Homeಕರ್ನಾಟಕಬಯಲಲ್ಲಿ ಬಯಲಾದ ಬಯಲ ಜೀವ ಕಾರ್ನಾಡ್

ಬಯಲಲ್ಲಿ ಬಯಲಾದ ಬಯಲ ಜೀವ ಕಾರ್ನಾಡ್

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎಂಬುದು ಅವರ ಮಾರ್ಗವಾಗಿತ್ತು. ಹೀಗಾಗಿ ಅವರು ಬೆಳಕಿಲ್ಲದ ದಾರಿಯಲ್ಲಿ ನಡೆದು ಬೆಳಕು ಹೊತ್ತಿಸಿದರು.

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮೆಲ್ಲರ ಸಾಕ್ಷಿ ಪ್ರಜ್ಞೆಯಾದ ಗಿರೀಶ್ ಕಾರ್ನಾಡರು ನಮ್ಮಿಂದ ಇಂದು ಅಗಲಿ ಹೋಗಿದ್ದಾರೆ. ಆದರೆ ಅವರು ಕಟ್ಟಿಕೊಟ್ಟ, ಬಿತ್ತಿ ಹೋದ ಬೀಜಗಳು ನಮ್ಮೆಲ್ಲರ ಅಂತರಂಗದಲ್ಲಿ ಮೊಳಕೆ ಒಡೆದಿವೆ. ಅವರ ವಿಚಾರಧಾರೆಯ ಎಳೆ ಹಿಡಿದು ಹೊರಟ ಎಷ್ಟೋ ಕನಸಿನ ಹೂಗಳು ಈಗಾಗಲೆ ಮಿಡಿಯಾಗಿ, ಕಾಯಾಗಿ , ಹಣ್ಣಾಗಿ ನಮ್ಮ ಕಣ್ಣ ಮುಂದೆಯೆ ನಳನಳಿಸುತ್ತಿವೆ. ಗಿರೀಶ್ ಕರ್ನಾಡರು ತಲೆದಂಡ ಬರೆದಾಗ ಅವರ ಬಗೆಗೆ ಕೆಲವು ಆಕ್ಷೇಪಗಳು ಇದ್ದವು. ಅವನ್ನು ಹೊರತು ಪಡಿಸಿ ಅವರೊಬ್ಬ ಗಟ್ಟಿಯಾದ ನಿಲುವುಗಳು ಹೊಂದಿದ ಬರಹಗಾರರಾಗಿದ್ದರು. ನಿರ್ದೇಶಕರಾಗಿದ್ದರು. ಅತ್ಯುತ್ತಮ ನಟರೂ ಆಗಿದ್ದರು.

ಇದಷ್ಟೇ ಅಲ್ಲದೆ ಕಲಾವಿದ, ಬರಹಗಾರ, ನಾಟಕಕಾರ ಕೇವಲ ತನ್ನ ಲೋಕದಲ್ಲಿ ಮುಳುಗಿ ಹೋಗದೆ ವಾಸ್ತವಿಕ ಜಗತ್ತಿನಲ್ಲೂ ತನ್ನ ಪಾತ್ರವನ್ನು ಅವಕಾಶ ಸಿಕ್ಕಾಗಲೆಲ್ಲ ತೋರ್ಪಡಿಸುತ್ತಿದ್ದರು. ಪಿ.ಲಂಕೇಶ್ ಅವರೊಂದಿಗೆ ಬೆಳೆದ ಸಖ್ಯ, ಗೌರಿ ಲಂಕೇಶ್ ವರೆಗೂ ಹಾಗೆ ಮುಂದುವರೆಯಿತು. ರಾಷ್ಟ್ರದಲ್ಲಿ ಹಿಂದೂ ಭಕ್ತಿಯ ಹೆಸರಿನ ಮೇಲೆ ನಡೆದ ನಂಗಾನಾಚ ವಿರುದ್ಧ ಧ್ವನಿ ಎತ್ತಿದವರಲ್ಲಿ ಕಾರ್ನಾಡರೂ ಒಬ್ಬರಾಗಿದ್ದರು. ದನದ ಸೆಗಣಿ, ಗಂಜಳಕ್ಕಿಂತಲೂ ಮನುಷ್ಯತ್ವ ಶ್ರೇಷ್ಠ ಎಂಬುದು ಅವರ ಚಿಂತನೆಯ ಒಟ್ಟು ಧ್ವನಿಯಾಗಿತ್ತು.

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎಂಬುದು ಅವರ ಮಾರ್ಗವಾಗಿತ್ತು. ಹೀಗಾಗಿ ಅವರು ಬೆಳಕಿಲ್ಲದ ದಾರಿಯಲ್ಲಿ ನಡೆದು ಬೆಳಕು ಹೊತ್ತಿಸಿದರು. ತಮ್ಮ ಗಟ್ಟಿಯಾದ ಅಷ್ಟೇ ದಿಟ್ಟವಾದ ಹೆಜ್ಜೆಗಳನ್ನು ಇಡುವ ಮೂಲಕ ಕನಸುಗಳನ್ನೂ ಕಟ್ಟಿಕೊಟ್ಟರು. ಇಡೀ ನಾಡಿನ ತುಂಬ ತಮ್ಮ ಚಟುವಟಿಕೆಗಳ ಮೂಲಕ ಎಲ್ಲರ ಹೆಗ್ಗಳಿಕೆ ಪಾತ್ರರಾದರು. ಜ್ಞಾನಪೀಠ ಪ್ರಶಸ್ತಿಯ ಪುರಸ್ಕಾರವೂ ಅವರ ಮಡಿಲಿಗೆ ಏರಿತು.

ಆದರೆ ಬಹಳಷ್ಟು ಜನ ಸಾಹಿತಿಗಳು ಕಲಾವಿದರು ಪ್ರಶಸ್ತಿ ಫಲಗಳು, ಸ್ಥಾನ ಮಾನಗಳು ದೊರೆತಾದ ಮೇಲೆ ಎಲ್ಲರ ಜೊತೆ ಅಂದರೆ ಸಾಮಾನ್ಯರ ಜೊತೆ ಸಾಮಾನ್ಯರಾಗಿ ಬೆರೆಯುವುದು ಕಮ್ಮಿ. ತಮ್ಮ ಎಂದಿನ ಪ್ರಶಸ್ತಿಯ ಗುಂಗಿನಿಂದ ಹೊರಗಡೆ ಬಂದಿರುವುದಿಲ್ಲ. ಆ ಪ್ರಶಸ್ತಿ ಹಾರ ತುರಾಯಿಗಳಲ್ಲಿಯೇ ಕೊಳೆತು ಹೋಗಿರುತ್ತಾರೆ. ಈ ಮಾತಿಗೆ ಕಾರ್ನಾಡರು ಅಪವಾದವಾಗಿದ್ದರು. ತಾವು ನಂಬಿದ ತತ್ವ ಸಿದ್ಧಾಂತಗಳು ತಮ್ಮ ಕಣ್ಣ ಮುಂದೆಯೆ ನಗೆಪಾಟಲಿಗೆ ಈಡಾಗುತ್ತಿದ್ದರೆ ತಕ್ಷಣವೆ ಅದಕ್ಕೆ ಸ್ಪಂದಿಸುತ್ತಿದ್ದರು. ಬೆಂಗಳೂರಿನ ಟೌನ ಹಾಲ್ ಮುಂದೆ ನಡೆಯುವ ಏನೆಲ್ಲ ಪ್ರತಿಭಟನೆಯಲ್ಲಿಯೂ ಅವರ ಹಾಜರಿ ಇರುತ್ತಿತ್ತು.

ಪ್ರಜ್ಞಾವಂತ ನಡಾವಳಿಯ ಬರಹಗಾರರನ್ನು ಕಂಡರೆ ಗುಲಾಮರಿಗೆ ಉರಿ ಉರಿ. ಕಾರ್ನಾಡರ ಬಗೆಗೂ ಸಂಘಿಗಳು ಕಿಡಿಕಾರಿದವು. ನಾನೂ ನಗರ ನಕ್ಸಲ್ ವಾದಿ ಎಂದು ಬರಹವೊಂದನ್ನು ಕೊರಳಲ್ಲಿ ಹಾಕಿಕೊಂಡು ಪ್ರತಿಭಟನೆಗೆ ಇಳಿದಾಗ ಬಹಳಷ್ಟು ಜನ ಕುಹಕದ ಮಾತನಾಡಿದರು. ಆಗಲೂ ಅವರ ಮಾತನ್ನು ಕಾರ್ನಾಡ ನಗು ನಗುತ್ತಾ ಸ್ವೀಕರಿಸಿದರು. ಏಕೆಂದರೆ ಅವರಿಗೆ ಸತ್ಯ ಗೊತ್ತಿತ್ತು. ಸನಾತನವಾದಿಗಳು ವಿಚಾರವಾದವನ್ನು ಒಪ್ಪಲಾರರು. ಧರ್ಮವನ್ನು ಅಫೀಮನ್ನಾಗಿ ಜನಗಳಿಗೆ ನೀಡುವವರು ಧರ್ಮವೊಂದು ದಯಯ ತಳಹದಿ ಎಂದು ಅರಿಯಲಾರರು ಎಂದು.

‘ನನ್ನ ರಾಜ್ಯದಲ್ಲಿ ಪ್ರತಿಯೊಂದು ಕಾರ್ಯವೂ ಪ್ರಾರ್ಥನೆಯಾಗಬೇಕು. ಪ್ರತಿಯೊಂದು ಪ್ರಾರ್ಥನೆಯೂ ನಮ್ಮನ್ನು ದೇವರೆಡೆಗೆ ಒಯ್ಯುವ ಮೆಟ್ಟಿಲಾಗಬೇಕು. ಆದರೆ ಇಲ್ಲಿ ಪ್ರಾರ್ಥನೆಗೂ ರಾಜಕಾರಣದ ಸೋಂಕು ಬಡಿದಿದೆ’ ಎಂದು ತುಘಲಕ್ ನಾಟಕದಲ್ಲಿ ಬರೆಯುವ ಮೂಲಕ ನಮ್ಮ ಇಂದಿನ ರಾಜಕೀಯ ವಸ್ತು ಸ್ಥಿತಿಯನ್ನು ಬಿಚ್ಚಿಟ್ಟರು.

ಒಬ್ಬ ಅಗಸ ತೊಳೆದಷ್ಟು ಕೊಳೆಯನ್ನು ಜಗತ್ತಿನ ಯಾವ ಧರ್ಮ ಗುರುವು ತೊಳೆದಿಲ್ಲ! ಎಂಬುದು ಅವರಿಗೆ ಖಚಿತವಾಗಿತ್ತು. ಆದರೂ ಅವರು ತಮ್ಮ ಮಾನವೀಯ ನಡಾವಳಿಕೆಗಳ ಮೂಲಕ ಸಮಾಜಕ್ಕೆ ಅಂಟಿದ ಕೊಳೆಯನ್ನು ತೊಳೆಯಲು ಮುಂದಾಗುತ್ತಿದ್ದರು. ಆಗ ರಾಕ್ಷಸಿ ಪ್ರವೃತಿಯನ್ನು ರೂಢಿಸಿಕೊಂಡ ಕೆಲವು ಮನಸ್ಸುಗಳು ಈಗ ಸಂತೋಷ ವ್ಯಕ್ತ ಪಡಿಸುತ್ತಿವೆ. ಸಾವನ್ನು ಮರಣವೇ ಮಹನವಮಿ ಎಂದು ಸ್ವೀಕರಿಸುವ ಛಲ ಕಾರ್ನಾಡರಿಗೆ ಇತ್ತು. ಆದ್ದರಿಂದಲೆ ತಮ್ಮ ಜೀವವಿಲ್ಲದ ದೇಹಕ್ಕೆ ಸರಕಾರಿ ಸಕಲ ಗೌರವ ಎಂಬ ನಾಟಕ ಗೀಟಕ ಬೇಡ ಎಂದು ತಮ್ಮ ಕುಟುಂಬದ ಸದಸ್ಯರಲ್ಲಿ ಹೇಳಿಕೊಂಡಿದ್ದಾರೆ. ಅವರ ಶರೀರವೂ ಸಹ ಯಾವುದೆ ಧಾರ್ಮಿಕ ವಿಧಿ ವಿಧಾನ ಇಲ್ಲದೆ ನೆರವೇರಿಸಬೇಕೆಂದೂ ತಿಳಿಸಿದ್ದಾರೆ. ಈ ಮೂಲಕ ಅವರು ಅನಂತದೆಡೆಗೆ ಪಯಣಿಸಿದ್ದಾರೆ.

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಯಿತ್ತಯ್ಯಾ
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಎಂಬ ಅಲ್ಲಮಪ್ರಭುವಿನ ವಚನದಂತೆ ಬಯಲು ಬಯಲನ್ನು ಬಿತ್ತಿ ಬಯಲು ಬಯಲನ್ನೆ ಬೆಳೆದು ಬಯಲು ಬಯಲಾದರು ಕರ್ನಾಡರು. ಅವರ ಬಯಲ ಜೀವನ ಬಯಲ ಭಾವನೆ ನಮ್ಮೆಲ್ಲರೊಳಗೆ ಬಯಲು ಬಯಲಾಯಿತ್ತು. ಸಮಾಜವನ್ನು ಪ್ರೀತಿಸಿದ ಗೌರವಿಸಿದ ಸಮಾಜದೊಂದಿಗೆ ಜೀವಂತವಾಗಿ ಸ್ಪಂದಿಸಿ ಜೀವಂತ ಬದುಕಿದ ಕಾರ್ನಾಡ ಸತ್ಯವನ್ನು ನಂಬಿ ಬಯಲಾಗಿದ್ದಾರೆ. ಅಂದರೆ ನಮ್ಮೆಲ್ಲರೊಳಗೆ ಬೆರೆತು ಹೋಗಿದ್ದಾರೆ. ಕಾರ್ನಾಡರಿಗೆ ಸಾವು ಇಲ್ಲ. ಅರಿತವರು ಸಾಯುವುದೂ ಇಲ್ಲ. ಅರಿತುಕೊಂಡಿದ್ದ ಕಾರ್ನಾಡರು ನಮ್ಮೆಲ್ಲರೊಳಗೆ ಪ್ರಜ್ಞೆಯಾಗಿ ಜೀವಂತವಾಗಿರುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...