HomeಮುಖಪುಟABVP ದೂರು ಹಿನ್ನಲೆ: ಅರುಂಧತಿ ರಾಯ್ ಪುಸ್ತಕ ಹಿಂಪಡೆದ ತಮಿಳುನಾಡು ವಿವಿ!

ABVP ದೂರು ಹಿನ್ನಲೆ: ಅರುಂಧತಿ ರಾಯ್ ಪುಸ್ತಕ ಹಿಂಪಡೆದ ತಮಿಳುನಾಡು ವಿವಿ!

2017 ರಿಂದ ತಮ್ಮ ಪಠ್ಯಕ್ರಮದ ಭಾಗವಾಗಿರುವ ’ವಾಕಿಂಗ್ ವಿಥ್ ದಿ ಕಾಮ್ರೇಡ್ಸ್’ ಪುಸ್ತಕವನ್ನು ಮನೋನ್ಮನಿಯಮ್ ಸುಂದರನಾರ್ ವಿಶ್ವವಿದ್ಯಾಲಯ ಹಿಂಪಡೆದಿದೆ.

- Advertisement -
- Advertisement -

ಎಬಿವಿಪಿ ದೂರಿನ ಹಿನ್ನೆಲೆಯಲ್ಲಿ ಅರುಂಧತಿ ರಾಯ್ ಬರೆದಿರುವ ಪುಸ್ತಕವನ್ನು ತನ್ನ ಪಠ್ಯಕ್ರಮದಿಂದ ಹಿಂತೆಗೆದುಕೊಳ್ಳಲು ತಮಿಳುನಾಡಿನ ತಿರುನೆಲ್ವೇಲಿ ನಗರದ ಮನೋನ್ಮನಿಯಮ್ ಸುಂದರನಾರ್ ವಿಶ್ವವಿದ್ಯಾಲಯ ನಿರ್ಧರಿಸಿದೆ ಎಂದು ವರದಿಯಾಗಿದೆ. ಅರುಂಧತಿ ರಾಯ್ ಅವರ, “ವಾಕಿಂಗ್ ವಿಥ್ ದಿ ಕಾಮ್ರೇಡ್ಸ್” ಎಂಬ ಮಾವೋವಾದಿ ಶಿಬಿರಗಳಿಗೆ ಅವರು ನೀಡಿದ್ದ ಭೇಟಿಯನ್ನು ಆಧರಿಸಿದ ಪುಸ್ತಕವು 2017 ರಿಂದ ವಿಶ್ವವಿದ್ಯಾಲಯದ ಪಠ್ಯಕ್ರಮದ ಭಾಗವಾಗಿತ್ತು.

“ಡೀನ್‌ಗಳು ಮತ್ತು ಶೈಕ್ಷಣಿಕ ಅಧ್ಯಯನ ಮಂಡಳಿಯ ಸದಸ್ಯರನ್ನು ಒಳಗೊಂಡ ಸಮಿತಿಯು ದೂರನ್ನು ಪರಿಗಣಿಸಿ ವಿದ್ಯಾರ್ಥಿಗಳಿಗೆ ವಿವಾದಾತ್ಮಕ ಪುಸ್ತಕವನ್ನು ಕಲಿಸುವುದು ಸೂಕ್ತವಲ್ಲದ ಕಾರಣ ಪುಸ್ತಕವನ್ನು ಹಿಂಪಡೆಯಲು ನಿರ್ಧರಿಸಿದೆ. ಅದರ ಬದಲಿಗೆ ಎಂ ಕೃಷ್ಣನ್ ಅವರ ’ಮೈ ನೇಟಿವ್ ಲ್ಯಾಂಡ್: ಎಸ್ಸೇಸ್ ಆನ್ ನೇಚರ್’ ಎಂಬ ಪುಸ್ತಕವನ್ನು ಸೇರಿಸುತ್ತೇವೆ” ಎಂದು ವಿವಿಯ ಉಪಕುಲಪತಿ ಕೆ ಪಿಚುಮಣಿ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿ ವರದಿ ಮಾಡಿದೆ.ಇದನ್ನೂ ಓದಿ: ಈ ಸಾಂಕ್ರಾಮಿಕ ಹೊಸ ವ್ಯವಸ್ಥೆಗೆ ದಾರಿದೀಪವಾಗಬಲ್ಲದೆ? – ಅರುಂಧತಿ ರಾಯ್ಎಬಿವಿಪಿ ದಕ್ಷಿಣ ತಮಿಳುನಾಡಿನ ಜಂಟಿ ಕಾರ್ಯದರ್ಶಿ ಸಿ ವಿಘ್ನೇಶ್ ಎಂಬವರು, ರಾಷ್ಟ್ರ ವಿರೋಧಿ ಮಾವೋವಾದಿಗಳ ಹತ್ಯೆ ಮತ್ತು ಗಲಭೆಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ದೂರು ನೀಡಿದ್ದರು ಎಂದು ದಿ ಹಿಂದೂ ವರದಿ ಮಾಡಿದೆ. ನಿರ್ಧಾರದಲ್ಲಿ ವಿಳಂಬವಾದರೆ ಪ್ರತಿಭಟನೆಗಳನ್ನು ಪ್ರಾರಂಭಿಸುವುದಾಗಿ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಅವರು ಎಚ್ಚರಿಕೆ ನೀಡಿದ್ದರು.

ಈ ಪುಸ್ತಕವು ಕಳೆದ ಮೂರು ವರ್ಷಗಳಿಂದ ಪಠ್ಯಕ್ರಮದಲ್ಲಿರುವುದು ಅತ್ಯಂತ ವಿಷಾದನೀಯ ಎಂದು ದೂರಿನಲ್ಲಿ ತಿಳಿಸಿರುವ ಎಬಿವಿಪಿ, “ಈ ಎಲ್ಲಾ ವರ್ಷಗಳಲ್ಲಿ ಮಾವೋವಾದಿಗಳ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ಯುವ ವಿದ್ಯಾರ್ಥಿಗಳಿಗೆ ಕಲಿಸಲಾಗಿದೆ” ಎಂದು ಆರೋಪಿಸಿತ್ತು.

ವಿವಿಯು ಪುಸ್ತಕವನ್ನು ವಾಪಾಸು ಪಡೆದಿರುವು ಎಬಿವಿಪಿಯ ಹೋರಾಟಕ್ಕೆ ದಕ್ಕಿದ ಗೆಲುವು ಎಂದು ತಮಿಳುನಾಡಿನ ಬಿಜೆಪಿ ವಕ್ತಾರ ಎಸ್‌‌.ಜಿ. ಸೂರ್ಯ ಹೇಳಿದ್ದಾರೆ.ಇದನ್ನೂ ಓದಿ:  ಜೈಲಿನ ಬಾಗಿಲು ತೆರೆಯುತ್ತದೆ, ನೀವು ನಮ್ಮ ಬಳಿಗೆ ಹಿಂತಿರುಗುತ್ತೀರಿ: ಜೈಲಲ್ಲಿರುವ ಸ್ನೇಹಿತ ಸಾಯಿಬಾಬಾಗೆ ಅರುಂಧತಿ ರಾಯ್ ಬರೆದ ಭಾವನಾತ್ಮಕ ಪತ್ರಆದರೆ ವಿವಿಯ ನಡೆಯನ್ನು ದ್ರಾವಿಡ ಮುನ್ನೇಟ್ರಾ ಕಳಗಮ್ ಸಂಸದೆ ಕನಿಮೋಳಿ ಟೀಕಿಸಿದ್ದು, “ಆಡಳಿತ ಮತ್ತು ರಾಜಕೀಯವು, ಯಾವ ಕಲೆ ಮತ್ತು ಯಾವ ಸಾಹಿತ್ಯವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕೆಂಬುವುದನ್ನು ನಿರ್ಧರಿಸುವುದು ಸಮಾಜದ ವೈವಿಧ್ಯತೆಯನ್ನು ನಾಶಪಡಿಸುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ’ಈ ಬಾರಿ ನೀವು ನಮ್ಮನ್ನು ತಡೆಯಲಾಗುವುದಿಲ್ಲ’: ಪ್ರತಿಭಟನೆಯಲ್ಲಿ ಅರುಂಧತಿ ರಾಯ್ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...