Homeಮುಖಪುಟಒಡಿಶಾ ಹೆದ್ದಾರಿ ಯೋಜನೆಯ ಟೆಂಡರ್‌ ಅದಾನಿಗೆ!

ಒಡಿಶಾ ಹೆದ್ದಾರಿ ಯೋಜನೆಯ ಟೆಂಡರ್‌ ಅದಾನಿಗೆ!

ಈ ಯೋಜನೆಯೊಂದಿಗೆ ಅದಾನಿ ಗ್ರೂಪ್ ಒಟ್ಟು 10 ಎನ್‌ಎಚ್‌ಎಐ ರಸ್ತೆ ಯೋಜನೆಗಳನ್ನು ಹೈಬ್ರೀಡ್ ಆನ್ಯುಟಿ ಮೋಡ್‌ ಅಡಿಯಲ್ಲಿ ಪಡೆದುಕೊಂಡಂತಾಗಿದೆ

- Advertisement -
- Advertisement -

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದಿಂದ ಒಡಿಶಾದಲ್ಲಿ 1,169.10 ಕೋಟಿ ರೂ.ಗಳ ಹೆದ್ದಾರಿ ಯೋಜನೆಯ ಟೆಂಡರ್‌ ಗೆದ್ದಿದ್ದೇವೆ ಎಂದು ಅದಾನಿ ಎಂಟರ್‌ಪ್ರೈಸಸ್ ಶುಕ್ರವಾರ ತಿಳಿಸಿದೆ. ಅದಾನಿ ಎಂಟರ್‌ಪ್ರೈಸಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ಅದಾನಿ ರೋಡ್ ಟ್ರಾನ್ಸ್‌ಪೋರ್ಟ್ ಲಿಮಿಟೆಡ್’ (ಎಆರ್‌ಟಿಎಲ್) ಈ ಒಪ್ಪಂದವನ್ನು ಗೆದ್ದಿದೆ.

ಕಂಪನಿಯು ತನ್ನ ಬಿಡ್ ಯೋಜನೆ ವೆಚ್ಚ 1,169.10 ಕೋಟಿ ರೂ. ಆಗಿದ್ದು ಮತ್ತು ನಿರ್ಮಾಣ ಅವಧಿ ಎರಡು ವರ್ಷಗಳು ಎಂದು ಹೇಳಿದೆ. ಎಆರ್‌ಟಿಎಲ್ ಸಾರಿಗೆ ಕ್ಷೇತ್ರದಲ್ಲಿ ಮತ್ತಷ್ಟು ಮುಂದುವರೆಯುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಬಂದರು ಗುತ್ತಿಗೆಗಾಗಿ ಮ್ಯಾನ್ಮಾರ್ ಮಿಲಿಟರಿ ನಿಯಂತ್ರಿತ ಕಂಪನಿಗೆ 30 ಮಿಲಿಯನ್ ಡಾಲರ್ ಹಣ ನೀಡಿದ ಅದಾನಿ ಗ್ರೂಪ್: ವರದಿ

ಅದಾನಿ ಗ್ರೂಪ್‌‌ ತನ್ನ ಅಪಾರ ಪರಿಣತಿ ಮತ್ತು ಅನುಭವವನ್ನು ಸಂಕೀರ್ಣ ಮತ್ತು ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ದಾಖಲೆಯ ಸಮಯದಲ್ಲಿ ಮತ್ತು ವಿಶ್ವ ದರ್ಜೆಯ ಗುಣಮಟ್ಟದ ಮಾನದಂಡಗಳಿಗೆ ಬಳಸಿಕೊಂಡು ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ತನ್ನ ಪ್ರಕಟನೆಯಲ್ಲಿ ಹೇಳಿದೆ.

ಈ ಯೋಜನೆಯೊಂದಿಗೆ ಅದಾನಿ ಗ್ರೂಪ್ ಒಟ್ಟು 10 ಎನ್‌ಎಚ್‌ಎಐ ರಸ್ತೆ ಯೋಜನೆಗಳನ್ನು ಹೈಬ್ರೀಡ್ ಆನ್ಯುಟಿ ಮೋಡ್‌ ಅಡಿಯಲ್ಲಿ ಪಡೆದುಕೊಂಡಂತಾಗಿದೆ. ಇವುಗಳು ಟೋಲ್-ಆಪರೇಟ್-ಟ್ರಾನ್ಸ್‌ಫರ್ (ಟಿಒಟಿ) ಮತ್ತು ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ (ಬಿಒಟಿ) ಟೋಲ್ ಆಧಾರದ ಮೇಲೆ ಚತ್ತೀಸ್‌ಗಡ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಕೇರಳ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಿ ಹೊಂದಿರಲಿದೆ.

ಇದನ್ನೂ ಓದಿ: ಖಾಲಿ ಗೋಡೌನ್‌ಗೆ ಸರ್ಕಾರದಿಂದ ಆರೂವರೆ ಕೋಟಿ ಬಾಡಿಗೆ ಪಡೆದ ಅದಾನಿ!: ಅದಾನಿಗಾಗಿ ಸಿಎಜಿ ವರದಿ ಬದಲಿಸಲು ಹೊರಟ ಕೇಂದ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...