Homeಕ್ರೀಡೆಕ್ರಿಕೆಟ್ಇಂಗ್ಲೆಂಡ್ - ಪಾಕ್ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು: ಮಳೆ ಬಂದರೆ ಇರುವ ಆಯ್ಕೆಗಳೇನು?

ಇಂಗ್ಲೆಂಡ್ – ಪಾಕ್ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು: ಮಳೆ ಬಂದರೆ ಇರುವ ಆಯ್ಕೆಗಳೇನು?

- Advertisement -
- Advertisement -

ಇಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ 2022ರ ಫೈನಲ್ ಪಂದ್ಯ ಇಂಗ್ಲೆಂಡ್ ಮತ್ತು ಪಾಕ್ ನಡುವೆ ನಡೆಯಬೇಕಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಶೇ.90 ರಷ್ಟು ಸಾಧ್ಯತೆ ಜೋರು ಮಳೆ ಬೀಳಲಿದೆ ಎನ್ನಲಾಗಿದೆ. ಹಾಗಾಗಿ ಮಳೆ ನಡುವೆ ನಿಗಧಿತ 40 ಓವರ್‌ಗಳನ್ನು ಮುಗಿಸಲು ಸಾಧ್ಯವೇ? ಹೆಚ್ಚು ಮಳೆ ಬಂದು ಪಂದ್ಯಕ್ಕೆ ಅಡ್ಡಿಯಾದರೆ ಏನು ಮಾಡುವುದು ಎಂಬುದು ಎಲ್ಲರನ್ನು ಯೋಚಿಸುಂತೆ ಮಾಡಿದೆ. ಪಂದ್ಯ ಆರಂಭವಾಗುವ ಸಮಯಕ್ಕೆ (1.30) ಮತ್ತು ಆನಂತರ ಒಂದೊಂದು ಗಂಟೆ ಬಿಟ್ಟು (2.30, 3.30ಕ್ಕೆ) ಮಳೆ ಸುರಿಯಲಿದೆ ಎನ್ನಲಾಗಿದೆ.

ಒಂದು ಹೆಚ್ಚು ಮಳೆ ಬಂದು ಪಂದ್ಯ ನಡೆಯಲು ಸಾಧ್ಯವಾಗದಿದ್ದರೆ ಮೀಸಲು ದಿನವಾದ ನಾಳೆ ಸೋಮವಾರಕ್ಕೆ ಪಂದ್ಯ ಮುಂದೂಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ. ಆದರೆ ನಾಳೆಯೂ ಮಳೆ ಬಂದರೆ ಏನು ಮಾಡುವುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕಾಗಿ ಐಸಿಸಿ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ತಂದಿದೆ.

ಮಳೆ ಕಾರಣದಿಂದ ಸೋಮವಾರದ ಪಂದ್ಯಕ್ಕಾಗಿ ಈ ಮೊದಲು ನೀಡಲಾಗಿದ್ದ ಎರಡು ಗಂಟೆಗಳ ಹೆಚ್ಚುವರಿ ಸಮಯವನ್ನು ನಾಲ್ಕು ಗಂಟೆಗಳಿಗೆ ಐಸಿಸಿ ಹೆಚ್ಚಿಸಿದೆ. ಹಾಗಾಗಿ ಮಳೆಯಿಂದ ನಾಲ್ಕು ಗಂಟೆಯಷ್ಟು ಆಟ ಸಾಧ್ಯವಾಗದಿದ್ದರೂ ಹೆಚ್ಚುವರಿ ಸಮಯ ಬಳಸಿ ಫೈನಲ್ ಫಲಿತಾಂಶ ಪಡೆಯಬೇಕೆಂದು ನಿರ್ಧಿರಿಸಿದೆ.

ನಾಕೌಟ್ ಹಂತದಲ್ಲಿ ಮಳೆ ಬಂದಾಗ ಪ್ರತಿ ತಂಡಕ್ಕೆ ಕನಿಷ್ಟ 10 ಓವರ್‌ಗಳು ಸಿಗುವಂತೆ ರೂಪಿಸಲಾಗಿತ್ತು. ಆನಂತರ ಮಳೆ ಹೆಚ್ಚಾದಲ್ಲಿ ಓವರ್‌ಗಳನ್ನು ಕಡಿತಗೊಳಿಸಲಾಗುತ್ತಿತ್ತು. ಆದರೆ ಇಂದು ನಡೆಯುವ ಫೈನಲ್ ಪಂದ್ಯದಲ್ಲಿಯೂ ಎರಡು ತಂಡಗಳು ಕನಿಷ್ಟ 10 ಓವರ್ ಆಡಲೇಬೇಕಿದೆ. ಅಲ್ಲದೆ ಇಂದು 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗಿದೆ. ಆದರೂ ಕನಿಷ್ಠ 10 ಓವರ್‌ಗಳ ಆಟ ನಡೆಯಲು ಸಾಧ್ಯವಾಗದಿದ್ದರೆ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗುತ್ತದೆ ಮತ್ತು ಅಂದು ಭಾರತೀಯ ಕಾಲಮಾನ ಬೆಳಿಗ್ಗೆ 9.30ರಿಂದಲೇ ಪಂದ್ಯ ಎಲ್ಲಿಗೆ ನಿಂತಿತ್ತು ಅಲ್ಲಿಂದ ಮುಂದುವರೆಸಲಾಗುತ್ತದೆ. ಒಂದು ವೇಳೆ ಭಾನುವಾರ ಪಂದ್ಯ ಆರಂಭವಾಗದಿದ್ದರೆ ಸೋಮವಾರ ಹೊಸದಾಗಿ ಆರಂಭಿಸಲಾಗುವುದು. ಅಂದು ಕೂಡ ಮಳೆ ಬಂದರೆ ಕೊನೆಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಅಲ್ಲದೆ ಪಂದ್ಯ ನಡೆದು ಎರಡೂ ತಂಡಗಳು ಸಮವಾಗಿ ರನ್ ಗಳಿಸಿ ಪಂದ್ಯ ಟೈ ಆದರೆ ಆಗ ಸೂಪರ್ ಓವರ್ ಆಡಿಸಲಾಗುತ್ತದೆ.

ಇದನ್ನೂ ಓದಿ; ಟಿ20 ವಿಶ್ವಕಪ್: ಭಾರತದ ಸೋಲಿಗೆ 3 ಕಾರಣಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಆಡಳಿತದ 10 ವರ್ಷಗಳಲ್ಲಿ ‘ED’ ದಾಳಿಗಳಲ್ಲಿ ಹೆಚ್ಚಳ: ವರದಿ

0
ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ 'ಇಡಿ' ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ...