Homeಬಹುಜನ ಭಾರತಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ - ಡಿ. ಉಮಾಪತಿ

ಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ – ಡಿ. ಉಮಾಪತಿ

ಮಿಯಾಮಿ ಪೊಲೀಸರು ಕ್ರೋಧತಪ್ತ ಪ್ರತಿಭಟನಾಕಾರರ ಮುಂದೆ ಕ್ಯಾಮೆರಾಗಳ ಸಮಕ್ಷಮದಲ್ಲಿ ತಲೆ ತಗ್ಗಿಸಿ ಮಂಡಿಯೂರಿ ಕ್ಷಮಾಪಣೆ ಕೇಳಿದರು. ಭಾರತದಲ್ಲಿ ಇಂತಹ ನೋಟವನ್ನು ಕಾಣಲು ಇನ್ನೆಷ್ಟು ಯುಗಗಳು ಸರಿಯಬೇಕೋ?

- Advertisement -
- Advertisement -

ಮನುಷ್ಯ ಮನುಷ್ಯನನ್ನು ಜಾತಿಯ ಕಾರಣಕ್ಕೆ, ಧರ್ಮದ ಕಾರಣಕ್ಕೆ, ತೊಗಲಿನ ಬಣ್ಣದ ಕಾರಣಕ್ಕೆ ದ್ವೇಷಿಸಿ ಹಿಂಸಿಸತೊಡಗಿದ್ದಾನೆ. ಮಾನವೀಯತೆಯನ್ನು ಮರೆತಿದ್ದಾನೆ. ಆಳದಲ್ಲಿ ಮಲಗಿರುವ ಪಾಶವಿಕ ಹಿಂಸಾ ಪ್ರವೃತ್ತಿ ಮೇಲೆದ್ದು ಹೆಡೆಯೆತ್ತಿ ಭುಸುಗುಡುತ್ತಿದೆ. ಸಾವಿರ ಸಾವಿರ ವರ್ಷಗಳಿಂದ ನಾಗರಿಕತೆಯ ವಿಕಾಸದ ಹಾದಿಯಲ್ಲಿ ಮಾನವೀಯ ಸಾಮಾಜಿಕ ನಡವಳಿಕೆಗಳು ಕೆಳಕ್ಕೆ ತುಳಿದಿಟ್ಟ ಈ ಪ್ರವೃತ್ತಿಗಳನ್ನು ಕೆದರಿ ಕೆಣಕಿ ಕೆರಳಿಸಿ ಭುಗಿಲೆಬ್ಬಿಸಿದವರು ಯಾರು? ಈ ಉರಿವ ಬೆಂಕಿಗೆ ಎಣ್ಣೆ ಎರಚುತ್ತ ಬಂದಿರುವವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರಗಳು ದೇಶ ವಿದೇಶಗಳಲ್ಲಿ ಒಡಮೂಡಿವೆ.

ಒಂದೊಂದು ದೇಶದಲ್ಲಿ ಒಂದೊಂದು ಹೆಸರು ಧರಿಸಿವೆ. ಹೊಸ ಭಯೋತ್ಪಾದಕರನ್ನು ಕಟೆದು ನಿಲ್ಲಿಸಿವೆ. ಈ ಭಯೋತ್ಪಾದಕರು ಮುಖ ಕೈಕಾಲು ದೇಹಧಾರಿ ಮನುಷ್ಯರಲ್ಲ. ಬದಲಾಗಿ ಅವರದೆಯಲ್ಲಿ ಭುಗಿಲೆದ್ದು ಪ್ರಚಂಡ ನಾಯಕರು ಯಾರತ್ತ ಇಷಾರೆ ಮಾಡಿದರೆ ಅವರನ್ನು ಸುಡಬಹುದಾದ ಕಡುದ್ವೇಷದ ಕಿಚ್ಚು. ಅದುವೇ ನವ ಭಯೋತ್ಪಾದಕ. ಈ ಭಯೋತ್ಪಾದಕ ಈವರೆಗೆ ಕಂಡು ಕೇಳಿರುವ ಎಲ್ಲ ಭಯೋತ್ಪಾದಕರಿಗಿಂತ ಅಧಿಕ ಘಾತಕ. ಈ ಕಿಚ್ಚಿಗೆ ವರ್ಣಭೇದ, ಧರ್ಮ, ಜಾತಿ, ಮೇಲು ಕೀಳಿನ ಮುಖವಾಡ ತೊಡಿಸಿ ಅಮಾಯಕರನ್ನು ಹರಿದು ತಿನ್ನಲು ಛೂ ಬಿಡಲಾಗಿದೆ. ಅಮೆರಿಕೆ ಎಂಬ ದೇಶದಲ್ಲಿ ಈ ದ್ವೇಷದ ಬೆಂಕಿ ಹಚ್ಚಿ ಎಣ್ಣೆ ಎರಚುತ್ತ ಬಂದಿರುವಾತನ ನಾಮಧೇಯ ಡೊನಾಲ್ಡ್ ಟ್ರಂಪ್.

ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕಾ ಹೊರಗೆ ಬರಲಿದೆ,ಟ್ರಂಪ್ ಎಚ್ಚರಿಕೆ

ಭರತವರ್ಷದಲ್ಲಿನ ನಿಜ ನಾಮಧೇಯಗಳು ಚಿರಪರಿಚಿತ. ಇವುಗಳು ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು. ನಂತರದ್ದು ಕ್ರೈಸ್ತರದು ಇದ್ದೀತು.

ಕಪ್ಪು ಜನರನ್ನು ಅವರ ತೊಗಲಿನ ಬಣ್ಣದ ಕಾರಣ ನೂರಾರು ವರ್ಷಗಳಿಂದ ಬೇಟೆಯಾಡುತ್ತ ಬಂದಿದ್ದಾರೆ ಬಿಳಿಯರು. ಸಮಾಜ 21ನೆಯ ಶತಮಾನದ ನಾಗರಿಕ ಚಹರೆ ಧರಿಸುತ್ತಿದ್ದಂತೆ ಬೇಟೆಗಾರರು ಹತ್ತು ಹಲವು ಛದ್ಮವೇಷಗಳನ್ನು ಧರಿಸಿ ಎರಗುತ್ತಿದ್ದಾರೆ. ಆಳುವವರ ಸಕ್ರಿಯ ಕುಮ್ಮಕ್ಕು ಅವರಿಗೆ ಉಂಟು.

ಹಿಟ್ಲರ್ ಸತ್ತಿದ್ದಾನೆ ಎಂದು ಯಾರು ಹೇಳುತ್ತಾರೆ? ಜರ್ಮನಿಯಲ್ಲಿ ದಫನಾದದ್ದು ಅವನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿ ಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

ಕಳೆದ ಆರು ವರ್ಷಗಳಿಂದ ದೇಶದುದ್ದಗಲಕ್ಕೆ ರಸ್ತೆ ರಸ್ತೆಗಳಲ್ಲಿ ಮುಸಲ್ಮಾನರು ದಲಿತರು ಈ ಕಿಚ್ಚಿಗೆ ಬಲಿಯಾದರು. ಕರೋನಾ ಮಹಾಮಾರಿ ಹಾಕಿರುವ ಅಲ್ಪವಿರಾಮ ತೆರವಾದ ನಂತರ ಈ ಕಿಚ್ಚು ಹೊಸ ಎಣ್ಣೆ ಎರೆಸಿಕೊಂಡು ಭುಗಿಲೇಳುವಲ್ಲಿ ಯಾವ ಅನುಮಾನವೂ ಇಲ್ಲ.

ಅಮೆರಿಕೆಯಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಮನುಷ್ಯ ಬಿಳಿಯ ಪೊಲೀಸರ ವರ್ಣವಿದ್ವೇಷಕ್ಕೆ ಬಲಿಯಾದ ಭೀಭತ್ಸ ದೃಶ್ಯಗಳು ನಾಗರಿಕ ಪ್ರಜ್ಞೆಯನ್ನು ಬೆಚ್ಚಿ ಬೀಳಿಸಿವೆ.

ಎಂಟು ನಿಮಿಷ 46 ಸೆಕೆಂಡುಗಳ ಕಾಲ ಉಸಿರಿಗಾಗಿ ಚಡಪಡಿಸಿದ ಆ ದೈತ್ಯ ಕಪ್ಪು ಮನುಷ್ಯ ದಯೆ ತೋರಿರೆಂದು ಕೋರಿದ. ನೀರಿಗಾಗಿ ಬೇಡಿದ. ಉಸಿರಾಡಲಾಗುತ್ತಿಲ್ಲ ಸ್ವಾಮೀ ಎಂದ. ಮೂಗಿನಿಂದ ರಕ್ತ ಒಸರಿತು. ದೇಹ ಪ್ರಾಣಸಂಕಟದಿಂದ ವಿಲವಿಲನೆ ಒದ್ದಾಡಿತು. ಮೂತ್ರಕೋಶದ ಮೇಲೆ ನಿಯಂತ್ರಣ ತಪ್ಪಿತು.

ಐದು ನಿಮಿಷಗಳಲ್ಲಿ ಹದಿನಾರು ಸಾರಿ ಹೇಳಿದ್ದನಾತ ಉಸಿರಾಡಲಾಗುತ್ತಿಲ್ಲಾ… ಎಂದು. ಕಡೆಗೆ ಪ್ರಜ್ಞೆ ತಪ್ಪಿತು. ವೈದ್ಯಕೀಯ ಸಿಬ್ಬಂದಿ ಬೇಡಿಕೊಂಡರು. ಆದರೂ ಬಿಳಿಯ ಪೊಲೀಸರ ಸಾವಿನ ಹಿಡಿತ ಸಡಿಲಾಗಲಿಲ್ಲ. ಆಮ್ಲಜನಕ ದೊರೆಯದೆ ಆತನ ಅಂಗಾಂಗಗಳು ಚೀರಿದ್ದವು. ಮೆದುಳು ಹೌಹಾರಿತ್ತು.

ಫ್ಲಾಯ್ಡ್ ಅಣು ಅಣುವಾಗಿ ಸಾಯುವುದನ್ನು ಬಿಳಿಯ ದ್ವೇಷ ವಿಚಿತ್ರ ವಿಲಕ್ಷಣ ತೃಪ್ತಿಯಿಂದ ನೋಡಿತು. ಕ್ಷಣದಿಂದ ಕ್ಷಣಕ್ಕೆ ಉಸಿರು ತ್ಯಜಿಸಿ ಹೋಗಿ ತಣ್ಣಗಾಗುತ್ತಿದ್ದ ಒಡಲಿನ ಒದ್ದಾಟವನ್ನು, ಚಡಪಡಿಕೆಯ ಸ್ಪರ್ಶಸುಖವನ್ನು ಸವಿಯಿತು.

ಸತ್ತ ತನ್ನ ತಾಯಿಯನ್ನು ಸೇರಿಕೊಳ್ಳುವ ಸಂಕಟದಲ್ಲಿ ಅಮ್ಮಾ ಎಂದು ಕೂಗಿ ಕರೆದ. ಆ ಕಪ್ಪು ಮನುಷ್ಯ ಸಾಧು ಸ್ವಭಾವದ ದೈತ್ಯ. ತೊಗಲಿನ ಬಣ್ಣ ಕಪ್ಪೆಂಬ ಕಾರಣಕ್ಕಾಗಿ ಕ್ರೂರ ಹತ್ಯೆಗೆ ಬಲಿಯಾದ.

ಉಸಿರಾಡಲಾಗುತ್ತಿಲ್ಲ ಎಂದು ಫ್ಲಾಯ್ಡ್ ಐದು ನಿಮಿಷಗಳಲ್ಲಿ ಹದಿನಾರು ಸಲ ಹೇಳುತ್ತಾನೆ. ಪ್ರಾಣ ಹೋಗುವ ಸಂಕಟದಲ್ಲಿ ಹೆತ್ತಮ್ಮನನ್ನು ನೆನೆದು ಕರೆಯುತ್ತಾನೆ. ‘ಆಫೀಸರ್ ಪ್ಲೀಸ್’ ಎಂದು ಬೇಡಿಕೊಳ್ಳುತ್ತಾನೆ. ಬಾಯಿಂದ ರಕ್ತ ಒಸರುತ್ತದೆ.

ಆ ಬಿಳಿಯ ಪೊಲೀಸ್ ಎಂಟು ನಿಮಿಷ 46 ಸೆಕೆಂಡುಗಳ ಕಾಲ ತನ್ನ ಮೃತ್ಯಸದೃಶ ಮೊಣಕಾಲನ್ನು ಫ್ಲಾಯ್ಡ್ ಕುತ್ತಿಗೆಯ ಮೇಲೆ ಅದುಮಿ ಹಿಡಿದಿರುತ್ತಾನೆ. ಕಡೆಯುಸಿರೆಳೆದ ಮೇಲೂ ಆ ಮೊಣಕಾಲು ಕದಲುವುದಿಲ್ಲ. ಆಂಬುಲೆನ್ಸ್ ಬಂದು ಸ್ಟ್ರೆಚರ್ ತಂದ ವೈದ್ಯಕೀಯ ಸಿಬ್ಬಂದಿ ಹೇಳಿದಾಗ ಒಲ್ಲದ ಮನಸಿನಿಂದ ಕದಲುತ್ತದೆ. ಆದರೆ ಆ ಹೊತ್ತಿಗೆ ತೀರಾ ತಡವಾಗಿರುತ್ತದೆ.

ಮೇ.25 ಸೋಮವಾರ ಸಂಜೆ. 20 ಡಾಲರಿನ ಖೋಟಾ ನೋಟನ್ನು ಸಿಗರೇಟು ಖರೀದಿಗೆ ಬಳಸಿದನೆಂಬುದು ಫ್ಲಾಯ್ಡ್ ಮೇಲಿನ ಆರೋಪ. 46 ವರ್ಷದ ಈ ವ್ಯಕ್ತಿ ಹ್ಯೂಸ್ಟನ್‍ನ ರೆಸ್ಟುರಾದಲ್ಲಿ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ. ಕರೋನಾ ಮಹಾಮಾರಿಯ ಕಾರಣ ಕೆಲಸ ಕಳೆದುಕೊಂಡ ಕೋಟ್ಯಂತರ ಜನರ ಪೈಕಿ ಫ್ಲಾಯ್ಡ್ ಕೂಡ ಒಬ್ಬನಾಗಿದ್ದ.

ಆರಡಿಗೂ ಅಧಿಕ ಎತ್ತರದ ಫ್ಲಾಯ್ಡನನ್ನು ರಸ್ತೆಯ ಪಕ್ಕ ನೆಲಕ್ಕೆ ಕೆಡವಿ ಕಾಲು ಎದೆ ಪಕ್ಕೆ ಕುತ್ತಿಗೆಯನ್ನು ನಾಲ್ವರು ಪೊಲೀಸರು ಒಟ್ಟೊಟ್ಟಿಗೆ ಅದುಮಿ ಹಿಡಿದಿರುತ್ತಾರೆ.

ಫ್ಲಾಯ್ಡ್ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಎಂಬುದು ಪೊಲೀಸರ ಹಸೀ ಸುಳ್ಳು. ಕಾರಿನೊಳಕ್ಕೆ ಅವನನ್ನು ತಳ್ಳಲು, ಎದ್ದು ಪೊಲೀಸ್ ಕಾರಿನೊಳಗೆ ಕುಳಿತುಕೋ ಎನ್ನುತ್ತಾರೆ. ಆದರೆ ತಮ್ಮ ಮೃತ್ಯುಪಾಶವನ್ನು ಸಡಿಲಿಸುವುದಿಲ್ಲ. ದಾರಿ ಹೋಕರು ಕುತ್ತಿಗೆಯ ಮೇಲಿಂದ ಎದ್ದೇಳಲು ಪೊಲೀಸರಿಗೆ ಒತ್ತಾಯಿಸುತ್ತಾರೆ. ಅವನು ಕದಲುತ್ತಿಲ್ಲ, ನಾಡಿ ಪರೀಕ್ಷಿಸಿ ಎಂದು ಆಗ್ರಹಿಸುತ್ತಾರೆ.

ಅಮೆರಿಕೆ ಭುಗಿಲೆದ್ದಿದೆ. ಕಾನೂನು ಜಾರಿಯ ವೈಖರಿಯಲ್ಲಿ ಬದಲಾವಣೆಗೆ ಆಗ್ರಹ ಸ್ಫೋಟಿಸಿದೆ. ಮಾನವಂತ ಬಿಳಿಯರೂ ಈ ಪ್ರತಿಭಟನೆಯಲ್ಲಿ ಸೇರಿದ್ದಾರೆ. ಈ ನಡುವೆ ಮಿಯಾಮಿ ಪೊಲೀಸರು ಕ್ರೋಧತಪ್ತ ಪ್ರತಿಭಟನಾಕಾರರ ಮುಂದೆ ಕ್ಯಾಮೆರಾಗಳ ಸಮಕ್ಷಮದಲ್ಲಿ ತಲೆ ತಗ್ಗಿಸಿ ಮಂಡಿಯೂರಿ ಕ್ಷಮಾಪಣೆ ಕೇಳಿದರು. ಭಾರತದಲ್ಲಿ ಇಂತಹ ನೋಟವನ್ನು ಕಾಣಲು ಇನ್ನೆಷ್ಟು ಯುಗಗಳು ಸರಿಯಬೇಕೋ?
ಜಾರ್ಜ್ ಫ್ಲಾಯ್ಡ್ ಆತ್ಮ ಈಗ ನಿರಾಳವಾಗಿ ಉಸಿರಾಡುತ್ತಿರಬಹುದು… ವರ್ಣದ್ವೇಷದ ಕಿಚ್ಚಿನಿಂದ ದೂರ ಬಹುದೂರದಲ್ಲಿ.


ಇದನ್ನು ಓದಿ: ಚೀನಾದ ಆಕ್ರಮಣ ಒಪ್ಪಿಕೊಂಡ ರಾಜನಾಥ್‌ ಸಿಂಗ್: ಜೂನ್‌ 06 ರಂದು ಮಾತುಕತೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...