“ವಿಶೇಷ ಸ್ಥಾನಮಾನದ 370 ನೇ ವಿಧಿಯ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರ ಪ್ರಗತಿ ಸಾಧಿಸುತ್ತದೆ ಎನ್ನುವುದಾದರೆ, ಇಷ್ಟು ವರ್ಷವಾದರೂ ಕೂಡ ಉತ್ತರಪ್ರದೇಶ ಯಾಕೆ ಅಭಿವೃದ್ಧಿ ಹೊಂದಿಲ್ಲ” ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಂದು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಷಾ ಅವರನ್ನು ಪ್ರಶ್ನಿಸಿದ್ದಾರೆ. ಆ ಮೂಲಕ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವುದರ ವಿರುದ್ಧ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
” 370 ನೇ ವಿಧಿಯನ್ನು ತೆಗೆದುಹಾಕುವುದರಿಂದ ಕಾಶ್ಮೀರ ಅಭಿವೃದ್ಧಿಯನ್ನು ಹೊಂದುವುದಾದರೆ ಅದನ್ನು ನಾನು ಸಂತೋಷದಿಂದ ಸ್ವಾಗತಿಸುತ್ತೇನೆ. ಆದರೆ ನಮ್ಮ ದೇಶದ ಪ್ರಧಾನಿ, ರಾಷ್ಟ್ರಪತಿ, ಹಲವು ರಾಜ್ಯಪಾಲರು ಮತ್ತು ನೀವು (ಸ್ಪೀಕರ್) ಉತ್ತರ ಪ್ರದೇಶದಿಂದಲೇ ಆಯ್ಕೆಯಾಗಿ ಬಂದಿದ್ದರೂ ಸಹ ಉತ್ತರ ಪ್ರದೇಶ ಯಾಕೆ ಮೋಸ ಹೋಗಿದೆ ಎಂದು ತಿಳಿಯಲು ಬಯಸುತ್ತೇನೆ. ಪರಿಸ್ಥಿತಿ ಹೀಗಿರುವಾಗ ಕಾಶ್ಮೀರ ಪ್ರಗತಿಯಾಗುತ್ತದೆ ಎಂದು ಯಾರಾದರೂ ಹೇಗೆ ಹೇಳುತ್ತೀರಿ?” ಎಂದು ಅಖಿಲೇಶ್ ಯಾದವ್ ಲೋಕಸಭೆಯಲ್ಲಿ ತಮ್ಮ ಭಾಷಣದಲ್ಲಿ ಕಿಡಿಕಾರಿದ್ದಾರೆ.
“ಸ್ವಾತಂತ್ರ್ಯದ 70 ವರ್ಷಗಳಲ್ಲಿ ಕಾಶ್ಮೀರಕ್ಕೆ ಏನೂ ಆಗಿಲ್ಲ ಎಂದು ನೀವು ಹೇಳುತ್ತೀರಿ, ನೀವು (ಬಿಜೆಪಿ) ಅಧಿಕಾರದಲ್ಲಿದ್ದ 11 ವರ್ಷಗಳನ್ನು ಅದರಲ್ಲಿ ಸೇರಿಸಿದ್ದೀರಾ?” ಎಂದು ಅಖಿಲೇಶ್ ವ್ಯಂಗ್ಯವಾಡಿದ್ದಲ್ಲದೆ, ಈಶಾನ್ಯ ರಾಜ್ಯಗಳಿಗೆ ನೀಡಲಾಗಿರುವ ವಿಶೇಷ ಸವಲತ್ತುಗಳನ್ನು ಯಾವಾಗ ಕಿತ್ತುಹಾಕುತ್ತೀರಿ? ಎಂದು ಸಹ ಪ್ರಶ್ನಿಸಿದರು.
“ಪಾಕ್ ಆಕ್ರಮಿತ ಕಾಶ್ಮೀರ ಯಾರಿಗೆ ಸೇರಿದೆ ಎಂದು ಸರ್ಕಾರ ಉತ್ತರಿಸಬೇಕು. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಖಾಲಿ ಇರುವ 24 ಸ್ಥಾನಗಳನ್ನು (ಪಿಒಕೆ ಯಿಂದ) ಭರ್ತಿ ಮಾಡಲು ಏಕೆ ಸಾಧ್ಯವಾಗಲಿಲ್ಲ, ಈ ಸ್ಥಾನಗಳನ್ನು ಮುಂದಾದರೂ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವರು ನಮಗೆ ಭರವಸೆ ನೀಡಬಹುದೇ?” ಎಂದಿದ್ದಾರೆ.



Yella thindu kaali maadi jamakkenu ulisade ieega raga hadthane. Ninna appanige kelo