Homeಮುಖಪುಟಜನಪರ ಸಿದ್ಧಾಂತಗಳಿಗೆ ಬದ್ಧವಾಗಿ ಬದುಕಿದ ಸಾರಾ

ಜನಪರ ಸಿದ್ಧಾಂತಗಳಿಗೆ ಬದ್ಧವಾಗಿ ಬದುಕಿದ ಸಾರಾ

- Advertisement -
- Advertisement -

ಸಾರಾ ಅಬೂಬಕ್ಕರ್ ನಿರ್ಗಮಿಸಿದ್ದಾರೆ. 86 ವರ್ಷಗಳ ತುಂಬು ಜೀವನವನ್ನು ತಮ್ಮ ಪ್ರಾಮಾಣಿಕ ಕ್ರಿಯಾಶೀಲ ಬದುಕಿನಿಂದ ಸಾರ್ಥಕಗೊಳಿಸಿದ್ದಾರೆ. ಸಾರಾ ಅವರ ಬರವಣಿಗೆಯನ್ನು ಕನ್ನಡಿಗರಿಗೆ ಪರಿಚಯಿಸಿದ್ದು ಲಂಕೇಶ್. ಅದು ಎಂಬತ್ತರ ದಶಕದ ಆರಂಭ. ಲಂಕೇಶ್ ಪತ್ರಿಕೆ ಕನ್ನಡದ ಸಾಂಸ್ಕೃತಿಕ ಲೋಕದ ಒಂದು ಘಟನೆಯಾಗಿ ಬರಹಗಾರರು ಮತ್ತು ಓದುಗರಲ್ಲಿ ಸಂಚಲವನ್ನೇ ಉಂಟುಮಾಡಿತ್ತು. ಹೊಸ ಸಂವೇದನೆಗೆ ಕಾರಣವಾಗಿತ್ತು. ಹೊಸ ಜನಾಂಗದ ತರುಣರು ಮತ್ತು ತಾಯಿಯರು ತಮ್ಮ ಅಂತರಂಗವನ್ನು ಹೇಳಿಕೊಳ್ಳುವಂತೆ ಲಂಕೇಶ್ ಬರವಣಿಗೆ ಪ್ರಚೋದಿಸಿತ್ತು. ಆ ಸಮಯದಲ್ಲಿಯೇ ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳು ತಲೆಎತ್ತಿ ಜನರ ನೆಮ್ಮದಿಯ ಬದುಕಿಗೆ ಗಂಡಾಂತರ ತಂದಿದ್ದವು. ಜನರ ಸಹಬಾಳ್ವೆಯನ್ನು ಕದಡಿ ಪ್ರತ್ಯೇಕಿಸುವಂತಹ ಮನೆಹಾಳು ಕೆಲಸಗಳು ಆರಂಭಗೊಂಡಿದ್ದವು. ಅಂತಹ ಸಮಯದಲ್ಲಿ ಒಬ್ಬ ಮುಸ್ಲಿಂ ಹೆಣ್ಣುಮಗಳಿಂದ ಪತ್ರವೊಂದು ಲಂಕೇಶರಿಗೆ ಬಂದಿತ್ತು. ಆ ಪತ್ರದಲ್ಲವರು ’ನನ್ನ ಸಹೋದರನೊಬ್ಬ ಸೈನ್ಯದಲ್ಲಿದ್ದು ಈ ದೇಶ ಕಾಯುತ್ತಿದ್ದಾನೆ ಆದರೂ ನಮ್ಮನ್ನಿಲ್ಲಿ ದೇಶದ್ರೋಹಿಗಳು ಎಂಬಂತೆ ಮೂದಲಿಸುತ್ತಿದ್ದಾರೆ. ನಾವು ಹೇಗೆ ಸಹಿಸಿಕೊಳ್ಳಬೇಕು ಮತ್ತು ಪ್ರತಿಕ್ರಿಯಿಸಬೇಕು’ ಎಂದು ಬರೆದುಕೊಂಡಿದ್ದರು. ಇದಕ್ಕೆ ಉತ್ತರವಾಗಿ ಲಂಕೇಶರು ನೀವು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ; ನಮ್ಮಲ್ಲಿ ಬರೆಯಿರಿ ಎಂದು ಉತ್ತರಿಸಿದರು. ಅಂದಿನಿಂದ ಸಾರಾ ಅಬೂಬಕ್ಕರ್ ನಿರಂತರವಾಗಿ ಲಂಕೇಶ್ ಪತ್ರಿಕೆಗೆ ಬರೆಯತೊಡಗಿದರು.

ಸಾರಾ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿದ್ದು ’ಚಂದ್ರಗಿರಿ ತೀರದಲಿ’ ಎಂಬ ಪುಟ್ಟ ಕಾದಂಬರಿ. ಆವರೆಗೆ ನಮಗೆ ಅಪರಿಚಿತವಾಗಿದ್ದ ಮುಸ್ಲಿಂ ಲೋಕದ ಹೆಣ್ಣು ಮಕ್ಕಳ ವಿವರ ತಿಳಿದದ್ದೇ ’ಚಂದ್ರಗಿರಿ ತೀರದಲ್ಲಿ’ ಎಂಬ ಧಾರವಾಹಿಯಿಂದ. ಬರವಣಿಗೆಯಲ್ಲಿನ ಪ್ರಾಮಾಣಿಕತೆ ಹೇಗಿರಬೇಕೆಂಬುದನ್ನು ಸಾರಾ ತೋರಿಸಿದ್ದರು. ಸೈಕಲ್ ಶಾಪು, ಗುಜರಿ ಅಂಗಡಿಗಳಲ್ಲಿನ ಬಡವರ ಮದುವೆ ಸಂಬಂಧಗಳು, ಕೊಡುಕೊಳ್ಳುವಿಕೆ ಮತ್ತು ವ್ಯವಹಾರಗಳು, ಅದರ ಪರಿಣಾಮ, ಮಹಿಳೆಯರ ಅತಂತ್ರ ಬದುಕು ಇವೆಲ್ಲಾ ಲೇಖಕಿಯಿಂದ ಯಾವ ಉತ್ಪ್ರೇಕ್ಷಿತ ಪದಪುಂಜಗಳಿಲ್ಲದೆ ಅನಾವರಣಗೊಂಡು ಮನಸ್ಸನ್ನು ಕಲಕಿದ್ದವು. ಸಾಮಾನ್ಯವಾಗಿ ಧಾರವಾಹಿಗಳನ್ನು ಓದುವವರೆಲ್ಲಾ ಆಗ ’ಚಂದ್ರಗಿರಿ ತೀರದಲ್ಲಿ’ ಕಾದು ಓದಿದ್ದರು. ಇನ್ನೆರಡು ವರ್ಷ ಕಳೆದರೆ ನಲವತ್ತು ವರ್ಷ ತುಂಬುವ ಆ ಕಾದಂಬರಿ ಇನ್ನೂ ಓದುಗರ ಮನಸ್ಸಿನಲ್ಲಿ ಉಳಿದಿರುವುದಕ್ಕೆ ಕಾರಣ ಅದರ ತಾಜಾತನ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯಾಗಿದೆ. ಆ ನಂತರ ಸಾರ ನಿರಂತರವಾಗಿ ಬರೆದರು. ಮುಸ್ಲಿಂ ಮಹಿಳೆಯರ ಬದುಕು ಮತ್ತು ಸ್ಥಿತಿಗತಿಗಳನ್ನು ಅನಾವರಣ ಮಾಡಿದರು. ಬರೆದಂತೆ ಬದುಕಿದ ಮಹಿಳೆಯಾಗಿದ್ದರು. ಅವರ ದನಿ ಮತಾಂಧರಿಗೆ ಸಿಟ್ಟು ತಂದಿದ್ದವು. ಆ ಸಮಯದಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಕುರ್ಚಿಯನ್ನು ಅವರ ಮೇಲೆ ಎಸೆದು ಗಲಭೆ ಎಬ್ಬಿಸಿದರು. ಇದರಿಂದೇನೂ ಅಂಜದ ಸಾರಾ, ’ನಾನು ಸತ್ಯವನ್ನು ಹೇಳುತ್ತೇನೆ, ಅದನ್ನೇ ಬರೆಯುತ್ತೇನೆ’ ಎಂದು ಕೂಗಿದರು. ಆಗ ಲಂಕೇಶ್, ಸಾರ ಅವರಿಗೆ ಧೈರ್ಯ ತುಂಬಿ, ’ಸಾರಾ ಅವರು ಮುಸ್ಲಿಂ ಸಂಪ್ರದಾಯಗಳನ್ನು ಪಾಲಿಸುತ್ತಿರುವವರು. ಅವರೆಂದೂ ಸಂಪ್ರದಾಯವನ್ನು ಬಿಟ್ಟವರಲ್ಲ. ಸಮಯಕ್ಕೆ ಸರಿಯಾಗಿ ಪ್ರಾರ್ಥನೆ ಮಾಡುವ ಮಹಿಳೆ. ಅಂಥವರನ್ನು ಸಹಿಸಿಕೊಳ್ಳಲಾಗದ ನಿಮಗೆ ಕೆಟ್ಟ ದಿನಗಳಿವೆ’ ಎಂದು ಟೀಕಿಸಿದ್ದರು. ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳಿಗೆ ಉಗ್ರ ಪ್ರತಿಭಟನೆ ಬಂದರೆ ತಮ್ಮ ಅಭಿವ್ಯಕ್ತಿ ಶೈಲಿಯನ್ನ ಮೆತ್ತಗಾಗಿಸಿಕೊಳ್ಳುತ್ತಾರೆ ಇಲ್ಲ ಬದಲಿಸಿಕೊಳ್ಳುತ್ತಾರೆ. ಆದರೆ ಸಾರಾ ಹಾಗಾಗಲಿಲ್ಲ ಬದುಕಿನ ಕಡೆಯವರೆಗೂ ಅಭಿವ್ಯಕ್ತಿ ಪ್ರಾಮಾಣಿಕವಾಗಿಯೇ ಇತ್ತು.

ನಮ್ಮೆಲ್ಲರ ಇಷ್ಟದ ಲೇಖಕಿಯಾದ ಸಾರಾ ಅವರನ್ನು ಲಂಕೇಶ್ ಪತ್ರಿಕೆ ಇಪ್ಪತ್ತು ವರ್ಷ ತುಂಬಿದ ಸಮಾರಂಭಕ್ಕೆ ಕರೆಸಬೇಕೆಂದು ಆಲೋಚಿಸಿದೆವು. ಅದರಂತೆ 1999ರ ಡಿಸೆಂಬರ್ 6ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಭೆ ಏರ್ಪಡಿಸಲಾಯಿತು. ಸಾರಾ ಅವರಿಗೆ ಫೋನ್ ಮಾಡಲಾಗಿ ಒಪ್ಪಿಕೊಂಡು ಬರುವುದಾಗಿ ಹೇಳಿದರು. ಆಹ್ವಾನ ಪತ್ರಿಕೆ ಪ್ರಿಂಟ್ ಹಾಕಿಸಿಕೊಂಡು ಬರುವುದಾಗಿ ಲಂಕೇಶರಿಗೆ ತೋರಲು ಹೋದರೆ, ಅವರು ರೇಗಿ “ಅದೇನಯ್ಯ ಡಿಸೆಂಬರ್ ಆರಿಗೆ ಗಂಟು ಬಿದ್ದಿದ್ದೀರಿ. ಬೇರೆ ದಿನಾಂಕ ಗೊತ್ತು ಮಾಡು” ಎಂದರು. ನಾನು ಮುಂದಿನ ಹದಿನಾಲ್ಕನೇ ತಾರೀಕು ನಿಗದಿ ಮಾಡುವ ಗಡಿಬಿಡಿಯಲ್ಲಿ ಕಾರ್ಯಕ್ರಮ ಮುಂದೆ ಹೋದದ್ದನ್ನು ಸಾರ ಅವರಿಗೆ ತಿಳಿಸಲಿಲ್ಲ. ಆದರೆ ಸಾರಾ ಆರನೇ ತಾರೀಕು ಶಿವಮೊಗ್ಗಕ್ಕೆ ಬಂದು ಕುವೆಂಪು ರಂಗಮಂದಿರಕ್ಕೆ ಹೋಗಿದ್ದಾರೆ. ಅಲ್ಲಿ ಯಾರೂ ಇರದಿದ್ದನ್ನು ಕಂಡು, ಕಡೆಗೆ ಇಲಾಖೆ ನಿರ್ದೇಶಕನ ಛೇಂಬರಿಗೆ ಹೋಗಿ ಕೇಳಿದಾಗ ಅವರು, ’ಈ ದಿನ ಯಾವ ಸಮಾರಂಭವೂ ಇಲ್ಲ’ ಎಂದಿದ್ದಾರೆ. ಸಾರಾ ವಾಪಸು ಹೊರಟುಹೋಗಿದ್ದಾರೆ. ಇದನ್ನು ನನ್ನ ಗಮನಕ್ಕೆ ನಿರ್ದೇಶಕರು ತಂದಾಗ, ನಾನು ಕ್ಷಮೆ ಯಾಚಿಸಲು ಫೋನ್ ಮಾಡಿ ಮಾತಾಡಿದೆ. ಆದರೆ ಸಾರಾ, ’ನಾನು ಅಲ್ಲಿ ಬಂದೇ ಇಲ್ಲ’ ಎಂದರು. ನನ್ನ ಅಜಾಗರೂಕತೆಯಿಂದ ನನಗೆ ನೋವಾಗಬಾರದೆಂದು ನಾನಲ್ಲಿಗೆ ಬಂದೇ ಇಲ್ಲವೆಂದು ವಾದಿಸಿದರು. ಅದು ಅವರ ಶ್ರೇಷ್ಠ ಗುಣ. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಂಡು ಅದನ್ನು ತಮ್ಮ ಬದುಕಿನುದ್ದಕ್ಕೂ ವ್ರತದಂತೆ ಪಾಲಿಸಿದ ಸಾರಾ ಈ ನಾಡು ತಲುಪಿರುವ ಸ್ಥಿತಿ ನೆನಸಿಕೊಂಡು ಕೊರಗುವಂತಾಗಿದ್ದರು.

ಲಂಕೇಶ್ ಪತ್ರಿಕೆ ಮುಖಾಂತರ ಬರವಣಿಗೆಯ ಉತ್ತುಂಗಕ್ಕೇರಿದ ಒಂದು ಡಜನ್ ಮಹಿಳಾ ಲೇಖಕಿಯರ ಪೈಕಿ ಲಂಕೇಶರ ಮತ್ತು ಲಂಕೇಶ್ ಪತ್ರಿಕೆಯ ಸಿದ್ಧಾಂತಗಳಿಗೆ ಚ್ಯುತಿಬಾರದಂತೆ ಬದುಕಿದ ವಿರಳ ಮಹಿಳೆ ಸಾರಾ. ಕಳೆದ 8ನೇ ತಾರೀಕಿನಂದು ಬೆಂಗಳೂರಲ್ಲಿ ನಡೆದ ಜನಸಾಹಿತ್ಯ ಸಮಾವೇಶದ ಅಂಗಳದಲ್ಲಿ ಹಲವಾರು ಕಲಾವಿದರು ತಮ್ಮ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿದ್ರು. ಒಬ್ಬ ಕಲಾವಿದರು (ಅವರ ಚಿತ್ರವನ್ನೇ ದಿಟ್ಟಿಸುತ್ತಾ ಕಲಾವಿದರ ಹೆಸರನ್ನು ಗಮನಿಸುವುದನ್ನೇ ಮರೆತೆ) ಅತ್ಯಂತ ಕಡಿಮೆ ಗೆರೆಯಲ್ಲಿ ಸಾರ ಅವರ ದುಂಡದ ಮುಖವನ್ನು ಚಿತ್ರಿಸಿದ್ದರು. ಅಲ್ಲೇ ಬೊಳುವಾರು ಚಿತ್ರವೂ ಇತ್ತು. ಅದು ಎಂದಿನಂತೆ ದಿಗ್ಭ್ರಮೆಯ ನೋಟದಲ್ಲಿತ್ತು. ಆದರೆ ಅತ್ಯಂತ ಕಡಿಮೆ ರೇಖೆಗಳಲ್ಲಿ ಸಾರಾ ಅವರ ಚಿತ್ರ ಬಿಡಿಸಿದ್ದ ಬಗೆಯನ್ನು ಮೆಚ್ಚಿಕೊಂಡ ನಾನು ನಟರಾಜ್ ಹುಳಿಯಾರ್‌ರನ್ನು ಕರೆದು ಆ ಚಿತ್ರ ತೋರಿಸಿದೆ. ಅವರೂ ಮೆಚ್ಚಿಕೊಂಡರು. ಮಹಿಳಾ ಲೋಕದ ಸಮಸ್ಯೆಗಳನ್ನ ತಮ್ಮ ಗಂಭೀರ ಮುಖದಲ್ಲಿ ಪ್ರತಿಬಿಂಬಿಸುತ್ತಿದ್ದ ಸಾರಾ ತುಂಬ ಆತಂಕದಿಂದಲೇ ನಿರ್ಗಮಿಸಿದ್ದಾರೆ. ಆದರೆ ಜನಸಾಹಿತ್ಯ ಸಮಾವೇಶದಲ್ಲಿ ಕಂಡ ಹಲವಾರು ಮುಸ್ಲಿಂ ತರುಣಿಯರು ಸಾರಾ ಅವರ ಸ್ಥಾನ ತುಂಬಲಿದ್ದಾರೆ. ಹಾಗಾಗಿ ನಿಮ್ಮ ಬದುಕು ಸಾರ್ಥಕವಾಗಿದೆ, ಹೋಗಿ ಬನ್ನಿ ಸಾರಾ ಅನ್ನಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...