ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧುರನ್ನು ಬಾಲಿವುಡ್ ನಟಿ ರಾಖಿ ಸಾವಂತ್‌ಗೆ ಹೋಲಿಸಿದ್ದ ಎಎಪಿ ಮುಖಂಡ ರಾಘವ್ ಚಡ್ಡಾ ಅವರನ್ನು ನಟಿಯ ಪತಿ ರಿತೇಶ್ ತರಾಟೆ ತೆಗೆದುಕೊಂಡಿದ್ದಾರೆ. ಇದಕ್ಕೆ ನಟಿ ರಾಖಿ ಸಾವಂತ್ ಪತಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿದ್ದ ಎಎಪಿ ಮುಖಂಡ ರಾಘವ್ ಚಡ್ಡಾ, ನವಜೋತ್ ಸಿಂಗ್ ಸಿಧುರನ್ನು ಟೀಕಿಸುವ ಭರದಲ್ಲಿ ನಟಿ ರಾಖಿ ಸಾವಂತ್ ಅವರಿಗೆ ಹೋಲಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳ್ಲಲಿ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.
ವಿವಾದಿತ ಕೃಷಿ ಕಾನೂನುಗಳ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ದ್ವಿಮುಖ ನಿರ್ಧಾರಗಳನ್ನು ಪ್ರಶ್ನಿಸಿ ವಿಡಿಯೋ ಮಾಡಿದ್ದ ನವಜೋತ್ ಸಿಂಗ್ ಸಿಧುರನ್ನು, ’ಪಂಜಾಬ್ ರಾಜಕಾರಣದ ರಾಖಿ ಸಾವಂತ್ ’ ಎಂದು ರಾಘವ್ ಚಡ್ಡಾ ಕರೆದಿದ್ದರು.
ಇದನ್ನೂ ಓದಿ: ನವಜೋತ್ ಸಿಧುರನ್ನು ’ಪಂಜಾಬ್ ರಾಜಕೀಯದ ರಾಖಿ ಸಾವಂತ್’ ಎಂದ ಆಪ್
View this post on Instagram
ರಾಘವ್ ಚಡ್ಡಾಗೆ ರಿತೇಶ್ ಪ್ರತಿಕ್ರಿಯಿಸಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರಾಖಿ ಸಾವಂತ್, “ನನ್ನ ಪತಿ ರಾಘವ್ ಚಡ್ಡಾಗೆ ಪ್ರತಿಕ್ರಿಯಿಸಿದ್ದಾರೆ. ಇಲ್ಲಿಯವರೆಗೆ ನಾನು ಒಬ್ಬಂಟಿಯಾಗಿದ್ದರಿಂದ ಜನರು ನನ್ನನ್ನು ಹಿಂಸಿಸುತ್ತಿದ್ದರು. ಇಂದು ಇದನ್ನು ಹೇಳುತ್ತಾ ನನ್ನ ಕಣ್ಣಲ್ಲಿ ಕಣ್ಣೀರು ಬರುತ್ತಿದೆ. ನನ್ನ ಜೊತೆಗೆ ಯಾರೋ ಇದ್ದಾರೆ, ನನ್ನ ಘನತೆ, ಗೌರವದ ರಕ್ಷಣೆಗಾಗಿ ಜೊತೆಗೆ ನಿಂತಿದ್ದಾರೆ. ನನ್ನ ಪ್ರೀತಿಯ ಗಂಡನಿಗೆ ಧನ್ಯವಾದಗಳು” ಎಂದು ಪೋಸ್ಟ್ ಮಾಡಿದ್ದಾರೆ.
ದೆಹಲಿ ಶಾಸಕ ರಾಘವ್ ಚಡ್ಡಾ ವಿರುದ್ಧ ನಿಂತ ತಮ್ಮ ಪತಿ ರಿತೇಶ್ ಅವರಿಗೆ ನಟಿ ಧನ್ಯವಾದ ಸಲ್ಲಿಸಿದ್ದಾರೆ.
@raghav_chadha , Mr. Raghav , please treat its warning!! if you again used my wife name in any of your political controversy, you will face legal issue. I will also ensure you will never win again. Because you doesn't deserve that position. You are trying to spoil someone name.
— riteshuk (@riteshuk1) September 17, 2021
ರಾಘವ್ ಚಡ್ಡಾ ವಿರುದ್ಧ@riteshuk1 ಬಳಕೆದಾರರ ಹೆಸರಿನ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಲಾಗಿದೆ. “ರಾಘವ್ ಚಡ್ಡಾ, ದಯವಿಟ್ಟು ಇದನ್ನು ಎಚ್ಚರಿಕೆ ಎಂದು ಪರಿಗಣಿಸಿ !! ನಿಮ್ಮ ರಾಜಕೀಯ ವಿವಾದಗಳಲ್ಲಿ ನೀವು ನನ್ನ ಹೆಂಡತಿಯ ಹೆಸರನ್ನು ಮತ್ತೊಮ್ಮೆ ಬಳಸಿದರೆ, ನೀವು ಕಾನೂನು ಸಮಸ್ಯೆಯನ್ನು ಎದುರಿಸುತ್ತೀರಿ. ನಾನು ಮತ್ತೆ ಹೇಳುತ್ತೇನೆ, ನೀವು ಮತ್ತೆ ಎಂದಿಗೂ ಗೆಲ್ಲುವುದಿಲ್ಲ. ಏಕೆಂದರೆ ನೀವು ಆ ಸ್ಥಾನಕ್ಕೆ ಅರ್ಹರಲ್ಲ. ನೀವು ಇನ್ನೊಬ್ಬರ ಹೆಸರನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದೀರಿ” ಎಂದು ಟ್ವೀಟ್ ಮಾಡಲಾಗಿದೆ.
ಶುಕ್ರವಾರ ಟ್ವೀಟ್ ಮಾಡಿದ್ದ ರಾಘವ್ ಚಡ್ಡಾ, “ಪಂಜಾಬ್ ರಾಜಕೀಯದ ರಾಖಿ ಸಾವಂತ್ ನವಜೋತ್ ಸಿಂಗ್ ಸಿಧು. ಕ್ಯಾಪ್ಟನ್ (ಮುಖ್ಯಮಂತ್ರಿ ಅಮರಿಂದರ್ ಸಿಂಗ್) ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಗದರಿಸಿದ್ದಾರೆ. ಆದ್ದರಿಂದ ಇಂದು ಬದಲಾವಣೆಗಾಗಿ, ಅವರು ಅರವಿಂದ ಕೇಜ್ರಿವಾಲ್ ಹಿಂದೆ ಬಿದ್ದಿದ್ದಾರೆ. ನಾಳೆಯವರೆಗೆ ಕಾಯಿರಿ, ಅವರು ಕ್ಯಾಪ್ಟನ್ ವಿರುದ್ಧ ವೀರಾವೇಶದಿಂದ ಮತ್ತೆ ಹೇಳಿಕೆ ನೀಡುವುದನ್ನು ಪುನರಾರಂಭಿಸುತ್ತಾರೆ” ಎಂದು ಹೇಳಿದ್ದರು.
ಇದನ್ನೂ ಓದಿ: ಕೊರೊನಾ ಕಾಲದ ಆಪದ್ಬಾಂಧವ, ನಟ ಸೋನು ಸೂದ್ ಮೇಲೆ ತೆರಿಗೆ ವಂಚನೆ ಆರೋಪ


