Homeಮುಖಪುಟಎಲ್‌ಜಿ ಮನೆ ಮುಂದೆ ಆಪ್ ನಾಯಕರ ಧರಣಿ: ಪೊಲೀಸರಿಂದ ಹಲ್ಲೆ, ಬಂಧನ

ಎಲ್‌ಜಿ ಮನೆ ಮುಂದೆ ಆಪ್ ನಾಯಕರ ಧರಣಿ: ಪೊಲೀಸರಿಂದ ಹಲ್ಲೆ, ಬಂಧನ

ನಿನ್ನೆ ಪ್ರತಿಭಟನೆ ನಡೆಸುವ ಹೇಳಿಕೆ ನೀಡಿದ್ದ ಆಪ್ ಶಾಸಕಿ ಅತಿಶಿ, ’ಮೇಯರ್‌ಗಳಿಗೆ ಧರಣಿ ನಡೆಸಲು ಅವಕಾಶ ನೀಡಿರುವ ದೆಹಲಿ ಪೊಲೀಸರು ನಮಗೂ ಅವಕಾಶ ನೀಡುತ್ತಾರೆ’ ಎಂದು ವ್ಯಂಗ್ಯವಾಡಿದ್ದರು.

- Advertisement -
- Advertisement -

ಉತ್ತರ ದೆಹಲಿ ಪಾಲಿಕೆಯಲ್ಲಿ 2,500 ಕೋಟಿ ರೂಪಾಯಿ ಹಣದ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದ್ದ ಆಪ್ ನಾಯಕರು, ಗೃಹ ಸಚಿವ ಅಮಿತ್ ಶಾ ಮತ್ತು ಅನಿಲ್ ಬೈಜಾಲ್ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಲು ತಯಾರಾಗಿದ್ದರು. ಪ್ರತಿಭಟನೆಗೂ ಮುನ್ನವೇ ಆಪ್ ನಾಯಕರಾದ ರಾಘವ್ ಚಡ್ಡಾ ಮತ್ತು ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ಶಾಸಕಿ ಅತಿಶಿ ಸೇರಿದಂತೆ ಹಲವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

“ಪಾಲಿಕೆಯಲ್ಲಿ 2,500 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ. ಕೇಂದ್ರ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ನಾಳೆ ಬೆಳಗ್ಗೆ 11 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು.  ಸಿಬಿಐ ವಿಚಾರಣೆಗೆ ಅವರು ಒಪ್ಪಿಗೆ ನೀಡುವವರೆಗೂ ನಾವು ಅಲ್ಲಿಯೇ ಕುಳಿತುಕೊಳ್ಳುತ್ತೇವೆ” ಎಂದು ಎಎಪಿ ಶಾಸಕಿ ಅತಿಶಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಕೊರೊನಾ ನಿಯಮಗಳ ಕಾರಣದಿಂದಾಗಿ ಧರಣಿ ನಡೆಸಲು ದೆಹಲಿ ಪೊಲೀಸರು ಅನುಮತಿ  ನೀಡಿರಲಿಲ್ಲ. “ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್ ಹರಡುವುದನ್ನು ತಡೆಯಲು ಎಲ್ಲಾ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಇದಲ್ಲದೆ, ನವದೆಹಲಿ ಜಿಲ್ಲೆಯಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ಜಾರಿಯಲ್ಲಿದೆ. ನಾವು ಎಎಪಿ ವಿನಂತಿಯನ್ನು ತಿರಸ್ಕರಿಸಿದ್ದೇವೆ” ಎಂದು ಡಿಸಿಪಿ ಐಶ್ ಸಿಂಘಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಹಣ ದುರುಪಯೋಗ ಆರೋಪ: ಅಮಿತ್ ಶಾ ಮನೆ ಎದುರು ಧರಣಿ ನಡೆಸಲಿರುವ ಆಪ್

 

ಎಎಪಿ ಶಾಸಕಿ ಅತಿಶಿ ಮತ್ತು ಪಕ್ಷದ ಕೆಲವು ಮುಖಂಡರು ಲೆಫ್ಟಿನೆಂಟ್ ಗವರ್ನರ್ ನಿವಾಸಕ್ಕೆ ಆಗಮಿಸಿದ್ದು, ಬ್ಯಾರಿಕೇಡ್‌ಗಳನ್ನು ದಾಟಲು ಅವಕಾಶವಿರಲಿಲ್ಲ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿ ಆಪ್ ಮುಖಂಡರು ಘೋಷಣೆಗಳನ್ನು ಕೂಗಿದರು, ಆ ನಂತರ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ “ನಾವು ಲೆಫ್ಟಿನೆಂಟ್ ಜನರಲ್‌ಗೆ ಪತ್ರ ಬರೆದು ಮಾತಾಡಲು ಅಪಾಯಿಂಟ್ಮೆಂಟ್ ಕೇಳಿದ್ದೇವು. ಆದರೆ ಸಿಗಲಿಲ್ಲ. ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ? ” ಎಂದು ಅತಿಶಿ ಪ್ರಶ್ನಿಸಿದ್ದಾರೆ.

ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಆಪ್ ನಾಯಕರ ಮೇಲೆ ಪೊಲೀಸರು ಹಲ್ಲೆ ಮಾಡಿ ಬಂಧಿಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.

ಇದನ್ನು ಓದಿ: ಕರ್ನಾಟಕದಲ್ಲಿ ಬಿಜೆಪಿ ಹೆಬ್ಬಾಗಿಲು ಪೂರ್ತಿ ತೆರೆದಿಲ್ಲ, ಕಳ್ಳಕಿಂಡಿಗಳು ಇನ್ನೂ ಮುಚ್ಚಿಲ್ಲ

ನಿನ್ನೆ ಪ್ರತಿಭಟನೆ ನಡೆಸುವ ಹೇಳಿಕೆ ನೀಡಿದ್ದ ಆಪ್ ಶಾಸಕಿ ಅತಿಶಿ, ಮೇಯರ್‌ಗಳಿಗೆ ಧರಣಿ ನಡೆಸಲು ಅವಕಾಶ ನೀಡಿರುವ ದೆಹಲಿ ಪೊಲೀಸರು ನಮಗೂ ಅವಕಾಶ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ವ್ಯಂಗ್ಯವಾಡಿದ್ದರು.

ಏಕೆಂದರೆ, ಮೂರು ಮಹಾನಗರ ಪಾಲಿಕೆಗಳ ಮೇಯರ್‌ಗಳು ಸರ್ಕಾರದಿಂದ ತಮಗೆ ಬರಬೇಕಾದ ಹಣವನ್ನು ನೀಡಬೇಕು ಎಂದು ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಹೊರಗೆ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

“ಬಿಜೆಪಿ ಮುಖಂಡರು ಸಿಎಂ ಮನೆಯ ಹೊರಗೆ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸೆಕ್ಷನ್ 144 ಉಲ್ಲಂಘನೆ ಎಂದು ಪೊಲೀಸರಿಗೆ ಅನ್ನಿಸುವುದಿಲ್ಲ ಮತ್ತು ಸಾಂಕ್ರಾಮಿಕ ಮಾರ್ಗಸೂಚಿಗಳು ಅವರಿಗೆ ಅನ್ವಯಿಸುವುದಿಲ್ಲ”ಎಂದು ರಾಘವ್ ಚಡ್ಡಾ ಹೇಳಿದ್ದಾರೆ.

ಎಲ್ಲಾ ಮೂರು ಮಹಾನಗರ ಪಾಲಿಕೆಗಳು ತಮ್ಮ ಸಿಬ್ಬಂದಿಗೆ ನಿಯಮಿತವಾಗಿ ಸಂಬಳ ನೀಡಲು ಸಾಧ್ಯವಾಗದ ಕಾರಣ ಆರ್ಥಿಕ ಕುಸಿತವನ್ನು ಎದುರಿಸುತ್ತಿವೆ. ಇದು ಪುರಸಭೆ, ಎಂಜಿನಿಯರ್‌ಗಳು, ವೈದ್ಯರು ಮತ್ತು ಇತರ ಸಿಬ್ಬಂದಿಗಳ ಪ್ರತಿಭಟನೆಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಆಪ್ ಸರ್ಕಾರ ಎಂಸಿಡಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿ, ಧರಣಿ ನಡೆಸಲು ನಿರ್ಧರಿಸಿತ್ತು.


ಇದನ್ನೂ ಓದಿ: ಡಿಸೆಂಬರ್‌ 15 ರಂದು ಮತ್ತೇ ವಿಧಾನ ಪರಿಷತ್‌ ಅಧಿವೇಶನ: ’ಗೋಹತ್ಯೆ’ ಮಸೂದೆ ಅಂಗೀಕಾರಕ್ಕೆ ತಯಾರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...