Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-1)

- Advertisement -
- Advertisement -

ಜನರಲ್ ಎಪಾಂಚಿನ್ ನಗರದ ಲಿಟಾಯ್ನಾಯ ಪ್ರದೇಶದಲ್ಲಿ ತನ್ನದೇ ಆದ ಸ್ವಂತ ಮನೆಯಲ್ಲಿ ವಾಸವಾಗಿದ್ದ. ಐದನೇ ಆರು ಭಾಗದಷ್ಟರ ಜಾಗದಲ್ಲಿ ಫ್ಲಾಟ್‌ಗಳು ಮತ್ತು ಲಾಡ್ಜ್‌ಗಳನ್ನ ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದ. ವಿಶಾಲವಾದ ಈ ಮನೆಯಲ್ಲದೆಯೇ, ಸಡೊವಾಯ ಎಂಬ ಇನ್ನೊಂದು ಪ್ರದೇಶದಲ್ಲಿ ಜನರಲ್ ಇನ್ನೊಂದು ಬೃಹತ್ತಾದ ಮನೆಯ ಮಾಲೀಕನಾಗಿದ್ದ; ಅದರಿಂದ ಮೊದಲನೆಯದಕ್ಕಿಂತಲೂ ಹೆಚ್ಚಿನ ಬಾಡಿಗೆ ಬರುತ್ತಿತ್ತು. ಇದಲ್ಲದೇ ಅವನು ನಗರದಿಂದ ಆಚೆ ಒಂದು ಸೊಗಸಾದ ಸಣ್ಣ ತೋಟವನ್ನೂ ಹೊಂದಿದ್ದ. ಮತ್ತು ನಗರದ ಇನ್ನೊಂದು ಪ್ರದೇಶದಲ್ಲಿ ಯಾವುದೋ ಒಂದು ಬಗೆಯ ಕಾರ್ಖಾನೆಯನ್ನೂ ನಡೆಸುತ್ತಿದ್ದ. ಎಲ್ಲರಿಗೂ ತಿಳಿದಂತೆ ಸರ್ಕಾರೀ ಸ್ವಾಮ್ಯದಲ್ಲಿರುವ ಕೆಲವು ಸಂಸ್ಥೆಗಳ ಜೊತೆ ಎಪಾಂಚಿನ್ ಷೇರುಗಳನ್ನು ಹೊಂದಿದ್ದ; ಅನೇಕ ಬೇರೆಬೇರೆ ರೀತಿಯ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಲ್ಲದೆ ಅವುಗಳ ನಿಯಂತ್ರಣದಲ್ಲಿ ಬಹಳಷ್ಟು ಪ್ರಭಾವವನ್ನೂ ಹೊಂದಿದ್ದ. ನಿಜವಾಗಲೂ ಹೇಳಬೇಕೆಂದರೆ ಅವನೊಬ್ಬ ಶ್ರೀಮಂತ, ಸದಾ ಕಾರ್ಯನಿರತನಾಗಿರುವ, ಸದಭಿರುಚಿಯ ಅಭ್ಯಾಸಗಳನ್ನ ರೂಢಿಸಿಕೊಂಡಿದ್ದ ಮತ್ತು ಪ್ರಭಾವಿ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯೆಂದು ಹೆಸರನ್ನ ಗಳಿಸಿದ್ದ. ಅನೇಕ ವರ್ಗಗಳಲ್ಲಿ ಮತ್ತು ಗುಂಪುಗಳಲ್ಲಿ ತನ್ನ ಅವಶ್ಯಕತೆ ಅನಿವಾರ್ಯ ಅನ್ನಿಸುವಷ್ಟು, ಅದರಲ್ಲೂ ಅವನಿದ್ದ ಸರ್ಕಾರಿ ಇಲಾಖೆಯಲ್ಲಿ ತನ್ನನ್ನು ತಾನೇ ಭದ್ರವಾಗಿ ಸ್ಥಾಪಿಸಿಕೊಂಡಿದ್ದ; ಆದರೂ ಸರ್ವರಿಗೂ ತಿಳಿದ ಸತ್ಯವೇನೆಂದರೆ ಫ್ಯೋದೋರ್ ಇವಾನೊವಿಚ್ ಎಪಾಂಚಿನ್ ಯಾವುದೇ ರೀತಿಯಲ್ಲಿಯೂ ವಿದ್ಯಾವಂತನಲ್ಲದೇ ಇರುವುದು, ಮತ್ತು ಸಂಪೂರ್ಣವಾಗಿ ಕೆಳ ಶ್ರೇಣಿಯಿಂದ ಅಂದರೆ ಒಬ್ಬ ಸಾಮಾನ್ಯ ಸೈನಿಕನ ಮಗನಾಗಿ ಹುಟ್ಟಿ ಉನ್ನತ ಸ್ಥಾನಕ್ಕೆ ಏರಿದವನು ಎಂಬುದು.

ಮತ್ತು ಕಡೆಯಲ್ಲಿ ಹೇಳಿದ ಸತ್ಯಾಂಶ ಖಂಡಿತವಾಗಿ ಜನರಲ್‌ಗೆ ಹೊಗಳಿಕೆ ಮತ್ತು ಶ್ರೇಯಸ್ಸನ್ನೇ ತಂದುಕೊಟ್ಟಿತ್ತು; ಮತ್ತು ಅವನೊಬ್ಬ ಪ್ರಶ್ನಾತೀತ ಚತುರನಾಗಿದ್ದರೂ, ಅವನದೇ ಆದ ಸಣ್ಣಪುಟ್ಟ ಕ್ಷಮಿಸಿಬಿಡುವಂತಹ ದೌರ್ಬಲ್ಯಗಳನ್ನು ಹೊಂದಿರದೇ ಇರಲಿಲ್ಲ. ಅವುಗಳಲ್ಲಿ ಒಂದೆಂದರೆ, ಅವನ ಬಗ್ಗೆ, ಮೇಲೆ ಹೇಳಿದಂತಹ ಸಂದರ್ಭಗಳನ್ನ ಪ್ರಸ್ತಾಪಿಸಿ ಗುಣಗಾನ ಮಾಡುವುದನ್ನ ಇಷ್ಟ ಪಡುತ್ತಿರಲಿಲ್ಲ. ಅನುಮಾನವಿಲ್ಲದೇ ಅವನು ಬಹಳ ಜಾಣನಾಗಿದ್ದ. ಉದಾಹರಣೆಗೆ ಅವನು ತನ್ನ ಅಭಿಪ್ರಾಯವನ್ನ ವ್ಯಕ್ತಪಡಿಸದೇ ಸುಮ್ಮನಿದ್ದರೆ ತನಗೆ ಹೆಚ್ಚುಲಾಭದಾಯಕ ಎನ್ನುವುದು ತಿಳಿದಾಗ ಅವನು ಒಂದು ಮಾತನ್ನೂ ಆಡದೆ ಹಿಂಬದಿಗೆ ಸರಿಯುತ್ತಿದ್ದ. ಅದೇ ಕಾರಣಕ್ಕೆ ಅನೇಕ ಉತ್ತುಂಗಕ್ಕೇರಿದ ವ್ಯಕ್ತಿಗಳು, ಅವನನ್ನ ಮುಖ್ಯವಾಗಿ ಮಹತ್ವಪೂರ್ಣವಾದ ಮನುಷ್ಯ ಎಂದು ಪರಿಗಣಿಸುತ್ತಿದ್ದದ್ದು; ಅದು ಅವನ ವಿನಯ ಮತ್ತು ಸರಳತೆಯ ಕಾರಣಕ್ಕಾಗಿ, ಮತ್ತು ’ಅವನು ತನ್ನ ಸ್ಥಾನವು ಯಾವುದೆಂಬುದನ್ನ ಅರಿತಿದ್ದ’ ಎನ್ನುವ ಕಾರಣಕ್ಕೂ ಕೂಡ. ಮತ್ತು ಆ ಗಣ್ಯರೆಲ್ಲಾ ಈ ’ತನ್ನ ಸ್ಥಾನವನ್ನ ತಾನೇ ಅಷ್ಟೊಂದು ಚೆನ್ನಾಗಿ ಬಲ್ಲವನ’ ಆಂತರ್ಯದೊಳಗಡೆ ಏನು ನಡೆಯುತ್ತಿದೆ ಎನ್ನುವುದನ್ನ ಇಣುಕಿ ನೋಡಲು ಶಕ್ತರಾಗಿದ್ದಿದ್ದರೆ! ನಿಜಾಂಶ ಏನೆಂದರೆ, ಅವನ ಪ್ರಪಂಚ ಜ್ಞಾನ ಮತ್ತು ಗಮನಾರ್ಹವಾದ ನೈಜ ಸಾಮರ್ಥ್ಯಗಳ ಹೊರತಾಗಿಯೂ, ಅವನು ಯಾವಾಗಲೂ ಯಾವುದೂ ತನ್ನ ಸ್ವಂತದ್ದಲ್ಲದೇ ಇದ್ದ ಮತ್ತು ಬೇರೆಯವರ ಕಲ್ಪನೆಗಳನ್ನ ಸಾಕಾರಗೊಳಿಸುತ್ತಿದ್ದೇನೆ ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಿದ್ದ. ಮತ್ತು ಅವನ ಅದೃಷ್ಟವು ಅವನನ್ನೆಂದೂ ಮೋಸಗೊಳಿಸಿರಲಿಲ್ಲ; ಅವನು ಅತೀವವಾಗಿ ಮೋಹಿಸುತ್ತಿದ್ದ ಇಸ್ಪೀಟಿನ ಆಟಗಳಲ್ಲಿಯೂ ಕೂಡ; ಮತ್ತು ಅವನ ಈ ದೌರ್ಬಲ್ಯವನ್ನ ಅವನೆಂದೂ ಮುಚ್ಚಿಡಲು ಪ್ರಯತ್ನಿಸಿರಲಿಲ್ಲ. ಅವನ ಅತ್ಯಂತ ಹೆಚ್ಚು ಹಣವನ್ನ ಈ ಆಟದಲ್ಲಿ ಪಣಕ್ಕಿಡುತ್ತಿದ್ದ, ಮತ್ತು ಒಟ್ಟಾರೆ, ವಿವಿಧ ರೀತಿಯ ಸಮಾಜಗಳಲ್ಲಿನ ಒಡನಾಟವನ್ನ ಏಕಕಾಲದಲ್ಲಿ ಹೊಂದಿದ್ದ.

ಅವನ ವಯಸ್ಸಿನ ಬಗ್ಗೆ ಹೇಳಬೇಕೆಂದರೆ ಈ ವಯಸ್ಸಿನಲ್ಲೇ ಜನರಲ್ ಎಪಾಂಚಿನ್ ಜೀವನದ ಉತ್ತುಂಗ ಮಟ್ಟವನ್ನ ತಲುಪಿದ್ದು; ಅಂದರೆ ಸುಮಾರು ಐವತ್ತೈದು ವರ್ಷ ಅವನ ವಯಸ್ಸು; ಮನುಷ್ಯನ ಅಸ್ತಿತ್ವವು ಅರಳುವಂತಹ ಕಾಲ; ಜೀವನದಲ್ಲಿನ ನಿಜವಾದ ಆನಂದವನ್ನ ಪಡೆಯುವಂತಹ ಕಾಲ. ಅವನ ಆರೋಗ್ಯಕರವಾದ ದೇಹದ ಹೊರನೋಟ, ಅವನ ಒಳ್ಳೆಯ ಮೈಬಣ್ಣ, ಅವನ ಧ್ವನಿ, ಸ್ವಲ್ಪ ಬಣ್ಣ ಕಳೆದುಕೊಂಡ ದಂತಪಂಕ್ತಿ, ದಷ್ಟಪುಷ್ಟವಾದ ದೇಹ, ವ್ಯವಹಾರದ ವೇಳೆಯಲ್ಲಿ ಮಗ್ನತೆಯನ್ನ ಬಿಂಬಿಸುವ ತಲ್ಲೀನತೆ, ಮತ್ತು ಸಂಜೆಯ ವೇಳೆ ಇಸ್ಪೀಟ್ ಆಡುವ ವೇಳೆಯಲ್ಲಿ ಆನಂದದಿಂದ ಕೂಡಿದ ಹಾಸ್ಯಮಯ ಸ್ವಭಾವ, ಇವೆಲ್ಲವೂ ಅವನ ಜೀವನದಲ್ಲಿನ ಯಶಸ್ಸಿಗೆ ಕಾರಣ ಏನೆಂಬುದಕ್ಕೆ ಸಾಕ್ಷಿಗಳಾಗಿ ನಿಂತು, ಅವೆಲ್ಲವೂ ಒಟ್ಟಿಗೆ ತಮ್ಮ ಯಜಮಾನನ ಹಾಸಿಗೆಯನ್ನ ಹೂವಿನ ಹಾಸಾನ್ನಾಗಿಸಿದ್ದವು. ಜನರಲ್ ಒಂದು ಪ್ರವರ್ಧಮಾನಕ್ಕೆ ಬರುತ್ತಿದ್ದ ಕುಟುಂಬದ ಪ್ರಭು, ಮತ್ತು ಆ ಕುಟುಂಬದಲ್ಲಿ ಒಳಗೊಂಡಿರುವ ಸದಸ್ಯರುಗಳೆಂದರೆ ಅವನ ಹೆಂಡತಿ ಮತ್ತು ಮೂರು ಜನ ಬೆಳೆದು ನಿಂತ ಹೆಣ್ಣುಮಕ್ಕಳು. ಅವನು ಚಿಕ್ಕವಯಸ್ಸಿನಲ್ಲಿಯೇ ಮದುವೆಯಾದ; ಅಂದರೆ ಅವನು ಇನ್ನೂ ಸೆಕೆಂಡ್ ಲೆಫ್ಟಿನೆಂಟ್ ಆಗಿದ್ದಾಗಲೇ. ಅವನ ಹೆಂಡತಿ ಅವನಷ್ಟೇ ವಯಸ್ಸಿನ ಹುಡುಗಿಯಾಗಿದ್ದಳು, ಮತ್ತು ಅವಳ ಸೌಂದರ್ಯ ಮತ್ತು ವಿದ್ಯೆಯಲ್ಲಿ ಎದ್ದುಕಾಣುವಂತೇನೂ ಇರಲಿಲ್ಲ. ಅವಳು ವರದಕ್ಷಿಣೆಯಾಗಿ ತಂದ ಆಸ್ತಿ ಎಂದರೆ ಐವತ್ತು ಎಕರೆ ಜಮೀನು. ಮತ್ತು ಆ ಸಣ್ಣ ಆಸ್ತಿಯೇ ಅವನ ಮುಂದಿನ ಅಗಾಧವಾದ ಸಿರಿತನಕ್ಕೆ ನಾಂದಿಯಾಗಿ ಮಾರ್ಪಟ್ಟಿತು. ಜನರಲ್ ತಾನು ಬೇಗನೆ ಮದುವೆಯಾಗಿದ್ದುದರ ಬಗ್ಗೆ ಎಂದೂ ವಿಷಾದ ವ್ಯಕ್ತಪಡಿಸಿರಲಿಲ್ಲ, ಅಥವ ಅದನ್ನು ಯೌವ್ವನದಲ್ಲಿನ ಅವಿವೇಕದ ನಿರ್ಧಾರ ಎಂದು ಕೂಡ ಪರಿಗಣಿಸಿರಲಿಲ್ಲ; ಆದದ್ದರಿಂದಲೇ ಅವನು ತನ್ನ ಹೆಂಡತಿಯನ್ನು ಗೌರವಿಸುತ್ತಿದ್ದ ಮತ್ತು ಅವಳ ಬಗ್ಗೆ ಭಯಪಡುತ್ತಿದ್ದ, ಅದಲ್ಲದೇ ಅವಳನ್ನು ಪ್ರೀತಿಸುವ ಪ್ರಕ್ರಿಯೆಯ ಹತ್ತಿರಹತ್ತಿರದ ಹಂತಕ್ಕೆ ತಲುಪಿದ್ದ. ಜನರಲ್‌ನ ಹೆಂಡತಿ ಮ್ಯೂಶ್ಕಿನ್ ರಾಜಪ್ರಮುಖ ವಂಶದಿಂದ ಬಂದವಳು; ಅದು ಪ್ರತಿಭಾವಂತದ್ದಲ್ಲದಿದ್ದರೂ, ಎಲ್ಲಾ ಸಂದರ್ಭಗಳಿಗೂ ಅನ್ವಯಿಸುವ ನಿರ್ಣಾಯಕವಾದಂತಹ ಪ್ರಾಚೀನವಾದ ಕುಟುಂಬ; ಮತ್ತು ಅವಳು ತನ್ನ ವಂಶಾವಳಿಯ ಬಗ್ಗೆ ಅತಿಯಾಗಿ ಹೆಮ್ಮೆ ಪಡುತ್ತಿದ್ದಳು.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-3)

ಕೆಲವು ಸಂದರ್ಭಗಳನ್ನ ಹೊರತುಪಡಿಸಿ ಈ ಯೋಗ್ಯ ದಂಪತಿಗಳು ಅವರ ದೀರ್ಘವಾದ ಸಂಯೋಗವನ್ನು ಅತ್ಯಂತ ಸಂತೋಷದಿಂದ ಕಳೆದಿದ್ದರು. ಇನ್ನೂ ಚಿಕ್ಕವಯಸ್ಸಿನವಳಾಗಿದ್ದ ಅವನ ಹೆಂಡತಿ ಐಶ್ವರ್ಯವಂತ ಮತ್ತು ಮೇಲ್ವರ್ಗದ ಸ್ನೇಹಬಳಗವನ್ನ ಪಡೆದಿದ್ದಳು; ಭಾಗಶಃ ಅದು ಸಾಧ್ಯವಾದದ್ದು ತನ್ನ ವಂಶಾವಳಿಯ ಶ್ರೇಷ್ಟತೆಯ ಕಾರಣದಿಂದ ಮತ್ತು ಭಾಗಶಃ ಅವಳದೇ ಆದ ಪರಿಶ್ರಮದಿಂದ; ಮತ್ತು ಕಾಲಕ್ರಮಾನುಸಾರ ಅವರ ಐಶ್ವರ್ಯ ಮತ್ತು ಸೈನ್ಯದಲ್ಲಿ ಅವಳ ಗಂಡನ ಶ್ರೇಣಿ ಎತ್ತರೆತ್ತರ ಏರುತ್ತಿದ್ದಂತೆ, ಅವಳು ಉನ್ನತ ವರ್ಗದ ವಲಯಗಳಲ್ಲಿ ತನ್ನ ಸ್ಥಾನವನ್ನ ತನ್ನ ಹಕ್ಕು ಎನ್ನುವ ರೀತಿಯಲ್ಲಿ ಸ್ಥಾಪಿಸಿಕೊಂಡಳು.

ಕಳೆದ ಮೂರುವರ್ಷಗಳ ಸಮಯದಲ್ಲಿ ಜನರಲ್‌ನ ಮೂರು ಜನ ಹೆಣ್ಣುಮಕ್ಕಳು – ಅಲೆಕ್ಸಾಂಡ್ರ, ಅಡಿಲೈಡ, ಮತ್ತು ಅಗ್ಲಾಯ, ಬೆಳೆದು ನಿಂತು ಪರಿಪಕ್ವವಾಗಿದ್ದರು. ಖಂಡಿತವಾಗಿ ಅವರುಗಳು ಎಪಾಂಚಿನ್‌ಗಳು ಮಾತ್ರ, ಆದರೆ ಅವರ ತಾಯಿಯ ಕಡೆಯ ಕುಟುಂಬವೂ ಕೂಡ ಗೌರವಾನ್ವಿತವಾದ ಮತ್ತು ರಾಜಪ್ರಭುತ್ವದ ಕುಟುಂಬವರಾಗಿತ್ತು; ಅವರು ಗಣನೀಯವಾದ ಸಂಪತ್ತನ್ನು ನಿರೀಕ್ಷಿಸಬಹುದಾಗಿತ್ತು; ಮತ್ತು ಅವರುಗಳ ತಂದೆ ಕೂಡ, ದೇಶದ ಸೈನ್ಯದಲ್ಲಿ ಉನ್ನತ ಪದವಿಯನ್ನ ಪಡೆಯುವ ಭರವಸೆಯನ್ನ ಹೊಂದಿದ್ದರು, ಮತ್ತು ಇಲ್ಲಿಯವರೆವಿಗೂ ಎಲ್ಲವೂ ಕೂಡ ತೃಪ್ತಿಕರವಾಗಿಯೇ ನಡೆದು ಬಂದಿತ್ತು. ಎಲ್ಲಾ ಮೂವರೂ ಹುಡುಗಿಯರೂ ಯಾವ ಅನುಮಾನವೂ ಇಲ್ಲದೇ ಮುದ್ದಾಗಿದ್ದರು; ಅವರಲ್ಲಿ ದೊಡ್ದವಳಾದ ಅಲೆಕ್ಸಾಂಡ್ರ ಕೂಡ. ಈಗ ಅವಳು ಬರೀ ಇಪ್ಪತ್ತೈದು ವರ್ಷ ವಯಸ್ಸಿನ ಯುವತಿ. ಮಧ್ಯದ ಹುಡುಗಿಗೆ ಈಗ ಇಪ್ಪತ್ತ ಮೂರು ವರ್ಷ ವಯಸ್ಸು, ಮತ್ತು ಎಲ್ಲರಿಗಿಂತಲೂ ಚಿಕ್ಕವಳಿಗೆ ಇಪ್ಪತ್ತು ವರ್ಷ ವಯಸ್ಸು. ಈ ಅತ್ಯಂತ ಚಿಕ್ಕವಳಾದ ಹುಡುಗಿ ಪರಿಪೂರ್ಣವಾದ ಸುರ ಸುಂದರಿ, ಮತ್ತು ಸಮಾಜದಲ್ಲಿ ಸಾಕಷ್ಟು ಎಲ್ಲರ ಗಮನವನ್ನೂ ಸೆಳೆದಿದ್ದಳು. ಇಷ್ಟೇ ಅಂತಲ್ಲ, ಮೂರು ಜನರಲ್ಲಿನ ಪ್ರತಿಯೊಬ್ಬರೂ ಕೂಡ ಚತುರೆಯರು, ವಿದ್ಯಾವಂತರು ಮತ್ತು ಸಾಕಷ್ಟು ಯಶಸ್ಸನ್ನ ಗಳಿಸಿದ್ದರು.

ಎಲ್ಲರಿಗೂ ತಿಳಿದಂತಹ ವಿಷಯವೇನೆಂದರೆ ಮೂರೂ ಹುಡುಗಿಯರು ಪರಸ್ಪರವಾಗಿ ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು ಮತ್ತು ಎಲ್ಲಾ ರೀತಿಯಲ್ಲಿಯೂ ಒಬ್ಬರನ್ನೊಬ್ಬರು ಬೆಂಬಲಿಸುತ್ತಿದ್ದರು; ಎಲ್ಲರೂ ಮಾತನಾಡಿಕೊಳ್ಳುತ್ತಿದ್ದ ವಿಷ್ಲಯವೇನೆಂದರೆ, ಇಬ್ಬರೂ ದೊಡ್ಡ ಹುಡುಗಿಯರು ಚಿಕ್ಕವಳಿಗೋಸ್ಕರ ಅಂದರೆ ಕುಟುಂಬದಲ್ಲಿನ ಎಲ್ಲರಿಗೂ ಅಚ್ಚುಮೆಚ್ಚಿನವಳಾದ ಅಗ್ಲಾಯಳಿಗೋಸ್ಕರ ಅನೇಕ ರೀತಿಯಲ್ಲಿ ತ್ಯಾಗಮಾಡಲೂ ಸಿದ್ಧರಿರುತ್ತಾರೆ ಎಂದು. ಸಮಾಜದಲ್ಲಿನ ವಲಯಗಳಲ್ಲಿ ಅವರುಗಳು ತೋರಿಸಿಕೊಳ್ಳುವುದಕ್ಕೆ ಅಥವಾ ಅನಗತ್ಯವಾಗಿ ಮುನ್ನುಗ್ಗುವುದನ್ನ ಇಷ್ಟಪಡುತ್ತಿರಲಿಲ್ಲ; ತಟಸ್ಥ ಮನೋಭಾವದಿಂದ ಇರುತ್ತಿದ್ದರು. ಖಂಡಿತವಾಗಿಯೂ ಯಾರಿಗೂ ಕೂಡ ಅವರನ್ನು ಅಹಂಕಾರಿಗಳು ಅಥವ ಸೊಕ್ಕಿನಿಂದ ಕೂಡಿದವರು ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ, ಮತ್ತು ಎಲ್ಲರಿಗೂ ತಿಳಿದಿದ್ದ ಸಂಗತಿ ಏನೆಂದರೆ ಅವರು ತಮ್ಮ ಬಗ್ಗೆ ಹೆಮ್ಮೆಯಿಂದ ಇರುತ್ತಿದ್ದರು ಮತ್ತು ತಮ್ಮ ಕಿಮ್ಮತ್ತೆಷ್ಟು ಅನ್ನುವುದನ್ನೂ ಅರ್ಥಮಾಡಿಕೊಂಡಿದ್ದರು. ದೊಡ್ಡವಳಿಗೆ ಸಂಗೀತದ ಬಗ್ಗೆ ಆಸಕ್ತಿ ಇತ್ತು ಮತ್ತು ಎರಡನೆಯವಳು ಚಿತ್ರಕಲೆಯಲ್ಲಿ ನಿಪುಣೆ ಮತ್ತು ಅವಳು ತನ್ನ ಕೌಶಲ್ಯವನ್ನ ಬಹಳ ಕಾಲದವರೆಗೂ ಹೊರಗೆಡವಿರಲಿಲ್ಲ. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಜಗತ್ತು ಈ ಹುಡುಗಿಯರ ಬಗ್ಗೆ ಒಳ್ಳೆಯ ಮಾತುಗಳನ್ನ ಆಡುತ್ತಿತ್ತು; ಆದರೆ ಅವರಿಗೆ ವೈರಿಗಳು ಇರಲಿಲ್ಲವೆಂದಲ್ಲ, ಒಮ್ಮೊಮ್ಮೆ ಜನ ಅವರು ಓದಿದ್ದ ಪುಸ್ತಕಗಳ ಸಂಖ್ಯೆಯ ಬಗ್ಗೆ ಭಯಾನಕವಾದ ಮಾತುಗಳನ್ನ ಆಡುತ್ತಿದ್ದರು.

ಅವರುಗಳು ಮದುವೆಯ ಬಗ್ಗೆ ಯಾವುದೇ ರೀತಿಯ ಆತುರದಿಂದ ಇರಲಿಲ್ಲ. ಅವರು ಒಳ್ಳೆಯ ಸಮಾಜವನ್ನ ಇಷ್ಟ ಪಡುತ್ತಿದ್ದರು, ಆದರೆ ಅದರ ಬಗ್ಗೆ ಅನಪೇಕ್ಷಿತವಾದ ಉತ್ಸುಕತೆಯನ್ನ ತೋರಿಸುತ್ತಿರಲಿಲ್ಲ. ಇದೆಲ್ಲವೂ ಬಹಳವಾಗಿ ಗಮನಾರ್ಹವಾದದ್ದಾಗಿತ್ತು, ಕಾರಣ ಎಲ್ಲರೂ ಆ ಹುಡುಗಿಯರ ಪೋಷಕರ ಗುರಿ ಮತ್ತು ಆಕಾಂಕ್ಷೆಗಳನ್ನ ಅರಿತಿದ್ದರು.

(ಕನ್ನಡಕ್ಕೆ): ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....