ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಅವರು ತೆಲಂಗಾಣದ ಕಾಂಗ್ರೆಸ್ ಸಚಿವೆ ಕೊಂಡಾ ಸುರೇಖಾ ವಿರುದ್ಧ ನಾಂಪಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಸಚಿವೆ ಇತ್ತೀಚಿಗೆ ಗಂಭೀರ ಆರೋಪ ಮಾಡಿದ್ದು. ಮೊಕದ್ದಮೆ ದಾಖಲಿಸಿರುವ ಪ್ರತಿಯನ್ನು ನಾಗಾರ್ಜುನ ಅವರ ಮಗ ಚೈತನ್ಯ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ತೆಲಂಗಾಣ ಸಚಿವೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಕ್ಕಿನೇನಿ ಕುಟುಂಬದ ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಕೊಂಡಾ ಸುರೇಖಾ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ನಾಗಾರ್ಜುನ ತಮ್ಮ ಕಾನೂನು ದೂರಿನಲ್ಲಿ ಆರೋಪಿಸಿದ್ದಾರೆ. ಮೊಕದ್ದಮೆಯು ಕ್ರಿಮಿನಲ್ ಮಾನನಷ್ಟದ ಆರೋಪಗಳನ್ನು ಒಳಗೊಂಡಿದೆ.
ತೆಲಂಗಾಣದ ಅರಣ್ಯ ಮತ್ತು ಪರಿಸರ ಸಚಿವೆ ಕೊಂಡ ಸುರೇಖಾ ಅವರು ಬಿಆರ್‌ಎಸ್ ನಾಯಕ ಕೆಟಿಆರ್ ಮಾದಕ ವ್ಯಸನಿಯಾಗಿದ್ದು, ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ವಿಚ್ಛೇದನಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು. ತೆಲಂಗಾಣ ಸಚಿವೆ
ಇದನ್ನೂಓದಿ: Bride in the Hills | ಕುವೆಂಪು ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಮತ್ತೆ ಇಂಗ್ಲಿಷ್‌ಗೆ ಅನುವಾದ
“ಮಾದಕ ವ್ಯಸನಿಯಾಗಿರುವ ಕೆಟಿಆರ್ ಅವರು ನಾಗಾರ್ಜುನ ಅವರ ಕನ್ವೆನ್ಷನ್ ಸೆಂಟರ್‌ವೊಂದನ್ನು ಕೆಡವದೆ ಇರಲು ಸಮಂತಾ ಅವರನ್ನು ಲೈಂಗಿಕವಾಗಿ ಬಯಸಿದ್ದರು. ಅದಕ್ಕೆ ಒಪ್ಪಿದ್ದ ನಾಗಾರ್ಜುನ ಅವರು ಸಮಂತಾ ಅವರನ್ನು ಕೆಟಿಆರ್ ಬಳಿ ತೆರಳಲು ಕೇಳಿಕೊಂಡಿದ್ದರು. ಆದರೆ ಇದಕ್ಕೆ ಒಪ್ಪದ ಸಮಂತ ಅವರು ವಿಚ್ಛೇದನ ಪಡೆದಿದ್ದರು” ಎಂದು ಸಚಿವೆ ಆರೋಪಿಸಿದ್ದರು. ಸಚಿವರ ಈ ಹೇಳಿಕೆ ತೆಲಂಗಾಣ ರಾಜಕೀಯದಲ್ಲಿ ಭಾರಿ ವಿವಾದ ಉಂಟಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವರು, ಕೆಟಿಆರ್, ಅಕ್ಕಿನೇನಿ ಕುಟುಂಬ ಮತ್ತು ಸಮಂತಾ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಕೆಟಿಆರ್ ಅವರ ಒಳಗೊಳ್ಳುವಿಕೆಯಿಂದಾಗಿ ತೆಲುಗು ಚಿತ್ರರಂಗದ ಅನೇಕ ಮಹಿಳಾ ನಟರು ತಮ್ಮ ವೃತ್ತಿಜೀವನವನ್ನು ಮೊಟಕುಗೊಳಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.
— chaitanya akkineni (@chay_akkineni) October 3, 2024
ಇದನ್ನೂಓದಿ: ತಮಿಳುನಾಡು : ಜಾತಿ ತಾರತಮ್ಯ ಪ್ರತಿಭಟಿಸಿದ ಬುಡಕಟ್ಟು ಪಂಚಾಯತ್ ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು
ಸಚಿವರ ಹೇಳಿಕೆಯನ್ನು ನಾಗಾರ್ಜುನ ಖಂಡಿಸಿದ್ದು, ಅವರ ಹೇಳಿಕೆಗಳು ಸಂಪೂರ್ಣವಾಗಿ “ಅಪ್ರಸ್ತುತ ಮತ್ತು ಸುಳ್ಳು” ಎಂದು ಪ್ರತಿಪಾದಿಸಿದ್ದಾರೆ. ಈ ವೇಳೆ ಅವರು ಜನರ ಖಾಸಗಿತನವನ್ನು ಗೌರವಿಸುವಂತೆ ಸಚಿವರನ್ನು ಒತ್ತಾಯಿಸಿದ್ದಾರೆ.
“ಗೌರವಾನ್ವಿತ ಸಚಿವೆ ಶ್ರೀಮತಿ ಕೊಂಡ ಸುರೇಖಾ ಅವರ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ರಾಜಕೀಯದಿಂದ ದೂರವಿರುವ ಚಲನಚಿತ್ರ ತಾರೆಯರ ಜೀವನವನ್ನು ನಿಮ್ಮ ವಿರೋಧಿಗಳನ್ನು ಟೀಕಿಸಲು ಬಳಸಬೇಡಿ. ದಯವಿಟ್ಟು ಇತರರ ಖಾಸಗಿತನವನ್ನು ಗೌರವಿಸಿ” ಎಂದು ನಟ ತೆಲುಗಿನಲ್ಲಿ ಟ್ವೀಟ್ ಮಾಡಿದ್ದಾರೆ.
ನಾಗ ಚೈತನ್ಯ ಮತ್ತು ಸಮಂತಾ 2021 ರಲ್ಲಿ ತಮ್ಮ ವಿಚ್ಛೇದನವನ್ನು ಸಾರ್ವಜನಿಕವಾಗಿ ಘೋಷಿಸಿದ್ದರು, ನಂತರ ಅವರು ವಿಚ್ಛೇದನ ಪಡೆದರು. ಅದರ ನಂತರ ನಾಗ ಚೈತನ್ಯ ಅವರು ಈ ವರ್ಷದ ಆಗಸ್ಟ್‌ನಲ್ಲಿ ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.
ವಿಡಿಯೊ ನೋಡಿ: ಕೇರಳ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ಭಯಾನಕ ಕಥೆಗಳನ್ನು ಬಿಚ್ಚಿಟ್ಟ ಹೇಮಾ ಸಮಿತಿ ವರದಿ


