Homeಮುಖಪುಟಚಿನ್ಮಯಾನಂದ್ ವಿರುದ್ಧದ ಪ್ರತಿಭಟನೆಗೆ ಅನುಮತಿ ನಿರಾಕರಣೆ: ಕಾಂಗ್ರೆಸ್ ಮುಖಂಡರ ಬಂಧನ

ಚಿನ್ಮಯಾನಂದ್ ವಿರುದ್ಧದ ಪ್ರತಿಭಟನೆಗೆ ಅನುಮತಿ ನಿರಾಕರಣೆ: ಕಾಂಗ್ರೆಸ್ ಮುಖಂಡರ ಬಂಧನ

- Advertisement -
- Advertisement -

ಬಿಜೆಪಿಯ ಮಾಜಿ ಸಚಿವ ಚಿನ್ಮಯಾನಂದ್ ಮೇಲೆ ಅತ್ಯಾಚಾರ ಆರೋಪದ ಕಾರಣಕ್ಕಾಗಿ ಜೈಲಿನಲ್ಲಿರುವ ಕಾನೂನು ವಿದ್ಯಾರ್ಥಿಯನ್ನು ಬೆಂಬಲಿಸಿ ಮೆರವಣಿಗೆ ನಡೆಸಲು ಕಾಂಗ್ರೆಸ್ ಮುಖಂಡರಿಗೆ ಇಂದು ಅನುಮತಿ ನಿರಾಕರಿಸಲಾಗಿದೆ. ಕಾಂಗ್ರೆಸ್ ನಾಯಕರು ವಿದ್ಯಾರ್ಥಿನಿಗೆ ಬೆಂಬಲ ಸೂಚಿಸಿ ಒಗ್ಗಟ್ಟಿನಿಂದ ಶಹಜಹಾನ್ಪುರದಿಂದ ಲಕ್ನೋಗೆ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು.

ಪ್ರತಿಭಟನಾ ಮೆರೆವಣಿಗೆ ನಡೆಸಲು ಮುಂದಾದ ಕಾಂಗ್ರೆಸ್ ಪಕ್ಷದ ಮುಖಂಡ ಜಿತಿನ್ ಪ್ರಸಾದ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದ್ದು, ಇತರ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿನ್ಮಯಾನಂದ್ ಅವರ ಸಹಾಯಕರು ಸಲ್ಲಿಸಿದ ಸುಲಿಗೆ ಪ್ರಕರಣದಲ್ಲಿ 23 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಕಳೆದ ವಾರ ಬಂಧಿಸಿದ್ದರು. ಆಕೆಯು ಚಪ್ಪಲಿ ಕೂಡ ಹಾಕಿಕೊಳ್ಳಲು ಬಿಡದೆ ಪೊಲೀಸರು ಆಕೆಯನ್ನು ತಮ್ಮ ಮನೆಯಿಂದ ಎಳೆದುಕೊಂಡು ಹೋಗಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ. ಸಂತ್ರಸ್ತ ವಿದ್ಯಾರ್ಥಿನಿಯು ಕಳೆದ ನಾಲ್ಕು ದಿನಗಳಿಂದ ಜೈಲಿನಲ್ಲಿದ್ದಾಳೆ.

ಕಳೆದ ತಿಂಗಳು ತನ್ನ ಮೇಲಿನ ಅತ್ಯಾಚಾರದ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದರು, ನಂತರ ದೆಹಲಿಯಲ್ಲಿ ಪ್ರಕರಣ ದಾಖಲಿಸಿದೆ. “ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ” ಎಂದು ಸಂತ್ರಸ್ತೆಯು ಚಿನ್ಮಯಾನಂದ್ ವಿರುದ್ಧ ಆರೋಪ ಹೊರಿಸಿದ್ದರು. ಮತ್ತೊಂದೆಡೆ, ಆಕೆಯ ಮೇಲೆ ರೂ. ಚಿನ್ಮಯಾನಂದರಿಂದ 5 ಕೋಟಿ ರೂ ಸುಲಿಗೆ ಮಾಡಿದ ಆರೋಪವನ್ನು ಹೊರಿಸಲಾಯಿತು.

ಸದ್ಯಕ್ಕೆ ಚಿನ್ಮಯಾನಂದ್ ಆಸ್ಪತ್ರೆಯಲ್ಲಿದ್ದರೆ ಸಂತ್ರಸ್ತೆ ಜೈಲಿನಲ್ಲಿರಬೇಕಾಗಿದೆ. ಹಾಗಾಗಿ ಇದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿತ್ತು.

“ಉತ್ತರಪ್ರದೇಶದಲ್ಲಿ ಅಪರಾಧಿಗಳಿಗೆ ಸರ್ಕಾರದ ಸಂಪೂರ್ಣ ರಕ್ಷಣೆ ಇದೆ. ಜೊತೆಗೆ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಬೆದರಿಸಲಾಗುತ್ತಿದೆ.

ಶಹಜಹಾನಪುರದ ಮಗಳಿಗೆ ನ್ಯಾಯಕ್ಕಾಗಿ ದನಿಯೆತ್ತಿದವರನ್ನು ಯುಪಿಯ ಬಿಜೆಪಿ ಸರ್ಕಾರ ನಿಗ್ರಹಿಸುತ್ತಿದೆ. ಪಾದಯಾತ್ರೆಯನ್ನು ನಿಲ್ಲಿಸಲಾಗುತ್ತಿದೆ. ನಮ್ಮ ಕಾರ್ಯಕರ್ತರನ್ನು, ಮುಖಂಡರನ್ನು ಬಂಧಿಸಲಾಗುತ್ತಿದೆ. ನೀವು ಏಕೆ ಹೆದರುತ್ತೀರಿ?” ಎಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...