ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ಲಕ್ನೋ, ಮಂಗಳೂರು ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳನ್ನು ಸ್ವಾಧೀನಪಡಿಸಿಕೊಳ್ಳಲು, ಅದಾನಿ ಗ್ರೂಪ್ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕನಿಷ್ಠ ಆರು ತಿಂಗಳು ಕೋರಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 2019 ರಲ್ಲಿ ತನ್ನ ಆರು ವಿಮಾನ ನಿಲ್ದಾಣಗಳನ್ನು ಬಿಡ್ ಮಾಡಿತ್ತು. ಆಗ ಅದಾನಿ ಗ್ರೂಪ್ ಅಹಮದಾಬಾದ್, ತಿರುವನಂತಪುರಂ, ಲಕ್ನೋ, ಮಂಗಳೂರು, ಜೈಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳೆಲ್ಲಕ್ಕೂ ಅತಿ ಹೆಚ್ಚು ಬಿಡ್ದಾರರಾಗಿ ಹೊರಹೊಮ್ಮಿದೆ.
ಜೈಪುರ, ತಿರುವನಂತಪುರ ಮತ್ತು ಗುವಾಹಟಿಯ ಬಿಡ್‌ಗಳನ್ನು ಕೇಂದ್ರ ಸಚಿವ ಸಂಪುಟ ಇನ್ನೂ ಅಂಗೀಕರಿಸಿಲ್ಲವಾದರೂ, ಅದಾನಿ ಗ್ರೂಪ್ 2020 ರ ಫೆಬ್ರವರಿಯಲ್ಲಿ ಉಳಿದ ಮೂರು ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಸ್ವಾಧೀನದ ಒಪ್ಪಂದಕ್ಕೆ ಸಹಿ ಹಾಕಿತು.
ಕಳೆದ ವರ್ಷ ನವೆಂಬರ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಡೆಸುವ ಆರು ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ನಿರ್ವಹಿಸುವ ಪ್ರಸ್ತಾಪವನ್ನು ಸರ್ಕಾರ ಇಟ್ಟಿತ್ತು.
ವಿಶ್ವಾದ್ಯಂತ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ವಾಯುಯಾನ ಕ್ಷೇತ್ರವು ಭಾರಿ ನಷ್ಟವನ್ನು ಅನುಭವಿಸಿದೆ ಎನ್ನಲಾಗಿದೆ. ಮಾರ್ಚ್‌ನಲ್ಲಿ ಭಾರತದಲ್ಲಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ, ಹೆಚ್ಚಿನ ವಿಮಾನಯಾನ ಸಂಸ್ಥೆಗಳು ತಮ್ಮ ನೌಕರರ ಸಂಬಳವನ್ನು ಕಡಿತಗೊಳಿಸಿವೆ ಅಥವಾ ಕಲವು ನೌಕರರನ್ನು ಹುದ್ದಯಿಂದಲೇ ಕಿತ್ತೊಗೆದಿತ್ತು.
60 ದಿನಗಳ ಲಾಕ್‌ಡೌನ್ ನಂತರ, ಕೇಂದ್ರ ಸರ್ಕಾರವು ಕಳೆದ ತಿಂಗಳು ದೇಶೀಯ ವಿಮಾನ ಪ್ರಯಾಣವನ್ನು ಪ್ರಾರಂಭಿಸಿದೆ. ಹೆಚ್ಚಿನ ವಿಮಾನ ನಿಲ್ದಾಣಗಳು ಸೋಂಕು ಹರಡದಂತೆ ಖಚಿತಪಡಿಸಿಕೊಳ್ಳಲು ಹಲವಾರು ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ.
ಓದಿ: ಕಲ್ಲಿದ್ದಲು ಪೂರೈಕೆ ಗುತ್ತಿಗೆಗಾಗಿ ಟೆಂಡರ್ ತಿದ್ದಿದ ಆರೋಪ: ಗೌತಮ್ ಅದಾನಿ ಕಂಪನಿ ವಿರುದ್ಧ FIR


