Homeಮುಖಪುಟಜೆಪಿ ನಡ್ಡಾ v/s ಅನುರಾಗ್ ಠಾಕೂರ್: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೊಳಗೆ ಭಿನ್ನಮತ

ಜೆಪಿ ನಡ್ಡಾ v/s ಅನುರಾಗ್ ಠಾಕೂರ್: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೊಳಗೆ ಭಿನ್ನಮತ

ಹಿಮಾಚಲಪ್ರದೇಶ ವಿಧಾನಸಭೆಗೆ ಶನಿವಾರ ಮತದಾನ ನಡೆದಿದೆ. ಬಿಜೆಪಿಯೊಳಗಿನ ಭಿನ್ನಮತ ಫಲಿತಾಂಶದ ಮೇಲೆ ಪ್ರಭಾವಿಸಲಿದೆಯೇ?

- Advertisement -
- Advertisement -

ಹಿಮಾಚಲ ಪ್ರದೇಶದ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಕಾರ್ಯಕರ್ತರು, ಮುಖಂಡರು, ಸಹಾನುಭೂತಿ ಹೊಂದಿರುವವರಿಗೆ ಇದು ಗೊತ್ತಿದ್ದರೂ ಬಹಿರಂಗವಾಗಿ ಮಾತನಾಡುವುದಿಲ್ಲ. ಕ್ಯಾಮೆರಾ ಮುಂದೆ ಬಿಜೆಪಿ ಒಗ್ಗಟ್ಟು ಪ್ರದರ್ಶಿಸುತ್ತದೆ. ಆದರೆ ಈಗ ಕೇಂದ್ರ ನಾಯಕತ್ವದಲ್ಲಿ ಗುರುತಿಸಿಕೊಂಡಿರುವ ಗುಡ್ಡಗಾಡು ರಾಜ್ಯದ ಇಬ್ಬರು ನಾಯಕರ ನಡುವೆ ಸಂಬಂಧ ಸರಿ ಇಲ್ಲ ಎಂದು ಇತ್ತೀಚೆಗೆ ‘ನ್ಯೂಸ್ ಲಾಂಡ್ರಿ’ ವರದಿ ಮಾಡಿದೆ.

ಹಿಮಾಚಲಪ್ರದೇಶ ವಿಧಾನಸಭೆಗೆ ಶನಿವಾರ ಮತದಾನ ನಡೆದಿದೆ. ಶೇ.65.20ರಷ್ಟು ಮತದಾನವಾಗಿದೆ. ಆದರೆ ಬಿಜೆಪಿಯು ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ ಚುನಾವಣೆಯನ್ನು ಎದುರಿಸಿದೆ ಎಂಬುದು ರಾಜಕೀಯ ಪಡೆಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಆಗಸ್ಟ್‌ನಲ್ಲಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿಯಾದಾಗ ಭಿನ್ನಾಭಿಪ್ರಾಯ ಸ್ಪಷ್ಟವಾಗಿ ಕಂಡುಬಂತು. ಎಎನ್‌ಐ ವರದಿ ಪ್ರಕಾರ, ಅನುರಾಗ್ ಅವರು ಹಿಮಾಚಲ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರೊಂದಿಗೆ ನಡ್ಡಾ ಅವರನ್ನು ಭೇಟಿಯಾಗಿದ್ದರು.

ಆದರೆ ಈ ಸಭೆಗೆ ಸಂಬಂಧಿಸಿದಂತೆ ಎಎನ್‌ಐ ಪ್ರಕಟಿಸಿದ ವೀಡಿಯೊ ತುಣುಕಿನಲ್ಲಿ ಅನುರಾಗ್ ಮತ್ತು ನಡ್ಡಾ ಮೀಟರ್‌ಗಳ ಅಂತರದಲ್ಲಿ ನಿಂತಿರುವುದು ಕಂಡು ಬಂತು. ಯಾವುದೇ ಸಂವಹನವನ್ನೂ ನಡೆಸಲಿಲ್ಲ. ಜೈರಾಮ್ ಠಾಕೂರ್ ಅವರು ನಡ್ಡಾ ಅವರಿಗೆ ಪುಷ್ಪಗುಚ್ಛ, ಸಾಂಪ್ರದಾಯಿಕ ಹಿಮಾಚಲಿ ಕ್ಯಾಪ್ ಮತ್ತು ಶಾಲು ನೀಡಿದರು. ಇಬ್ಬರೂ ಅಪ್ಪುಗೆ ಹಾಗೂ ಹಸ್ತಲಾಘವ ಮಾಡಿದರು. ಆದರೆ ನಡ್ಡಾ ಅವರು ನಗುತ್ತಾ ಪಕ್ಕದಲ್ಲಿ ನಿಂತಿರುವ ಅನುರಾಗ್ ಕಡೆಗೆ ನೋಡಲೇ ಇಲ್ಲ.

ನವೆಂಬರ್ 12ರಂದು 68 ಕ್ಷೇತ್ರಗಳಿಗೆ ಮತದಾನವಾಗಿದೆ. ಆದರೆ ರಾಜ್ಯದ ಸುಮಾರು ಮೂರನೇ ಒಂದು ಭಾಗದಷ್ಟು ಸ್ಥಳೀಯ ಬಿಜೆಪಿ ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಚುನಾವಣಾ ಪೂರ್ವದಲ್ಲಿ ಪ್ರಕಟವಾಗಿರುವ ‘ನ್ಯೂಸ್‌ಲಾಂಡ್ರಿ ವರದಿ ’ಉಲ್ಲೇಖಿಸಿದೆ. ಅವರಲ್ಲಿ ಕೆಲವರು ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದಾರೆ. ಅಂಥವರಲ್ಲಿ ಆರು ಮಂದಿಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಈ ಕುರಿತು ವಿಸ್ತೃತವಾಗಿ ವರದಿ ಮಾಡಿರುವ ನ್ಯೂಸ್‌ಲಾಂಡ್ರಿ, “ಸ್ಥಳೀಯ ಬಂಡಾಯವು ಹೈಕಮಾಂಡ್‌ನೊಳಗಿನ ಹಗೆತನದೊಂದಿಗೆ ನಂಟು ಹೊಂದಿದೆ” ಎಂದು ವಿಶ್ಲೇಷಿಸಿದೆ.

ಹಿಮಾಚಲಪ್ರದೇಶದ ಬಿಜೆಪಿಯೊಳಗೆ ನಡ್ಡಾ ಮತ್ತು ಅನುರಾಗ್ ಎಂದು ಎರಡು ಬಣಗಳಾಗಿವೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸೇರಿದಂತೆ ನಡ್ಡಾ ಅವರಿಗೆ ಆಪ್ತರು ಎನ್ನಲಾದ ಹೆಚ್ಚಿನವರು ಬಿಜೆಪಿಯ ಟಿಕೆಟ್ ಪಡೆದಿದ್ದಾರೆ. ಆದರೆ ಹೊರಗುಳಿದಿರುವ ಮತ್ತು ‘ಬಂಡಾಯಗಾರರು’ ಎಂದು ಕರೆಯಲ್ಪಟ್ಟಿರುವ ಗಮನಾರ್ಹ ಸಂಖ್ಯೆಯ ನಾಯಕರು ಅನುರಾಗ್‌ ಠಾಕೂರ್ ಮತ್ತು ಅವರ ತಂದೆ, ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರಿಗೆ ನಿಷ್ಠರೆಂಬುದು ಚರ್ಚೆಯ ವಿಷಯವಾಗಿದೆ.

ನಡ್ಡಾ ಮತ್ತು ಅನುರಾಗ್ ಅವರ ನಡುವಿನ ಭಿನ್ನಾಭಿಪ್ರಾಯಗಳು 2020ರಲ್ಲಿ ಸಾರ್ವಜನಿಕವಾಗಿ ಹೊರಬಿದ್ದವು.  ನವೆಂಬರ್‌ನಲ್ಲಿ ಕಂಗ್ರಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರಾದ ಅನುರಾಗ್‌ ತೀವ್ರ ವಾಗ್ದಾಳಿ ನಡೆಸಿದ್ದರು. ತಮ್ಮ ‘ಕನಸಿನ ಯೋಜನೆ’ ಎಂದೇ ಭಾವಿಸಿರುವ ವಿಶ್ವವಿದ್ಯಾನಿಲಯ ಯೋಜನೆಗೆ ಭೂಮಿ ವರ್ಗಾವಣೆಯಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿದ್ದನ್ನು ಅವರು ವಿರೋಧಿಸಿದ್ದರು.

ಹಿಮಾಚಲ ಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ (CUHP) ಸಂಬಂಧಿಸಿದ ಪ್ರಶ್ನೆ ಇದಾಗಿತ್ತು. “ಮಾಜಿ ಸಿಎಂ ಪ್ರೇಮ್ ಕುಮಾರ್ ಧುಮಾಲ್ ಅವರ ಅವಧಿಯಲ್ಲಿ 11 ವರ್ಷಗಳ ಹಿಂದೆ ರಾಜ್ಯಕ್ಕೆ ಮಂಜೂರು ಮಾಡಿದ ಯೋಜನೆಯನ್ನು ಪೂರ್ಣಗೊಳಿಸಲು ವಿಳಂಬವಾಗುತ್ತಿದೆ. ಇದಕ್ಕೆ ಸಿಎಂ ಕೂಡ ಕಾರಣ” ಎಂದು ದೂರಿದ್ದಾಗಿ ವರದಿಯಾಗಿತ್ತು.

ಜೈರಾಮ್‌ಗೆ ಮುಜುಗರವಾಯಿತು. “ಈ ವಿಷಯವನ್ನು ಅನುರಾಗ್ ಠಾಕೂರ್ ಅವರು ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತಾಪಿಸಬಾರದಿತ್ತು” ಎಂದಿರುವುದಾಗಿ ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿತ್ತು.

ಎರಡು ದಿನಗಳ ನಂತರ, ನಡ್ಡಾ ಅವರು ಜೈರಾಮ್ ಅವರ ಪರ ನಿಂತರು. ರ್ಯಾಲಿಯಲ್ಲಿ ಸಿಎಂ ಅವರನ್ನು ಶ್ಲಾಘಿಸಿದ ಅವರು, “ಅಭಿವೃದ್ಧಿಯ ವಿಷಯಕ್ಕೆ ಬಂದಾಗ ತಾಳ್ಮೆಯಿಂದಿರಬೇಕು” ಎಂದು ಅನುರಾಗ್ ಅವರಿಗೆ ಕುಟುಕಿದ್ದರು.

ಜೈರಾಮ್ ಮತ್ತು ನಡ್ಡಾ 1980ರ ದಶಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿ ಹಿಮಾಚಲ ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಡ್ಡಾ ಅವರು ಬಿಹಾರದಲ್ಲಿ ಜನಿಸಿದವರು. ಆದರೆ 1980ರ ದಶಕದ ಆರಂಭದಲ್ಲಿ ಎಬಿವಿಪಿ ಮೂಲಕ ಹಿಮಾಚಲದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡರು.

ಅನುರಾಗ್ ತಂದೆ ಧುಮಾಲ್ ಅವರು ನಡ್ಡಾಗಿಂತ ಹಿರಿಯವರು. 1982ರಲ್ಲಿ ಧುಮಾಲ್ ಅವರು ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ನಡ್ಡಾ ಅವರು ಹಿಮಾಚಲದಲ್ಲಿ ಎಬಿವಿಪಿಯ ಕಾರ್ಯದರ್ಶಿಯಾಗಿದ್ದರು.

1989ರಲ್ಲಿ ಧುಮಾಲ್ ಅವರು ಮೊದಲ ಭಾರಿಗೆ ಲೋಕಸಭೆಯನ್ನು ಪ್ರವೇಶಿಸಿದಾಗ, ಆ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ನಡ್ಡಾ ಅವರು ಬಿಜೆಪಿ ಯುವಮೋರ್ಚಾದ ಉಸ್ತುವಾರಿಯಾಗಿದ್ದರು.

ನಡ್ಡಾ 1993ರಲ್ಲಿ ಹಿಮಾಚಲದಿಂದ ಮೊದಲ ಬಾರಿಗೆ ಟಿಕೆಟ್ ಪಡೆದರು. ಅವರು ತಮ್ಮ ಸ್ಥಾನವನ್ನು ಗೆದ್ದರು. ಆದರೆ ಕಾಂಗ್ರೆಸ್ ಬಹುಮತ ಗಳಿಸಿತು. ಪ್ರತಿಪಕ್ಷದ ನಾಯಕರಾಗಿ ಐದು ವರ್ಷಗಳ ನಂತರ, ನಡ್ಡಾ 1998 ರಲ್ಲಿ ಮತ್ತೊಮ್ಮೆ ಗೆದ್ದರು ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಿತು. ಧುಮಾಲ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ನಡ್ಡಾ ಅವರು ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ’, ‘ಸಂಸದೀಯ ವ್ಯವಹಾರಗಳ ಖಾತೆ’ ಸಚಿವರಾದರು.

2007ರಲ್ಲಿ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ, ನಡ್ಡಾ ಅವರಿಗೆ ಅರಣ್ಯ, ಪರಿಸರ ಮತ್ತು ವಿಜ್ಞಾನ- ತಂತ್ರಜ್ಞಾನ ಖಾತೆಗಳನ್ನು ನೀಡಲಾಯಿತು.

1990ರಲ್ಲಿ ರಾಜ್ಯದಲ್ಲಿ ಮೊದಲ ಬಿಜೆಪಿ ಸರ್ಕಾರವನ್ನು ರಚಿಸಿದ ಶಾಂತ ಕುಮಾರ್ ಅವರನ್ನು ಬದಿಗೆ ತಳ್ಳಿದವರು ಧುಮಾಲ್. 2007 ಮತ್ತು 2012ರ ನಡುವೆ ನಡ್ಡಾ ಮತ್ತು ಇತರ ಬಿಜೆಪಿ ನಾಯಕರು ಪಕ್ಷದ ಮೇಲೆ ಧುಮಾಲ್ ಅವರ ಹಿಡಿತವನ್ನು ಪ್ರಶ್ನಿಸಿದರು. 2010ರ ಹೊತ್ತಿಗೆ, ಧುಮಾಲ್ ಮತ್ತು ನಡ್ಡಾ ನಡುವಿನ ಭಿನ್ನಾಭಿಪ್ರಾಯಗಳು ಬೆಳೆದವು.

ಇದನ್ನೂ ಓದಿರಿ: ವಂದೇಭಾರತ್‌ ಮೈಸೂರು-ಬೆಂಗಳೂರು ಪ್ರಯಾಣ; 5 ನಿಮಿಷಕ್ಕಾಗಿ ₹415 ಹೆಚ್ಚುವರಿ ಪಾವತಿಸಿ!

ದೆಹಲಿಯಲ್ಲಿ ನಡ್ಡಾ ಶಕ್ತಿಶಾಲಿಯಾದರು. 2010ರಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. 2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. “ದೆಹಲಿಯಲ್ಲಿ ಕುಳಿತ ನಡ್ಡಾ ಅವರ ಹಸ್ತಕ್ಷೇಪ ಹಿಮಾಚಲ ಪ್ರದೇಶದಲ್ಲೂ ಇಣುಕಲಾರಂಭಿಸಿತು” ಎಂದು ಪತ್ರಕರ್ತ ಹೇಳುತ್ತಾರೆ. ಆದರೆ ಧುಮಾಲ್ ರಾಜ್ಯದಲ್ಲಿ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದಾರೆ.

ಧುಮಾಲ್ ಅವರ ಅಧಿಕಾರಾವಧಿಯಲ್ಲಿ ಅವರ ಮಗ ಅನುರಾಗ್ ಠಾಕೂರ್ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರು. 2000ನೇ ಇಸವಿಯಲ್ಲಿ ತಮ್ಮ 25ನೇ ವಯಸ್ಸಿನಲ್ಲಿಯೇ ಠಾಕೂರ್ ಅವರು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದರು. ರಾಜ್ಯ ಕ್ರಿಕೆಟ್ ಮಂಡಳಿಗೆ ಏರಿದ ಅತ್ಯಂತ ಕಿರಿಯ ವ್ಯಕ್ತಿ ಅವರಾಗಿದ್ದರು. 2008ರಲ್ಲಿ, ಅವರು ಹಮೀರ್‌ಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಇಂತಹ ರಾಜಕೀಯ ಏರಿಳಿತ ಕಂಡಿರುವ ಹಿಮಾಚಲಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆಯೋ ಸೋಲುತ್ತದೆಯೋ ಎಂಬ ಕುತೂಹಲ ಹುಟ್ಟಿಸಿದೆ.

(ಪೂರ್ಣ ವಿಶ್ಲೇಷಣೆ- ‘ನ್ಯೂಸ್‌ಲಾಂಡ್ರಿ’ಯಲ್ಲಿ ಲಭ್ಯ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...