Homeಮುಖಪುಟಆಪ್ ಗುಜರಾತ್ ಕೋರ್ಟ್ ಕಾ ಭಿ ಕ್ರೋನಾಲಜಿ ಸಮಜ್ ಲೀಜಿಯೇ....!!

ಆಪ್ ಗುಜರಾತ್ ಕೋರ್ಟ್ ಕಾ ಭಿ ಕ್ರೋನಾಲಜಿ ಸಮಜ್ ಲೀಜಿಯೇ….!!

- Advertisement -
- Advertisement -

ಇಂದು ಇಡೀ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅತಿ ಹೆಚ್ಚು ದಾಖಲಾಗುತ್ತಿರುವುದು ಮಹಾರಾಷ್ಯ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ, ಆದರೆ ಗುಜರಾತಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮಹಾರಾಷ್ಟ್ರಕ್ಕಿಂತ ಕಡಿಮೆ ಇರಲು ಕಾರಣ ಅಲ್ಲಿ ಸೋಂಕಿತರು ಕಡಿಮೆ ಇರುವುದಲ್ಲ. ಬದಲಿಗೆ ಟೆಸ್ಟ್ ಗಳನ್ನೇ ಕಡಿಮೆ ಮಾಡುತ್ತಿರುವುದು!

ವಾಸ್ತವದಲ್ಲಿ ಮಹಾರಾಷ್ಟ್ರದಲ್ಲಿ ಮಾಡುತ್ತಿರುವ ಟೆಸ್ಟ್ ಗಳ ಅರ್ಧದಷ್ಟು ಟೆಸ್ಟ್ ಗಳನ್ನೂ ಸಹ ಗುಜರಾತ್ ಸರ್ಕಾರ ಮಾಡುತ್ತಿಲ್ಲ. ಸೋಂಕಿತರನ್ನು ಆಸ್ಪತ್ರೆಯಲ್ಲಿ ನೋಂದಾಯಿಸಿಕೊಳ್ಳುತ್ತಿಲ್ಲ. ಸತ್ತವರ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುತ್ತಿಲ್ಲ ಹಾಗು ಸಂಬಂಧಿಕರಿಗೂ ತಿಳಿಸುತ್ತಿಲ್ಲ.

ಅದರಲ್ಲೂ ವಿಶೇಷವಾಗಿ ಗುಜರಾತ್ ನ ರಾಜಧಾನಿ ಅಹಮದಾಬಾದಿನ ಸರ್ಕಾರಿ ಆಸ್ಪತ್ರೆ ಸಾವಿನ ಕೂಪವಾಗಿ ಬಿಟ್ಟಿದೆ. ಈವರೆಗೆ ಗುಜರಾತಿನಲ್ಲಿ ಕೋವಿಡ್ ನಿಂದ ಸತ್ತವರಲ್ಲಿ ಅರ್ಧದಷ್ಟು ಭಾಗ ಸತ್ತಿರುವುದು ಅಹಮದಾಬಾದಿನ ಈ ಆಸ್ಪತ್ರೆಯಲ್ಲೇ.. ಕಾರಣ ನಿರ್ಲಕ್ಷ್ಯ, ಸಿಬ್ಬಂದಿ ಹಾಗು ಪರಿಕರಗಳ ಕೊರತೆ, ಸರ್ಕಾರದ ಬೇಜವಾಬ್ದಾರಿ ಇತ್ಯಾದಿ…

ಹೀಗೆ ಕೋವಿಡ್ ನಿರ್ವಹಣೆಯಲ್ಲಿ ಗುಜರಾತ್ ಮಾಡೆಲ್ ಎಂದರೆ ಸುಳ್ಳುಗಳನ್ನು ಹೇಳುತ್ತಾ ಸತ್ಯವನ್ನು ಮರೆಮಾಚುತ್ತಾ ನಡೆಸುತ್ತಿರುವ ಕಪಟವಾಗಿದೆ.

ಇತ್ತೀಚೆಗೆ, ಇವೆಲ್ಲವನ್ನೂ ಕಂಡು ಬೇಸತ್ತ ಅಹಮದಾಬಾದಿನ ಸರ್ಕಾರಿ ಆಸ್ಪತ್ರೆಯ ಅನಾಮಧೇಯ ವೈದ್ಯರೊಬ್ಬರು ಗುಜರಾತಿನ ಹೈಕೋರ್ಟಿಗೆ ಪತ್ರವೊಂದನ್ನು ಬರೆದಿದ್ದರು. ಅದನ್ನು ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಗುಜರಾತಿನ ಹೈಕೋರ್ಟು ದಾಖಲಿಸಿಕೊಂಡಿತು ಪ್ರಾರಂಭಿಕ ವಿಚಾರಣೆಯಲ್ಲಿ ಸರ್ಕಾರ ವು ಸತ್ಯಗಳನ್ನು ಮರೆಮಾಚುತ್ತಿರುವುದನ್ನು ಕಂಡುಕೊಂಡಿದ್ದ ಹೈಕೋರ್ಟಿನ ದ್ವಿಸದಸ್ಯ ಪೀಠ ಕೂಡಲೇ ಸರಿಯಾದ ಕ್ರಮಗಳನ್ನು ಜಾರಿಗೊಳಿಸಲು ಆದೇಶಿಸಿತ್ತು.

ಆದರೆ ತನ್ನ ನಿರ್ಲಕ್ಷ್ಯ ಹಾಗು ದುಷ್ಟತನವನ್ನು ಮರೆಮಾಚಲು ಗುಜರಾತ್ ಹಾಗು ಕೇಂದ್ರದ ಬಿಜೆಪಿ ಸರ್ಕಾರ ಹೈ ಕೋರ್ಟನ್ನು ಕೂಡಾ ಬ್ಲಾಕ್ ಮೇಲ್ ಮಾಡುತ್ತಿದೆ.

ಮೋದಿ ಮತ್ತು ಶಾ ಕ್ರೊನಾಲಜಿ

ಅದು ಹೇಗೆಂದು ಅರ್ಥವಾಗಬೇಕೆಂದರೆ ಕೆಳಗಿನ ಕ್ರೋನಾಲಜಿಯನ್ನು ಗಮನಿಸಬೇಕು..

ಮೇ 22-

ಅಹಮದಾಬಾದಿನ ಹೈಕೋರ್ಟಿನ ಜಸ್ಟಿಸ್ ಪಾರ್ದಿವಾಲ ಮತ್ತು ಜಸ್ಟಿಸ್ ವೋರಾ ಪೀಠ:

“ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಗುಜರಾತ್ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಅದರಲ್ಲೂ ಅಹಮದಾಬಾದಿನ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಯ ಆಗರವಾಗಿದೆ. ಸಾವಿನ ಸೆರೆಮನೆಯಾಗಿದೆ. ಗುಜರಾತ್ ಸರ್ಕಾರ ಮೇ 29ರ ಒಳಗೆ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿಯನ್ನು ನೀಡದಿದ್ದರೆ ಕೋರ್ಟು ಕಠಿಣವಾದ ಆದೇಶಗಳನ್ನು ನೀಡಬೇಕಾಗುತ್ತದೆ”

ಮೇ 25-

ಹೈಕೋರ್ಟು ಈ ಕ್ರಮಗಳಿಗೆ ಮುಂದಾಗಬಾರದೆಂದು ಸರ್ಕಾರಿ ವಕೀಲರ ಮನವಿ. ಈ ಮನವಿಯಿಂದ ಕೆಂಡಾಮಂಡಲವಾಗುವ ಕೋರ್ಟು ಮೇ 29 ರೊಳಗೆ ಸರಿಯಾದ ತಿದ್ದುಪಡಿ ಕ್ರಮಗಳನ್ನು ತೆಗೆದುಕೊಂಡು ವರದಿ ಮಾಡಲು ಸೂಚನೆ ಹಾಗು ಆಸ್ಪತೆಯ ಖುದ್ದು ಭೇಟಿ ಕಾರ್ಯಕ್ರಮದ ಘೋಷಣೆ.

ಮೇ 29-

ಅಹಮದಾಬಾದಿನ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್ ವಿಕ್ರಂ ನಾಥರಿಂದ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸುತ್ತಿದ್ದ ಪಾರ್ದಿವಾಲ್ -ವೋರಾ ಪೀಠದ ಪುನರ್ರಚನೆ.

ಈ ಹಿಂದಿನ ಜಸ್ಟಿಸ್ ಪಾರ್ದಿವಾಲ ಮತ್ತು ಜಸ್ಟಿಸ್ ವೋರಾ ಪೀಠದಲ್ಲಿ ಆದೇಶಗಳನ್ನು ಬರೆದ ಜಸ್ಟಿಸ್ ಪಾರ್ದಿವಾಲ ಆ ಪೀಠದ ಹಿರಿಯ ನ್ಯಾಯಾಧೀಶರಾಗಿದ್ದರು.

ಪುನರ್ರಚಿತವಾದ ಪೀಠದ ಜವಾಬ್ದಾರಿಯನ್ನು ಈಗ ಸಾಕ್ಷಾತ್ ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥರೇ ವಹಿಸಿಕೊಂಡಿದ್ದರಿಂದ ಹಳೆಯ ಪೀಠದಲ್ಲಿ ಹಿರಿಯ ನ್ಯಾಯಾಧೀಶರಾಗಿದ್ದ ಪಾರ್ದಿವಾಲಾರವರು ಈ ಹೊಸ ದ್ವಿಸದಸ್ಯ ಪೀಠದಲ್ಲಿ ಕಿರಿಯ ಸಹಚರರಾದರು !

ಮೇ 31-

ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥ ಹಾಗೂ ಜಸ್ಟಿಸ್ ಪಾರ್ದಿವಾಲರ ಪೀಠ :

“ಗುಜರಾತ್ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದೆ. ಸರ್ಕಾರವು ಈಗ ತೆಗೆದುಕೊಂಡಿರುವ ಕ್ರಮಗಳನ್ನು ತೆಗೆದುಕೊಳ್ಳದಿರುತ್ತಿದ್ದರೆ ನಾವೆಲ್ಲರೂ ಸತ್ತೇ ಹೋಗಿರುತ್ತಿದ್ದೆವು. ಅಹಮದಾಬಾದಿನ ಆಸ್ಪತ್ರೆಯೂ ಸಹ ಅತ್ಯುತ್ತಮವಾಗಿದೆ. ಈ ಸಾರ್ವಜನಿಕ ಮೊಕದ್ದಮೆಯನ್ನು ಕೋರ್ಟು ಅಲಹಾಬಾದ್ ಕೈಗೆತ್ತಿಕೊಂಡಿರುವುದು ಸರ್ಕಾರದ ಮೇಲೆ ಆಕ್ಷೇಪಣೆ ಮಾಡುವುದಕ್ಕಲ್ಲ. ವಿರೋಧ ಪಕ್ಷಗಳೂ ಸಹ ಇಂದಿನ ಸಂದರ್ಭದಲ್ಲಿ ಸರ್ಕಾರಕ್ಕೆ ರಚನಾತ್ಮಕ ಸಹಕಾರ ಕೊಡಬೇಕು”

ಅಡಿ ಟಿಪ್ಪಣಿ :

ಅಹಮದಾಬಾದಿನ ಹಾಲಿ ಮುಖ್ಯನ್ಯಾಯಮೂರ್ತಿ ವಿಕ್ರಂ ನಾಥರು 2014 ರಲ್ಲಿ ಉತ್ತರಪ್ರದೇಶದ ಅಲಹಾಬಾದಿನ ಹೈಕೋರ್ಟಿನ ನ್ಯಾಯಾಧೀಶರಾಗಿದ್ದಾಗ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನರೇಂದ್ರ ಮೋದಿಯವರ ಗೆಲುವನ್ನು ಪ್ರಶ್ನಿಸಿದ್ದ ತಕರಾರು ಅರ್ಜಿಯನ್ನು ಹೆಚ್ಚಿನ ವಿಚಾರಣೆಯಿಲ್ಲದೆ ವಜಾ ಮಾಡಿದ್ದರು.

ಆದರೂ 2019 ರ ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟಿನ ಕೊಲಿಜಿಯಂ ಆಗ ಅಲಹಾಬಾದ್ ಹೈಕೋರ್ಟಿನ ಹಿರಿಯ ನ್ಯಾಯಾಧೀಶರಾಗಿದ್ದ ವಿಕ್ರಂ ನಾಥರನ್ನು ಆಂಧ್ರಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿಸಲು ಮಾಡಿದ್ದ ಶಿಪಾರಸ್ಸುಗಳನ್ನು ಮೋದಿ ಸರ್ಕಾರ ವಾಪಸ್ ಕಳಿಸಿತ್ತು .

ಆದರೆ 2019 ರ ಆಗಸ್ಟ್ ನಲ್ಲಿ ಮೋದಿ ಸರ್ಕಾರವೇ ಕೊಲಿಜಿಯಂ ಗೆ ವಿಶೇಷ ಮನವಿ ಮಾಡಿ ಜಸ್ಟಿಸ್ ವಿಕ್ರಂ ನಾಥರನ್ನು ಗುಜರಾತಿನ ಮುಖ್ಯ ನ್ಯಾಯಾಧೀಶರನ್ನಾಗಿಸಿಕೊಂಡಿತು…!!

ಒಂದು ಗಿಳಿಪಾಠ : ಭಾರತದ ನ್ಯಾಯಾಂಗವು ಒಂದು ಸ್ವತಂತ್ರ ಸಂಸ್ಥೆಯಾಗಿದೆ.


ಓದಿ: ರಸ್ತೆಯಲ್ಲಿ ಕೊರೊನಾ ಸೋಂಕಿತರ ಶವ; ಗುಜರಾತ್‌ ಮಾಡೆಲ್ ಧ್ವಂಸ ಮಾಡಿ: ಜಿಗ್ನೇಶ್‌ ಮೇವಾನಿ ಆಕ್ರೋಶ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ| ‘ನೀವು ಕೆಳಜಾತಿಯವರು, ಎಲ್‌ಎಲ್‌ಬಿ ನಿಮಗೆ ಸೂಕ್ತವಲ್ಲ..’; ದಲಿತ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರಿಂದ ಜಾತಿ ನಿಂದನೆ

ರಾಜಸ್ಥಾನದ ಚುರುವಿನ ಸರ್ಕಾರಿ ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ ದಲಿತ ಎಲ್‌ಎಲ್‌ಬಿ ವಿದ್ಯಾರ್ಥಿನಿಯೊಬ್ಬರು, ಇಬ್ಬರು ಪ್ರಾಧ್ಯಾಪಕರಿಂದ ಜಾತಿ ಆಧಾರಿತ ನಿಂದನೆ, ಬೆದರಿಕೆ ಮತ್ತು ತಾರತಮ್ಯ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಿದ್ದಾರೆ. ಎಸ್‌ಸಿ...

ಬೆಂಗಳೂರು: ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: ಮಹಿಳೆ ಸಾವು, ಮೂವರ ರಕ್ಷಣೆ

ಬೆಂಗಳೂರು: ಸೋಮವಾರ ರಾತ್ರಿ ಉತ್ತರ ಬೆಂಗಳೂರಿನಲ್ಲಿರುವ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮೃತರನ್ನು 55 ವರ್ಷದ ಸವಿತಾ ಎಂದು ಗುರುತಿಸಲಾಗಿದೆ. ಅವರ ಪತಿ ಗುತ್ತಿಗೆದಾರ ರಮೇಶ್...

ಲಕ್ನೋ | 12 ವರ್ಷದ ಬಾಲಕ ಉನೈಝ್ ಗುಂಡೇಟಿಗೆ ಬಲಿ : ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದ ಕುಟುಂಬ

ಉತ್ತರ ಪ್ರದೇಶದ ಲಕ್ನೋದಲ್ಲಿ 12 ವರ್ಷದ ಬಾಲಕನೊಬ್ಬ ಗುಂಡೇಟಿನಿಂದ ಮೃತಪಟ್ಟಿದ್ದು, ಆತನನ್ನು ಕೊಲೆ ಮಾಡಲಾಗಿದೆ. ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ದೇಶದ ಗಮನ ಸೆಳೆದಿದ್ದು, ಸಾಮಾಜಿಕ...

ಕೇರಳ: ಪೊಲೀಸರ ‘ದುರುದ್ದೇಶಪೂರಿತ ಮೊಕದ್ದಮೆ’ಗಾಗಿ ನಿವೃತ್ತ ಸೇನಾ ಅಧಿಕಾರಿಗೆ ಕೇರಳ ನ್ಯಾಯಾಲಯದಿಂದ 5 ಲಕ್ಷ ರೂ. ಪರಿಹಾರ ಘೋಷಣೆ

ಕೊಲ್ಲಂ, ಕೇರಳ: ಪೊಲೀಸರ "ದುರುದ್ದೇಶಪೂರಿತ ಮೊಕದ್ದಮೆ"ಗಾಗಿ ನಿವೃತ್ತ ಸೇನಾ ಅಧಿಕಾರಿಯೊಬ್ಬರಿಗೆ ಕೇರಳ ನ್ಯಾಯಾಲಯವು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ.  ಪ್ರಿನ್ಸಿಪಲ್ ಮುನ್ಸಿಫ್ ರಾಗಿ ಎಸ್. ಅವರು, 54 ವರ್ಷದ ನಿವೃತ್ತ ನಾಯಕ್ ಸುಬೇದಾರ್...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಒಳಚರಂಡಿಗೆ ಇಳಿದು ಇಬ್ಬರು ಪೌರ ಕಾರ್ಮಿಕರು ಸಾವು: ವಿಷಕಾರಿ ಅನಿಲ ಶಂಕೆ

ಇಂದೋರ್‌ನ ಚೋಯಿತ್ರಮ್ ಆಸ್ಪತ್ರೆ ಬಳಿ ಸೋಮವಾರ ಒಳಚರಂಡಿ ಒಳಗೆ ಇಳಿದ ಕಾರಣ ಕರಣ್ ಮತ್ತು ಅಜಯ್ ಎಂದು ಗುರುತಿಸಲಾದ ಇಂದೋರ್ ಮಹಾನಗರ ಪಾಲಿಕೆಯ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ವಲಯ 13ರ...

‘ಅತೃಪ್ತ ಆತ್ಮಗಳ ಹತಾಶ ಹೇಳಿಕೆ’ : ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ....

‘ಖಮೇನಿ ಹತ್ಯೆ ಬಗ್ಗೆ ಮೋದಿ ಸರ್ಕಾರದ ಮೌನ ತಟಸ್ಥವಲ್ಲ, ಬದಲಿಗೆ ಪದತ್ಯಾಗ’: ಸೋನಿಯಾ ಗಾಂಧಿ

ಮಂಗಳವಾರ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಗ್ಗೆ ಮೋದಿಯವರ ಮೌನವು ತಟಸ್ಥವಲ್ಲ, ಬದಲಾಗಿ ತ್ಯಾಗವಾಗಿದೆ...

ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರು ಸಾವು

ಟೆಕ್ಸಾಸ್‌ನ ಆಸ್ಟಿನ್ ನಗರದ ಬಾರ್ ಒಂದರ ಹೊರಗಡೆ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಭಯೋತ್ಪಾದನಾ ಕೃತ್ಯವಾಗಿರಬಹುದು ಎಂಬ ಶಂಕೆಯ ಮೇಲೆ ತನಿಖೆ...

ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್ : ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ

ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ ಒಂದಾದ 'ಹಾರ್ಮುಜ್ ಜಲಸಂಧಿ'ಗೆ ವ್ಯಾಪಿಸಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು...

ಹುಬ್ಬಳ್ಳಿಯಲ್ಲಿ ವಲಸೆ ಕಾರ್ಮಿಕನ ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪ ಎದುರಿಸುತ್ತಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎನ್‌ಕೌಂಟರ್ ಪ್ರಕರಣವನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಂದ ಸ್ವತಂತ್ರ ತನಿಖೆಗೆ ವಹಿಸಿ ಸೋಮವಾರ...