Homeಚಳವಳಿ204ನೇ ವರ್ಷದ ಭೀಮಾ ಕೋರೆಗಾಂವ್ ಸ್ಮರಣೆ: ಸಾವಿರಾರು ಜನರಿಂದ ಗೌರವ ಸಮರ್ಪಣೆ

204ನೇ ವರ್ಷದ ಭೀಮಾ ಕೋರೆಗಾಂವ್ ಸ್ಮರಣೆ: ಸಾವಿರಾರು ಜನರಿಂದ ಗೌರವ ಸಮರ್ಪಣೆ

- Advertisement -
- Advertisement -

1818 ರ ಆಂಗ್ಲೋ-ಮರಾಠಾ ಯುದ್ಧದಲ್ಲಿ ದಲಿತ ದಿಗ್ವಿಜಯದ ನೆನಪಿಗಾಗಿ ಪುಣೆಯಿಂದ 40 ಕಿ.ಮೀ ದೂರದಲ್ಲಿರುವ ಭೀಮಾ ಕೋರೆಗಾಂವ್‌ನಲ್ಲಿ ಇಂದು ನಡೆಯುತ್ತಿರುವ 204ನೇ ವರ್ಷದ ವಿಜಯೋತ್ಸವ ಸ್ಮರಣೆ ಕಾರ್ಯಕ್ರಮದಲ್ಲಿ ಸಾವಿರಾರು ಅಂಬೇಡ್ಕರ್‌ವಾದಿಗಳು ಸೇರಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಕಾರಣಕ್ಕಾಗಿ ಜಿಲ್ಲಾಡಳಿತದ ಹಲವಾರು ನಿರ್ಬಂಧಗಳ ನಡುವೆಯೂ ಕಾರ್ಯಕ್ರಮ ಜರುಗುತ್ತಿದೆ.

ಕಳೆದ ವರ್ಷ 203ನೇ ವರ್ಷದ ವಿಜಯೋತ್ಸವದ ವೇಳೆ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಅದರ ಹಿಂದಿನ ವರ್ಷ 10 ಲಕ್ಷಕ್ಕೂ ಹೆಚ್ಚು ಜನ ಭೀಮಾ ಕೋರೆಗಾಂವ್ ವಿಜಯಸ್ಥಂಭಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು ಎಂದು ವರದಿಯಾಗಿತ್ತು.

ಕೊರೊನಾ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಮತ್ತು 10 ವರ್ಷದೊಳಗಿನ ಮಕ್ಕಳು ಜಯಸ್ತಂಭಕ್ಕೆ ಬರುವುದನ್ನು ತಪ್ಪಿಸಲು ಜಿಲ್ಲಾಡಳಿತವು ಒತ್ತಾಯಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುದ್ಧ ಸ್ಮಾರಕದ ಬಳಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಮತ್ತು COVID-19 ಪರೀಕ್ಷೆಯಂತಹ ಸೌಲಭ್ಯಗಳು ಸ್ಥಳದಲ್ಲಿವೆ ಎನ್ನಲಾಗಿದೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಸಮಾಜ ಕಲ್ಯಾಣ ಸಚಿವ ಧನಂಜಯ್ ಮುಂಡೆ ಇಂದು ಬೆಳಗ್ಗೆ ಜಯಸ್ತಂಭಕ್ಕೆ ಭೇಟಿ ನೀಡಿದವರಲ್ಲಿ ಪ್ರಮುಖರಾಗಿದ್ದಾರೆ. ಜೊತೆಗೆ ದೇಶಾದ್ಯಂತದಿಂದ ಸಾವಿರಾರು ದಲಿತರು, ಅಂಬೇಡ್ಕರ್‌ವಾದಿಗಳು ಭೇಟಿ ನೀಡುತ್ತಿದ್ದಾರೆ.

1818ರ ಸಮಯದಲ್ಲಿ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಮಹರ್ ಸಮುದಾಯದ ಸೈನಿಕರು ಜಾತಿ ತಾರತಮ್ಯ, ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು ಮೇಲ್ಜಾತಿ ಪೇಶ್ವೆಗಳ ವಿರುದ್ಧದ ಮೂರನೇ ಆಂಗ್ಲೋ-ಮರಾಠಾ ಯುದ್ದದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವನ್ನು ಬೆಂಬಲಿಸಿದರು. ಕೇವಲ 500 ಜನ ದಲಿತ ಸೈನಿಕರು ದಿಟ್ಟ ಹೋರಾಟದ ಮೂಲಕ 28,000 ದಷ್ಟಿದ್ದ ಪೇಶ್ವೆ ಸೈನ್ಯವನ್ನು ಮಣಿಸಿದ ನೆನಪಿಗಾಗಿ ಇಲ್ಲಿ ಪ್ರತಿವರ್ಷ ವಿಜಯೋತ್ಸವ ಆಚರಿಸಲಾಗುತ್ತದೆ.

ಆ ಯುದ್ಧದ ವಿಜಯದ ನೆನಪಿಗಾಗಿ ಭೀಮಾ ಕೋರೆಗಾಂವ್‌ನಲ್ಲಿ ಸ್ಮಾರಕ ‘ಜೈ ಸ್ತಂಭ’ ಸ್ಥಾಪಿಸಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್‌ರವರು ತಮ್ಮ ಜೀವಿತಾವಧಿಯುದ್ದಕ್ಕೂ ಪ್ರತಿ ವರ್ಷ ಜನವರಿ 1 ರಂದು ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ ಜಯಸ್ಥಂಭಕ್ಕೆ ಗೌರವ ಸಮರ್ಪಿಸುತ್ತಿದ್ದರು. ಆ ಸಂಪ್ರದಾಯವನ್ನು ಅಂಬೇಡ್ಕರ್‌ವಾದಿಗಳು ಇಂದಿಗೂ ಮುಂದುವರೆಸಿದ್ದಾರೆ.

ಆದರೆ ಭೀಮಾ ಕೋರೆಗಾಂವ್‌ನಲ್ಲಿ 2018 ರ ಜನವರಿ 1 ರಂದು ಸಂಭ್ರಮಾಚರಣೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದರು ಮತ್ತು ಹಲವಾರು ಮಂದಿ ಗಾಯಗೊಂಡಿದ್ದರು. ಇದನ್ನೆ ನೆಪವಾಗಿಟ್ಟುಕೊಂಡು ಅಂದಿನ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರ 15ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಪಿತೂರಿ, ಕೊಲೆ ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗಿದೆ. ಅವೆಲ್ಲವೂ ಸುಳ್ಳು ಕೇಸುಗಳಾಗಿದ್ದು, ಅವುಗಳನ್ನು ಹಿಂಪಡೆಯಬೇಕೆಂದು ಬಹಳಷ್ಟು ಹೋರಾಟಗಾರರು ಒತ್ತಾಯಿಸುತ್ತಲೇ ಇದ್ದಾರೆ.


ಇದನ್ನೂ ಓದಿ; ಕೋರೆಗಾಂವ್‌‌ ಕದನ: ದಲಿತ ಅಸ್ಮಿತೆ, ಸ್ವಾಭಿಮಾನದ ಮಹಾಕಥನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...