Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆ‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ.

- Advertisement -
- Advertisement -

‘ಜನ್ನತ್ ಮೊಹಲ್ಲಾ’ ಮತ್ತೆ ಮತ್ತೆ ಓದಿಸಿಕೊಳ್ಳುವ ಅಬ್ಬಾಸ್ ಮೇಲಿನಮನಿ ಅವರ ಮೊದಲ ಕಾದಂಬರಿ. ದ್ವೇಷ-ಪ್ರೀತಿ, ಹಿಂಸೆ-ಅಹಿಂಸೆ, ಸಿಟ್ಟು-ತಾಳ್ಮೆ, ನಿರಾಶೆ-ಭರವಸೆ ಇವುಗಳ ಮುಖಾಮುಖಿಯಲ್ಲಿ ಪ್ರೀತಿ ಅರಳಿಸುವ, ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನವಾಗಿ ‘ಜನ್ನತ್ ಮೊಹಲ್ಲಾ’ ಮೂಡಿಬಂದಿದೆ.

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ. ಕನಸುಗಳೆಂದರೆ ಅವಾಸ್ತವಿಕ ಭ್ರಮೆಗಳೂ ಆಗಬಹುದು. ಆದರೆ ಇಲ್ಲಿನ ಕನಸುಗಳಿಗೆ ನೆಲದ ಆಳದೊಳಗೆ ಇಳಿದಿರುವ ಬೇರುಗಳಿವೆ. ನೆಲದ ಮೇಲಣ ಕಡುವಾಸ್ತವಗಳ ದಟ್ಟ ಅರಿವಿದೆ. ಕನಸುಗಳನ್ನು ಛಿದ್ರಗೊಳಿಸುವ ಪ್ರಯತ್ನಗಳ ಎಚ್ಚರಿವಿದೆ. ಕನಸು ಕಾಣುವ ಹಂಬಲಕ್ಕೆ ಇವುಗಳನ್ನು ನಿವಾರಿಸಿಕೊಳ್ಳುವ ಮನುಷ್ಯಪ್ರೀತಿ, ವಿವೇಕ, ಜಾಣ್ಮೆಗಳಿವೆ.

ಕಾದಂಬರಿಯ ಭಾಷೆ ಕಾವ್ಯಾತ್ಮಕವಾದುದು. ಕುತೂಹಲ ಕಾಯ್ದುಕೊಂಡು ಸಾಗುವ ನಿರೂಪಣಾ ಶೈಲಿ ಓದುಗನ ಗಮನವನ್ನು ಅತ್ತಿತ್ತ ವಿಚಲಿಸದಂತೆ ಕೂರಿಸುತ್ತದೆ. ಅಧ್ಯಾಯಗಳ ಶೀರ್ಷಿಕೆಯೇ ಕವಿತೆಯ ಸಾಲುಗಳಂತೆ ಓದುಗನನ್ನು ಸೆಳೆಯುತ್ತವೆ: ‘ಜೀವಪ್ರೀತಿಯ ಗೂಡಿನೊಳಗೆ ಹೊಸ ಸೂರ್ಯನ ಕನಸು’, ನೆಲದಾಳಕ್ಕೆ ಬೇರು ಆಕಾಶಕ್ಕೆ ಗರಿಗಳು’, ‘ಕಾಡು ಬೆಕ್ಕಿನ ಉಪದ್ರವೂ ಪಾರಿವಾಳದ ಪ್ರತಿರೋಧವೂ’, ‘ಮೋಹದ ಮಾಯೆ ಪಾರಿಜಾತ ಪ್ರೀತಿ’, ‘ಜಿನ್ ಮೊರೆತ ಹೊಸಗಾಳಿಯ ತುಡಿತ’, ‘ತಮಂಧದಂತರಾಳದಲ್ಲಿ ಬೆಳಕಿನ ಹಣತೆ’, ‘ಮುಂಗಾರು ಮಳೆಗೆ ಗರಿಗೆದರಿ ಕುಣಿದ ನವಿಲು’, ‘ಚಂದ್ರ ದರ್ಶನಕೆ ಕಪ್ಪು ಮೋಡಗಳ ಆತಂಕ’, ’ಕತ್ತಲು ಗೂಡಿನಿಂದ ಬೆಳಕು ಹುಡುಕುತ್ತ..’ ಹೀಗೆ. ಪ್ರೀತಿ, ಕನಸು, ಅನ್ಯಾಯದ ವಿರುದ್ಧ ಪ್ರತಿಭಟನೆ, ಕತ್ತಲೆಯ ಎದುರು ಬೆಳಕಿನ ಭರವಸೆ ಹೀಗೆ ಈ ಶೀರ್ಷಿಕೆಗಳೇ ಕಾದಂಬರಿಯ ಹಂಬಲವನ್ನು ಮನದಟ್ಟು ಮಾಡುತ್ತವೆ.

ಇಲ್ಲಿಯ ಪಾತ್ರಗಳು ಕಪ್ಪು ಬಿಳುಪಿನದ್ದಲ್ಲ. ಜೀವಪರವಾದ ರೆಹಮಾನ್, ಸೈರಾ, ತಾಹಿರಾ, ಪೇಶ್ ಇಮಾಮರು, ಶಬ್ಬೀರ, ತಸ್ಸೀಮಾ, ರಫೀಕ್, ನೌಷಾದ್, ಮೋಹನ್, ಬಸವಗಂಗ ಸ್ವಾಮಿಗಳಂತೆ ಜೀವವಿರೋಧಿಯಾದ ಮೋದಿನ, ದೌಲಾ, ಲಾಲ್ಯಾ, ಮಸ್ತಾನ, ಸಾಧಿಕನಂತಹವು. ಹೀಗೆ ಎರಡೂ ಮನಸ್ಥಿತಿಯ ಪಾತ್ರಗಳೂ ಇಲ್ಲಿವೆ. ಈ ತದ್ವಿರುದ್ಧ ವ್ಯಕ್ತಿತ್ವಗಳಲ್ಲಿ ಕೆಲವು ಶಾಶ್ವತವಾಗಿಯೇ ಈ ಗುಣಗಳನ್ನು ಹೊಂದಿರುವವು. ಆದರೂ ವಿರಳ ಸಂದರ್ಭಗಳಲ್ಲಿ ಅದರಾಚೆಗೆ ಹೊರಳುವವು. ಬದುಕಿನ ಕಟುವಾದ ಏರಿಳಿತಗಳಲ್ಲಿ ಮನುಷ್ಯರು ಖಳರಾಗುವ ಹೆಜ್ಜೆ ಗುರುತುಗಳನ್ನು ಕಾದಂಬರಿ ಮನೋಜ್ಞವಾಗಿ ಚಿತ್ರಿಸುತ್ತದೆ. ಖಳನೆನಿಸುವ ಜಿಲಾನಿ, ಇಮಾಮರಂತಹ ಪಾತ್ರಗಳು ಆದ್ರ್ರವಾಗಿ ಮಿಡಿಯುವ ಬದುಕಿನ ವಿಸ್ಮಯಗಳನ್ನು ಅಚ್ಚರಿಯಿಂದ ದಾಖಲಿಸುತ್ತದೆ. ಜಮಾಲನಂತಹ ಕೆಲವು ಪಾತ್ರಗಳು ಕ್ರೂರಿಯಾಗಿ ಕಂಡರೂ ಅವರು ಹಾಗಾಗುವಲ್ಲಿ ಅವರ ಬದುಕಿನ ದುರಂತವಿರುವುದನ್ನು ಕಾಣಿಸುತ್ತದೆ.

ಅಧಿಕಾರ, ಹಣದ ದುರಾಶೆಗಳು ಒಟ್ಟಾಗಿ ಬದುಕುವ ಸಮುದಾಯಗಳ ಜನರ ನಡುವೆ ಧರ್ಮ, ಜಾತಿಗಳ ನೆಲೆಯಲ್ಲಿ ಮನಸ್ಸುಗಳನ್ನು ಒಡೆದು ಹಿಂಸಾಚಾರಕ್ಕೆ ಕಾರಣವಾಗುವುದನ್ನು ನೈಜವೆನಿಸುವ ಘಟನಾವಳಿಗಳ ಮೂಲಕ ಕಾದಂಬರಿ ಕಟ್ಟಿಕೊಡುತ್ತವೆ. ಒಂದು ಕಡೆ ಮೋದಿನ ಇದ್ದರೆ ಇನ್ನೊಂದು ಕಡೆ ಕಲ್ಯಾಣಪ್ಪ ಇದ್ದಾನೆ. ಈ ಅಧಿಕಾರದಾಹಿಗಳು, ದುರಾಶೆಯ ಜನರು ಎಲ್ಲ ಸಮುದಾಯಗಳಲ್ಲಿ ಇರುವವರು. ಅವರಿಗೆ ಹಿಂದೂ, ಮುಸ್ಲಿಂ ಎನ್ನುವ ಗುರುತುಗಳಿವೆ. ಈ ಗುರುತುಗಳನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿ ಸಮುದಾಯದ ಜನರನ್ನು ಬಲಿಕೊಡುತ್ತಾರೆ. ಇದಕ್ಕೆ ಪ್ರತಿಯಾಗಿ ರೆಹಮಾನ್ ಮತ್ತು ಸಂಗನ ಬಸವಸ್ವಾಮಿಗಳಂತಹ ಜಾತಿ-ಧರ್ಮಗಳಾಚೆ ಜನರ ಏಳಿಗೆ ಮತ್ತು ನೆಮ್ಮದಿ ಬಯಸುವ ಮುಂದಾಳುಗಳು ಭರವಸೆಯಾಗುತ್ತಾರೆ. ಆದರೆ ಮೋದಿನ, ಕಲ್ಯಾಣಪ್ಪನಂತವರ ಅರ್ಭಟಗಳೇ ರಾಜಕೀಯ ಶಕ್ತಿಯನ್ನು ಪಡೆಯುತ್ತ ನಾಡನ್ನು ದುರಂತದತ್ತ ತಳ್ಳುತ್ತಿರುವುದು ಲೇಖಕನನ್ನು ದಿಗ್ಭ್ರಮೆಗೊಳಿಸುವ ಸೂಚನೆಗಳು ಕಾದಂಬರಿಯಲ್ಲಿ ಸಿಗುತ್ತವೆ.

ಎಲ್ಲಾ ಜಾತಿ ಧರ್ಮಗಳಲ್ಲಿಯೂ ಮಹಿಳೆ ಶೋಷಿತಳು. ಮುಸ್ಲಿಂ ಧರ್ಮದಲ್ಲಿಯೂ ಇದು ಎದ್ದು ಕಾಣುತ್ತದೆ. ಈ ಬಗ್ಗೆ ಕಾದಂಬರಿ ಮಹಿಳೆಯರನ್ನು ಘನತೆಯಿಂದ ಕಾಣುತ್ತದೆ. ಖತೀಜಾಬೀಬಿ, ತಾಹಿರಾ, ಸೈರಾರಂಥ ಮಹಿಳೆಯರನ್ನು ಕಾದಂಬರಿ ಉತ್ಸಾಹದಲ್ಲಿ ಚಿತ್ರಿಸುತ್ತದೆ. ಸಾಂಪ್ರದಾಯಿಕ ಬದುಕಿನೊಳಗಿನಿಂದಲೇ ವ್ಯಕ್ತವಾಗುವ ಈ ಮಹಿಳೆಯರ ದಿಟ್ಟತನಗಳನ್ನು ಅವರ ಬದುಕಿನ ಕಥನಗಳ ಮೂಲಕವೇ ಓದುಗನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸುತ್ತದೆ.

ಇದನ್ನು ಓದುವ ಈಗಿನ ತಲೆಮಾರು ಇದನ್ನೊಂದು ಮುಸ್ಲಿಂ ಬದುಕನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಕಾದಂಬರಿ ಎಂಬ ತೀರ್ಮಾನಕ್ಕೆ ಬರಬಹುದಾದ ಅಪಾಯವಿದೆ. ಯಾಕೆಂದರೆ ಮೋಹನ, ಸಂಗನಬಸವನ ಸ್ವಾಮಿಗಳು, ಕಲ್ಯಾಣಪ್ಪನಂತಹ ನಾಲ್ಕೈದು ಪಾತ್ರಗಳು ಮಾತ್ರ ಮುಸ್ಲೀಮೇತರರದ್ದಾಗಿವೆ. ಆದರೆ ಇದು ಮುಸ್ಲಿಂ ಬದುಕಿನ ಕಷ್ಟ ಸುಖಗಳನ್ನು ಚಿತ್ರಿಸುವ ಕಾದಂಬರಿಯಲ್ಲ. ಇಲ್ಲಿನ ಪಾತ್ರಗಳ ಹೆಸರು ಬದಲಿಸಿದರೆ ಅದು ಹಿಂದೂ, ಕ್ರಿಶ್ಚಿಯನ್ ಅಥವಾ ಜಗತ್ತಿನ ಯಾವುದೇ ಸಮಾಜದ ಬದುಕೇ ಆಗಿರುತ್ತವೆ.

ಜನ್ನತ್ ಮೊಹಲ್ಲಾವನ್ನು ನಮ್ಮೆದುರಿಟ್ಟು ದಿಢೀರನೇ ಕಣ್ಮರೆಯಾದ ಅಬ್ಬಾಸ್ ಮೇಲಿನಮನಿಯವರು ರಹಮಾನನ ಸಮುದಾಯಪ್ರಜ್ಞೆ, ಇಮಾಮರ ಸ್ವಚ್ಚ ಧಾರ್ಮಿಕಮನಸ್ಸು, ಶಬ್ಬೀರನ ಜೀವನೋತ್ಸಾಹ, ಜಿಲಾನಿಯು ತನ್ನನ್ನು ಮೀರಿ ಕಾಣುವ ದಾರ್ಶನಿಕ ರೂಪದಲ್ಲಿ ನಮ್ಮೊಳಗೆ ಸದಾ ಜೀವಂತವಾಗಿರುತ್ತಾರೆ.

  • ಡಾ.ಸರ್ಜಾಶಂಕರ್ ಹರಳಿಮಠ

ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...