Homeಮುಖಪುಟನಿರ್ದೇಶಕ ಸ್ಥಾನಕ್ಕೆ ರಾಧಿಕಾ ರಾಯ್, ಪ್ರಣಯ್ ರಾಯ್ ರಾಜೀನಾಮೆ: RIP, ಅನ್‌ಫಾಲೋ NDTV ಎಂದ ಪ್ರಮುಖರು

ನಿರ್ದೇಶಕ ಸ್ಥಾನಕ್ಕೆ ರಾಧಿಕಾ ರಾಯ್, ಪ್ರಣಯ್ ರಾಯ್ ರಾಜೀನಾಮೆ: RIP, ಅನ್‌ಫಾಲೋ NDTV ಎಂದ ಪ್ರಮುಖರು

- Advertisement -
- Advertisement -

NDTV ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ RRPRH ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೆ ಖ್ಯಾತ ಸುಪ್ರೀಂ ಕೋರ್ಟ್ ವಕೀಲರಾದ ಪ್ರಶಾಂತ್ ಭೂಷಣ್ RIP NDTV ಎಂದು ಟ್ವೀಟ್ ಮಾಡಿದರೆ, ಟಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆಟಿಆರ್ Unfollowing NDTV ಎಂದು ಟ್ವೀಟ್ ಮಾಡಿದ್ದಾರೆ.

NDTV ಮಂಡಳಿಯು ರಾಜೀನಾಮೆಗಳನ್ನು ಅಂಗೀಕರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸುದೀಪ್ತ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ ಮತ್ತು ಸೆಂಥಿಲ್ ಚೆಂಗಲ್ವರಾಯನ್ ಅವರನ್ನು RRPRH ಮಂಡಳಿಯ ನಿರ್ದೇಶಕರನ್ನಾಗಿ ನೇಮಿಸಿದೆ.

ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆ ಆರ್‌ಆರ್‌ಪಿಆರ್ ಹೋಲ್ಡಿಂಗ್ (ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್) ಸೋಮವಾರ ತನ್ನ ಈಕ್ವಿಟಿ ಬಂಡವಾಳದ 99.5 ಪ್ರತಿಶತದಷ್ಟು ಷೇರುಗಳನ್ನು ಅದಾನಿ ಸಮೂಹದ ಒಡೆತನದ ವಿಶ್ವಪ್ರಧನ್ ಕಮರ್ಷಿಯಲ್ (ವಿಸಿಪಿಎಲ್) ಗೆ ವರ್ಗಾಯಿಸಿದೆ ಎಂದು ಹೇಳಿದೆ.

ಇದನ್ನೂ ಓದಿ: ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..

ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಪ್ರಸಿದ್ಧ ಪತ್ರಕರ್ತ ದಂಪತಿ. ಎನ್.ಡಿ.ಟಿ.ವಿ ಸುದ್ದಿ ಸಂಸ್ಥೆಯ ಸ್ಥಾಪಕರು. ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಎಂಬುದು 2008ರಲ್ಲಿ ಹುಟ್ಟಿಕೊಂಡ ಕಂಪನಿ. ಹತ್ತು ವರ್ಷಗಳ ಹಿಂದೆ ಈ ಸಂಸ್ಥೆಯಿಂದ 403.85 ಕೋಟಿ ರುಪಾಯಿಗಳ ಸಾಲವನ್ನು ಪಡೆಯಿತು ಎನ್.ಡಿ.ಟಿ.ವಿ. ಈ ಸಾಲ ನೀಡಿಕೆಗೆ ಬೇಕಾದ ಹಣವನ್ನು ಮುಖೇಶ್ ಅಂಬಾನಿಯವರ ರಿಲಯನ್ಸ್‌ನಿಂದ ಪಡೆದಿತ್ತು ವಿಸಿಪಿಎಲ್.

ಸಾಲಕ್ಕೆ ಬದಲಾಗಿ ಎನ್.ಡಿ.ಟಿ.ವಿಯ ಶೇ.29.18ರಷ್ಟು ಪಾಲುದಾರಿಕೆ ಪಡೆಯಬಹುದಾದ ವಾರಂಟ್‌ಗಳನ್ನು ವಿ.ಸಿ.ಪಿ.ಎಲ್‌ಗೆ ನೀಡಲಾಯಿತು. ಈ ವಾರಂಟುಗಳನ್ನು ವಿ.ಸಿ.ಪಿ.ಎಲ್ ತನಗೆ ಬೇಕಾದಾಗ ಪರಿವರ್ತಿಸಿಕೊಳ್ಳಬಹುದಿತ್ತು. ಈ ನಡುವೆ ಅದಾನಿ ಉದ್ಯಮ ಸಮೂಹ ವಿ.ಸಿ.ಪಿ.ಎಲ್‌ನ್ನು ಖರೀದಿಸಿತು. ಹಕ್ಕುಗಳನ್ನು ಚಲಾಯಿಸಿ ವಿ.ಸಿ.ಪಿ.ಎಲ್‌ಗೆ ನೀಡಲಾಗಿದ್ದ ವಾರಂಟುಗಳನ್ನು ಶೇ.29.18ರ ಪಾಲುದಾರಿಕೆಯಾಗಿ ಪರಿವರ್ತಿಸಿಕೊಂಡಿತು. ಎನ್.ಡಿ.ಟಿ.ವಿಯ ಶೇ.50ಕ್ಕಿಂತ ಹೆಚ್ಚು ಷೇರುಗಳನ್ನು ಖರೀದಿಸಿ ಸಂಸ್ಥೆಯ ಪೂರ್ಣ ನಿಯಂತ್ರಣ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ದಂಪತಿಗಳು ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.

ಇನ್ನು ಎನ್‌ಡಿಟಿವಿಯ ಖ್ಯಾತ ಪತ್ರಕರ್ತ, ಹಿಂದಿ ಆವೃತ್ತಿಯ ಸಂಪಾದಕ ರವೀಶ್ ಕುಮಾರ್ ಎನ್‌ಡಿಟಿವಿಯಲ್ಲಿಯೇ ಉಳಿಯುತ್ತಾರ? ಹೊರಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ; ಎನ್.ಡಿ.ಟಿ.ವಿ ಅದಾನಿ ಕೈವಶ; ಮತ್ತೊಂದು ಚಾನೆಲ್ ಮೋದಿ ಪದತಲಕ್ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂದೇಶ್‌ಖಾಲಿ ಘಟನೆಗಳ ಬಗ್ಗೆ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ: ಟಿಎಂಸಿ

0
ಸ್ಥಳೀಯ ಬಿಜೆಪಿ ನಾಯಕಿಯೊಬ್ಬರು ಟಿಎಂಸಿ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಲು ಖಾಲಿ ಪೇಪರ್‌ಗಳ ಮೇಲೆ ಅನೇಕ ಮಹಿಳೆಯರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಹೊಸದಾಗಿ ಹೊರಬಂದ ಹಲವಾರು ವೀಡಿಯೊಗಳ ನಂತರ ತೃಣಮೂಲ...