ಆಲ್ಟ್ ನ್ಯೂಸ್ ಸಹ ಸಂಸ್ಥಾಪಕರು ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಪತ್ರಕರ್ತರಾದ ಮೊಹಮ್ಮದ್ ಝುಬೇರ್ ಹಾಗೂ ಪ್ರತೀಕ್ ಸಿನ್ಹಾ ಅವರು 2022ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವವರನ್ನು ಸಮಿತಿಯು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್, ಪೋಪ್ ಫ್ರಾನ್ಸಿಸ್, ಟುವಾಲು ವಿದೇಶಾಂಗ ಸಚಿವ ಸೈಮನ್ ಕೋಫೆ ಸೇರಿ ಹಲವರು ನಾಮನಿರ್ದೇಶನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
2022ರ ನೊಬೆಲ್ ಶಾಂತಿ ಪ್ರಶಸ್ತಿ ಸ್ಪರ್ಧೆ ಪಟ್ಟಿಯಲ್ಲಿ ಸುಮಾರು 343 ಅಭ್ಯರ್ಥಿಗಳಿದ್ದಾರೆ. ಈ ಪೈಕಿ 251 ವ್ಯಕ್ತಿಗಳು ಮತ್ತು 92 ಸಂಸ್ಥೆಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಪಟ್ಟಿಯಲ್ಲಿ ಝುಬೇರ್ ಮತ್ತು ಪ್ರತೀಕ್ ಸಿನ್ಹಾ ಹೆಸರು ಸೇರಿರುವುದು ವಿಶೇಷ.
ಇದನ್ನೂ ಓದಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯರ ಕೆಲಸವನ್ನು ಮಾಧ್ಯಮಗಳೇ ಮಾಡುತ್ತಿವೆ: ಜುಬೇರ್
ನೊಬೆಲ್ ಪ್ರಶಸ್ತಿಯ 50ನೇ ವಾರ್ಷಿಕೋತ್ಸವ ಇದಾಗಿದ್ದು, ಅಂತಿಮ ಹಂತದವರೆಗೆ ನಾಮನಿರ್ದೇಶನಗೊಂಡಿರುವವರ ಹೆಸರನ್ನು ಬಹಿರಂಗಪಡಿಸಬಾರದು ಎಂಬುದು ನಿಯಮ. ಆದರೆ, ಮೂಲಗಳ ಪ್ರಕಾರ ಸಿನ್ಹಾ ಮತ್ತು ಝುಬೇರ್ ಮಾತ್ರವಲ್ಲದೆ, ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್‌ಸ್ಕಿ, ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಕೂಡ ಸ್ಪರ್ಧಿಗಳಾಗಿದ್ದಾರೆ.
ಅಕ್ಟೋಬರ್ 7ರಂದು ಓಸ್ಲೋದಲ್ಲಿ ನಡೆಯುವ ಸಮಾರಂಭದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ.
ಮುಖ್ಯವಾಗಿ ಬಿಜೆಪಿ ಐಟಿ ಸೆಲ್‌ಗಳಿಂದ ಹೊರ ಬರುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆ ಎಳೆದ ಕಾರಣಕ್ಕೆ ಝುಬೇರ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಜೂನ್ ತಿಂಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ದೆಹಲಿ ಪೊಲೀಸರು ಝುಬೇರ್ ಅವರನ್ನು ಬಂಧಿಸಿದ್ದರು. ಬಳಿಕ ಝುಬೇರ್ ವಿರುದ್ಧ ಉತ್ತರ ಪ್ರದೇಶದಲ್ಲಿ ಆರು ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ: ‘ಬಂಧನವನ್ನು ದಂಡಿಸುವ ಸಾಧನವಾಗಿ ಬಳಸುವಂತಿಲ್ಲ’: ಜುಬೇರ್ ಪ್ರಕರಣದ ವಿವರವಾದ ತೀರ್ಪು ಬಿಡುಗಡೆ
ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಝುಬೇರ್ ಅವರಿಗೆ ಜಾಮೀನು ನೀಡಿತ್ತು. ಈ ಸಂದರ್ಭದಲ್ಲಿ ಎಲ್ಲ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸೂಚಿಸಿತ್ತು.



ಇದು ಭಾರತೀಯರೆಲ್ಲರಿಗೂ ಸಂತಸದ ವಿಚಾರ.