ರಾಜ್ಯ ಸಾರಿಗೆ ಇಲಾಖೆಯು ಸೆಪ್ಟೆಂಬರ್ 6 ರಂದು ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳಲ್ಲಿ ಓಲಾ, ಉಬರ್ ಮತ್ತು ರಾಪಿಡೋ ಆಟೋ ಸೇವೆಗಳನ್ನು ನಿಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ. ಓಲಾ, ಉಬರ್ ಸೇವೆಗಳು 2 ಕಿಲೋಮೀಟರ್‌ಗಿಂತ ಕಡಿಮೆ ದೂರಕ್ಕೂ 100 ರೂ. ಶುಲ್ಕ ವಿಧಿಸುತ್ತದೆ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಿದ ನಂತರ ಇಲಾಖೆಯು ಈ ಸೂಚನೆ ನೀಡಿದೆ.
ಪ್ರಸ್ತುತ, ಬೆಂಗಳೂರಿನಲ್ಲಿ ಮೊದಲ 2 ಕಿ.ಮೀಗೆ ಕನಿಷ್ಠ ಆಟೋ ದರವನ್ನು 30 ರೂ.ಗೆ ನಿಗದಿಪಡಿಸಲಾಗಿದೆ. ನಂತರ ಪ್ರತಿ ಕಿಲೋಮೀಟರ್‌ಗೆ 15 ರೂ. ಶುಲ್ಕ ವಿಧಿಸಲಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಕಂಪನಿಗಳು ತಮ್ಮ ಆಟೋ ಸೇವೆಗಳನ್ನು ಆದಷ್ಟು ಬೇಗನೆ ನಿಲ್ಲಿಸಬೇಕು ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿಕರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸಬಾರದು ಎಂದು ಆದೇಶ ಹೇಳಿದೆ. ಆದೇಶವನ್ನು ಅನುಸರಿಸಲು ವಿಫಲವಾದರೆ ಕಾನೂನು ಕ್ರಮ ಜರುಗಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ತಮಿಳುನಾಡು: ಕಾಂಗ್ರೆಸ್ ಪಕ್ಷದಿಂದ ಕುಂಭಕೋಣಂ ಪಾಲಿಕೆ ಮೇಯರ್ ಆದ ಆಟೋರಿಕ್ಷಾ ಚಾಲಕ
ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ಸ್-2016 ರ ಪ್ರಕಾರ ಓಲಾ ಮತ್ತು ಉಬರ್‌ಗೆ ಟ್ಯಾಕ್ಸಿಗಳನ್ನು ಮಾತ್ರ ಓಡಿಸಲು ಪರವಾನಗಿ ನೀಡಲಾಗಿದೆಯೆ ಹೊರತು ಆಟೋಗಳನ್ನು ಓಡಿಸಲು ಅಲ್ಲ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ತಿಳಿಸಿದ್ದಾರೆ.
“ಟ್ಯಾಕ್ಸಿ ಎಂದರೆ ಚಾಲಕನನ್ನು ಹೊರತುಪಡಿಸಿ ಆರು ಪ್ರಯಾಣಿಕರನ್ನು ಮೀರದ ಆಸನ ಸಾಮರ್ಥ್ಯ ಹೊಂದಿರುವ ಮೋಟಾರ್ ಕ್ಯಾಬ್” ಎಂದು ಕುಮಾರ್ ತಿಳಿಸಿದ್ದಾರೆ. ಆಟೋಗಳನ್ನು ಓಡಿಸಲಾಗುತ್ತಿದೆ ಎಂದರೆ ಕಂಪೆನಿಗಳು ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದರ್ಥವಾಗಿದೆ ಎಂದಿದ್ದಾರೆ.
ಸಾರಿಗೆ ಹೆಚ್ಚುವರಿ ಆಯುಕ್ತ ಮತ್ತು ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎಲ್ ಹೇಮಂತ್ ಕುಮಾರ್, “ಕ್ಯಾಬ್-ಅಗ್ರಿಗೇಟರ್ ಪರವಾನಗಿಯೊಂದಿಗೆ ಆಟೋರಿಕ್ಷಾಗಳನ್ನು ಓಡಿಸಬಾರದು. ಅಗ್ರಿಗೇಟರ್ ನಿಯಮಗಳು ಕ್ಯಾಬ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಆ್ಯಪ್ ಮೂಲಕ ಆಟೋರಿಕ್ಷಾ ಸೇವೆಗಳನ್ನು ನಿಲ್ಲಿಸಲು ಮತ್ತು ವರದಿಯನ್ನು ಸಲ್ಲಿಸಲು ನಾವು ಅವರನ್ನು ಕೇಳಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳ; ಎಷ್ಟು ದೂರಕ್ಕೆ ಎಷ್ಟಾಗುತ್ತದೆ? ಇಲ್ಲಿದೆ ಸುಲಭ ಲೆಕ್ಕ!
ಅಕ್ಟೋಬರ್ 6 ರಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಈ ವಿಷಯದ ಬಗ್ಗೆ ಧ್ವನಿ ಎತ್ತಿದ್ದು, ಸಿಎಂ ಮತ್ತು ಸಾರಿಗೆ ಸಚಿವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಅವರು, ಬೆಂಗಳೂರಿನ ಮೊದಲ ಮತ್ತು ಕೊನೆಯ ಮೈಲಿಯ ಸಂಪರ್ಕಕ್ಕೆ ಆಟೋ ರಿಕ್ಷಾ ಬೆನ್ನೆಲುಬಾಗಿದೆ. ಟೆಕ್ ಅಗ್ರಿಗೇಟರ್‌ಗಳು 30 ರೂ.ಗಳ ನಿಗದಿತ ಮಿತಿಗೆ ವಿರುದ್ಧವಾಗಿ 100 ರೂ. ವಿಧಿಸುವ ಕುರಿತು ನಾವು ಇತ್ತೀಚೆಗೆ ಹಲವು ದೂರುಗಳನ್ನು ಸ್ವೀಕರಿಸಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇನೆ ಎಂದಿದ್ದರು.
ನಗರದ ಆಟೋ ಯೂನಿಯನ್‌ಗಳು ತಮ್ಮದೇ ಆದ ‘ನಮ್ಮ ಯಾತ್ರಿ’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿವೆ. ಆಟೋರಿಕ್ಷಾ ಚಾಲಕರ ಒಕ್ಕೂಟವು ಬೆಕ್ನ್ ಫೌಂಡೇಶನ್ ಸಹಭಾಗಿತ್ವದಲ್ಲಿ ನವೆಂಬರ್ 1 ರಂದು ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋರಿಕ್ಷಾ ದರ ಏರಿಕೆ: ಕನಿಷ್ಠ ಬೆಲೆ 25 ರೂ.ನಿಂದ 30 ರೂಪಾಯಿಗೆ ಹೆಚ್ಚಳ
“ನಮ್ಮ ಯಾತ್ರಿ ಅಪ್ಲಿಕೇಶನ್ ಅನ್ನು ನವೆಂಬರ್ 1 ರಿಂದ ಪ್ರಾರಂಭಿಸಲು ನಮ್ಮ ಒಕ್ಕೂಟವು ಯೋಜಿಸಿದೆ. ನಾವು ಸರ್ಕಾರ ನಿಗದಿಪಡಿಸಿದ ದರವನ್ನು ಅನುಸರಿಸುತ್ತೇವೆ. ಅದರ ಮೇಲೆ ಹೆಚ್ಚುವರಿ 10ರೂ. ಅನ್ನು ಪಿಕ್ ಅಪ್ ಶುಲ್ಕವಾಗಿ ಸಂಗ್ರಹಿಸುತ್ತೇವೆ. ಮೆಟ್ರೋ ನಿಲ್ದಾಣಗಳು ಮತ್ತು ನಿವಾಸ/ಕಚೇರಿಗಳ ನಡುವೆ 2 ಕಿಮೀ ವ್ಯಾಪ್ತಿಯಲ್ಲಿ ಫ್ಲಾಟ್ 40 ರೂ. ದರವನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ” ಎಂದು ಎಆರ್‌ಡಿಯು ಅಧ್ಯಕ್ಷ ಡಿ ರುದ್ರಮೂರ್ತಿ ಹೇಳಿದ್ದಾರೆ ಎಂದು ಹಿಂದೂಸ್ತಾನ್ ವರದಿ ಮಾಡಿದ್ದಾರೆ.


