನಲ್ಲಿ ತಗ್ಲಾಕ್ಕೊಂಡ ಕುಡುಕರು!

ಉತ್ತರ ಕರ್ನಾಟಕದಲ್ಲೊಂದು ನಾಟಕ ಮುಗಿಸಿಕೊಂಡು ಬಸ್‍ನಲ್ಲಿ ಬೆಂಗಳೂರಿಗೆ ಬಂದಿಳಿದೆ. ಮೆಜಸ್ಟಿಕ್‍ನಲ್ಲಿ ಬಸ್ ಇಳಿದು ಬಿಎಂಟಿಸಿ ಬಸ್‍ಸ್ಟ್ಯಾಂಡ್ ಕಡೆಗೆ ಬರ್ತಾ ಇದ್ದೆ. ಫುಲ್ ಟೈಟಾಗಿದ್ದ ಇಬ್ಬರು ಕುಡುಕರು ತೂರಾಡುತ್ತಾ ಎದುರಾದರು. `ಸಾರ್, ನೀವು! ನಾವು ನಿಮ್ ಅಭಿಮಾನಿಗಳು. ಬನ್ನಿ ನಮ್ಗೆ ಕಂಪನಿ ಕೊಡಿ..’ ಎಂದು ಕೈಹಿಡಿದುಕೊಂಡರು. ಇದೇನು ಅಭಿಮಾನವೋ, ಕುಚೇಷ್ಟೆಯೋ ಒಂದೂ ಗೊತ್ತಾಗಲಿಲ್ಲ. `ಇಲ್ರಪ್ಪಾ, ನಾನು ಕುಡುಕನ ಪಾತ್ರ ಮಾಡ್ತೀನಷ್ಟೆ, ಕುಡಿಯೋಲ್ಲ’ ಅಂದೆ. `ಲೇಯ್, ಸುಳ್ಳು ಹೇಳ್ಬೇಡ! ಕುಡೀದೇ ಹೆಂಗಲೆ ನಿಶೆ ಏರ್ತದೆ? ಈಗ ಸುಮ್ನೆ ಬತ್ತಿಯೋ, ಇಲ್ವೋ!?’ ಎಂದು ಎಳೆದಾಡತೊಡಗಿದರು. ಅಷ್ಟರಲ್ಲಿ ನನ್ನನ್ನು ಗುರುತು ಹಿಡಿದ ಮೂರ್ನಾಲ್ಕು ಮಂದಿ ಸಂಕಷ್ಟದಿಂದ ಪಾರು ಮಾಡಿದರು!

  • ಶಶಿಧರ ಚಿತ್ರದುರ್ಗ

ಇದನ್ನೂ ಓದಿ: ಹಿರಿಯ ನಟ ವೈಜನಾಥ ಬಿರಾದಾರ ಅವರಿಗೆ ‘ಪದ್ಮಶ್ರೀ’ ನೀಡಲು ಆಗ್ರಹಿಸಿ ಆನ್‌ಲೈನ್‌ ಅಭಿಯಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...