Homeಮುಖಪುಟಎನ್‌ಡಿಟಿವಿ ಸಂಪಾದಕೀಯ ಸ್ವಾತಂತ್ರ್ಯದ ಭೂತ ಮತ್ತು ಭವಿಷ್ಯ

ಎನ್‌ಡಿಟಿವಿ ಸಂಪಾದಕೀಯ ಸ್ವಾತಂತ್ರ್ಯದ ಭೂತ ಮತ್ತು ಭವಿಷ್ಯ

- Advertisement -
- Advertisement -

ನೀವು ಎನ್‌ಡಿಟಿವಿಅನ್ನು ಎಲೀಟಿಸ್ಟ್ ಅಥವಾ ಪ್ರತಿಷ್ಠಿತರಿಗೆ ಸಂಬಂಧಿಸಿದ್ದು, ಇಂಗ್ಲೀಷ್‌ಮಯವಾದ್ದು ಎಂದು ಕರೆಯಬಹುದು. ಆದರೆ ಅದು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಿಂತಿತು, ನಮಗೆ ರವೀಶ್ ಕುಮಾರ್‌ಅನ್ನು ಕೊಟ್ಟಿತು.

ಎನ್‌ಡಿಟಿವಿ ಸಲುವಾಗಿ ನಾನು ಚುನಾವಣೆಗಳನ್ನು ಕವರ್ ಮಾಡುತ್ತ ಅನೇಕ ವರ್ಷಗಳೇ ಆದವು, ಇಷ್ಟೆಲ್ಲ ವರ್ಷಗಳಲ್ಲಿ ಹೀಗೆ ಹೇಳಬೇಕು, ಇಂಥದ್ದನ್ನು ಹೇಳಬೇಕು ಅಥವಾ ಇಂಥದ್ದನ್ನು ಹೇಳಬಾರದು ಎಂದು ಒಂದು ಸಲವೂ ನನಗೆ ಅಲ್ಲಿ ಯಾರೂ ಹೇಳಲಿಲ್ಲ. ಪ್ರಣಯ್ ರಾಯ್‌ರೊಂದಿಗೆ ನನಗೆ ಪರದೆಯ ಮೇಲೆ, ಪರದೆಯ ಹಿಂದೆ ಹಲವಾರು ಭಿನ್ನಾಭಿಪ್ರಾಯಗಳಿದ್ದವು, ಆದರೆ ಅವೆಂದೂ ಯಾವುದೇ ಸಮಸ್ಯೆಯನ್ನುಂಟುಮಾಡಿರಲಿಲ್ಲ.

ನನಗಿಂತ ಬಿಸಿನೆಸ್‌ಅನ್ನು ಮತ್ತು ಕಾರ್ಪೊರೆಟ್ ಕಾನೂನನ್ನು ಚೆನ್ನಾಗಿ ಬಲ್ಲವರು ನನ್ನ ಮಾತನ್ನು ಒಪ್ಪದೇ ಇರಬಹುದು. ಅವರು ಹೇಳುವುದೇನೆಂದರೆ, ಎನ್‌ಡಿಟಿವಿಯ ಮುಖ್ಯಸ್ಥರಾದ ಪ್ರಣಯ್ ಮತ್ತು ರಾಧಿಕ ರಾಯ್ ರಾಜೀನಾಮೆ ನೀಡಿಲ್ಲ ಎಂದು. ಅವರು ಹೋಲ್ಡಿಂಗ್ ಕಂಪನಿಯಿಂದ ಹೊರಬಂದಿದ್ದಾರಷ್ಟೆ, ಅವರು ಅಲ್ಲಿ ಅತಿದೊಡ್ಡ ಷೇರು ಹೊಂದಿರುವವರಾಗಿದ್ದಾರೆ ಹಾಗೂ ಅವರಿಗಾಗಿ ಮತ್ತು ಎನ್‌ಡಿಟಿವಿಗಾಗಿ ಇನ್ನೂ ಹಲವಾರು ಅವಕಾಶಗಳಿವೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ರಾಜಕೀಯದ ಬಗ್ಗೆ ತುಸು ಗೊತ್ತಿದೆ. ಒಂದು ದೇಶದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯು ಆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯ ಬೆಂಬಲಕ್ಕೆ ನಿಂತರ ಅಲ್ಲಿ ಯಾವ ಕಾನೂನುಗಳೂ ಅನ್ವಯವಾಗುವುದಿಲ್ಲ. ಆ ಬ್ರ್ಯಾಂಡ್‌ನ ಹೆಸರು ಉಳಿಯುತ್ತದೆ ಹಾಗೂ ಇನ್ನೂ ಸಮೃದ್ಧಗೊಳ್ಳಲೂಬಹುದು ಆದರೆ ಅದು ನಾವು ಮೂರು ದಶಕಗಳಿಂದ ಕಂಡ ಎನ್‌ಡಿಟಿವಿ ಆಗಿರುವುದಿಲ್ಲ.

ಮಾಧ್ಯಮ ಕ್ಷೇತ್ರವನ್ನು ನನಗಿಂತ ಚೆನ್ನಾಗಿ ಬಲ್ಲವರು ಹೇಳುವುದೇನೆಂದರೆ, ಅದಾನಿ ಗ್ರೂಪ್‌ನ ಮುಖ್ಯಸ್ಥರಿಂದ ನೇಮಕಗೊಂಡ ಹೊಸ ನಿರ್ದೇಶಕರು ಸ್ವತಂತ್ರ ಪತ್ರಕರ್ತರು ಎಂದು. ಸಂಜಯ್ ಪುಗಾಲಿಯಾ ಬಗ್ಗೆ ಈ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ, ಅವರನ್ನು 20 ವರ್ಷಕ್ಕೂ ಹೆಚ್ಚು ಕಾಲದಿಂದ ಬಲ್ಲೆ. ಅವರೊಬ್ಬ ಒಳ್ಳಯ ಪತ್ರಕರ್ತರು ಹಾಗೂ ಯಾವ ಕೋನದಲ್ಲೂ ಮೋದಿ ಸಮರ್ಥರಲ್ಲ. ಆದರೆ, ಅದು ಸೂಚಿಸುವುದೇನೆಂದರೆ, ಎನ್‌ಡಿಟಿವಿ, ಅದನ್ನು ನಾವೀಗ ಆಂಡ್‌ಟಿವಿ (ಎಎನ್‌ಡಿಟವಿ) ಎಂದು ಕರೆಯುವ- ತಕ್ಷಣಕ್ಕೆ ಒಂದು ಶಾರ್ಪ್ ಆದ ಯು-ಟರ್ನ್ ತೆಗೆದುಕೊಳ್ಳುವುದಿಲ್ಲ ಎಂದಷ್ಟೆ. ಈ ಚಾನೆಲ್ ತನ್ನ ಇಮೇಜ್ ಅನ್ನು ಮತ್ತು ವೀಕ್ಷಕರನ್ನು ಅದೇ ರೀತಿ ಕೊಂಡೊಯ್ಯಬಹುದು; ಮೇಲಿನಿಂದ ಆದೇಶ ಬರುವ ತನಕ. ನೆಟ್‌ವರ್ಕ್18ನನ್ನು ಮುಖೇಶ್ ಅಂಬಾನಿ ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಆಗಿದ್ದು ಇದೆ.

ರವೀಶ್ ಕುಮಾರ್‌

ರವೀಶ್ ಕುಮಾರ್ ಅವರ ರಾಜೀನಾಮೆಯು ಎನ್‌ಡಿಟಿವಿಯ ಸ್ಥಾಪಕರಾದ ರಾಧಿಕ ಮತ್ತು ಪ್ರಣಯ್ ರಾಯ್ ಅವರುಗಳ ರಾಜೀನಾಮೆಗಿಂತ ಹೆಚ್ಚಿನ ಜನಪ್ರಿಯತೆ ಪಡೆದಿದ್ದು, ಹೆಚ್ಚಿನ ಗಮನ ಸೆಳೆದಿದ್ದು ಎನ್‌ಡಿಟಿವಿಗೆ ಸಂದ ಗೌರವವೆಂದೆ ಹೇಳಬಹುದು. ಕಳೆದ ಕೆಲವು ವರ್ಷಗಳಿಂದ ರವೀಶ್ ಕುಮಾರ್ ಅವರ ಶೋ ಎನ್‌ಡಿಟಿವಿ ಚಾನೆಲ್‌ನ ಅತ್ಯಂತ ಪ್ರಮುಖ ಶೋ ಆಗಿ ಹೊರಹೊಮ್ಮಿದೆ, ಹಾಗೂ ಅದು ಕೇವಲ ಹಿಂದಿ ಚಾನೆಲ್‌ದಷ್ಟೇ ಅಲ್ಲ, ಇಡೀ ಎನ್‌ಡಿಟಿವಿಯದ್ದೇ ಗಮನಾರ್ಹ ಶೋ ಎಂದರೆ ರವೀಶ್ ಕುಮಾರ್ ಅವರದ್ದು ಎಂತಾಗಿತ್ತು. ಈ ಹಿಂದೆ ನಾನು ಇದೇ ಕಾಲಮ್ಮಿನಲ್ಲಿ ’ರವೀಶ್ ಕುಮಾರ್ ಅವರ ಪತ್ರಿಕೋದ್ಯಮ ನಮ್ಮ ಕಾಲದ ಸತ್ಯದ ಜೊತೆಗಿನ ಸಂಕಷ್ಟಗಳಿಗೆ ಇರುವ ಸಾಕ್ಷ್ಯ’ ಎಂದು ಬರೆದಿದ್ದೆ. ಅವರು ಸರಿಯಾದ ಕಾರಣಗಳಿಗಾಗಿಯೇ ಒಬ್ಬ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಅದೇ ಸಮಯದಲ್ಲಿ ನಾವು ರಾಯ್ ದಂಪತಿಗಳ ಆತ್ಮವಿಶ್ವಾಸ ಮತ್ತು ಮುನ್ನೋಟವನ್ನು ಕಡೆಗಣಿಸುವಂತಿಲ್ಲ. ಅವರು ತಮ್ಮ ಸುತ್ತಲ ಬಳಗದಲ್ಲಿರದ ಹೊರಗಿನ ಒಬ್ಬ ಯುವ ಸಹೋದ್ಯೋಗಿಯು ಈ ಎತ್ತರಕ್ಕೆ, ತಮಗಿಂತಲೂ ಹೆಚ್ಚಿನ ಎತ್ತರಕ್ಕೆ ಬೆಳಯಲು ಅನುವು ಮಾಡಿಕೊಟ್ಟವರು. ಇದು ನಮ್ಮಲ್ಲಿ ಸಂಸ್ಥೆಗಳನ್ನು ಬೆಳೆಸುವ, ಭಾರತದ ಸ್ಟ್ಯಾಂಡರ್ಡ್ ಎನ್ನಲಾಗುವ ’ಜೀವ-ಕೊಡ್ತೀನಿ-ಜೀವ-ತೊಗೊತೀನಿ’ ಮಾದರಿಗಿಂತ ವಿಭಿನ್ನವಾಗಿ ಕಂಡು ಬರುತ್ತದೆ; ಈ ಮಾದರಿಯಲ್ಲಿ ಸಂಸ್ಥಾಪಕರು ಒಂದು ಸಂಸ್ಥೆಯನ್ನು ಕಟ್ಟಿ ಬೆಳೇಸಲು ತಮ್ಮ ಜೀವನವನ್ನೇ ಕೊಡುತ್ತಾರೆ, ಅದನ್ನು ಸಂಪೂರ್ಣವಾಗಿ ತಮ್ಮ ಅಡಿಯಲ್ಲಿಯೇ ಇಟ್ಟುಕೊಂಡು, ಅದರಿಂದ ದೂರವಾಗುವ ಸಮಯದಲ್ಲಿ ಸಂಸ್ಥೆಯ ಜೀವವನ್ನೇ ಹಿಂಡಿ, ನಿರ್ಜೀವವನ್ನಾಗಿಸುತ್ತಾರೆ. ಆದರೆ ರಾಯ್‌ಗಳು ಇದಕ್ಕೆ ವಿಭಿನ್ನವಾಗಿದ್ದರು.

ಇದನ್ನೂ ಓದಿ: NDTV ರಾಜೀನಾಮೆ ಬೆನ್ನಲ್ಲೆ ಯೂಟ್ಯೂಬ್ ಚಾನೆಲ್ ತೆರೆದ ರವೀಶ್ ಕುಮಾರ್: ಈಗಾಗಲೇ 10 ಲಕ್ಷದಷ್ಟು ಚಂದಾದಾರರು!

ಔದಾರ್ಯತೆ, ನ್ಯಾಯಸಮ್ಮತೆಯ ಮಾದರಿ

1993ರಲ್ಲಿ ನಾನು ಎನ್‌ಡಿಟಿವಿಗೆ ನೀಡಿದ ಮೊದಲ ಭೇಟಿ ನನಗೆ ಸ್ಪಷ್ಟವಾಗಿ ನೆನಪಿದೆ. ನಾನು ಆಗ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟಿ (ಸಿಎಸ್‌ಡಿಎಸ್) ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಸೆಮಿನಾರ್ ಎಂಬ ಪತ್ರಿಕೆಗೆ ಚುನಾವಣೆಗಳ ಮೇಲೆ ಒಂದು ವಿಶೇಷ ಸಂಚಿಕೆಯನ್ನು ಸಂಪಾದಿಸಲು ನನಗೆ ಆಹ್ವಾನಿಸಿದ್ದರು. ಪ್ರಣಯ್ ರಾಯ್ ಅವರ ’ಅ ಕಂಪೆಂಡಿಯಂ ಆನ್ ಇಂಡಿಯನ್ ಎಲೆಕ್ಷನ್ಸ್’ ಎಂಬ ಪುಸ್ತಕವು ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿತ್ತು. ತಜ್ಞರಿಗೆ ಮಾತ್ರ ಸೀಮಿತವಾದ ರಾಜಕೀಯ ತತ್ವಶಾಸ್ತ್ರದ ಒಂದು ಸೀಮಿತ ಜಗತ್ತಿನಿಂದ ಹೊರಬಂದು ಮತ್ತು ಈಗ ಚುನಾವಣಾಶಾಸ್ತ್ರ ಎಂಬ ವಿಷಯದ ಬಗ್ಗೆ ಬರೆಯಲು ಆ ಪುಸ್ತಕ ಪ್ರೇರೇಪಿಸಿತ್ತು. ಆ ವಿಶೇಷ ಸಂಚಿಕೆಗೆ ಪ್ರಣಯ್ ರಾಯ್ ಅವರ ಸಂದರ್ಶನ ಮಾಡಲು ನಾನು ಉತ್ಸುಕನಾಗಿದ್ದೆ. ಸೆಮಿನಾರ್ ಪತ್ರಿಕೆಯ ಸಂಪಾದಕರಾದ ತೇಜ್‌ಬೀರ್ ಸಿಂಗ್ ಮತ್ತು ಆಗತಾನೇ ಪರಿಚಯವಾದ ಇನ್ನೊಬ್ಬ ಲಿಬರಲ್ ಎಲೀಟ್ ವ್ಯಕ್ತಿಯೊಬ್ಬರು ಫೋನ್ ಎತ್ತಿಕೊಂಡು ರಾಯ್ ಅವರೊಂದಿಗೆ ಸಂದರ್ಶನಕ್ಕೆ ಸಮಯ ನಿಗದಿಮಾಡಿದರು. ಅವರು ಅಷ್ಟು ಸರಳವಾಗಿ ಸಂದರ್ಶನಕ್ಕೆ ಸಮಯ ನಿಗದಿಪಡಿಸಿದ್ದು ನನಗೆ ಆಶ್ಚರ್ಯ ಉಂಟುಮಾಡಿತು. ನಾನು ಗ್ರೇಟರ್ ಕೈಲಾಶ್‌ನಲ್ಲಿರುವ ಎನ್‌ಡಿಟಿವಿಯ ಕಚೇರಿಗೆ ತಲುಪಿದೆ. ಅದು ನನಗೆ ಒಬ್ಬ ಅಭಿಮಾನಿ ತನ್ನ ಹೀರೊನನ್ನು ಭೇಟಿ ಮಾಡಿದ ಕ್ಷಣದಂತಿತ್ತು. ಆ ಸಂದರ್ಶನದ ಬಗ್ಗೆ ನನಗೆ ಅಷ್ಟು ನೆನಪಿಲ್ಲ. ಆದರೆ ನನಗೆ ಅಲ್ಲಿ ಚೈನೀಸ್ ಚಹ (ಅಂಥದೊಂದಿರುತ್ತೆ ಎಂದು ನನಗೆ ಆಗ ಗೊತ್ತಿರಲಿಲ್ಲ) ಬೇಕಾ ಎಂದು ಕೇಳಿದ್ದು ಚೆನ್ನಾಗಿ ನೆನಪಿದೆ ಹಾಗೂ ನನ್ನಂತಹ ಯಾವ ಹೆಸರೂ ಇಲ್ಲದ ಚಿಕ್ಕ ವಯಸ್ಸಿನ ವ್ಯಕ್ತಿಗೆ ಅಷ್ಟು ಗಮನ ಕೊಟ್ಟು ಉತ್ತರ ನೀಡಿದ್ದೂ ನೆನಪಿದೆ.

ಅದರ ನಂತರ ಪ್ರಣಯ್ ಅವರ ಆತ್ಮೀಯತೆಯ ಲಾಭವನ್ನು ಪಡೆಯುತ್ತಲೇ ಇದ್ದೆ. 1996ರ ಚುನಾವಣೆಯ ಮತದಾನ ಎಣಿಕೆಯ ದಿನವನ್ನು ನಾನು ಮರೆಯಲಾರೆ. ನಾನು ದೂರದರ್ಶನಕ್ಕಾಗಿ ಎಕ್ಸಿಟ್ ಪೋಲ್ ಆಧಾರಿತ ಚುನಾವಣೆ ಫಲಿತಾಂಶದ ಮುನ್ಸೂಚನೆ ನೀಡಿದ್ದೆ. ಯಾವುದೋ ಕಾರಣಕ್ಕಾಗಿ ದೂರದರ್ಶನದ ಎದುರಾಳಿ ಎನ್ನಬಹುದಾದ, ಚುನಾವಣಾ ಫಲಿತಾಂಶದ ಭವಿಷ್ಯವಾಣಿ ಹೇಳುವಲ್ಲಿ ಕಿಂಗ್ ಎನಿಸಿಕೊಂಡ ಪ್ರಣಯ್ ರಾಯ್‌ಗೆ ನನ್ನ ಆ ಕಸರತ್ತನ್ನು ತೋರಿಸಲಾಗಿತ್ತು. ಮತದಾನದ ದಿನದಂದು ಕರ್ನಾಟಕದಿಂದ ಮೊದಲ ಸೂಚನೆಗಳು ಬರುತ್ತಿದ್ದವು ಹಾಗೂ ನಮ್ಮ ಮುನ್ಸೂಚನೆ ತಪ್ಪಾಗುತ್ತಿತ್ತು. ದಿವಂಗತ ಜೈಪಾಲ್ ರೆಡ್ಡಿಯವರು ’ಎಕ್ಸಿಟ್ ಪೊಲ್ ಕಿ ಪೋಲ್ ಖುಲ್‌ಗಯಿ’ (ಎಕ್ಸಿಟ್ ಪೊಲ್‌ಗಳು ಪೊಳ್ಳಾದವು) ಎಂದು ಛೇಡಿಸಿದರು. ನನ್ನ ಭವಿಷ್ಯವಾಣಿಯನ್ನು ತಪ್ಪೆಂದು ಸಾಬೀತುಪಡಿಸುವುದರಲ್ಲಿ ರಾಯ್ ಅವರ ಜೊತೆಗೂಡಬಹುದಾಗಿತ್ತು, ಅವರನ್ನು ಪ್ರೋತ್ಸಾಹಿಸಬಹುದಾಗಿತ್ತು ಅಥವಾ ಅವರನ್ನೇ ಮುಂದುವರಿಯಲು ಬಿಡಬಹುದಾಗಿತ್ತು. ನನ್ನ ಭವಿಷ್ಯವಾಣಿಯನ್ನು ಸಮರ್ಥಿಸಿಕೊಳ್ಳಲು ನಾನು ಅಲ್ಲಿರಲಿಲ್ಲ. ಆದರೆ ಪ್ರಣಯ್ ಅವರು ಜೈಪಾಲ್ ರೆಡ್ಡಿಯವರನ್ನು ತಡೆದು, ಈ ರೀತಿ ಸಮಯಕ್ಕೆ ಮುಂಚೆಯೇ ತೀರ್ಪು ನೀಡಬಾರದು ಎಂದು ಹೇಳಿ, ಇತರ ರಾಜ್ಯಗಳಿಂದ ಬರುತ್ತಿರುವ ವರದಿ ತೋರಿಸಿ, ನನ್ನ ಮುನ್ಸೂಚನೆ ಎಷ್ಟು ಚೆನ್ನಾಗಿದೆ ಎಂದು ವಾದಿಸಿದರು. ಅದು ಪ್ರಣಯ್ ರಾಯ್ ಅವರ ಔದಾರ್ಯ, ನ್ಯಾಯಸಮ್ಮತೆ ಮತ್ತು ಘನತೆಗೆ ಉದಾಹರಣೆ.

ಪ್ರಣಯ್ ರಾಯ್‌ ರಾಧಿಕಾ ರಾಯ್

ರಾಧಿಕ ಮತ್ತು ಪ್ರಣಯ್ ರಾಯ್ ಅವರುಗಳು ತಮ್ಮ ವೈಯಕ್ತಿಕ ಸದ್ಗುಣಗಳನ್ನು ಸಾಂಸ್ಥಿಕ ಮೌಲ್ಯಗಳನ್ನಾಗಿಸಿದ್ದರು. ಕಳೆದ ಮೂರು ದಶಕಗಳಲ್ಲಿ ನಾನು ಎನ್‌ಡಿಟಿವಿಯನ್ನು ಒಬ್ಬ ಹೊರಗಿನವನಾಗಿ ಹಾಗೂ ಸರಿಸುಮಾರು ಒಳಗಿನವನಾಗಿಯೂ ನೋಡಿದ್ದೇನೆ. ಅವರ ಸುದ್ದಿಗಳನ್ನು ’ವರ್ಲ್ಡ್ ದಿಸ್ ವೀಕ್’ನ ಸಮಯದಿಂದ ನೋಡುತ್ತಿದ್ದೇನೆ. ಅವರ ಪ್ರಸಿದ್ಧ ಚುನಾವಣಾ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿದೆ. ಇದರ ನಡುವೆ ನಾವು ಅವರ ಸ್ಪರ್ಧಿಗಳಾದ ಚಾನೆಲ್‌ಗಳೊಂದಿಗೂ (ಮೊದಲು ಆಜ್‌ತಕ್ ನಂತರ ಸಿಎನ್‌ಎನ್-ಐಬಿಎನ್) ಕೆಲಸ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಅವರು ಮಾಡಿದ ಸುದ್ದಿಗಳ ವಿಷಯವೂ ಆಗಿದ್ದೇನೆ. ನ್ಯಾಯೋಚಿತ ನಡವಳಿಕೆ ಮತ್ತು ಸಂಪಾದಕೀಯ ಸ್ವಾತಂತ್ರ್ಯ ಎನ್‌ಡಿಟಿವಿಯ ಪ್ರಮುಖ ಗುಣಲಕ್ಷಣಗಳಾಗಿವೆ. ಇಷ್ಟು ವರ್ಷ ಚುನಾವಣೆಗಳೆಂಬ ಅತ್ಯಂತ ಸೂಕ್ಷ್ಮ ರಾಜಕೀಯ ವಿಷಯವನ್ನು ಕವರ್ ಮಾಡಿದ್ದರೂ, ಇಷ್ಟೆಲ್ಲ ವರ್ಷಗಳಲ್ಲಿ ಹೀಗೆ ಹೇಳಬೇಕು ಅಥವಾ ಇಂಥದ್ದನ್ನು ಹೇಳಬಾರದು ಎಂದು ಒಂದು ಸಲವೂ ನನಗೆ ಅಲ್ಲಿ ಯಾರೂ ಹೇಳಲಿಲ್ಲ. ಪ್ರಣಯ್ ರಾಯ್‌ಯೊಂದಿಗೆ ನನಗೆ ಪರದೆಯ ಮೇಲೆ, ಪರದೆಯ ಹಿಂದೆ ಹಲವಾರು ಭಿನ್ನಾಭಿಪ್ರಾಯಗಳಿದ್ದವು, ಆದರೆ ಅವೆಂದೂ ಯಾವುದೇ ಸಮಸ್ಯೆಯಾಗಿರಲಿಲ್ಲ. ನಾವು 2004ರಲ್ಲಿ ಎನ್‌ಡಿಎ ಸೋಲತ್ತೆ ಎಂದು ಭವಿಷ್ಯವಾಣಿ ಹೇಳಲು ವಿಫಲವಾಗಿದ್ದಾಗ, ಪ್ರಣಯ್ ಸ್ಟುಡಿಯೋದಿಂದ ಹೊರಗೆ ಬಂದು, ಇಡೀ ನ್ಯೂಸ್‌ರೂಮ್‌ಗೆ ತಾವು ತಪ್ಪು ಮಾಡಿದ್ದೇವೆ, ಸಮೀಕ್ಷೆಯ ಸಾಕ್ಷ್ಯಗಳ ಮೇಲಿನ ನನ್ನ ಅಭಿಪ್ರಾಯಕ್ಕೆ ಗಮನ ನೀಡದೇ ಇರುವುದು ದೊಡ್ಡ ತಪ್ಪು ಎಂದು ಘೋಷಿಸಿದರು. ಈ ರೀತಿ ಬೇರಾವುದೇ ಒಬ್ಬ ಮಾಲೀಕ, ಸಂಪಾದಕ ಅಥವಾ ಅಕ್ಯಾಡೆಮಿಕ್ ವ್ಯಕ್ತಿ ಮಾಡುವುದನ್ನು ಊಹಿಸಲೂ ಅಸಾಧ್ಯ.

ಎಲೀಟ್, ವೃತ್ತಿಪರ, ಪ್ರಜಾಸತ್ತಾತ್ಮಕ ಭಾರತದ ಸಮರ್ಥಕ

ನಾನು ರಾಧಿಕ ಮತ್ತು ಪ್ರಣಯ್ ರಾಯ್ ಎಂದು ಹೇಳಿದಾಗ, ರಾಧಿಕ ಅವರನ್ನು ನೆಪ ಮಾತ್ರಕ್ಕೆ ಹೆಸರಿಸುತ್ತಿಲ್ಲ. ಈ ಸುದ್ದಿವಾಹಿನಿಯ ಮುಖ ಮತ್ತು ಧ್ವನಿ ಪ್ರಣಯ್ ಆಗಿದ್ದರೆ, ರಾಧಿಕ ರಾಯ್ ಅದರ ಮೆದುಳು ಮತ್ತು ಆತ್ಮವಾಗಿದ್ದರು. ಅವರ ಬಗ್ಗೆ ನಾನು ಅಷ್ಟು ಬರೆಯುತ್ತಿಲ್ಲವೇಕೆಂದರೆ, ಎನ್‌ಡಿಟಿವಿಯೊಂದಿಗೆ ನನ್ನ ಸಂಬಂಧ ಮೂಲತಃವಾಗಿ ಪ್ರಣಯ್ ಅವರ ನೇತೃತ್ವದಲ್ಲಿರುವ ಚುನಾವಣಾ ತಂಡದೊಂದಿಗೇ ಹೆಚ್ಚಿತ್ತು. ನಮ್ಮ ಭಾರತೀಯ ಸಂಸ್ಥೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ, ಆದರೆ ಎನ್‌ಡಿಟಿವಿಯ ಗುರುತು ಎಂಬಂತಿದ್ದ ವೃತ್ತಿಪರತೆಗೆ ರಾಧಿಕ ರಾಯ್ ಕಾರಣ. ಸಂಪಾದಕೀಯ ನಿಲುವಿನೊಂದಿಗೆ ಎನ್‌ಡಿಟಿವಿ ತನ್ನ ಉನ್ನತ ಮಟ್ಟದ ಪ್ರೊಡಕ್ಷನ್ ಮೌಲ್ಯಗಳಿಗೂ ಒಂದು ಒಳ್ಳೆಯ ಉದಾಹರಣೆಯಾಗಿದೆ. ಗ್ರಾಫಿಕ್‌ಗಳ ಮತ್ತು ದೃಶ್ಯಗಳ ಮಹತ್ವವನ್ನು ಅರಿತುಕೊಂಡ ಕೆಲವೇ ಚಾನೆಲ್‌ಗಳಲ್ಲಿ ಎನ್‌ಡಿಟಿವಿ ಒಂದು. ಎನ್‌ಡಿಟಿವಿಯಲ್ಲಿ ಮಾತ್ರ ನಿಮಗೆ ಕ್ಯಾಮರಾ ಪರ್ಸನ್‌ನಿಂದ ಹಿಡಿದು ನಿರ್ಮಾಪಕರ ತನಕ ಎಲ್ಲರೂ ಮಹಿಳೆಯರೇ ಇರುವ ಸ್ಟುಡಿಯೊ ತಂಡವನ್ನು ಕಾಣಬಹುದಾಗಿತ್ತು. ಭಾರತೀಯ ಮಾಧ್ಯಮದ ಎಲ್ಲ ಪುರುಷ ಸಂಸ್ಕೃತಿಯ ನಡುವೆ ಇದೊಂದು ವಿರಳವಾದ ಸಾಧನೆಯಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿಯ ಸಂಪಾದಕೀಯ ಸಿಬ್ಬಂದಿಯನ್ನು ಹೊರತುಪಡಿಸಿದ ಸಿಬ್ಬಂದಿಯ ಕೆಲಸದ ಸಂಸ್ಕೃತಿಯೂ ವಿಶೇಷವಾಗಿತ್ತು. ಅದುವೆ ಮೂಲ ಸಂಘಟನಾತ್ಮಕ ಮೌಲ್ಯಗಳ ಬಗ್ಗೆ ಬಹಳಷ್ಟು ಹೇಳುತ್ತಿತ್ತು. ಅವರೆಲ್ಲ ಎನ್‌ಡಿಟಿವಿಯನ್ನು ತಮ್ಮ ಗೌರವದ ಸಂಕೇತವೆಂಬಂತೆ ಹೊತ್ತು ತಿರುಗುತ್ತಿದ್ದರು: ಘನತೆ ಮತ್ತು ಸಮಚಿತ್ತದಿಂದ ಕರೆತರುವ ವಾಹನಚಾಲಕ, ಗೌರವಪೂರ್ವಕವಾಗಿರುತ್ತಿದ್ದ ಆದರೆ ವಿಧೇಯನಾಗಿರುವ ಅವಶ್ಯಕತೆಯಿಲ್ಲ ಎಂದು ತಿಳಿದಿದ್ದ ಕಚೇರಿಯ ಅಟೆಂಡಂಟ್ ಹಾಗೂ ಸದಾ ಒಳ್ಳೆಯ, ಸೂಕ್ತ ಬಟ್ಟೆ ಧರಿಸಿದ ಕಚೇರಿಯನ್ನು ಸ್ವಚ್ಛಗೊಳಿಸುವ ಸಿಬ್ಬಂದಿ; ಅವರೆಲ್ಲರನ್ನೂ ಘನತೆಯಿಂದ ನಡೆಸಿಕೊಳ್ಳಲಾಗುತ್ತಿತ್ತು.

ಇದನ್ನೂ ಓದಿ: ನಿರ್ದೇಶಕ ಸ್ಥಾನಕ್ಕೆ ರಾಧಿಕಾ ರಾಯ್, ಪ್ರಣಯ್ ರಾಯ್ ರಾಜೀನಾಮೆ: RIP, ಅನ್‌ಫಾಲೋ NDTV ಎಂದ ಪ್ರಮುಖರು

ಹೌದು ಎನ್‌ಡಿಟಿವಿ ಎಲೀಟ್ ಆದದ್ದು ಮತ್ತು ಇಂಗ್ಲಿಷ್‌ಮಯವಾದದ್ದು ಎಂದು ಕರೆಯಬಹುದು ಮತ್ತು ಭಾರತದ ಪ್ರತಿಷ್ಠಿತರ ಮಕ್ಕಳು ಅಲ್ಲಿ ತುಂಬಿದ್ದರು. ಹೊರಗಿನವರಾದ ರವೀಶ್ ಮತ್ತು ನಾನು ಈ ಕ್ಲಬ್‌ಅನ್ನು ಪ್ರವೇಶಿಸಿದಾಗ ಇದನ್ನು ಅಸಮಾಧಾನದಿಂದ ಮತ್ತು ತಮಾಷೆಯಾಗಿ ನೋಡುತ್ತಿದ್ದೆವು. ಆದರೆ ಅದು ಎಲೀಟ್ ಆಗಿದ್ದರೂ, ತನ್ನ ಮೆರಿಟ್‌ಅನ್ನು ಹಗುರವಾಗಿ ಪರಿಗಣಿಸಿದ ಎಲೀಟ್ ಆಗಿರಲಿಲ್ಲ; ತಮ್ಮ ನಾಗರಿಕತೆಯಲ್ಲಿ ಅತ್ಯುತ್ತಮವಾದುದನ್ನು ಮುಂದುವರಿಸುವ ಜವಾಬ್ದಾರಿಯನ್ನು ಅವರು ಅರಿವಿನಿಂದ ನಿಭಾಯಿಸಿದರು. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಪೂರ್ವಜರು ರಚಿಸಿದ ಭಾರತೀಯ ಸಂವಿಧಾನವನ್ನು ರಕ್ಷಿಸಲು ನಿಂತ ಎಲೀಟ್ ಆಗಿದ್ದರು ಹಾಗೂ ಒಂದು ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಭಾರತದ ಪರಿಕಲ್ಪನೆಯನ್ನು ಸಂರಕ್ಷಿಸಲು ತೆರಬೇಕಾದ ಬೆಲೆಯನ್ನು ತೆರಲು ಸಿದ್ಧವಾಗಿದ್ದ ಎಲೀಟ್ ಆಗಿದ್ದರು. ಈಗ ಎಎನ್‌ಡಿಟಿವಿ ಈ ಪರಂಪರೆಯನ್ನು ಮುಂದುವರಿಸುವುದೇ? ಈ ಪ್ರಶ್ನೆಯನ್ನು ಕೇಳಬೇಕೆ?

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...