Homeಕ್ರೀಡೆಕ್ರಿಕೆಟ್ಮತ್ತೆ ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದಕ್ಕೆ ಅಭಿಮಾನಿಗಳ ಆಕ್ರೋಶ: ಸಂಸದ ಶಶಿ ತರೂರ್ ಸಾಥ್

ಮತ್ತೆ ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದಕ್ಕೆ ಅಭಿಮಾನಿಗಳ ಆಕ್ರೋಶ: ಸಂಸದ ಶಶಿ ತರೂರ್ ಸಾಥ್

- Advertisement -
- Advertisement -

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಭಾರತ- ನ್ಯೂಜಿಲೆಂಡ್ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ರನ್ನು ಕೈಬಿಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇಂದು ನಡೆಯುತ್ತಿರುವ 3ನೇ ಏಕದಿನ ಪಂದ್ಯದಿಂದಲೂ ಸಹ ಮತ್ತೆ ಅವರನ್ನು ಕೈಬಿಟ್ಟಿರುವುದಕ್ಕೆ ಅಭಿಮಾನಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. #JusticeForSanjuSamson ಹ್ಯಾಸ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್‌ ಸಹ ದನಿಗೂಡಿಸಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯಕ್ಕೆ ಮಾತ್ರ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿದೆ ಎಂದು ಆಕ್ರೋಶ ಕೇಳಿಬಂದಿದೆ.

ಮೊದಲೇ ಏಕದಿನ ಪಂದ್ಯದಲ್ಲಿ 306 ರನ್‌ಗಳ ಉತ್ತಮ ಮೊತ್ತ ಗಳಿಸಿಯೂ ಭಾರತ ತಂಡ ಸೋಲು ಅನುಭವಿಸಿತ್ತು. ಆ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ 33 ರನ್ ಗಳಿಸಿದ್ದರು. ಆದರೂ ಆಲ್‌ರೌಂಡರ್ ಬೇಕೆಂಬ ಕಾರಣಕ್ಕೆ 2ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಕೋಕ್ ನೀಡಿ ದೀಪಕ್ ಹೂಡಾರನ್ನು ಆಡಿಸಲಾಗಿತ್ತು. ಮಳೆಯಿಂದ ಆ ಪಂದ್ಯ ರದ್ದಾಯಿತು. ಇಂದು ನಡೆದ ಮೂರನೇ ಪಂದ್ಯದಲ್ಲಿಯೂ ಸಹ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಿಲ್ಲ. ಸಂಜು ಸ್ಯಾಮ್ಸನ್ ಬದಲಿಗೆ ಕಳಪೆ ಫಾರ್ಮ್‌ನಲ್ಲಿರುವ ರಿಷಬ್ ಪಂತ್ ಕೈಬಿಡಬಹುದಿತ್ತಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂತ್ ವರ್ಸಸ್ ಸ್ಯಾಮ್ಸನ್

ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಹೋಲಿಕೆ ಆರಂಭಿಸಿದ್ದಾರೆ. 2015ರಲ್ಲಿಯೇ ಪಂತ್‌ಗಿಂತಲೂ ಮೊದಲೇ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಂಜು ಸ್ಯಾಮ್ಸನ್‌ಗೆ ಈ ಏಳು ವರ್ಷಗಳಲ್ಲಿ ಕೇವಲ 27 ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಆನಂತರ ಬಂದ ರಿಷಬ್‌ ಪಂತ್‌ಗೆ 95 ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ಅವಕಾಶ ನೀಡಿದ್ದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್‌ರವರ ಸರಾಸರಿ 6 ಇದ್ದರೆ ರಿಷಬ್ ಪಂತ್ ಸರಾಸರಿ ಕೇವಲ 35 ಇದೆ. ಆದರೂ ರಿಷಬ್ ಪಂತ್‌ಗೆ ಏಕೆ ಅವಕಾಶ? ನ್ಯೂಜಿಲೆಂಡ್ ವಿರುದ್ಧದ ಎರಡು ಇನ್ನಿಂಗ್ಸ್‌ಗಳಲ್ಲಿ ಪಂತ್ ಕ್ರಮವಾಗಿ  ಕೇವಲ 15, 10 ರನ್ ಗಳಿಸಿದ್ದಾರೆ ಅಷ್ಟೇ. ಆದರೂ ಅವರಿಗೆ ಅವಕಾಶವೇಕೆ ಎಂಬ ಪ್ರಶ್ನೆ ಕೇಳಿಬಂದಿದೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಶಶಿ ತರೂರ್, “ಪಂತ್ ನಂ.4ರಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ, ಆದ್ದರಿಂದ ಅವರನ್ನು ಬೆಂಬಲಿಸುವುದು ಮುಖ್ಯವಾಗಿದೆ ಎನ್ನುತ್ತಾರೆ ವಿವಿಎಸ್ ಲಕ್ಷ್ಮಣ್. ಪಂತ್ ತಮ್ಮ ಕೊನೆಯ 11 ಇನ್ನಿಂಗ್ಸ್‌ಗಳಲ್ಲಿ ಹತ್ತರಲ್ಲಿ ವಿಫಲರಾಗಿ ಔಟ್‌ ಆಫ್ ಫಾರ್ಮ್ ಇರುವ ಉತ್ತಮ ಆಟಗಾರರಾಗಿದ್ದಾರೆ; ODI ಗಳಲ್ಲಿ ಸ್ಯಾಮ್ಸನ್ ಸರಾಸರಿ 66, ಅವರು ತನ್ನ ಕೊನೆಯ ಐದು ಪಂದ್ಯಗಳಲ್ಲಿ ರನ್ ಗಳಿಸಿದ್ದಾರೆ. ಆದರೂ ಬೆಂಚ್‌ನಲ್ಲಿದ್ದಾರೆ. ಹೋಗಿ ಹುಡುಕಿಕೊಳ್ಳಿ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇಂದು ಪಂರತ್ ಕೇವಲ 10 ರನ್‌ಗಳಿಗೆ ಔಟ್‌ ಆದ ನಂತರ ಮತ್ತೊಂದು ಟ್ವೀಟ್ ಮಾಡಿರುವ ತರೂರ್, “ಪಂತ್ ಮತ್ತೊಮ್ಮೆ ವಿಫಲವಾಗಿದ್ದಾರೆ. ಅವರಿಗೆ ವೈಟ್ ಬಾಲ್ ಕ್ರಿಕೆಟ್‌ನಿಂದ ವಿರಾಮ ಬೇಕಿದೆ. ಆದರೆ ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನಿರಾಕರಿಸಲಾಗಿದೆ. ಅವರು ಭಾರತದ ಉತ್ತಮ ಬ್ಯಾಟ್ಸ್‌ಮನ್ ಎಂದು ನಿರೂಪಿಸಲು ಮತ್ತೆ ಐಪಿಎಲ್‌ ಬರುವವರೆಗೂ ಕಾಯಬೇಕಿದೆ” ಎಂದು ಕಿಡಿಕಾರಿದ್ದಾರೆ.

ಇನ್ನು ಸ್ಯಾಮ್ಸನ್ ಸ್ಥಾನಕ್ಕೆ ಬಂದಿದ್ದ ದೀಪಕ್ ಹೂಡಾ ಸಹ ಇಂದು ವಿಫಲರಾಗಿದ್ದಾರೆ. ಅವರು ಕೇವಲ 12 ರನ್‌ಗಳಿಗೆ ಔಟ್ ಆಗಿದ್ದಾರೆ.

ಫಿಫಾ ವರ್ಲ್ಡ್‌ಕಪ್ ಪುಟ್ಬಾಲ್ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್‌ ಪರವಾಗಿ ಅಭಿಮಾನಿಗಳು ಪ್ರಚಾರ ನಡೆಸಿದ್ದರು.

ಇದನ್ನೂ ಓದಿ: 2024ರ ಟಿ20 ವಿಶ್ವಕಪ್‌ಗೆ 20 ತಂಡಗಳು!: ಹೊಸ ಫಾರ್ಮ್ಯಾಟ್ ಘೋಷಿಸಿದ ಐಸಿಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...