1,169 ಕೋಟಿಗೆ ಒಡಿಶಾ ಹೆದ್ದಾರಿ ಟೆಂಡರ್‌ ಯೋಜನೆ ಗೆದ್ದುಕೊಂಡ ಅದಾನಿ! | Naanu gauri
ಅದಾನಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದಿಂದ ಒಡಿಶಾದಲ್ಲಿ 1,169.10 ಕೋಟಿ ರೂ.ಗಳ ಹೆದ್ದಾರಿ ಯೋಜನೆಯ ಟೆಂಡರ್‌ ಗೆದ್ದಿದ್ದೇವೆ ಎಂದು ಅದಾನಿ ಎಂಟರ್‌ಪ್ರೈಸಸ್ ಶುಕ್ರವಾರ ತಿಳಿಸಿದೆ. ಅದಾನಿ ಎಂಟರ್‌ಪ್ರೈಸಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ಅದಾನಿ ರೋಡ್ ಟ್ರಾನ್ಸ್‌ಪೋರ್ಟ್ ಲಿಮಿಟೆಡ್’ (ಎಆರ್‌ಟಿಎಲ್) ಈ ಒಪ್ಪಂದವನ್ನು ಗೆದ್ದಿದೆ.

ಕಂಪನಿಯು ತನ್ನ ಬಿಡ್ ಯೋಜನೆ ವೆಚ್ಚ 1,169.10 ಕೋಟಿ ರೂ. ಆಗಿದ್ದು ಮತ್ತು ನಿರ್ಮಾಣ ಅವಧಿ ಎರಡು ವರ್ಷಗಳು ಎಂದು ಹೇಳಿದೆ. ಎಆರ್‌ಟಿಎಲ್ ಸಾರಿಗೆ ಕ್ಷೇತ್ರದಲ್ಲಿ ಮತ್ತಷ್ಟು ಮುಂದುವರೆಯುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಬಂದರು ಗುತ್ತಿಗೆಗಾಗಿ ಮ್ಯಾನ್ಮಾರ್ ಮಿಲಿಟರಿ ನಿಯಂತ್ರಿತ ಕಂಪನಿಗೆ 30 ಮಿಲಿಯನ್ ಡಾಲರ್ ಹಣ ನೀಡಿದ ಅದಾನಿ ಗ್ರೂಪ್: ವರದಿ

ಅದಾನಿ ಗ್ರೂಪ್‌‌ ತನ್ನ ಅಪಾರ ಪರಿಣತಿ ಮತ್ತು ಅನುಭವವನ್ನು ಸಂಕೀರ್ಣ ಮತ್ತು ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ದಾಖಲೆಯ ಸಮಯದಲ್ಲಿ ಮತ್ತು ವಿಶ್ವ ದರ್ಜೆಯ ಗುಣಮಟ್ಟದ ಮಾನದಂಡಗಳಿಗೆ ಬಳಸಿಕೊಂಡು ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ತನ್ನ ಪ್ರಕಟನೆಯಲ್ಲಿ ಹೇಳಿದೆ.

ಈ ಯೋಜನೆಯೊಂದಿಗೆ ಅದಾನಿ ಗ್ರೂಪ್ ಒಟ್ಟು 10 ಎನ್‌ಎಚ್‌ಎಐ ರಸ್ತೆ ಯೋಜನೆಗಳನ್ನು ಹೈಬ್ರೀಡ್ ಆನ್ಯುಟಿ ಮೋಡ್‌ ಅಡಿಯಲ್ಲಿ ಪಡೆದುಕೊಂಡಂತಾಗಿದೆ. ಇವುಗಳು ಟೋಲ್-ಆಪರೇಟ್-ಟ್ರಾನ್ಸ್‌ಫರ್ (ಟಿಒಟಿ) ಮತ್ತು ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ (ಬಿಒಟಿ) ಟೋಲ್ ಆಧಾರದ ಮೇಲೆ ಚತ್ತೀಸ್‌ಗಡ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಕೇರಳ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಿ ಹೊಂದಿರಲಿದೆ.

ಇದನ್ನೂ ಓದಿ: ಖಾಲಿ ಗೋಡೌನ್‌ಗೆ ಸರ್ಕಾರದಿಂದ ಆರೂವರೆ ಕೋಟಿ ಬಾಡಿಗೆ ಪಡೆದ ಅದಾನಿ!: ಅದಾನಿಗಾಗಿ ಸಿಎಜಿ ವರದಿ ಬದಲಿಸಲು ಹೊರಟ ಕೇಂದ್ರ

LEAVE A REPLY

Please enter your comment!
Please enter your name here