Homeಅಂತರಾಷ್ಟ್ರೀಯಜನರ ತೆರಿಗೆ ಹಣದ ಪೋಲು: ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮನೆಗೆ ದುಬಾರಿ ಕಲಾಕೃತಿ ಖರೀದಿಗೆ...

ಜನರ ತೆರಿಗೆ ಹಣದ ಪೋಲು: ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮನೆಗೆ ದುಬಾರಿ ಕಲಾಕೃತಿ ಖರೀದಿಗೆ ಆಕ್ಷೇಪ

- Advertisement -
- Advertisement -

ರಿಷಿ ಸುನಕ್‌ರವರು ಇಂಗ್ಲೆಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳಿನಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ. ಹಿಂದಿನ ಪ್ರಧಾನಿ ಲಿಜ್ ಟ್ರಸ್‌ರವರು ದೇಶದ ಹಣದುಬ್ಬರ, ಬೆಲೆ ಏರಿಕೆ ಮತ್ತು ನಿರುದ್ಯೋಗವನ್ನು ಶಮನಗೊಳಿಸಲು ವಿಫಲವಾದ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಆದರೆ ನೂತನ ಪ್ರಧಾನಿಯಾದ ರಿಷಿ ಸುನಕ್ ಸಹ ಮೇಲಿನ ಸಮಸ್ಯೆಗಳನ್ನು ಬಗೆಹರಿಸುವ ಬದಲು ದೇಶ ಸಂಕಷ್ಟದಲ್ಲಿರುವಾಗ ತೆರಿಗೆ ಹಣದಿಂದ 1.3 ಮಿಲಿಯನ್ ಪೌಂಡ್ ವೆಚ್ಚದ ಶಿಲ್ಪಾ ಕಲಾಕೃತಿ ಖರೀದಿಸಿರುವುದು ಟೀಕೆಗೆ ಗುರಿಯಾಗಿದೆ.

ಖ್ಯಾತ ಕಲಾವಿದ ಹೆನ್ರಿ ಮೂರ್‌ರವರು 1980 ರಲ್ಲಿ ಸೃಷ್ಟಿಸಿದ್ದ “ವರ್ಕಿಂಗ್ ಮಾಡೆಲ್ ಫಾರ್ ಸೀಟೆಡ್ ವುಮನ್” ಹೆಸರಿನ ಅಮೂರ್ತ ಕಂಚಿನ ಶಿಲ್ಪ ಕಲಾಕೃತಿಯನ್ನು ಹರಾಜಿನಲ್ಲಿ ತೆರಿಗೆದಾರರ ಹಣದಿಂದ ಇಂಗ್ಲೆಂಡ್ ಸರ್ಕಾರಿ ಕಲಾ ಸಂಗ್ರಹವು ಕೊಂಡುಕೊಂಡಿದೆ. ಅದನ್ನು ಇದೀಗ ನೂತನ ಪ್ರಧಾನಿ ರಿಷಿ ಸುನಕ್‌ರವರ ಅಧಿಕೃತ ನಿವಾಸ 10 ಡೌನಿಂಗ್‌ ಸ್ಟ್ರೀಟ್‌ನ ತೋಟದಲ್ಲಿರಿಸಲಾಗಿದೆ ಎಂದು ಇಂಗ್ಲೆಂಡ್‌ನ ಸನ್ ಪತ್ರಿಕೆ ವರದಿ ಮಾಡಿದೆ.

ಹೆಚ್ಚುತ್ತಿರುವ ಹಣದುಬ್ಬರ, ಬೆಲೆಏರಿಕೆ ಮತ್ತು ಸಾರ್ವಜನಿಕ ನಿಧಿಯ ವೆಚ್ಚ ಕಡಿತ ಕ್ರಮಗಳ ಮೂಲಕ ದೇಶವು ಹೆಣಗಾಡುತ್ತಿರುವ ಸಮಯದಲ್ಲಿ ಇದು ಅನಗತ್ಯ ಎಂಬ ಟೀಕೆಗಳು ಕೇಳಿಬಂದಿವೆ.

ಇದು ಮೂರ್‌ರವರ ಅತ್ಯುತ್ತಮ ಶಿಲ್ಪಗಳಲ್ಲಿ ಒಂದು ಎಂಬುದು ಸರಿ. ಆದರೆ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ತೆರಿಗೆದಾರರ ಹಣದಿಂದ ಅದನ್ನು ಖರೀದಿಸುವುದು ಅತಿರಂಜಿತ ಕ್ರಿಯೆಯಾಗಿದೆ ಎಂದು ಅಲ್ಲಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆಂದು ದಿ ಸನ್ ಪತ್ರಿಕೆ ವರದಿ ಮಾಡಿದೆ.

ಇಂಗ್ಲೆಂಡ್ ಆರ್ಥಿಕ ಕುಸಿತದಿಂದ ಬಳಲುತ್ತಿದೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಆರ್ಥಿಕ ನೀತಿಗಳ ವಿರುದ್ಧ ಜನತೆ ಸಿಟ್ಟಿಗೆದ್ದಿದ್ದರು. ಆನಂತರ ಬಂದ ಲಿಜ್ ಟ್ರಸ್ ಸಹ ನಿಭಾಯಿಸಲಾಗದೆ ರಾಜೀನಾಮೆ ನೀಡಿದ್ದರು. ಆರ್ಥಿಕತೆ ಬಗ್ಗೆ ತಿಳಿವಳಿಕೆ ಇದೆ ಎನ್ನಲಾಗುವ ರಿಷಿ ಸುನಕ್ ಸದ್ಯ ಪ್ರಧಾನಿಯಾಗಿದ್ದಾರೆ. ಆದರೆ ಅವರ ಈ ಮೊದಲ ನಡೆಗೆ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ; ರಿಶಿ ಸುನುಕ್ ಬಡತನ, ಜನಾಂಗೀಯವಾದ ಹೆಚ್ಚಿಸುತ್ತಾರೆ ಮತ್ತು ಹಿಂದೂತ್ವ ಫ಼್ಯಾಸಿಸಂ ಅನ್ನು ಗಟ್ಟಿಗೊಳಿಸುತ್ತಾರೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ರಿಷಿ ಸುನಕ್ ಗೂ ನಮ್ಮನ್ನು ಆಳುವವರಿಗೂ ಯಾವುದೇ ವ್ಯತ್ಯಾಸ ಇಲ್ಲ! “ಇವ ನಮ್ಮವ” ಎನ್ನಲು ಈತ ಹಿಂದೂ ಎಂಬುದೊಂದೇ! ಬಹುಷಃ, ಭಾರತೀಯ ಮೂಲದವ ಮಾತ್ರ ಈ ರೀತಿ, ಮನೆ ಹೊತ್ತಿ ಉರಿಯುವಾಗ, ಗಳ ಹಿರಿದು ಬೆಂಕಿ ಕಾಯಿಸಿಕೊಳ್ಳುವ ಭಾರತೀಯ ಮೂಲದವ!

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...