71 ವರ್ಷದ ವ್ಯಕ್ತಿಯೊರ್ವನನ್ನು ಸ್ಕೂಟಿಯ ಹಿಂದಗಡೆಯಿಂದ ಎಳೆದುಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆದಿದೆ ಎಂದು ತಿಲಿದುಬಂದಿದೆ.
ಸ್ಕೂಟಿ ಸವಾರ ಸಾಹಿಲ್‌ನು ಮುತ್ತಪ್ಪ ಎಂಬಾತನ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಆತ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಬೈಕ್ ಸವಾರ ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ಸಮಯದಲ್ಲಿ, ವೃದ್ಧನು ಸ್ಕೂಟಿಯ ಗ್ರಾಬ್ರೇಲ್‌ನ್ನು ಹಿಡಿದು ತಡೆಯಲು ಪ್ರಯತ್ನಿಸಿದ್ದಾನೆ. ಆದರೂ ಸ್ಕೋಟಿ ಸವಾರ ನಿಲ್ಲಿಸದೆ ಹಾಗೆ ಹಿಂದೆ 1ಕಿ.ಲೋ. ವರೆಗೂ ಎಳೆದುಕೊಂಡು ಹೋಗಿದ್ದಾನೆ. ಇದು ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ.
ಆ ವ್ಯಕ್ತಿಯನ್ನು ಎಳೆದೊಯ್ಯತ್ತಿರುವುದು ಅಮಾನವೀಯ ಘಟನೆಯಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವವರು ಆ ಯುವಕ ವಿರುದ್ಧ ಬರೆದುಕೊಂಡಿದ್ದಾರೆ. “ಈ ರೀತಿಯ ಘಟನೆಗಳು ಯುಪಿ, ಬಿಹಾರದಲ್ಲಿ ಸಂಭವಿಸದರೆ ಸಾಮಾನ್ಯ ಎನ್ನುವಂತಾಗುತ್ತಿತ್ತು ಆದರೆ ನಮ್ಮ ರಾಜ್ಯದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿರುವುದು ದುರದರಷ್ಟಕರ ಸಂಗತಿ” ಎಂದು ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಡಿಸಿಪಿ ಲಕ್ಷ್ಮಣ್ ನಿರ್ಬರ್ಗಿ ಮಾಹಿತಿ ನೀಡಿದ್ದು, ದ್ವಿಚಕ್ರ ವಾಹನ ಮತ್ತು ಬೊಲೆರೊ ನಡುವೆ ಆಕಸ್ಮಿಕ ಸ್ಪರ್ಶವೇ ಈ ಘಟನೆಗೆ ಕಾರಣವಾಗಿದೆ. ಆ ವ್ಯಕ್ತಿಗೆ ಕೆಲವು ಗೀರುಗಳಾಗಿದ್ದು, ಬೈಕ್ ಸವಾರನನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ವಾರದ ಹಿಂದಷ್ಟೇ ಇಂತಹದ್ದೇ ಘಟನೆಯೊಂದು ದೆಹಲಿಯಲ್ಲಿ ನಡೆದಿತ್ತು. ಅದು ಭೀಕರ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣವಾಗಿದೆ. 20 ವರ್ಷದ ಮಹಿಳೆಯೊಬ್ಬರು ಕಾರಿನ ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿತ್ತು.


