Homeಮುಖಪುಟಚಂಪಾರೊಂದಿಗೆ ಹೆಜ್ಜೆ ಹಾಕಿದ ನೆನಪು..

ಚಂಪಾರೊಂದಿಗೆ ಹೆಜ್ಜೆ ಹಾಕಿದ ನೆನಪು..

- Advertisement -
- Advertisement -

1979 ಮಾರ್ಚ್ 10ರಂದು ಬೆಂಗಳೂರಿನ ದೇವಾಂಗ ಸಂಘದಲ್ಲಿ ನಡೆದ ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಕೋಲಾರದಿಂದ ನಾನು, ಕೋಟಿಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ, ಎಚ್ಚೆನ್, ಸೋಮಶೇಖರ ಗೌಡ, ಹ.ಸೋಮಶೇಖರ್ ಬಂದಿದ್ದೆವು. ನಾವು ಸತತವಾಗಿ ಓದುತಿದ್ದ ’ಸಂಕ್ರಮಣ’ ಪತ್ರಿಕೆಯ ಮೂಲಕ ನಮಗೆ ಅಪಾರ ಮೆಚ್ಚುಗೆಯಾಗಿದ್ದ ಚಂಪಾರನ್ನು ಅಂದೇ ಮೊದಲು ನೋಡಿದ್ದು. ಅವರ ಮೊನಚು, ವ್ಯಂಗ್ಯಗಳಿಂದಾಗಿ ಮಿಕ್ಕೆಲ್ಲ ಸಾಹಿತಿಗಳಿಗಿಂತಲೂ ಚಂಪಾ ನಮಗೆ ಹೆಚ್ಚು ಹತ್ತಿರವಾಗಿದ್ದರು. ಮಿಕ್ಕವರ ಸಾಹಿತ್ಯ ಅದರ ಸಂಕೀರ್ಣತೆಯಿಂದಾಗಿ ಆ ಹದಿಹರೆಯದ ವಯಸ್ಸಿನಲ್ಲಿ ನಮಗೆ ಅಷ್ಟೇನು ಅರ್ಥವಾಗುತ್ತಿರಲಿಲ್ಲ. ಅವರು ಬಂಡಾಯ ಸಮ್ಮೇಳನದ ಸಭಾಂಗಣದ ಮುಂದೆ, ಅದಾಗ ತಾನೇ ಬರೆದುತಂದಿದ್ದ ’ನಳಕವಿಯ ಮಸ್ತಕಾಭಿಷೇಕ’ ನಾಟಕದ ಪೋಸ್ಟರ್‌ಅನ್ನು ಕಂಬಕ್ಕೆ ಕಟ್ಟುತ್ತಿದ್ದರು. ದೂರದಿಂದ ಚಂಪಾ ಅವರನ್ನು ನಮಗೆ ಎಟುಕಲಾರದ ಬಹಳ ದೊಡ್ಡ ಸಾಹಿತಿ ಎಂದು ಊಹಿಸಿಕೊಂಡಿದ್ದೆವು, ಅಲ್ಲಿ ಅವರ ಸರಳತೆಯನ್ನು ಕಂಡು ದಂಗಾದೆವು!

ನಂತರದ ಬಂಡಾಯ ಸಾಹಿತ್ಯದ ಒಡನಾಟದಲ್ಲಿ ಚಂಪಾ ತೀರಾ ಹತ್ತಿರವಾಗಿಬಿಟ್ಟರು. ನಾನು ’ಲಂಕೇಶ್ ಪತ್ರಿಕೆ’ಯಲ್ಲಿ ಬರೆಯಲು ಆರಂಭಿಸಿದ ಮೇಲಂತೂ ತೀರಾ ಆಪ್ತರಾಗಿ, ಅವರು ಲಂಕೇಶರ ಜತೆ ಜಗಳವಾಡಿಕೊಂಡು ಹೊರಹೋದ ಮೇಲೂ ಅವರ ನನ್ನ ಬಾಂಧವ್ಯ ಕಡಿಮೆಯಾಗಲಿಲ್ಲ. ಲಂಕೇಶರು ನಿಧನರಾದ ನಂತರ, ನಾವೆಲ್ಲ ’ಅಗ್ನಿ’ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ ಮೇಲೆ ಅಗ್ನಿ ಶ್ರೀಧರ್ ಮತ್ತಿತರ ಸಾಹಿತಿ ಹೋರಾಟಗಾರರೊಂದಿಗೆ ಅನೇಕ ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಂಡೆವು, ಅದರಲ್ಲಿ ಪ್ರಮುಖ ಪಾತ್ರ ಚಂಪಾ ಅವರದೇ ಆಗಿತ್ತು.

ರಾಜಕುಮಾರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದಾಗ ಈ ಸಂಬಂಧ ನೆಡುಮಾರನ್ ಅವರನ್ನು ನೋಡಲು ಅಗ್ನಿ ಶ್ರೀಧರ್ ನೇತೃತ್ವದಲ್ಲಿ ದೇವನೂರು ಮಹದೇವ, ಅಗ್ರಹಾರ ಕೃಷ್ಣಮೂರ್ತಿ, ಎಲ್.ಹನುಮಂತಯ್ಯ ಮುಂತಾಗಿ ನಾವೆಲ್ಲ ಬಸ್ ಮಾಡಿಕೊಂಡು ಚೆನೈಗೆ ಹೋಗಿದ್ದೆವು. ಅದಕ್ಕೂ ಕ್ಯಾಪ್ಟನ್ ಚಂಪಾ ಅವರೇ ಆಗಿದ್ದರು.

ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಡೆದ ’ಅಕ್ಕ’ ಸಮ್ಮೇಳನಕ್ಕೆ ಅನೇಕ ಸಾಹಿತಿ ಕಲಾವಿದರೊಂದಿಗೆ ಚಂಪಾ, ಜನ್ನಿ, ನಾನು ಕೂಡ ಹೋಗಿದ್ದೆವು. ಅಲ್ಲೇ ನೆಲೆಸಿರುವ ಸಿರೂರ್ ಹನುಮಂತ ರೆಡ್ಡಿ ನಮ್ಮೊಂದಿಗೆ ಸೇರಿಕೊಂಡರು. ಗೋಷ್ಠಿಯೊಂದರಲ್ಲಿ ಎಸ್.ಎಲ್.ಬೈರಪ್ಪನವರನ್ನು ಹಾಡಿ ಹೊಗಳುವ ಭಜನಾ ಕಾರ್ಯಕ್ರಮವೊಂದು ನಡೆಯುತಿತ್ತು. “ಸರ್.. ನಿಮ್ಮ ’ಪರ್ವ’ ಕಾದಂಬರಿ ಮಹಾಭಾರತದ ಮರುಸೃಷ್ಟಿ.. ಕನ್ನಡದಲ್ಲಿ ಇಂತಹದೊಂದು ಬರುವುದು ಅಪರೂಪ.. ಇದೇ ರೀತಿ ರಾಮಾಯಣದ ಮರುಸೃಷ್ಟಿ ಮಾಡಿ ಸರ್.. ನಿಮ್ಮಿಂದ ಮಾತ್ರ ಇದು ಸಾದ್ಯ..” ಎಂದು ಒಬ್ಬ ವಟು ಹೇಳಿದಾಕ್ಷಣ ಬೇರೆಲ್ಲಾ ವಟುಗಳು ’ವಟವಟ’ ಎನ್ನತೊಡಗಿದವು. ಬೈರಪ್ಪನವರು “ರಾಮಾಯಣ ಮರುಸೃಷ್ಟಿ ಸಾಧವಾಗಲಾರದು..” ಎನ್ನುತಿದ್ದಂತೆ ಹಿಂದೆ ನಮ್ಮೊಂದಿಗೆ ಕುಂತಿದ್ದ ಚಂಪಾ “ನೀವ್ಯಾರೂ ಕುವೆಂಪು ಅವರ ರಾಮಾಯಣ ದರ್ಶನಂ ಓದಿಲ್ಲೇನ್ರಿ.. ಅದು ರಾಮಾಯಣದ ಮರುಸೃಷ್ಟಿ ಅಲ್ಲೇನು” ಎನ್ನುತಿದ್ದಂತೆ ಬೈರಪ್ಪನವರ ವಂದಿಮಾಗಧ ವಟುಗಳು ಮೌನವಾದರು. ನಾವು ಆ ಭಜನಾ ಕಾರ್ಯಕ್ರಮವನ್ನು ಪ್ರತಿಭಟಿಸಿ ಹೊರಬಂದೆವು. ಅಂದು ಇಡೀ ರಾತ್ರಿ ತೀರ್ಥಸೇವನೆ ಮಾಡುತ್ತಾ ಚಂಪಾ ಅವರ ಜೋಕುಗಳಿಗೆ ಮನಸಾರೆ ನಕ್ಕೆವು.

ನಂತರದ ದಿನಗಳಲ್ಲಿ ಚಂಪಾ ಅವರೊಂದಿಗೆ ಅನೇಕ ಟಿ.ವಿ. ಡಿಬೇಟ್‌ಗಳಲ್ಲಿ ಭಾಗವಹಿಸುತ್ತಿದ್ದೆ.
ನಾವಿಬ್ಬರೂ ಸೇರಿದರಂತೂ ಚಡ್ಡಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದೆವು. ’ಲಿಂಗಾಯತ ಧರ್ಮ’ದ ಹೋರಾಟದಲ್ಲೂ ಇಬ್ಬರೂ ಜತೆಜತೆಯಾಗಿ ಅನೇಕ ಸಭೆಗಳಲ್ಲಿ ಪಾಲ್ಗೊಂಡೆವು. ಚಂಪಾ
ಕುರಿತು ಮಾತಾಡಲು ಬರೆಯಲು ಇನ್ನೂ ಸಾಕಷ್ಟಿದೆ, ಮುಂದೆ ಬರೆಯುತ್ತೇನೆ. ಕವಿ, ನಾಟಕಕಾರ, ಹೋರಾಟಗಾರರಾದ ಚಂಪಾ ನಮ್ಮಂತವರ ಸಾಕ್ಷಿಪ್ರಜ್ಞೆಯಾಗಿದ್ದರು. ಎಂದೂ ಎಲ್ಲೂ ರಾಜಿಯಾಗದ ತಮ್ಮ ಸಾಹಿತ್ಯ ಮತ್ತು ಹೋರಾಟಗಳಿಂದಾಗಿ ಸದಾ ಜೀವಂತವಾಗಿದ್ದ ಚಂಪಾರಿಗೆ ಸಾವಿಲ್ಲ, ಇನ್ನು ಮುಂದೆ ನಡೆಯುವ ಹೋರಾಟಗಳಲ್ಲೂ ಅವರು ನಮ್ಮೊಂದಿಗೆ-ನಮ್ಮೊಳಗೆ ಜೀವಂತವಾಗಿ ಇರುತ್ತಾರೆ.

ಸಿ.ಎಸ್.ದ್ವಾರಕಾನಾಥ್

ಸಿ.ಎಸ್.ದ್ವಾರಕಾನಾಥ್
ವೃತ್ತಿಯಿಂದ ವಕೀಲರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು. ಲಂಕೇಶ್ ಪತ್ರಿಕೆಯ ಒಡನಾಡಿಯಾಗಿದ್ದ ದ್ವಾರಕಾನಾಥ್, ’ಮೂಕ ನಾಯಕ’, ’ಗಾಂಧಿಮಟ್ಟಿದ ನಾಡಿನಲ್ಲಿ’, ’ಸಾಕ್ರೆಟಿಸ್ ಮತ್ತಿತರ ಕಥೆಗಳು’ ಕೃತಿಗಳನ್ನು ರಚಿಸಿದ್ದಾರೆ.


ಇದನ್ನೂ ಓದಿ: ಓಶೋ ಕಂಡಂತೆ ವಿವೇಕಾನಂದರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...