Homeರಂಜನೆಕ್ರೀಡೆಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೊಂದು ಭರವಸೆ: 16 ನೇ ವರ್ಷಕ್ಕೆ ಜೂನಿಯರ್ ನಂ 1 ಪಟ್ಟಕ್ಕೇರಿದ ತಸ್ನಿಮ್...

ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೊಂದು ಭರವಸೆ: 16 ನೇ ವರ್ಷಕ್ಕೆ ಜೂನಿಯರ್ ನಂ 1 ಪಟ್ಟಕ್ಕೇರಿದ ತಸ್ನಿಮ್ ಮಿರ್

- Advertisement -
- Advertisement -

ಕ್ರಿಕೆಟ್‌ ಅನ್ನೇ ಧರ್ಮ ಎಂಬಂತೆ ಭಾವಿಸಿರುವ ಭಾರತದಲ್ಲಿ ಕ್ರಿಕೆಟ್‌ ಹೊರತಾದ ಕ್ರೀಡೆಗಳಿಗೆ ಪ್ರಾತಿನಿಧ್ಯತೆ ಅಷ್ಟಕಷ್ಟೇ. ಇನ್ನೂ ಬೇರೆ ಕ್ರೀಡೆಗಳ ಸಾಧಕರನ್ನು ಗುರುತಿಸುವುದು ಸಹ ಅಪರೂಪವೇ. ಇಂತಹ ಸಂದಿಗ್ಧತೆಯ ನಡುವೆಯೇ ಯುವ ಶಟ್ಲರ್‌ ತಸ್ನಿಮ್ ಮೀರ್‌ ಇದೀಗ ಬಿಡಬ್ಲ್ಯುಎಫ್ ಜೂನಿಯರ್ ರ್ಯಾಂಕಿಂಗ್ನಲ್ಲಿ 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವದ ನಂಬರ್​ 1 ಸ್ಥಾನವನ್ನು ಪಡೆದಿದ್ದಾರೆ. ಅಲ್ಲದೆ, ಈ ಸಾಧನೆ ಮಾಡಿದ ಭಾರತದ ಮೊದಲ U-19 ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿರುವುದು ವಿಶೇಷ.

ಗುಜರಾತ್​​​ ಮೂಲದ ತಸ್ನಿಮ್ ಮಿರ್ (16) 2017 ರಲ್ಲಿ ಹೈದರಾಬಾದ್​ನ ಪುಲ್ಲೇಲಾ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. 2020 ರಲ್ಲಿ ಮಿಶ್ರ ಡಬಲ್ಸ್ ತರಬೇತಿಗಾಗಿ ಗುವಾಹಟಿಯಲ್ಲಿರುವ ಅಸ್ಸೋಂ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿಕೊಂಡಿದ್ದು, ಪ್ರಸ್ತುತ ಇಲ್ಲಿಯೇ ತರಬೇತಿ ಮುಂದುವರೆಸಿದ್ದಾರೆ.

ತಸ್ನಿಮ್ ಮಿರ್ ತಮ್ಮ ಅದ್ಭುತ ಆಟದ ಪ್ರದರ್ಶನದಿಂದಾಗಿ ಮೂರು ಜೂನಿಯರ್ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಇದೀಗ ಜೂನಿಯರ್ ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಗಳಿಸಿದ್ದಾರೆ. ತಸ್ನಿಮ್​ಗೂ ಮುನ್ನ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಪಿ ವಿ ಸಿಂಧು ತಮ್ಮ ಅಂಡರ್-19 ದಿನಗಳಲ್ಲಿ ವಿಶ್ವದ ನಂ 2 ಸ್ಥಾನವನ್ನು ಪಡೆದುಕೊಂಡಿದ್ದರು.

ಈ ಬಗ್ಗೆ ತನ್ನ ಸಂತೋಷವನ್ನು ಹಂಚಿಕೊಂಡಿರುವ ತಸ್ನಿಂ ಮೀರ್‌, “ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್  ಅವರು ನನಗೆ ಸದಾ ಸ್ಪೂರ್ತಿ. ಶಟಲ್ ಆಟದಲ್ಲಿ ಅವರನ್ನು ಅನುಸರಿಸಲು ನಾನು ಬಯಸುತ್ತೇನೆ. ಮುಂದಿನ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿದಿಸಿ ಪದಕ ಗೆಲ್ಲುವುದು ನನ್ನ ಗುರಿ. ನನ್ನ ಪೋಷಕರು ನನ್ನ ಆಸಕ್ತಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಹಾಗಾಗಿ ಆ ತ್ಯಾಗಕ್ಕೆ ಹೆಚ್ಚು ಬೆಲೆ ಬರುವಂತೆ ಮಾಡುವ ಆಸೆ ಇದೆ” ಎಂದು ತಿಳಿಸಿದ್ದಾರೆ.

ತಸ್ನಿಮ್ ಅವರು ಆರು ವರ್ಷ ಇದ್ದಾಗಿನಿಂದ ಬ್ಯಾಡ್ಮಿಂಟನ್‌ ನಲ್ಲಿ ಆಸಕ್ತಿವಹಿಸಿ ಆಡಲು ಪ್ರಾರಂಭಿಸಿದರಂತೆ, ಆಗ ಕೆಲವರು ಈಗಲೆ ಆಟ ಆಡುವುದು ಬೇಡ ಎಂದಿದ್ದರು. ಆದರೆ ಛಲ ಬಿಡದ ತಸ್ನಿಮ್ ಆಟ ಮುಂದುವರೆಸಿ ಇದುವರೆಗೂ ವಿವಿಧ ವಿಭಾಗಗಳಲ್ಲಿ  ಒಟ್ಟು 22 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈಗ ಹಿರಿಯರ ವಿಭಾಗದಲ್ಲಿ ಚಾಂಪಿಯನ್ ಆಗುವ, ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾಳೆ ಎನ್ನುತ್ತಾ ಮಗಳು ತಸ್ನಿಮ್ ಬಗ್ಗೆ ವಿಶ್ವಾಸದ ಮಾತುಗಳನ್ನಾಡುತ್ತಾರೆ ತಂದೆ ಇರ್ಫಾನ್.


ಇದನ್ನೂ ಓದಿ: ‘ನನ್ನ ತಂಡಕ್ಕೆ ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ!’: ಟೆಸ್ಟ್‌‌ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...