Homeಕ್ರೀಡೆಕ್ರಿಕೆಟ್2024ರ ಟಿ20 ವಿಶ್ವಕಪ್‌ಗೆ 20 ತಂಡಗಳು!: ಹೊಸ ಫಾರ್ಮ್ಯಾಟ್ ಘೋಷಿಸಿದ ಐಸಿಸಿ

2024ರ ಟಿ20 ವಿಶ್ವಕಪ್‌ಗೆ 20 ತಂಡಗಳು!: ಹೊಸ ಫಾರ್ಮ್ಯಾಟ್ ಘೋಷಿಸಿದ ಐಸಿಸಿ

- Advertisement -
- Advertisement -

2022ರ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯು ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಯಿತು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ಟಿ20 ಚಾಂಪಿಯನ್ ಎನಿಸಿತು. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದರೂ ಸೆಮಿಫೈನಲ್‌ನಲ್ಲಿ ಎಡವಿದ ಭಾರತ ತಂಡ ಕಪ್ ಬರ ನೀಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತ ತಂಡ ಮುಂದಿನ ಟಿ20 ವಿಶ್ವಕಪ್ ನತ್ತ ದೃಷ್ಟಿ ಹಾಯಿಸಿದೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಮುಂಬರುವ 2024ರ ಆವೃತ್ತಿಯಲ್ಲಿ 12 ತಂಡಗಳ ಬದಲಿಗೆ 20 ತಂಡಗಳಿಗೆ ಅವಕಾಶ ನೀಡಲು ಮತ್ತು ಟೂರ್ನಿಯ ಫಾರ್ಮ್ಯಾಟ್‌ನಲ್ಲಿ ಬದಲಾವಣೆ ತರಲು ಐಸಿಸಿ ನಿರ್ಧರಿಸಿದೆ. ಸದ್ಯಕ್ಕೆ ಲೀಗ್ ಹಂತದಲ್ಲಿ ತಲಾ ಆರು ತಂಡಗಳಿರುವ ಎರಡು ಗುಂಪುಗಳ ಅಗ್ರ ಮೊದಲ ಮತ್ತು ದ್ವೀತಿಯ ಸ್ಥಾನ ಪಡೆದ ನಾಲ್ಕು ತಂಡಗಳನ್ನು ಸೆಮಿಫೈನಲ್‌ಗೆ ಕಳಿಸಲಾಗುತ್ತಿತ್ತು. ಆದರೆ ಹಲವು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಐಸಿಸಿ ಹೊಸ ಫಾರ್ಮ್ಯಾಟ್‌ ಘೋಷಿಸಿದೆ.

ಈಗಾಗಲೇ ಅರ್ಹತೆ ಪಡೆದ ತಂಡಗಳು

ಮುಂದಿನ ಟಿ20 ವಿಶ್ವಕಪ್‌ನಲ್ಲಿ ಸೆಣಸಲಿರುವ 20 ತಂಡಗಳ ಪೈಕಿ 12 ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿವೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನೆದರ್ಲೆಂಡ್ಸ್, ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು 2022ರ ಟೂರ್ನಿಯ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಆಧಾರದ ಮೇಲೆ ಅರ್ಹತೆ ಪಡೆದಿವೆ. ಆತಿಥ್ಯ ವಹಿಸುವ ಕಾರಣಕಕಾಗಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ತಂಡಗಳು ಅರ್ಹತೆ ಪಡೆದರೆ, ಐಸಿಸಿಯ ಉತ್ತಮ ರ್ಯಾಂಕಿಂಗ್ ಆಧಾರದಲ್ಲಿ ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸಹ ಅರ್ಹತೆ ಗಿಟ್ಟಿಸಿವೆ.

ಅರ್ಹತೆ ಪಡೆಯಬೇಕಿರುವ ತಂಡಗಳು

ಉಳಿದ 8 ತಂಡಗಳನ್ನು ಪ್ರಾದೇಶಿಕ ಕ್ವಾಲಿಫೈಯರ್ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ. ಏಷ್ಯಾ, ಆಫ್ರಿಕಾ ಮತ್ತು ಯೂರೋಪ್ ಖಂಡದಿಂದ ತಲಾ ಎರಡು ದೇಶಗಳು ಅರ್ಹತೆ ಪಡೆದರೆ ಅಮೆರಿಕ ಮತ್ತು ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಿಂದ ತಲಾ ಒಂದು ತಂಡವು ಅರ್ಹತೆ ಪಡೆಯಲಿದೆ.

ಟೂರ್ನಿಯ ವಿಧಾನ (ಫಾರ್ಮ್ಯಾಟ್)

ಮುಂದಿನ ಟಿ20 ವಿಶ್ವಕಪ್‌ ಟೂರ್ನಿಯ ಲೀಗ್ ಹಂತದಲ್ಲಿ ತಲಾ 5 ತಂಡಗಳಿರುವ ನಾಲ್ಕು ಗುಂಪುಗಳನ್ನಾಗಿ ಮಾಡಲಾಗುತ್ತದೆ. ಇಲ್ಲಿ ಸಿಂಗಲ್ ರೌಂಡ್ ರಾಬಿನ್ ಮಾದರಿಯಲ್ಲಿ ಪ್ರತಿ ತಂಡವು ತಮ್ಮ ಗುಂಪಿನ ಇತರ ನಾಲ್ಕು ತಂಡಗಳ ಎದುರು ಸೆಣಸಬೇಕಿರುತ್ತದೆ. ಆನಂತರ ಪ್ರತಿ ಗುಂಪಿನಲ್ಲಿ ಮೊದಲ ಮತ್ತು ದ್ವಿತೀಯ ಸ್ಥಾನ ಪಡೆದ 8  ತಂಡಗಳು (ಪ್ರತಿ ಗುಂಪಿನಿಂದ 2) ಸೂಪರ್ 8 ಹಂತಕ್ಕೆ ಅರ್ಹತೆ ಪಡೆದರೆ ಉಳಿದ ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಸೂಪರ್ 8 ಹಂತ

ಈ ಹಂತದಲ್ಲಿ 8 ತಂಡಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿಯೂ ಸಿಂಗಲ್ ರೌಂಡ್ ರಾಬಿನ್ ಮಾದರಿಯಲ್ಲಿ ಪ್ರತಿ ತಂಡಗಳು ತಮ್ಮ ಎದುರಾಳಿ ತಂಡಗಳ ವಿರುದ್ದ ತಲಾ 3 ಪಂದ್ಯಗಳನ್ನು ಆಡುತ್ತವೆ. ಇಲ್ಲಿ ಪ್ರತಿ ಗುಂಪಿನಲ್ಲಿ ಮೊದಲ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸುತ್ತವೆ.

2021ರ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ 5 ಪಂದ್ಯಗಳಲ್ಲಿ ನಾಲ್ಕು ಗೆದ್ದರೂ ಸಹ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಇನ್ನು 5ಕ್ಕೆ5 ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ ತಂಡ ಸೆಮಿಫೈನಲ್‌ನಲ್ಲಿ ಸೋಲಿನೊಂದಿಗೆ ನಿರ್ಗಮಿಸಿತ್ತು. 2022ರ ಟೂರ್ನಿಯಲ್ಲಿಯೂ ಸಹ ಲೀಗ್ ಹಂತದಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದರೂ ಸಹ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿತ್ತು. ಹಾಗಾಗಿ ವಿಶ್ವಕಪ್ ಫಾರ್ಮ್ಯಾಟ್ ಬಗ್ಗೆ ದೂರುಗಳು ಕೇಳಿಬಂದಿದ್ದವು. ಹಾಗಾಗಿ ಐಸಿಸಿ ಹೊಸ ಫಾರ್ಮ್ಯಾಟ್‌ಗೆ ಬದಲಾವಣೆ ಮಾಡಿಕೊಂಡಿದೆ.

ಇದನ್ನೂ ಓದಿ:  ಲೈವ್ ಪ್ರಸಾರದಲ್ಲೆ ‘ಝೀನ್ಯೂಸ್’ ಅನ್ನು ‘ಕೆಟ್ಟ ಚಾನಲ್’ ಎಂದು ಕರೆದ ಭಾರತೀಯ ಕ್ರಿಕೆಟ್ ಅಭಿಮಾನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...