Homeಕರ್ನಾಟಕತೇಜಸ್ವಿ ಸೂರ್ಯ ವಿರುದ್ಧ ಪ್ರತಾಪ್ ಸಿಂಹನಿಗೆ ದೂರಿದ ನೊಂದ ಮಹಿಳೆ?

ತೇಜಸ್ವಿ ಸೂರ್ಯ ವಿರುದ್ಧ ಪ್ರತಾಪ್ ಸಿಂಹನಿಗೆ ದೂರಿದ ನೊಂದ ಮಹಿಳೆ?

- Advertisement -
- Advertisement -

ಪಾರ್ಲಿಮೆಂಟ್ ಅಭ್ಯರ್ಥಿಯ ಅರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಅರ್ಹತೆಯ ಬಗ್ಗೆ ಬಹಳ ಗಂಭೀರ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗಳು ಏಳುತ್ತಿರುವುದು ಜನಸಾಮಾನ್ಯರಲ್ಲಿ ಮಾತ್ರವಲ್ಲಾ, ಬಿಜೆಪಿಯೊಳಗೇ ದಿಗಿಲು ಉಂಟಾಗಿದೆ. ಒಂದು ವೇಳೆ ಆತನಿಗೆ ಸಂಬಂಧಿಸಿದ ಎಲ್ಲಾ ಸಂಗತಿಗಳೂ ಹೊರಗೆ ಬಿದ್ದರೆ ಅದು ಪಕ್ಷಕ್ಕೆ ಬಹಳ ಕೆಟ್ಟ ಹೆಸರು ತರುತ್ತದೆ ಎಂಬುದೇ ಅವರ ಆತಂಕಕ್ಕೆ ಕಾರಣ. ಇದು ತೇಜಸ್ವಿಗೂ ಗೊತ್ತಿರುವುದರಿಂದಲೇ, ಮೊದಲ ಸುದ್ದಿ ಹೊರಗೆ ಬಂದ 2ನೇ ದಿನಕ್ಕೇ ಕೋರ್ಟಿನಿಂದ ತಡೆ ತಂದದ್ದು. ಅಷ್ಟೇ ಅಲ್ಲ, ನಾನು ಪುರಾವೆಗಳ ಸಮೇತ ಈತನ ಚಾರಿತ್ರ್ಯ ಬಿಚ್ಚಿಡುತ್ತೇನೆ ಎಂದು ಹೇಳಿದ್ದ ಮಹಿಳೆ, ನಂತರ ಆ ಟ್ವೀಟ್‍ಗಳನ್ನು ಅಳಿಸಿ ಹಾಕಿದರು.

ತರುವಾಯ, ಇದನ್ನು ಯಾರೂ ಮುಂದುವರೆಸಬೇಡಿ ಎಂದು ಮನವಿ ಮಾಡಿದರು. ಆ ನಂತರ ಟ್ವಿಟ್ಟರ್‍ನಿಂದಲೇ ಹೊರಗೆ ಹೋದರು. ಇದು ಆ ಮಹಿಳೆಯ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ ಎನ್ನುವುದನ್ನಷ್ಟೇ ಅಲ್ಲದೇ, ಸ್ವತಃ ತೇಜಸ್ವಿ ಸೂರ್ಯ ಬಹಳ ಬೆದರಿರಬೇಕು ಎಂಬುದನ್ನೇ ತೋರುತ್ತದೆ. ಈ ಹಿಂದೆ ಗೌರಿ ಲಂಕೇಶರ ಹತ್ಯೆ ಆದಾಗ, ಬಿಜೆಪಿಯಲ್ಲಿ ಬಹುತೇಕರು ಖಂಡನೆ ಹೇಳಿಕೆ ನೀಡಿ ಸುಮ್ಮನಾದರು. ಆದರೆ, ಕೆಲವರಷ್ಟೇ ಅದನ್ನು ಪರೋಕ್ಷವಾಗಿ ಸಮರ್ಥಿಸುವ ಹೀನ ಮನಸ್ಸನ್ನು ತೋರ್ಪಡಿಸಿದರು. ಅಂತಹವರಲ್ಲಿ ತೇಜಸ್ವಿ ಮುಂಚೂಣಿಯಲ್ಲಿದ್ದರು. 26 ವರ್ಷ (ಆಗ) ವಯಸ್ಸಿನ ಒಬ್ಬ ವಕೀಲನಲ್ಲಿ ಇಂತಹ ದುಷ್ಟ ಮನಸ್ಸಿದೆಯಲ್ಲಾ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಆತನನ್ನು ಹತ್ತಿರದಿಂದ ಬಲ್ಲವರಿಗೆ ಇದೇನೂ ವಿಶೇಷ ಎನಿಸಿರಲಿಲ್ಲ. ಇದೀಗ ತೇಜಸ್ವಿ ತನಗೆ ಕೈ ಕೊಟ್ಟಿದ್ದು ಮಾತ್ರವಲ್ಲಾ, ‘ಇದು ಮೊದಲ ಪ್ರಕರಣವೂ ಅಲ್ಲ, ಕೊನೆಯ ಪ್ರಕರಣವೂ ಅಲ್ಲ’ ಎಂದು ಆ ಮಹಿಳೆ ಹೇಳಿದ್ದರು. ನಂತರದಲ್ಲಿ ಮಹಿಳೆಯರಿಗೆ ಹಿಂಸೆ ಕೊಡುವುದು, ಬಡಿಯುವುದು, ಅಸಭ್ಯವಾಗಿ ವರ್ತಿಸುವ ವ್ಯಕ್ತಿ ಈತ ಎಂಬ ವಿಚಾರ ಹೊರಗೆ ಬಂದಿತು. ಬಿಜೆಪಿಯ ವರ್ತುಲದಲ್ಲೇ ಓಡಾಡಿದ ಇನ್ನೊಂದು ವಿಚಾರದಲ್ಲಿ ಇಂಗ್ಲಿಷ್ ಚಾನೆಲ್ಲೊಂದರ ವರದಿಗಾರ್ತಿಯು ಅನುಭವಿಸಿದ ಕಿರುಕುಳದ ವಿಚಾರವೂ ಇತ್ತು.

ಇದರ ಕುರಿತು ಆಗಲೇ ಅದನ್ನು ನಮ್ಮಲ್ಲಿ ಸುದ್ದಿ ಮಾಡಿದ್ದರೂ, ಸ್ಕ್ರೀನ್‍ಷಾಟ್‍ಗಳನ್ನು ಹಾಕಿರಲಿಲ್ಲ. ಆದರೆ, ಇದೀಗ ನಮಗೆ ಲಭ್ಯವಾದ ಹಲವಾರು ಸ್ಕ್ರೀನ್‍ಷಾಟ್‍ಗಳಲ್ಲಿ ಒಂದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತೇಜಸ್ವಿಯ ಕಿರುಕುಳವನ್ನು ತಾಳದೇ ಪ್ರತಾಪ್‍ಸಿಂಹರಲ್ಲಿ ದೂರಿದ್ದಾರೆ. ಬೆಂಗಳೂರು ಬಿಟ್ಟು ಸ್ವಲ್ಪ ಹೊರಗೆ ಬಂದುಬಿಡಬೇಕು ಎನಿಸಿದೆ ಎಂತಲೂ ಹೇಳುತ್ತಾರೆ. ನಿನ್ನ ಬಗ್ಗೆ ನನಗೆ ಕಾಳಜಿ ಇದೆ. ಆದರೆ ನಾನೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲವೆಂದು ಹೇಳುವ ಸಿಂಹ ಕೈತೊಳೆದುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ನಂತರ ಆತನ ಜೊತೆಗೆ ತಾನು ಮಾತಾಡಿದ್ದಾಗಿಯೂ, ತೇಜಸ್ವಿಯ ಹತ್ತಿರ ಈ ವಿಚಾರವನ್ನು ತಾನೇನೂ ಪ್ರಸ್ತಾಪಿಸಿಲ್ಲ, ಆತ ಚೆನ್ನಾಗಿದ್ದಾನೆ, ನೀನೂ ಚೆನ್ನಾಗಿದ್ದುಬಿಡು ಹೇಳುವ ಒಂದು ವಾಟ್ಸಾಪ್ ಚಾಟ್ ಸ್ಕ್ರೀನ್‍ಷಾಟ್‍ನಿಂದ ಆರಂಭವಾಗುವ ಈ ಸರಣಿಯಲ್ಲಿ ಹಲವಾರು ಅಂಶಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ.

ಪ್ರತಾಪ್ ಸಿಂಹನ ಬಳಿ ಅಳಲು ತೋಡಿಕೊಂಡಿರುವ ಸಂತ್ರಸ್ತೆ

ತಾವೇ ಬಹಿರಂಗಗೊಳಿಸಲಿಚ್ಛಿಸದ ನೊಂದವರ ಐಡೆಂಟಿಟಿಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಯಲುಗೊಳಿಸುವ ಸುದ್ದಿಗಳನ್ನು ಸುದ್ದಿಯ ‘ರೋಚಕತೆ’ಯ ಕಾರಣಕ್ಕೆ ಮಾಡುತ್ತಾ ಹೋಗದೆ, ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಿದ್ದೇವೆ. ಕೇವಲ 28 ವರ್ಷ ವಯಸ್ಸಿನ ಈ ವ್ಯಕ್ತಿಯು ಸಂಸತ್ ಸದಸ್ಯನಾಗುವಷ್ಟು ಅರ್ಹತೆ ಪಡೆದುಕೊಂಡಿದ್ದಾನೆಂದು ರಾಷ್ಟ್ರೀಯ ಪಕ್ಷವೊಂದು ಭಾವಿಸಿರುವುದಾದರೆ, ಈ ಅವಗುಣಗಳನ್ನು, ಅನರ್ಹತೆಗಳನ್ನು ಅವರು ಗಮನಕ್ಕೆ ತೆಗೆದುಕೊಂಡಿಲ್ಲವೇ? ಬಿಜೆಪಿ ಸರ್ಕಾರವು ಮುಂದಿಟ್ಟ ಮಹಿಳಾ ಮೀಸಲಾತಿಯ ಪ್ರಸ್ತಾಪಕ್ಕೆ ಅಷ್ಟೇ ತೇಜಸ್ವಿಯ ವಿರೋಧವಿರಲಿಲ್ಲ; ಮಹಿಳೆಯರ ಬಗ್ಗೆ ಬಹಳ ಕೀಳು ಮಟ್ಟದ ಮನಸ್ಥಿತಿಯನ್ನು ಈತ ಹೊಂದಿರುವುದಕ್ಕೆ ಹಲವು ಪುರಾವೆಗಳು ಹೊರಬೀಳುತ್ತಿವೆ. ಇದು ಬಿಜೆಪಿ ಪಕ್ಷದ ನೀತಿಯಾ? ಇಂತಹ ವ್ಯಕ್ತಿಯು ದೇಶಕ್ಕೇ ಅನ್ವಯಿಸುವ ಕಾನೂನುಗಳನ್ನು ರೂಪಿಸುವ ಸಂಸತ್‍ನಲ್ಲಿ ಇರುವುದಕ್ಕೆ ಎಷ್ಟರ ಮಟ್ಟಿಗೆ ಅರ್ಹ? ಈ ಎಲ್ಲಾ ಸುದ್ದಿಗಳು ಒಂದೊಂದಾಗಿ ಹೊರಗೆ ಬರುತ್ತಿರುವುದು ಬಿಜೆಪಿಯ ವಲಯದಿಂದಲೇ ಆಗಿದೆ. ಹಾಗಿದ್ದ ಮೇಲೆ ಬಿಜೆಪಿಯ ಇತರ ‘ಸಭ್ಯರು’ ಇದನ್ನು ಬಹಿರಂಗಗೊಳಿಸದೇ ಪಕ್ಷ ನಿಷ್ಠೆಯ ಹೆಸರಿನಲ್ಲಿ, ಅಪಾಯಕಾರಿ ವ್ಯಕ್ತಿಯು ಪಕ್ಷದ ಪ್ರತಿನಿಧಿಯಾಗಿ ಆರಿಸಿ ಹೋದರೆ ಪರವಾಗಿಲ್ಲವೆಂದು ಭಾವಿಸಿದ್ದಾರೆಯೇ? ಸ್ವತಃ ತೇಜಸ್ವಿ ಸೂರ್ಯ ತನ್ನ ಆತ್ಮವಿಮರ್ಶೆಯನ್ನು, ಪಶ್ಚಾತ್ತಾಪವನ್ನು ಮುಂದಿಡಲು ಇದು ಸುಸಮಯ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...