Homeಮುಖಪುಟಮೊದಲ ಬಾರಿಗೆ ಚುನಾವಣಾ ಕಣಕ್ಕೆ ಠಾಕ್ರೆ ಕುಟುಂಬ? : ವರ್ಲಿ ಕ್ಷೇತ್ರದಿಂದ ಆದಿತ್ಯ ಠಾಕ್ರೆ ಸ್ಪರ್ಧೆ!

ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಠಾಕ್ರೆ ಕುಟುಂಬ? : ವರ್ಲಿ ಕ್ಷೇತ್ರದಿಂದ ಆದಿತ್ಯ ಠಾಕ್ರೆ ಸ್ಪರ್ಧೆ!

- Advertisement -
- Advertisement -

ಮಹರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಠಾಕ್ರೆ ಕುಟುಂಬ ಚುನಾವಣಾ ಕಣಕ್ಕಿಳಿಯುತ್ತಿರವ ಬಗ್ಗೆ ವರದಿಯಾಗುತ್ತಿದೆ. ಅಕ್ಟೋಬರ್ ೨೧ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಹಿರಿಯ ಮಗ ಆದಿತ್ಯ ಠಾಕ್ರೆ ವರ್ಲಿ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಉಹಾಪೋಹಗಳು ಎದ್ದಿವೆ.

ವರ್ಲಿಯನ್ನು ಶಿವಸೇನೆಗೆ ಸುರಕ್ಷಿತ ಕ್ಷೇತ್ರವೆಂದು ಪರಿಗಣಿಸಲಾಗಿದ್ದು, ಈ ಸುದ್ದಿ ನಿಜವಾದಲ್ಲಿ ಆದಿತ್ಯ ಠಾಕ್ರೆ ಅವರು ಠಾಕ್ರೆ ಕುಟುಂಬದ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲ ಸದಸ್ಯರಾಗಲಿದ್ದಾರೆ.

“ವರ್ಲಿ ವಿಧಾನಸಭಾ ಕ್ಷೇತ್ರಕ್ಕೆ ಆದಿತ್ಯ ಠಾಕ್ರೆ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಹಾಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಿವಸೇನೆಯ ಶಾಸಕ ಸುನಿಲ್ ಶಿಂಧೆಯವರು ಆದಿತ್ಯ ಠಾಕ್ರೆಗಾಗಿ ಸ್ಥಾನವನ್ನು ಖಾಲಿ ಮಾಡುತ್ತಾರೆ” ಎಂದು ಶಿವಸೇನೆ ಮುಖ್ಯಸ್ಥರ ಆಪ್ತ ಸಹಾಯಕರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

“ವರ್ಲಿಯನ್ನು ಶಿವಸೇನೆಯ ಸುರಕ್ಷಿತ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಆದ್ದರಿಂದ ಆದಿತ್ಯ ಅವರ ಉಮೇದುವಾರಿಕೆಯನ್ನು ಅಂತಿಮಗೊಳಿಸಲಾಗಿದೆ. ಮಾಜಿ ಎನ್‌ಸಿಪಿ ನಾಯಕ ಸಚಿನ್ ಅಹಿರ್ ಇತ್ತೀಚೆಗೆ ಶಿವಸೇನೆ ಸೇರಿದ್ದಾರೆ. ಹಾಗಾಗಿ ಇದು ಠಾಕ್ರೆ ಅವರ ಗೆಲುವನ್ನು ಸುಲಭಗೊಳಿಸುತ್ತದೆ” ಎಂದು ಅವರು ಹೇಳಿದ್ದಾರೆ. ಸಚಿನ್ ಅಹಿರ್ ಅವರು 2014 ರ ವಿಧಾನಸಭಾ ಚುನಾವಣೆಯಲ್ಲಿ ಸುನಿಲ್ ಶಿಂಧೆ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

1966 ರಲ್ಲಿ ದಿವಂಗತ ಬಾಳ್ ಠಾಕ್ರೆ ಅವರು ಶಿವಸೇನೆ ಸ್ಥಾಪಿಸಿದಾಗಿನಿಂದ, ಕುಟುಂಬದ ಯಾವುದೇ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಅಥವಾ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಲಿಲ್ಲ. ಆದರೆ ಅವರು ಶಿವಸೇನೆಯ ರಾಜಕೀಯವನ್ನು ತಮ್ಮ ಕೈಯಲ್ಲಿಟ್ಟುಕೊಂಡು ನಡೆಸಿದ್ದಾರೆ.

ಉದ್ಧವ್ ಠಾಕ್ರೆ ಅವರ ಸೋದರಸಂಬಂಧಿಯು ಮತ್ತು ವಿರೋಧಿಯೂ ಆದ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು 2014 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಪ್ರಕಟಿಸಿದ್ದರು. ಆದರೆ, ನಂತರ ಅವರು ಮನಸ್ಸು ಬದಲಾಯಿಸಿದ್ದರು.

ಮುಂದಿನ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಿವಸೇನೆ. ಬಿಜೆಪಿ ಮೈತ್ರಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಇನ್ನು ಚಾಲ್ತಿಯಲ್ಲಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ‘ಶಿವ ಸೈನಿಕ್’ (ಪಕ್ಷದ ಕಾರ್ಯಕರ್ತ) ಯನ್ನು ಘೋಷಿಸುವುದಾಗಿ ತಮ್ಮ ದಿವಂಗತ ತಂದೆ ಬಾಲ್ ಠಾಕ್ರೆ ಅವರಿಗೆ ನೀಡಿದ “ಭರವಸೆಯನ್ನು” ಉದ್ಧವ್ ಠಾಕ್ರೆ ಶನಿವಾರ ನೆನಪಿಸಿಕೊಂಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ನೀಡಿದ ಬೆಂಬಲಕ್ಕೆ ಧನ್ಯವಾದ ತಿಳಿಸಲು ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಜನರ ಬೆಂಬಲವನ್ನು ಕೋರಲು ಜುಲೈನಲ್ಲಿ ಆದಿತ್ಯ ಠಾಕ್ರೆ ರಾಜ್ಯವ್ಯಾಪಿ ‘ಜನ ಆಶೀರ್ವಾಡ್ ಯಾತ್ರೆ’ ನಡೆಸಿದ್ದರು.

2014 ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಸ್ಥಾನ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಬಂದ ಕಾರಣ ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದರು. ಬಿಜೆಪಿ ಸ್ಪರ್ಧಿಸಿದ 260 ಸ್ಥಾನಗಳಲ್ಲಿ 122 ಸ್ಥಾನಗಳನ್ನು ಗೆದ್ದರೆ, ಸೇನಾ 282 ಸ್ಥಾನಗಳಲ್ಲಿ 63 ಸ್ಥಾನಗಳನ್ನು ಗಳಿಸಿತ್ತು. ನಂತರ ಎರಡೂ ಪಕ್ಷಗಳು ಕೈಜೋಡಿಸಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸಿದವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20,000 ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

0
ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸುಮಾರು 20,000 ಮಂದಿ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ಪತ್ರಗಳನ್ನು...