Homeಕರ್ನಾಟಕಕೋಮು ದ್ವೇಷ ಭಾಷಣದ ಆರೋಪ: ಪ್ರಕರಣ ರದ್ದು ಕೋರಿ ಶಾಸಕ ಹರೀಶ್‌ ಪೂಂಜ ಅರ್ಜಿ

ಕೋಮು ದ್ವೇಷ ಭಾಷಣದ ಆರೋಪ: ಪ್ರಕರಣ ರದ್ದು ಕೋರಿ ಶಾಸಕ ಹರೀಶ್‌ ಪೂಂಜ ಅರ್ಜಿ

- Advertisement -
- Advertisement -

ಬೆಂಗಳೂರು: ತನ್ನ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ‘ಕೋಮು ದ್ವೇಷ ಹರಡಿದ ಆರೋಪದಡಿ  ದಾಖಲಾಗಿರುವ ಎಫ್‌ಐಆರ್‌ ಮತ್ತು ಈ ಸಂಬಂಧದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್‌ ಪೂಂಜ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತ ರಿಟ್‌ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಹರೀಶ್‌ ‍ಪೂಂಜ ಪರ ಹೈಕೋರ್ಟ್‌ ವಕೀಲ ಪ್ರಸನ್ನ ದೇಶಪಾಂಡೆ ಅವರು, ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇದು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಈ ಅರ್ಜಿ ವಿಚಾರಣೆ, ಈ ನ್ಯಾಯಪೀಠದ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂಬುದನ್ನು ಮೌಖಿಕವಾಗಿ ವ್ಯಕ್ತಪಡಿಸಿದ್ದಲ್ಲದೆ, ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು ಅರ್ಜಿಯನ್ನು ಇದೇ 8ಕ್ಕೆ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ಆದೇಶಿಸಿತು.

ಪ್ರಕರಣದ ಹಿನ್ನೆಲೆ

ಮೇ 3ರಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ನೂತನ ದೇವಸ್ಥಾನದ ಬ್ರಹ್ಮಕಲಶ (ಉದ್ಘಾಟನೆ) ಕಾರ್ಯಕ್ರಮದಲ್ಲಿ  ಸ್ಥಳೀಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಮುಸ್ಲಿಮರ ವಿರುದ್ದ ಕೋಮುದ್ವೇಷದ ಭಾಷಣ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಜನಪ್ರತಿನಿಧಿಯೇ ಶಾಂತಿ, ಸಾಮರಸ್ಯದ ಊರಿನಲ್ಲಿ  ಮತೀಯದ್ವೇಷ ಕಾರಿರುವುದಕ್ಕೆ ಗ್ರಾಮದ ಜನರು ಬೇಸರ ವ್ಯಕ್ತಪಡಿಸಿದ್ದರು.

ತೆಕ್ಕಾರು ಗ್ರಾಮದ ಭಟ್ರಬೈಲಿನ ದೇವರಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಿದ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮವನ್ನು 2025 ಏಪ್ರಿಲ್ 25ರಿಂದ ಮೇ 3ರವರೆಗೆ ಆಯೋಜಿಸಲಾಗಿತ್ತು. ಕೊನೆಯ ದಿನವಾದ ಶನಿವಾರ (ಮೇ.3) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಹರೀಶ್ ಪೂಂಜಾ, ಬ್ಯಾರಿ ಸಮುದಾಯದವರ (ಸ್ಥಳೀಯ ಮುಸ್ಲಿಮರು) ವಿರುದ್ಧ ದ್ವೇಷ ಭಾಷಣ ಮಾಡಿದ್ದರು.

“ಬ್ಯಾರಿಗಳ (ಮುಸ್ಲಿಮರ) ಆಕ್ರಮಣದಿಂದ ಅಯೋಧ್ಯೆಯ ರಾಮ ಮಂದಿರ ಮಸೀದಿಯಾದ ಬಳಿಕ ನಾವು 500 ವರ್ಷ ಕಾದೆವು. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು.. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಎಂದಾಗ ಅರ್ಥ ಮಾಡಿಕೊಳ್ಳಲಿಲ್ಲ. ನಾವು 500 ವರ್ಷ ಕಾದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದೆವು.” ಎಂದು ಪೂಂಜಾ ಹೇಳಿದ್ದರು.

“ತೆಕ್ಕಾರಿನಲ್ಲಿ ಒಬ್ಬನೇ ಒಬ್ಬ ಬ್ಯಾರಿ (ಮುಸ್ಲಿಂ) ಇಲ್ಲದಿದ್ದಾಗಲೂ ನಮ್ಮ ಹಿರಿಯರು ಗೋಪಾಲಕೃಷ್ಣ ದೇವರನ್ನು ನಂಬಿಕೊಂಡು ಬಂದಿದ್ದರು. ಬಳಿಕ ಬ್ಯಾರಿಗಳ ಅಥವಾ ಟಿಪ್ಪುವಿನ ಆಕ್ರಮಣದಿಂದ ಗೋಪಾಲಕೃಷ್ಣ ದೇವಸ್ಥಾನ ಧ್ವಂಸಗೊಂಡು ನೆಲದಡಿಗೆ ಹೋದರೂ, ನಾವು ಹಿಂದೂ ಸಮಾಜ ನಿದ್ದೆಯಲ್ಲಿದ್ದೆವು, ನಾವು ಎದ್ದಿರಲಿಲ್ಲ. ಕಾಲಚಕ್ರ ಉರುಳಿ, ಉರುಳಿ ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠೆ ಆದ ಮರುವರ್ಷ, ಅಂದರೆ 2025ರಲ್ಲಿ ತೆಕ್ಕಾರಿನಲ್ಲಿ ಇರುವ ಅತ್ಯಲ್ಪ ಹಿಂದೂ ಸಮಾಜ ಒಂದಾಗಿ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠೆ ಮಾಡುವ ಸಂಕಲ್ಪ ಬಂತಲ್ವ ಅದಕ್ಕೆ ಗೋಪಾಲಕೃಷ್ಣ ದೇವರ ಪ್ರೇರಣೆ ಇದೆ” ಎಂದು ಅವರು ತಿಳಿಸಿದ್ದರು.

“ಇತಿಹಾಸವನ್ನು ಮತ್ತೊಮ್ಮೆ ನೀವು ಮರೆತ್ತದ್ದೇ ಆದರೆ, ನಿಮ್ಮ ಊರಿನಲ್ಲಿರುವುದು 150 ಹಿಂದೂಗಳ ಮನೆಗಳು, ಒಂದು ಸಾವಿರಕ್ಕಿಂತಲೂ ಅಧಿಕ ಇರುವುದು ಬ್ಯಾರಿಗಳು. ಇನ್ನು 10 ವರ್ಷ ಕಳೆದರೆ 1,200 ಇರುವ ಬ್ಯಾರಿಗಳ ಸಂಖ್ಯೆ 600ಕ್ಕೆ ಇಳಿಯುವುದಿಲ್ಲ. ಇನ್ನು 10 ವರ್ಷ ಕಳೆದರೆ ತೆಕ್ಕಾರಿನ ಬ್ಯಾರಿಗಳ ಸಂಖ್ಯೆ 5 ಸಾವಿರ ಆಗುತ್ತದೆ. 5 ಸಾವಿರದಿಂದ 10 ಸಾವಿರ ಆದರೂ, ಇಲ್ಲಿರುವ ಹಿಂದೂ ಸಮಾಜ ಸನಾತನವಾಗಿ ಸಾವಿರ ವರ್ಷ ಗೋಪಾಲಕೃಷ್ಣ ದೇವರನ್ನು ಆರಾಧನೆ ಮಾಡುತ್ತೇವೆ ಎನ್ನುವ ಸಂಕಲ್ಪ ಮಾಡುವ ದಿನ, ಇಂದಿನ ಬ್ರಹ್ಮಕಲಶೋತ್ಸವದ ದಿನ” ಎಂದಿದ್ದರು.

“ಬ್ಯಾರಿಗಳಲ್ಲಿ ಎಷ್ಟು ಜಾತಿ ಇದೆ ಎಂದು ಕೇಳಿದರೆ ಅಂಕಿ ಅಂಶ ಹೇಳುತ್ತದೆ, ಮೊನ್ನೆ ಸಿದ್ದರಾಮಯ್ಯ ಜನಗಣತಿ ಮಾಡಿದರು, ಅದರಲ್ಲಿ ಬ್ಯಾರಿಗಳಲ್ಲಿ ಜಾತಿ ಇದೆಯಾ ಕೇಳಿದರೆ, ಜಾತಿ ಇಲ್ಲ ಎಂದಿದ್ದಾರೆ. ಬ್ಯಾರಿಗಳಲ್ಲಿ ಕನಿಷ್ಠ 70-74 ಜಾತಿಗಳಿವೆ. ಆದರೆ, ನಮಗೆ ಯಾವ ಜಾತಿ ಎಂದು ಯಾರಿಗೂ ಗೊತ್ತಿಲ್ಲ. ನಮಗೆ ಗೊತ್ತಿರುವುದು ಏನು ಎಂದರೆ, ಉಸ್ಮಾನಾಕ, ಅಬ್ದುಲ್ಲಾಕ, ಇಬ್ರಾಹಿಂ ಎಲ್ಲಾ ಬ್ಯಾರಿ ಎಂದೇ ಗೊತ್ತಿರುವುದು. ಆದರೆ, ಹಿಂದೂ ಸಮಾಜದಲ್ಲಿ ನಾವು ಆ ರೀತಿಯಲ್ಲ. ಅವನು ಯಾರು..ಅವನು ಬ್ರಾಹ್ಮಣ, ಇವನು ಯಾರು..ಅವನು ಶೆಟ್ಟಿ, ಅವನು ಯಾರು.. ಅವನು ಬಿಲ್ಲವ, ಇವನು ಯಾರು..ಅವನು ಗೌಡ, ಇವನು ಯಾರು..ಅವನು ಕುಲಾಲ, ಈ ರೀತಿಯ ಜಾತಿ-ಜಾತಿ ನಮಗೆ ಮಾತ್ರ ಗೊತ್ತಿರುವುದಲ್ಲ, ಬ್ಯಾರಿಗಳಿಗೂ ಗೊತ್ತಿದೆ” ಎಂದು ಅವರು ತಿಳಿಸಿದ್ದರು.

“ಒಂದು ಸರ್ಕಾರಿ ಜಾಗವಿದೆ, ಅದನ್ನು ಒಬ್ಬ ಬ್ಯಾರಿ ಅತಿಕ್ರಮಣ ಮಾಡಿ ಅಡಿಕೆ ಗಿಡ ನೆಟ್ಟಿದ್ದಾನೆ. ನೀವು ಏನಾದರು ಮಾಡಿ ಸಹಕಾರ ಮಾಡಿದರೆ ನಮಗೆ ದೇವಸ್ಥಾನ ಮಾಡಬಹುದು ಎಂದು ತೆಕ್ಕಾರಿನವರು ಹೇಳಿದ್ದರು. ಎಲ್ಲಾ ಯುವಕರು ಒಂದು ನೆನಪು ಇಟ್ಟುಕೊಳ್ಳಿ ಆವತ್ತು ಇದ್ದಿದ್ದು ಬಿಜೆಪಿ ಸರ್ಕಾರ. ಆವತ್ತು ನಾನು ತಹಶೀಲ್ದಾರ್‌ಗೆ ಕರೆ ಮಾಡಿ ಮರುದಿನ ಹೋಗಿ ಸ್ಥಳ ಮಹಜರು ಮಾಡಿ ವರದಿ ಕೊಡಿ ಎಂದು ಹೇಳಿದ್ದೆ. ನಾನು ಹೇಳಿದ ಮರುದಿನ ತಹಶೀಲ್ದಾರ್ ಬಂದು ಸ್ಥಳ ತನಿಖೆ ಮಾಡಿ ವರದಿ ಕೊಟ್ಟರು. ವರದಿ ಕೊಟ್ಟ ಬಳಿಕ ಡಿಸಿಯಾದ ರವಿ ಅವರಿಗೆ ಆ ಜಾಗದಲ್ಲಿ ಗೋಪಾಲಕೃಷ್ಣ ದೇವಸ್ಥಾನ ಇದೆ ಎಂದು ನಾನು ಹೇಳಿದ್ದೆ. ತಕ್ಷಣ ಆ ಜಾಗದ ಆರ್‌ಟಿಸಿಯನ್ನು ಗೋಪಾಲಕೃಷ್ಣ ದೇವರ ಹೆಸರಿಗೆ ಮಾಡಿ ಕೊಡಿ ಎಂದಿದ್ದೆ. 25 ಸೆಂಟ್ಸ್ ಜಾಗ ಗೋಪಾಲಕೃಷ್ಣ ದೇವರ ಹೆಸರಿಗೆ ಆಯ್ತು. ಇದು ನಾನು, ಡಿಸಿ ಸೇರಿದಂತೆ ಯಾರ ಸಾಧನೆಯೂ ಅಲ್ಲ, ಇತಿಹಾಸದಲ್ಲಿ ಈ ಮೊದಲು ಈ ರೀತಿ ಅಗಿಲ್ಲ, ಮುಂದೆಯೂ ಆಗಲ್ಲ” ಎಂದು ಪೂಂಜಾ ಹೇಳಿದ್ದರು.

“ಇಲ್ಲಿನ ಕಂತ್ರಿ (ದುಷ್ಟ) ಬ್ಯಾರಿಗಳು ಟ್ಯೂಬ್‌ಲೈಟ್ ಪುಡಿಗೈದಾಗ, ಸಂಖ್ಯೆ ಕಡಿಮೆ ಇದ್ದರೂ ಜನ ಸಾಗರ ಇರುವ ಗ್ರಾಮದ ರೀತಿ ತೆಕ್ಕಾರಿನವರು ಯಾರೂ ಎದೆಗುಂದಲಿಲ್ಲ. ಅಣ್ಣ ದಿನ ಬೆಳಗಾದರೆ ತೆಕ್ಕಾರಿನ ಕಂತ್ರಿ ಬ್ಯಾರಿಗಳು ಬಂದು ಟ್ಯೂಬ್ ಲೈಟ್‌ ಪುಡಿ ಮಾಡುತ್ತಿದ್ದಾರೆ, ಡೀಸೆಲ್ ಕದಿಯುತ್ತಿದ್ದಾರೆ ಎಂದು ನಮ್ಮ ಯುವಕರು ಹೇಳಿದ್ದಾರೆ. ನಾನು ಹೇಳಿದೆ ನೀವು ಏನೂ ತಲೆಬಿಸಿ ಮಾಡಿಕೊಳ್ಳಬೇಡಿ. ಬ್ರಹ್ಮಕಲಶ ಆಗಿ ನಾಡಿದ್ದು ದೊಡ್ಡ ಕಲಶ ಆಗುವ ಮುನ್ನ ಟ್ಯೂಬ್‌ಲೈಟ್ ಪುಡಿ ಮಾಡಿದವರಲ್ಲಿ ಯಾರಿಗಾದರು ಗೊತ್ತಾಗುತ್ತದೆ. ಗೋಪಾಲಕೃಷ್ಣ ದೇವರು ಎಲ್ಲಾದರು ತೋರಿಸುತ್ತಾರೆ, ನೀವು ಗಡಿಬಿಡಿ ಮಾಡಲು ಹೋಗಬೇಡಿ ಎಂದು ಹೇಳಿದೆ” ಎಂದಿದ್ದರು.

“ನಿಮಗಿದು ಗೊತ್ತಿರಲಿ, ನಮ್ಮ ದೇವಸ್ಥಾನದ ನಮ್ಮ ದೊಡ್ಡ ತಪ್ಪು ಯಾವುದೆಂದರೆ, ನಾವು ಎಲ್ಲರನ್ನು ಸೌಹಾರ್ದತೆಯಿಂದ ಕೊಂಡೊಯ್ಯಲು ನೋಡುವುದು. ನಾವು ಮಸೀದಿಗೆ ಏಕೆ ಆಹ್ವಾನ ಪತ್ರಿಕೆ ಕೊಡಬೇಕಿತ್ತು? ಮಸೀದಿಗೆ ಹೋಗಿ ಆಹ್ವಾನ ಪತ್ರಿಕೆ ಕೊಟ್ಟಿದ್ದಕ್ಕಲ್ವ ಟ್ಯೂಬ್ ಲೈಟ್ ಪುಡಿಯಾಗಿದ್ದು? ಆಹ್ವಾನ ಪತ್ರಿಕೆ ಕೊಟ್ಟಿಲ್ಲದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ನಮಗೂ ಅವರಿಗೂ (ಮುಸ್ಲಿಮರು) ಸಂಬಂಧ ಇಲ್ಲ. ನಾವು ಯಾವುದನ್ನೂ ಸರಿದೂಗಿಸಿಕೊಂಡು ಹೋಗುವ ಅಗತ್ಯ ಇಲ್ಲ. ನಾವು ಹಿಂದೂಗಳು ಹಿಂದೂಗಳೇ, ಅದರಲ್ಲಿ ಎರಡು ಮಾತಿಲ್ಲ. ಟ್ಯೂಬ್‌ಲೈಟ್‌ ಪುಡಿ ಮಾಡಿದ್ದು ನಾನೇ ಎಂದು, ಕಂತ್ರಿ ಬ್ಯಾರಿಯನ್ನು ತೆಕ್ಕಾರಿನ ಜನತೆಯ ಮುಂದೆ ಗೋಪಾಲಕೃಷ್ಣ ದೇವರು ತೋರಿಸಲಿ” ಎಂದು ಪೂಂಜಾ ತಿಳಿಸಿದ್ದರು.

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಆರೋಪ:  ಶಾಸಕ‌ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...