Homeಚಳವಳಿಸಕ್ರಿಯ ಸ್ತ್ರೀವಾದಿ ಪ್ರಜ್ಞೆ : ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಬದಲಾವಣೆಗೆ ಪಣ- ಸಿ.ಜಿ ಮಂಜುಳಾ

ಸಕ್ರಿಯ ಸ್ತ್ರೀವಾದಿ ಪ್ರಜ್ಞೆ : ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಬದಲಾವಣೆಗೆ ಪಣ- ಸಿ.ಜಿ ಮಂಜುಳಾ

’ವ್ಯಭಿಚಾರವು ಅಪರಾಧವಲ್ಲ ಎಂದು ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್‌ಅನ್ನು ರದ್ದುಮಾಡಿದ ಸುಪ್ರೀಂ ಕೋರ್ಟ್ ತೀರ್ಪು, ಮಹಿಳಾ ಸಮಾನತೆ, ಘನತೆ, ಸ್ವಾಯತ್ತೆಯನ್ನು ಎತ್ತಿ ಹಿಡಿದಿತ್ತು.

- Advertisement -
- Advertisement -

ಕೋವಿಡ್ -19ರ ಸಂಕಷ್ಟದ ಈ ದಿನಗಳು ಜನಜೀವನವನ್ನು ಪಲ್ಲಟಗೊಳಿಸಿದೆ. ಅದರಲ್ಲೂ ಮಹಿಳೆ ಈಗಾಗಲೇ ಅನುಭವಿಸುತ್ತಿದ್ದ ಸಮಸ್ಯೆಗಳು ಮತ್ತಷ್ಟು ತೀವ್ರವಾಗಿವೆ ಎಂಬುದನ್ನು ವರದಿಗಳು ತಿಳಿಸುತ್ತಿವೆ. ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣಗಳ ಹೆಚ್ಚಳದ ಜೊತೆಗೆ ಕೋವಿಡ್ -19ರ ನಿರ್ವಹಣೆಯಲ್ಲಿ ಲಿಂಗತ್ವ ಸಂವೇದನಾಶೀಲತೆ ಇಲ್ಲದ ಆಡಳಿತ ನೀತಿಗಳು, ಮಹಿಳೆ ಹೇಗೆ ಇನ್ನೂ ಈ ಸಮಾಜದಲ್ಲಿ ಎರಡನೇ ದರ್ಜೆ ಪ್ರಜೆ ಎಂಬುದನ್ನು ನೆನಪಿಸುತ್ತಿವೆ. ಉದ್ಯೋಗ ನಷ್ಟದ ಪೆಟ್ಟು ಪುರುಷರನ್ನಷ್ಟೇ ಅಲ್ಲ ಮಹಿಳೆಯರನ್ನೂ ಹೆಚ್ಚಿನ ಮಟ್ಟದಲ್ಲಿ ಕಾಡುತ್ತಿದೆ. ಭಾರತದಲ್ಲಿ ಈಗಾಗಲೇ ಔದ್ಯೋಗಿಕ ರಂಗದಲ್ಲಿ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕೋವಿಡ್ 19ರ ಸಂಕಷ್ಟ ಈ ಸಮಸ್ಯೆಯನ್ನು ಮತ್ತಷ್ಟು ತೀವ್ರವಾಗಿಸಲಿರುವುದು ಆತಂಕಕಾರಿ. ಈ ಬೆಳವಣಿಗೆಗಳನ್ನು ಸೂಕ್ತವಾಗಿ ನಿರ್ವಹಿಸಲು ಸರ್ಕಾರದ ನೀತಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸಂವೇದನಾಶೀಲತೆ ಅಗತ್ಯ.

ಮುಖ್ಯವಾಹಿನಿ ರಾಜಕಾರಣದ ಆವುಟಗಳಲ್ಲಿ ಗಮನವನ್ನೇ ಸೆಳೆದುಕೊಳ್ಳದ ಮಹಿಳಾ ವಿಚಾರಗಳನ್ನು ಪ್ರಭುತ್ವದ ಗಮನಕ್ಕೆ ತರುವಲ್ಲಿ ಭಾರತದ ಮಹಿಳಾ ಚಳವಳಿ ಈ ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಈಗಲೂ ಈ ಸಂಕಷ್ಟ ಕಾಲದಲ್ಲಿ ಮಹಿಳೆ ಅಗತ್ಯಗಳ ಕುರಿತಾದ ಕೆಲವು ವಿಚಾರಗಳಾದರೂ ಚರ್ಚೆಗೆ ಬರುವಲ್ಲಿ ಮಹಿಳಾ ಚಳವಳಿಯ ಕೊಡುಗೆ ಇದೆ.

ವಸಾಹತುಶಾಹಿ ವಿರುದ್ಧದ ಸ್ವಾತಂತ್ರ್ಯ ಹೋರಾಟದಿಂದ ವರ್ತಮಾನದ ಸಾಮ್ರಾಜ್ಯಶಾಹಿ ಜಾಗತೀಕರಣದ ವಿರುದ್ಧದ ಹೋರಾಟದವರೆಗೆ ಸ್ತ್ರೀವಾದದ ಪ್ರಜ್ಞೆ ಸಾರ್ವಜನಿಕ ಆಂದೋಲನಗಳಲ್ಲಿ ಸಕ್ರಿಯವಾಗಿದೆ. ಸ್ತ್ರೀವಾದದ ಹಲವು ಛಾಯೆಗಳು, ಹಲವು ಸಿದ್ಧಾಂತಗಳಲ್ಲಿ ಇದು ವ್ಯಕ್ತ. ಜಾತಿ, ಧರ್ಮ, ವರ್ಗ, ಲಿಂಗತ್ವ ನೆಲೆಗಳಲ್ಲಿ ಮಹಿಳಾ ಶೋಷಣೆಗೆ ಹಲವು ಆಯಾಮಗಳಿದ್ದು ವಿವಿಧ ಮಹಿಳಾ ಗುಂಪುಗಳು ಸಕ್ರಿಯವಾಗಿ ಚಳವಳಿಯ ಚೈತನ್ಯವನ್ನು ಮುಂದಕ್ಕೊಯ್ಯುತ್ತಿವೆ.

ಈ ದಶಕದ ಆರಂಭದಲ್ಲೇ 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿನಿ ನಿರ್ಭಯಾ ಮೇಲೆ ನಡೆದ ಪೈಶಾಚಿಕ ಸಾಮೂಹಿಕ ಅತ್ಯಾಚಾರ ಹಾಗೂ ನಂತರ ಆಕೆಯ ಸಾವು, ರಾಷ್ಟ್ರದಾದ್ಯಂತ ಪ್ರತಿಭಟನಾ ಹೋರಾಟಗಳಿಗೆ ಕಾರಣವಾಗಿ ಅಪರಾಧ ಕಾನೂನುಗಳ ತಿದ್ದುಪಡಿ ಕಾಯ್ದೆ ೨೦೧೩ನ್ನು ಸರ್ಕಾರ ಜಾರಿ ಮಾಡಿದ್ದು ಇತಿಹಾಸ. ಅತ್ಯಾಚಾರದ ವ್ಯಾಖ್ಯೆ ಬದಲಿಸಿದ ಈ ಕಾನೂನನ್ನು ನಿರ್ಭಯಾ ಕಾನೂನು ಎಂದೇ ಕರೆಯಲಾಯಿತು. ಹಾಗೆಯೇ ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ಪರಿಹಾರ) ಕಾಯ್ದೆ 2013 ಕೂಡ ಜಾರಿಯಾಗಿ ಮಹಿಳಾ ಸುರಕ್ಷತೆಗೆ ಕಾನೂನು ಬಲ ದೊರಕಿತು. 2005ರಷ್ಟು ಹಿಂದೆಯೇ ’ಕೌಟುಂಬಿಕ ಹಿಂಸೆ’ ಎಂಬ ಪರಿಕಲ್ಪನೆಯನ್ನು ಸರ್ಕಾರ ಗ್ರಹಿಸಿಕೊಳ್ಳುವಂತೆ ಮಾಡಿ ಅದರ ನಿಗ್ರಹಕ್ಕೆ ಕಾನೂನು ರೂಪಿಸಲು ಕಾರಣವಾಗಿದ್ದು ಸಂಘಟಿತವಾದ ಮಹಿಳಾ ಚಳವಳಿ ಎಂಬುದನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ಈಗ, ಲೈಂಗಿಕ ಹಿಂಸೆಗಳ ಆಯಾಮಗಳನ್ನು ಅಧ್ಯಯನ ಹಾಗೂ ವಿಶ್ಲೇಷಣೆಗಳಿಗೆ ಒಳಪಡಿಸಿ ಅವೆಲ್ಲವನ್ನೂ ಕಾನೂನು ಕಕ್ಷೆಗೆ ಸೇರಿಸಿ ಪಿತೃಪ್ರಧಾನ ಮನಸ್ಥಿತಿಗಳ ಬದಲಾವಣೆಗೆ ಪ್ರೇರಕವಾಗಲು ಮಹಿಳಾ ಆಂದೋಲನ ಯತ್ನಿಸಿದೆ.

ಹೆಚ್ಚುತ್ತಿರುವ ಲೈಂಗಿಕ ಹಿಂಸೆಗಳ ಮಧ್ಯೆಯೇ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆಯ ವಿಚಾರವು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಮುಗಿಯಲಿರುವ ಈ ದಶಕದಲ್ಲಿ ಮುನ್ನೆಲೆಗೆ ಬಂದಿದೆ ಎನ್ನಬಹುದು. ಸಾರ್ವಜನಿಕ ಸ್ಥಳಗಳಾದ ಪಾರ್ಕ್‌ಗಳು ಹಾಗೂ ಬೀಚ್‌ಗಳಲ್ಲಿ ಒಂಟಿ ಮಹಿಳೆಯರು ಕಾಣಸಿಗುವುದು ಅಪರೂಪ. ಲೈಂಗಿಕ ಕಿರುಕುಳಗಳ ಭೀತಿ ಇದಕ್ಕೆ ಕಾರಣ. ಆದರೆ ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ಅಡ್ಡಾಡುವಿಕೆ ಅಥವಾ ಅಲೆದಾಟವನ್ನು ಮಾಮೂಲಾಗಿಸುವುದು ಅಥವಾ ಸಹಜವಾಗಿಸುವುದಕ್ಕಾಗಿ ಬೆಂಗಳೂರು ಸೇರಿದಂತೆ ರಾಷ್ಟ್ರದ ಹಲವು ನಗರಗಳಲ್ಲಿ ಮಧ್ಯರಾತ್ರಿಗಳಲ್ಲೂ ಅಲೆದಾಟಗಳ ಅಭಿಯಾನಗಳನ್ನು ಮಹಿಳಾ ಗುಂಪುಗಳು ನಡೆಸಿವೆ. ಈ ಅಭಿಯಾನದ #ವೈಲಾಯ್ಟರ್ (#whyloitre) ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದೂ ಇದೆ. ಸಾರ್ವಜನಿಕ ಸ್ಥಳಗಳನ್ನೂ ಆಕ್ರಮಿಸಿಕೊಂಡ ಪುರುಷ ಸ್ವಾಮ್ಯವನ್ನು ಪ್ರತಿರೋಧಿಸುವ ಕಥನಗಳನ್ನು ಮಹಿಳೆಯರು ಈ ಅಭಿಯಾನದಲ್ಲಿ ಹಂಚಿಕೊಂಡಿದ್ದರು.

2018ರಲ್ಲಿ ಭಾರತದಲ್ಲಿ ಕಾವು ಪಡೆದ #ಮೀಟೂ ಆಂದೋಲನದಿಂದಾಗಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಅನೇಕ ಸಶಕ್ತ ವ್ಯಕ್ತಿಗಳು ಹುದ್ದೆಗಳನ್ನು ಕಳೆದುಕೊಂಡಿದ್ದು ಈ ದಶಕದ ಪ್ರಮುಖ ವಿದ್ಯಮಾನ. ಮೌನ ಸಂಸ್ಕೃತಿಯೊಳಗೆ ಹುದುಗಿದ್ದ ಲೈಂಗಿಕ ಕಿರುಕುಳಗಳ ಕಥನಗಳು ಬಟಾಬಯಲಾದ ರೀತಿಗೆ ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಸಮಾಜ ಕಸಿವಿಸಿಗೊಂಡಿದ್ದು ನಿಜ.

ರಾಷ್ಟ್ರದ 24ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 200 ಜಿಲ್ಲೆಗಳಲ್ಲಿ 65 ದಿನಗಳ ಕಾಲ, ಲೈಂಗಿಕ ಹಿಂಸೆ ವಿರುದ್ಧ ಘನತೆಯ ಮೆರವಣಿಗೆಯನ್ನು ಮಹಿಳೆಯರು ನಡೆಸಿದ್ದು ಮತ್ತೊಂದು ವಿಶೇಷ. ಲೈಂಗಿಕ ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸಲು 5000 ಸಾಮಾಜಿಕ ಕಾರ್ಯಕರ್ತರು ಹಾಗೂ ಲೈಂಗಿಕ ದೌರ್ಜನ್ಯಗಳ ಸಂತ್ರಸ್ತರು 10,000 ಕಿ.ಮೀ ದೂರ ಕ್ರಮಿಸಿದ್ದರು. ಲೈಂಗಿಕ ಹಿಂಸೆಗಳ ವಿರುದ್ಧದ ಜಾಗೃತಿ ಈ ದಶಕದಲ್ಲಿ ತೀವ್ರಗೊಂಡಿದೆ ಎಂಬುದಕ್ಕೆ ಇದು ದ್ಯೋತಕ. ಇದೇ ಸಂದರ್ಭದಲ್ಲಿ, ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಿರುವ ಕಾಂಗೊದ ಸ್ತ್ರೀರೋಗ ತಜ್ಞ ಡೆನಿಸ್ ಮುವ್ಟೆಜ್ ಹಾಗೂ ಇರಾಕ್‌ನಲ್ಲಿ 2014ರಲ್ಲಿ ಐಎಸ್‌ಐಎಸ್ ಸಂಘಟನೆಯ ಉಗ್ರರಿಗೆ ಸೆರೆ ಸಿಕ್ಕಿ ದೌರ್ಜನ್ಯಕ್ಕೊಳಗಾಗಿದ್ದ ಮಾನವ ಹಕ್ಕು ಹೋರಾಟಗಾರ್ತಿ ಇರಾಕ್‌ನ ನಾಡಿಯಾ ಮುರಾದ್ ಅವರುಗಳಿಗೆ 2018ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ ಎಂಬುದನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು. ಯುದ್ಧ ಹಾಗೂ ಸಶಸ್ತ್ರ ಸಂಘರ್ಷದ ಅಸ್ತ್ರವಾಗಿ ಲೈಂಗಿಕ ಹಿಂಸೆಯ ಬಳಕೆಯನ್ನು ಅಂತ್ಯಗೊಳಿಸುವ ಪ್ರಯತ್ನಗಳಿಗಾಗಿ ಈ ಪ್ರಶಸ್ತಿ ಸಂದಿದೆ.

ಮಹಿಳಾ ಹಕ್ಕುಗಳ ರಕ್ಷಣೆಗೆ ಭಾರತದ ಸುಪ್ರೀಂ ಕೋರ್ಟ್ ಹಲವು ಮಹತ್ವದ ತೀರ್ಪುಗಳನ್ನು ಈ ದಶಕದಲ್ಲಿ ನೀಡಿದ್ದು ಮಹಿಳೆಯರ ಹೋರಾಟಕ್ಕೆ ಸಂದ ಜಯ ಎನ್ನಬೇಕು. ಶಬರಿಮಲೆ ದೇವಾಲಯಕ್ಕೆ 0 ರಿಂದ 50 ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು 2018ರ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ತೀರ್ಪು ರದ್ದುಮಾಡಿದ್ದು ಐತಿಹಾಸಿಕ ನಡೆ. ಈ ತೀರ್ಪು ವಿವಾದ ಸೃಷ್ಟಿಸಿದರೂ ಲಿಂಗತ್ವ ಸಮಾನತೆಯತ್ತ ಇರಿಸಿದ ದೊಡ್ಡ ಹೆಜ್ಜೆಯಾಗಿತ್ತು. 2019ರ ಜನವರಿ 1ರಂದು ಸುಮಾರು 35 ಲಕ್ಷ ಮಹಿಳೆಯರು ಸುಪ್ರೀಂ ಕೋರ್ಟ್ ತೀರ್ಪಿಗೆ ಬೆಂಬಲ ಸೂಚಿಸಿ ಲಿಂಗತ್ವ ಸಮಾನತೆಯನ್ನು ಎತ್ತಿ ಹಿಡಿಯಲು ಕೇರಳದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 620 ಕಿಮೀ ಉದ್ದ ಒಟ್ಟಾಗಿ ನಿಂತು ಮಾನವ ಗೋಡೆ’ಯನ್ನು ನಿರ್ಮಿಸಿದ್ದರು.

ಹಾಗೆಯೇ 2018ರ ಸೆಪ್ಟೆಂಬರ್ 27ರಂದು, ’ವ್ಯಭಿಚಾರವು ಅಪರಾಧವಲ್ಲ ಎಂದು ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್‌ಅನ್ನು ರದ್ದುಮಾಡಿದ ಸುಪ್ರೀಂ ಕೋರ್ಟ್ ತೀರ್ಪು, ಮಹಿಳಾ ಸಮಾನತೆ, ಘನತೆ, ಸ್ವಾಯತ್ತೆಯನ್ನು ಎತ್ತಿ ಹಿಡಿದಿತ್ತು. ಬೇರೊಬ್ಬನ ಪತ್ನಿ ಜೊತೆ ಆತನ ಸಮ್ಮತಿಅಥವಾ ಪರೋಕ್ಷ ಒಪ್ಪಿಗೆ ಇಲ್ಲದೆ ಅತ್ಯಾಚಾರವೆಂದು ಪರಿಗಣಿಸಲಾದ ರೀತಿಯಲ್ಲಿ ವ್ಯಕ್ತಿಯೊಬ್ಬರು ನಡೆಸುವ ಲೈಂಗಿಕ ಸಂಪರ್ಕವನ್ನು ಈ ಸೆಕ್ಷನ್ ಪ್ರಕಾರ ವ್ಯಭಿಚಾರವೆಂದು ವ್ಯಾಖ್ಯಾನಿಸಲಾಗುತ್ತಿತ್ತು. ಆದರೆ ವಿವಾಹಿತ ವ್ಯಕ್ತಿಯು ಅವಿವಾಹಿತ ಮಹಿಳೆ ಅಥವಾ ವಿಧವೆಯ ಜತೆಗೆ ಲೈಂಗಿಕ ಸಂಪರ್ಕ ಹೊಂದುವುದೂ ವಿವಾಹದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಹದ್ದಾಗಿದ್ದರೂ ಸೆಕ್ಷನ್ 497ರ ಅಡಿ ಇದರ ವಿರುದ್ಧ ದೂರು ಕೊಡಲು ಅವಕಾಶ ಇರಲಿಲ್ಲ. ಹಾಗೆಯೇ ವ್ಯಭಿಚಾರ ಎಸಗುವ ಗಂಡಸಿನ ಪತ್ನಿಯನ್ನೂ ಸಂತ್ರಸ್ತೆ ಎಂದು ಪರಿಗಣಿಸುತ್ತಿರಲಿಲ್ಲವಾದ್ದರಿಂದ ಆಕೆಯೂ ದೂರು ಕೊಡಲಾಗುತ್ತಿರಲಿಲ್ಲ. ಹೀಗಾಗಿ, ’ಮಹಿಳೆಯನ್ನು ತಾರತಮ್ಯದಿಂದ ನೋಡುವ ಯಾವುದೇ ಅಂಶ ಸಾಂವಿಧಾನಿಕವಲ್ಲ. ಗಂಡನು ಹೆಂಡತಿಯ ಮಾಲೀಕ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುವ ಕಾಲ ಬಂದಿದೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ ಮಾತು ಮಹತ್ವದ್ದು.

100 ವರ್ಷಕ್ಕೂ ಹೆಚ್ಚು ಕಾಲದಿಂದ ಮಹಿಳಾ ಚಳವಳಿ ಜಗತ್ತಿನಲ್ಲಿ ಸಕ್ರಿಯವಾಗಿದೆ. ಮತದಾನದ ಹಕ್ಕಿನ ಚಳವಳಿಯಿಂದ ’ಮೀ ಟೂ’ ಚಳವಳಿಯವರೆಗೆ ಮಹಿಳೆಯರು ಕೇಳುತ್ತಿರುವುದು ಸಮಾನ ಹಕ್ಕುಗಳಷ್ಟೇ; ವಿಶೇಷ ಪರಿಗಣನೆಗಳಲ್ಲ ಎಂಬುದನ್ನು ಮನಗಾಣಬೇಕು.

ಇದೇ ಸಂದರ್ಭದಲ್ಲಿ 2019ರ ಟ್ರಾನ್ಸ್  ಜೆಂಡರ್ ಕಾಯಿದೆ ಬಗ್ಗೆ ಟ್ರಾನ್ಸ್ ಜೆಂಡರ್ ಸಮುದಾಯ ಅಸಮಾಧಾನ ವ್ಯಕ್ತ ಪಡಿಸಿರುವುದೂ ಗಮನಾರ್ಹ. ಹಾಗೆಯೇ ಮುಸ್ಲಿಂ ಮಹಿಳೆಯರ (ವಿವಾಹದಲ್ಲಿ ಹಕ್ಕುಗಳ ರಕ್ಷಣೆ) ಕಾಯ್ದೆಯೂ ಟೀಕೆಗಳಿಗೆ ಕಾರಣವಾಗಿದೆ. ಈಗಾಗಲೇ 2018ರಲ್ಲಿ ತ್ರಿವಳಿ ತಲಾಖ್‌ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಹೀಗಾಗಿ, ಗಂಡ ತ್ರಿವಳಿ ತಲಾಖ್ ಹೇಳಿದರೂ ಅದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಹೀಗಿದ್ದೂ ಈಗ ತರಲಾಗಿರುವ ಹೊಸ ಕಾಯ್ದೆಯ ಗುರಿ ಮುಸ್ಲಿಂ ಪುರುಷರಾಗಿದ್ದಾರೆಯೇ ಎಂಬಂಥ ಪ್ರಶ್ನೆಗಳನ್ನು ಹುಟ್ಟುಹಾಕಿರುವುದು ಸಹಜ.

ಇಂದು ಮಹಿಳಾ ಸಬಲೀಕರಣದ ವಿಚಾರ ಸರ್ಕಾರಗಳ ಅಭಿವೃದ್ಧಿ ಕಾರ್ಯಸೂಚಿಗಳಲ್ಲಿದೆ. ಇದಕ್ಕೆ ಮುಖ್ಯ ಕಾರಣ, ಹಲವು ದಶಕಗಳ ಕಾಲ ಸ್ತ್ರೀವಾದಿಗಳು ನಡೆಸಿದ ಅವಿರತ ಹೋರಾಟ. ಆದರೆ, ’ಬೇಟಿ ಬಚಾವೋ ಬೇಟಿ ಪಢಾವೋ’ ಅಥವಾ ’ಪ್ರಧಾನ ಮಂತ್ರಿ ಉಜ್ವಲಾ’ದಂತಹ ಸರ್ಕಾರದ ಯೋಜನೆಗಳು ಮಹಿಳೆಯ ಸಬಲೀಕರಣಕ್ಕಾಗಿ ಜಾರಿಗೊಳಿಸಲಾದ ಕ್ಷೇಮಾಭಿವೃದ್ಧಿ ಯೋಜನೆಗಳಷ್ಟೇ. ಹೀಗಾಗಿ, ಅಸಮಾನತೆ ಸೃಷ್ಟಿಗೆ ಮೂಲ ಕಾರಣವಾದ ಪಿತೃಪ್ರಧಾನ ಸ್ವರೂಪಗಳನ್ನು ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನಗಳನ್ನೇ ಮಾಡದ ಪ್ರಭುತ್ವದ ನೀತಿಗಳು ಹಾಗೂ ವಿಭಿನ್ನ ವೇಷಗಳಲ್ಲಿ ಹುಟ್ಟಿಕೊಳ್ಳುತ್ತಿರುವ ಪಿತೃಪ್ರಧಾನ ಸಾಮಾಜಿಕ ಮೌಲ್ಯ ವ್ಯವಸ್ಥೆ ವಿರುದ್ಧ ಮಹಿಳಾ ಚಳವಳಿ ಮುಂದುವರಿಯುತ್ತಲೇ ಇದೆ.

  • ಸಿ.ಜಿ.ಮಂಜುಳಾ
    ಪೂರ್ಣಾವಧಿ ಪತ್ರಕರ್ತೆ ಮತ್ತು ಪೂರ್ಣಾವಧಿ ಮಹಿಳಾ ಚಿಂತನೆ ಎರಡನ್ನೂ ನಡೆಸಿದ ಮಂಜುಳಾರವರು ಈಗ ಪತ್ರಿಕೋದ್ಯಮದಿಂದ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ: ಹೊಂಬಾಳೆ 3: ಸ್ತ್ರೀಕರಣಗೊಳ್ಳುತ್ತಿರುವ ಕೃಷಿಯಲ್ಲಿ ಮಹಿಳೆ ಉಳಿದರೆ, ಕೃಷಿಯೂ ಉಳಿದೀತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...