Homeಕರ್ನಾಟಕ2021ರ ಕರ್ನಾಟಕ ರಾಜಕೀಯ ಹಿನ್ನೋಟ; ನಾಯಕತ್ವ ಬದಲಾವಣೆಯೆ ಬಿಜೆಪಿ ಸರ್ಕಾರದ ಸಾಧನೆ!

2021ರ ಕರ್ನಾಟಕ ರಾಜಕೀಯ ಹಿನ್ನೋಟ; ನಾಯಕತ್ವ ಬದಲಾವಣೆಯೆ ಬಿಜೆಪಿ ಸರ್ಕಾರದ ಸಾಧನೆ!

- Advertisement -
- Advertisement -

2020ರ ವರ್ಷವನ್ನು ಕರಾಳ ಕೊರೊನಾ ತಿಂದು ಹಾಕಿತ್ತು. 2021ರಲ್ಲಾದರೂ ನಮ್ಮ ರಾಜ್ಯ ಚೇತರಿಕೆ ಕಾಣುತ್ತದೆಯೆಂದು ಭಾವಿಸಲಾಗಿತ್ತು. ಆದರೆ ಕೊರೊನಾ ಎರಡನೇ ಅಲೆ, ಆಕ್ಸಿಜನ್ – ಆಸ್ಪತ್ರೆ ಬೆಡ್‌ಗಳಿಗಾಗಿ ಹಾಹಾಕಾರ, ಸಾಲುಸಾಲು ಸಾವುಗಳು, ಮತ್ತೊಂದು ಲಾಕ್‌ಡೌನ್, ರಾಜ್ಯದ ಆರ್ಥಿಕ ಸಂಕಷ್ಟ, ಪ್ರವಾಹದಿಂದ ಬೆಳೆಹಾನಿ, ಹೆಚ್ಚಿದ ಮತೀಯ ಗೂಂಡಾಗಿರಿಗಳು, ಮತಾಂತರ ನಿಷೇಧ ಮಸೂದೆ ಚರ್ಚೆಯಲ್ಲಿಯೇ ಈ ವರ್ಷ ಕಳೆದುಹೋಯಿತು.

2021ರಲ್ಲಾದ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗಳೇನು ಎಂದು ಹಿಂತಿರುಗಿ
ನೋಡಿದರೆ ಎದ್ದುಕಾಣುವುದು ಸಿ.ಡಿ ಗದ್ದಲ ಮತ್ತು ನಾಯಕತ್ವ ಬದಲಾವಣೆ. 2021ರ ರಾಜಕೀಯ
ಬೆಳವಣಿಗೆಗಳನ್ನು ಅವಲೋಕಿಸುವುದು 2022ರಲ್ಲಾದರೂ ನಮ್ಮ ರಾಜ್ಯವನ್ನು ಸುಸ್ಥಿರವಾಗಿ ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಆದರೆ ಕಳೆದ ದಶಕದ ಕರ್ನಾಟಕದ ರಾಜಕಾರಣ ಅದಕ್ಕೆ ತದ್ವಿರುದ್ಧವಾಗಿದೆ. 2010 ರಿಂದ 2021ರವರೆಗಿನ 11 ವರ್ಷಗಳಲ್ಲಿ ಕರ್ನಾಟಕವು 8 ಬಾರಿ ನಾಯಕತ್ವ ಬದಲಾವಣೆಯನ್ನು, 6 ಮುಖ್ಯಮಂತ್ರಿಗಳನ್ನು ಕಂಡಿದೆ. (ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ಸಿದ್ದರಾಮಯ್ಯ, ಎಚ್.ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ). ಅದರಲ್ಲಿ ಬಿ.ಎಸ್ ಯಡಿಯೂರಪ್ಪನವರೊಬ್ಬರೆ ಅತ್ಯಲ್ಪ ಕಾಲದ ಎರಡು ದಿನಗಳವರೆಗೆ ಮುಖ್ಯಮಂತ್ರಿಯಾದದ್ದೂ ಸೇರಿದಂತೆ, ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯನವರು ಮಾತ್ರ 5 ವರ್ಷಗಳ ಕಾಲ ಪೂರ್ಣ ಆಡಳಿತ ನಡೆಸಿದ್ದು ಬಿಟ್ಟರೆ ಉಳಿದವರೆಲ್ಲರದೂ ಚಿಲ್ಲರೆ ವರ್ಷಗಳು. 2021ರಲ್ಲಿಯೂ ಇದೇ ಆಗಿದ್ದು, ಯಡಿಯೂರಪ್ಪ ಹೋಗಿ ಬೊಮ್ಮಾಯಿ ಬಂದ್ರು ಎಂಬಲ್ಲಿಗೆ ಬಂದು ನಿಂತಿದೆ.

ರಮೇಶ್ ಜಾರಕಿಹೊಳಿ ಸಿ.ಡಿ ಗದ್ದಲ

ಯುವತಿಯೋರ್ವಳಿಗೆ ಉದ್ಯೋಗದ ಆಮಿಷ ತೋರಿಸಿ ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ 2021ರ ಮಾರ್ಚ್‌ನಲ್ಲಿ ನೀರಾವರಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಗುರುತರ ಆರೋಪ ಕೇಳಿಬಂತು. ಆರಂಭದಲ್ಲಿ ಸಿ.ಡಿ ನನ್ನದ್ದಲ್ಲ ಎಂದು ಕೂಗಾಡಿದ್ದ ಅವರು ನಂತರ ಸಿ.ಡಿಯಲ್ಲಿರುವುದು ನಾನೇ ಎಂದು ಒಪ್ಪಿಕೊಂಡರು. ಅದಕ್ಕೂ ಆತಂಕಕಾರಿಯೆಂಬಂತೆ ’ಹೀಗೆ ಆಗುತ್ತದೆ ಎಂದು ನನಗೆ 4 ತಿಂಗಳ ಹಿಂದೆಯೇ ಗೊತ್ತಿತ್ತು. ಸಿಡಿ ಬಿಡುಗಡೆಯಾಗುವ 26 ಗಂಟೆಗಳ ಮೊದಲು ನನಗೆ ಹೈಕಮಾಂಡ್ ಹಿತೈಷಿಗಳಿಂದ ಕರೆ ಬಂದಿತ್ತು’ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಅದೇ ಸಂದರ್ಭದಲ್ಲಿ ರಮೇಶ ಜಾರಕಿಹೊಳಿಯೊಂದಿಗೆ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ 6 ಜನ ಸಚಿವರು ತಮ್ಮ ವಿರುದ್ಧ ಸಿ.ಡಿ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು!

2019ರಲ್ಲಿ ಮೈತ್ರಿ ಸರ್ಕಾರ ಬೀಳಿಸಿ, ಪಕ್ಷಾಂತರ ನಡೆಸಿ ಬಿಜೆಪಿ ಪಕ್ಷ ಸರ್ಕಾರ ರಚಿಸಲು ಏನೆಲ್ಲಾ ಕುಕೃತ್ಯಗಳನ್ನು ನಡೆಸಿದೆ ಎಂಬ ಬಗ್ಗೆ ಅನುಮಾನ ಮೂಡಿಸುವಂತೆ ಸಿ.ಡಿ ಪ್ರಕರಣ ಬೆಳಕಿಗೆ ಬಂದಿತ್ತು. ತದನಂತರ ಸಿಡಿ ತಯಾರಿಸಿದ ಯುವಕರನ್ನು ಬಂಧಿಸಿ ಜೈಲಿಗಟ್ಟಲಾಯಿತೆ ವಿನಃ ಸಿ.ಡಿಯಲ್ಲಿದ್ದ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿಯವರನ್ನು ಸರ್ಕಾರ ಬಂಧಿಸಲೇ ಇಲ್ಲ. ಇದಕ್ಕಾಗಿ ರಚಿಸಿದ್ದ ಎಸ್‌ಐಟಿ ತನಿಖೆ ಕುಂಟುತ್ತಲೇ ಸಾಗುತ್ತಿದೆ ಹೊರತು ತಾರ್ಕಿಕ ಅಂತ್ಯಕ್ಕೆ ಹೋಗುತ್ತಿಲ್ಲ. ತನ್ನನ್ನು ಬಂಧಿಸಿದರೆ ಸರ್ಕಾರ ಬೀಳಿಸಬೇಕಾಗುತ್ತದೆ ಎಂದು ರಮೇಶ್ ಜಾರಕಿಹೊಳಿ ಹಾಕಿದ ಬೆದರಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಜನರ ಆಶಯಗಳನ್ನು ಬದಿಗೊತ್ತಿದ ಸರ್ಕಾರ ಕೆಲವೇ ಪ್ರಭಾವಿಗಳಿಗೆ ತಗ್ಗಿಬಗ್ಗಿ ನಡೆಯುವುದನ್ನು ಪ್ರಜಾತಂತ್ರ ಎಂದು ಕರೆಯಲಾಗುತ್ತದೆಯೆ?

ಮುಖ್ಯಮಂತ್ರಿ ಬದಲಾವಣೆಯ ಪ್ರಹಸನ

2021ರ ಜುಲೈ 26ರಂದು ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ಸಾಧನ ಸಮಾವೇಶದಲ್ಲಿ ಮಾತನಾಡುತ್ತ, “ಎಲ್ಲಾ ಸಂದರ್ಭದಲ್ಲೂ ಅಗ್ನಿಪರೀಕ್ಷೆ ಎದುರಾಗಿತ್ತು. ನಾನು ಅಧಿಕಾರ ವಹಿಸಿಕೊಂಡಾಗ ಕೇಂದ್ರದವರು ಎರಡು ತಿಂಗಳು ಮಂತ್ರಿಮಂಡಲ ರಚಿಸಲು ಬಿಡಲಿಲ್ಲ. ಪ್ರವಾಹ ಶುರುವಾಯಿತು, ಎಲ್ಲಾ ಕಡೆ ಹುಚ್ಚನಂತೆ ಸುತ್ತಬೇಕಾಯಿತು” ಎಂದು ಕಣ್ಣೀರು ಹಾಕಿದ್ದರು. ಆ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯದ ಆಡಳಿತದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸುತ್ತಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದರು. ಆ ಇಡೀ ಮುಖ್ಯಮಂತ್ರಿ ಬದಲಾವಣೆಯ ಪ್ರಹಸನ ಪ್ರಜಾತಂತ್ರವನ್ನು, ಒಕ್ಕೂಟ ವ್ಯವಸ್ಥೆಯ ಮೂಲತತ್ವವನ್ನು ಅಣಕಿಸುವಂತಿತ್ತು. ಜನರಿಗೆ ಗೊತ್ತಿರುವುದಿರಲಿ ಆಯ್ಕೆಯಾದ ಬಿಜೆಪಿ ಶಾಸಕರುಗಳಿಗೂ ಅಂದು ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಗೊತ್ತಿರಲಿಲ್ಲ.

ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ತೀರಾ ಎದುರು ಹಾಕಿಕೊಳ್ಳದೆ ಅವರ ಆಪ್ತ ಎನ್ನಲಾದ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಎಂದು ಘೋಷಿಸಿತು. ಜಿ ಹುಜೂರ್ ಎಂದು ಎಲ್ಲಾ ಬಿಜೆಪಿ ಶಾಸಕರು ಒಪ್ಪಿಕೊಂಡರು. ಅದುವರೆಗೂ ಯಡಿಯೂರಪ್ಪನವರನ್ನು ಕೆಳಗಿಳಿಸಬಾರದೆಂದು ಕೂಗಾಡಿದ್ದ ಎಲ್ಲಾ ಮಠಾಧೀಶರು ತಮ್ಮ ಜಾತಿಯವರೆ ಮುಖ್ಯಮಂತ್ರಿಯಾದುದ್ದಕ್ಕೆ ಸಂತೃಪ್ತಿಪಟ್ಟುಕೊಂಡರು. ಸ್ವಂತ ಬಲದಲ್ಲಿ ನಾಯಕನಾಗಿ ಹೊರಹೊಮ್ಮದೆ, ಶಾಸಕರ ಬೆಂಬಲವಿಲ್ಲದೇ ಹೈಕಮಾಂಡ್ ಕೃಪಾಕಟಾಕ್ಷದಿಂದ ಸಿಎಂ ಆದ ಬೊಮ್ಮಾಯಿಯವರು ಪಕ್ಷದ ಹಿರಿಯ ನಾಯಕರನ್ನು ಮೆಚ್ಚಿಸುವ ಕೆಲಸವನ್ನಷ್ಟೇ ಮಾಡಿದರು. ’ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ, ಭಾವನೆಗಳಿಗೆ ಧಕ್ಕೆಯಾದರೆ ಸುಮ್ಮನಿರಲು ಸಾಧ್ಯವೆ’ ಎಂಬ ಹೇಳಿಕೆ ನೀಡುವ ಮೂಲಕ ಮತೀಯ ಗೂಂಡಾಗಿರಿಗೆ ಬಹಿರಂಗ ಸಮ್ಮತಿ ಸೂಚಿಸಿದರು.

ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಬಾಕಿ ಪೂರ್ಣ ಪ್ರಮಾಣದಲ್ಲಿ ಬರಲಿಲ್ಲ. 15ನೇ ಹಣಕಾಸು ಸಮಿತಿ ಸೂಚನೆಯಂತೆ ರಾಜ್ಯಕ್ಕೆ 5,495 ಕೋಟಿ ರೂ ಕೇಂದ್ರದಿಂದ ಬರಬೇಕಿತ್ತು. ಅದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ತಿರಸ್ಕರಿಸಿದರು. ರಾಜ್ಯ ನಾಯಕರು ಅದನ್ನು ಪ್ರಶ್ನಿಸಲಿಲ್ಲ. ನೆರೆ ಪರಿಹಾರ ಸಮರ್ಪಕವಾಗಿ ಬರಲಿಲ್ಲ, ಕೊನೆಗೆ ರೈತರಿಗೆ ಬೆಳೆ ಪರಿಹಾರವನ್ನೂ ಸಹ ನೀಡಲಾಗಿಲ್ಲ, ಕೋವಿಡ್‌ನಿಂದಾದ ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ಸಂಪೂರ್ಣವಾಗಿ ನೀಡಲಾಗಿಲ್ಲ.. ಪಟ್ಟಿ ಬೆಳೆಯುತ್ತಲೆ ಇರುತ್ತದೆ ಹೊರತು ಕರ್ನಾಟಕ ಸಮಾಧಾನ ಪಟ್ಟುವಕೊಳ್ಳುವ ಒಂದು ಕ್ರಮವೂ ಈ ಸರ್ಕಾರದಿಂದ ಜರುಗುತ್ತಿಲ್ಲ.

ದಲಿತರು, ಅಲ್ಪಸಂಖ್ಯಾತರ ಮೇಲೆ ಹೆಚ್ಚಿದ ದಮನ

ರಾಜ್ಯದಲ್ಲಿ ತೀವ್ರ ವಿರೋಧದ ನಡುವೆಯು ಬಿಜೆಪಿ ಸರ್ಕಾರ ಫೆಬ್ರವರಿ ತಿಂಗಳಿನಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಿತು. ಅದು ಜಾರಿಗೊಂಡ ನಾಲ್ಕು ತಿಂಗಳ ಅವಧಿಯಲ್ಲಿಯೇ 29 ಎಫ್‌ಐಆರ್ ಸೇರಿದಂತೆ ಒಟ್ಟು 58 ಪ್ರಕರಣಗಳನ್ನು ರಾಜ್ಯ ಪೊಲೀಸರು ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀಹೆಚ್ಚು ಪ್ರಕರಣ ದಾಖಲಾಗಿದ್ದು, ಮೈಸೂರು ಎರಡನೆ ಸ್ಥಾನದಲ್ಲಿದೆ. ಇದರಿಂದ ಜನರ ಜೀವನೋಪಾಯವನ್ನು ಅಪರಾಧೀಕರಿಸುವ ಪ್ರಕ್ರಿಯೆಗಳು ಆರಂಭವಾಗಿದ್ದು, ಗೂಂಡಾಗಿರಿಯನ್ನು ಕಾನೂನುಬದ್ಧಗೊಳಿಸಲಾಗುತ್ತಿದೆ. ಇದರಿಂದ ರೈತರು, ಮಾಂಸದ ವ್ಯಾಪಾರಿಗಳು ಸೇರಿದಂತೆ ಬಡವರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ’ಆಹಾರ ನಮ್ಮ ಹಕ್ಕು ಒಕ್ಕೂಟ’ದ ಅಧ್ಯಯನ ವರದಿ ತಿಳಿಸಿದೆ.

2021ರ ಜನವರಿಯಿಂದ ನವೆಂಬರ್‌ವರೆಗೆ ಕ್ರಿಶ್ಚಿಯನ್ನರ ಮೇಲೆ 39 ದ್ವೇಷ-ಹಲ್ಲೆ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ ಎಂದು ಪಿಯುಸಿಎಲ್ ವರದಿ ಹೇಳಿದೆ. ನವೆಂಬರ್ ಡಿಸೆಂಬರ್‌ನಲ್ಲಿಯೂ ಸಹ ಚರ್ಚ್‌ಗಳ ಮೇಲೆ, ಕ್ರಿಶ್ಚಿಯನ್ ಶಾಲೆಗಳ ಮೇಲೆ ಬಲಪಂಥೀಯ ಕಾರ್ಯಕರ್ತರಿಂದ ದಾಳಿಗಳು ನಡೆದಿವೆ. ಅವುಗಳನ್ನು ಇನ್ನೂ ಉತ್ತೇಜಿಸಲೇನೋ ಎಂಬಂತೆ ರಾಜ್ಯ ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಭಾರೀ ಪ್ರಯತ್ನ ನಡೆಸಿದೆ.

ಅಲ್ಲದೆ ಅನ್ಯ ಧರ್ಮದ ಯುವಕ-ಯುವತಿಯರು ಪ್ರೀತಿಸಿದರೆ, ಜೊತೆಯಲ್ಲಿ ಓಡಾಡಿದರೆ ಅವರಿಗೆ ಹಿಂಸೆ ನೀಡುವ ಮತೀಯ ಗೂಂಡಾಗಿರಿ ಪ್ರಕರಣಗಳು ಸಹ 2021ರಲ್ಲಿ ಅತಿಯಾಗಿವೆ. ಸೆಪ್ಟಂಬರ್-ಅಕ್ಟೋಬರ್‌ನ ಕೇವಲ ಎರಡು ತಿಂಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಿಎಂ ಬೊಮ್ಮಾಯಿಯವರೆ ಅವುಗಳನ್ನು ಪರೋಕ್ಷವಾಗಿ ಸಮರ್ಥಿಸಿದ ಮೇಲೆ ಆರೋಪಿಗಳನ್ನು ಮಟ್ಟ ಹಾಕುವುದು ಅಥವಾ ಶಿಕ್ಷೆ ನೀಡುವುದು ಹೇಗೆ ಸಾಧ್ಯವಾಗಬೇಕು? ಇನ್ನು ಇದೇ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು, ದೇವಸ್ಥಾನ ಪ್ರವೇಶ ತಡೆ ಪ್ರಕರಣಗಳು ಸಹ ಹೆಚ್ಚಾಗಿವೆ. ಸಿಎಂ ತಮ್ಮ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿ ಹೆಣಗಾಡುತ್ತಿರುವಾಗ ಇವೆಲ್ಲವು ಅವರಿಗೆ ಲೆಕ್ಕಕ್ಕಿಲ್ಲದ್ದಾಗಿವೆ.

2021ರ ವಿವಿಧ ಚುನಾವಣೆಗಳು ಮತ್ತು ಫಲಿತಾಂಶ

ಈ ವರ್ಷ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಬಸವ ಕಲ್ಯಾಣ ಮತ್ತು ಸಿಂದಗಿಯಲ್ಲಿ ಬಿಜೆಪಿ ಜಯಗಳಿಸಿದರೆ, ಮಸ್ಕಿ ಮತ್ತು ಹಾನಗಲ್‌ನಲ್ಲಿ ಕಾಂಗ್ರೆಸ್ ವಿಜಯಿಯಾಯಿತು. ಜೆಡಿಎಸ್ ಎಲ್ಲಿಯೂ ಠೇವಣಿ ಉಳಿಸಿಕೊಳ್ಳಲಿಲ್ಲ. ಹಾಲಿ ಸಿಎಂ ಬೊಮ್ಮಾಯಿಯವರ ತವರು ಕ್ಷೇತ್ರ ಹಾನಗಲ್‌ನಲ್ಲಿಯೇ ಬಿಜೆಪಿಗೆ ಮುಖಭಂಗವಾಗಿದ್ದು ಗಮನಾರ್ಹವಾದುದಾಗಿದೆ. ಇನ್ನು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರು ತಿಣುಕಾಡಿ ಕೂದಲೆಳೆ ಅಂತರದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಗೆದ್ದರು.

ಇನ್ನು ವಿಧಾನಪರಿಷತ್ ಚುನಾವಣೆಗೆ ಬಂದರೆ ಆಡಳಿತಾರೂಢ ಬಿಜೆಪಿ 11, ಪ್ರತಿಪಕ್ಷ ಕಾಂಗ್ರೆಸ್ 11, ಜೆಡಿಎಸ್ 02, ಪಕ್ಷೇತರ 01 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಆಡಳಿತ ಪಕ್ಷದಲ್ಲಿದ್ದರೂ ಬಿಜೆಪಿ ಕೇವಲ 11 ಸ್ಥಾನ ಗೆದ್ದಿದ್ದು ದೊಡ್ಡ ಮುಖಭಂಗ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವೇ ಈ ಫಲಿತಾಂಶಕ್ಕೆ ಕಾರಣ ಎನ್ನಲಾಗುತ್ತಿದೆ. ಇನ್ನೊಂದೆಡೆ ಪ್ರತಿಪಕ್ಷ ಕಾಂಗ್ರೆಸ್ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಪ್ರತಿಪಕ್ಷಗಳ ಜವಾಬ್ದಾರಿ

ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ಪ್ರತಿ ನಡೆಯನ್ನು ವಿರೋಧಿಸುತ್ತಲೆ ಬಂದಿದೆ. ಮುಂದಿನ ವಿಧಾನಸಭಾ ಚುನಾವಣೆ ಇನ್ನು ಒಂದುಕಾಲು ವರ್ಷದಲ್ಲಿ ಬರುವ ಕಾರಣದಿಂದಲೂ ಇರಬಹುದು, ಕಾಂಗ್ರೆಸ ತುಸು ಚುರುಕಾಗಿರುವಂತೆ ತೋರುತ್ತಿದೆ. ರಾಜ್ಯದಲ್ಲಿ ಜಾರಿಗೊಂಡ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ದೊಡ್ಡ ದನಿಯೆತ್ತಿದೆ. ಈ ಕುರಿತು ವಿಧಾನಸಭಾ ಅಧಿವೇಶನಗಳಲ್ಲಿ ಭಾರೀ ಚರ್ಚೆ ನಡೆಸಿದೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಪಕ್ಷದ ಮುಖಂಡರಾದ ಎಚ್.ಡಿ ಕುಮಾರಸ್ವಾಮಿಯವರು ಆಡಳಿತ ಪಕ್ಷ ಬಿಜೆಪಿಯ ನಡೆಗಳನ್ನು ವಿಮರ್ಶಿಸುವ ಬದಲು ಕಾಂಗ್ರೆಸ್ ವಿರುದ್ದ ಕಿಡಿಕಾರುವುದರಲ್ಲಿಯೇ ತಮ್ಮ ಶಕ್ತಿ ವ್ಯಯ ಮಾಡಿಕೊಳ್ಳುತ್ತಿದ್ದಾರೆ. ಅದು ಆಡಳಿತ ಪಕ್ಷ ಬಿಜೆಪಿಗೆ ವರವಾಗಿ ಪರಿಣಮಿಸಿದೆ.

2022 ಮುಂದೇನು?

2022ರ ಆರಂಭದಲ್ಲಿಯೇ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಇಳಿಸಿ ನಾಯಕತ್ವ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂಬ ಸುದ್ದಿಗೆ ರೆಕ್ಕೆಪುಕ್ಕಗಳು ಮೂಡಿವೆ. ಇದು ಅಸ್ಥಿರ ಆಡಳಿತದ ಮುಂದುವರಿದ ಭಾಗವಾಗಿರುತ್ತದೆಯೇ ಹೊರತು ಮತ್ತೇನು ಅಲ್ಲ. ಹಾಗಾಗಿ ರಾಜ್ಯದ ಅಭಿವೃದ್ದಿ, ದಕ್ಷ ಆಡಳಿತವನ್ನು ಕನ್ನಡಿಗರು ನಿರೀಕ್ಷಿಸುವುದು ದೂರದ ಮಾತಾಯಿತು. ಈ ಸರ್ಕಾರ ಹೈಕಮಾಂಡ್ ಆಳ್ವಿಕೆಯಲ್ಲಿದೆಯೆ ಹೊರತು ಜನರಿಗೆ ಉತ್ತರದಾಯಿತ್ವವಾಗಿಲ್ಲ ಎಂಬುದು ಸತ್ಯ. ಹಾಗಾಗಿ ಇದು 2023ರ ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಪ್ರಭಾವ ಬೀರುವುದು ಖಚಿತವೆನ್ನುವುದು ರಾಜಕೀಯ ಪಡಸಾಲೆಗಳಲ್ಲಿ ಬಹುಚರ್ಚಿತ ವಿಷಯವಾಗಿದೆ.

  • ಮುತ್ತುರಾಜು

ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಚರ್ಚೆ; ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...