Homeಮುಖಪುಟಇದು ಪ್ರಜಾಪ್ರಭುತ್ವದ ಬೇರುಗಳ ಮೇಲಿನ ದಾಳಿ: ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ ನೊಬೆಲ್ ಪುರಸ್ಕೃತ...

ಇದು ಪ್ರಜಾಪ್ರಭುತ್ವದ ಬೇರುಗಳ ಮೇಲಿನ ದಾಳಿ: ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ ನೊಬೆಲ್ ಪುರಸ್ಕೃತ ಅಮರ್ತ್ಯಸೇನ್

ಪ್ರಜಾಪ್ರಭುತ್ವದ ಹೊರತಾಗಿ ಬೇರಾವುದೆ ಮಾರ್ಗದಿಂದ ನಾವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಇಲ್ಲವೆನ್ನುವುದು ನನ್ನ ನಂಬಿಕೆ ಎಂದ ಅಮರ್ತ್ಯ ಸೇನ್

- Advertisement -
- Advertisement -

ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್‌ರು ಜಮ್ಮು-ಕಾಶ್ಮೀರವನ್ನು ಇಬ್ಬಾಗಿಸಿ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಜಾಪ್ರಭುತ್ವದ ಹೊರತಾಗಿ ಬೇರಾವುದೆ ಮಾರ್ಗದಿಂದ ನಾವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಇಲ್ಲವೆನ್ನುವುದು ನನ್ನ ನಂಬಿಕೆ ಎಂದಿರುವ 85 ವಯಸ್ಸಿನ ಈ ಅನುಭವಿ ಆರ್ಥಿಕ ತಜ್ಞರು ಮಾನವಹಕ್ಕುಗಳ ರಕ್ಷಣೆಗೆ ವಿರುದ್ಧವಾದ ಕ್ರಮ ಇದು ಎಂದು ಕೇಂದ್ರದ ಕ್ರಮವನ್ನು ಖಂಡಿಸಿದ್ದಾರೆ.

ಒಬ್ಬ ಭಾರತೀಯನಾಗಿ ನನಗೆ ಈ ವಿಚಾರದ ಬಗ್ಗೆ ಹೆಮ್ಮೆ ಎನಿಸುವುದಿಲ್ಲ. ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಮೊದಲ ಪಶ್ಚಿಮೇತ್ತರ ದೇಶ ಎಂಬ ಹೆಗ್ಗಳಿಕೆಯೊಂದಿಗೆ, ಪ್ರಜಾತಾಂತ್ರಿಕ ನಡವಳಿಕೆಗಳು ಹೇಗಿರಬೇಕು ಎಂಬುದಕ್ಕೆ ಒಂದು ಮಾನದಂಡವಾಗಿ ರೂಪುಗೊಂಡಿತ್ತು ನನ್ನ ಭಾರತ. ಇದೀಗ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ಕ್ರಮದಿಂದಾಗಿ ನಾವು ಆ ಘನತೆಯನ್ನೆ ಕಳೆದುಕೊಂಡಿದ್ದೇವೆ ಎಂದಿದ್ದಾರೆ ಸೇನ್. ಅದು ಕಾಶ್ಮೀರಿಗಳಿಗೆ ಸೇರಿರುವ ನೆಲದ ವಿಚಾರವಾಗಿರುವುದರಿಂದ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಕಾಶ್ಮೀರಿಗರಿಗೇ ಬಿಡಬೇಕು ಎಂಬ ಮಾತನ್ನೂ ಅವರು ಹೇಳಿದ್ದಾರೆ.

ಜೊತೆಗೆ, ಜಮ್ಮು-ಕಾಶ್ಮೀರದ ರಾಜಕೀಯ ನಾಯಕರನ್ನು ಬಂಧಿಸಿದ ಮತ್ತು ಗೃಹಬಂಧನದಲ್ಲಿರಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಅವರು ಟೀಕಿಸಿದ್ದಾರೆ. ಜನರ ಪ್ರತಿನಿಧಿಗಳೆನಿಸಿದ ಜನನಾಯಕರ ದನಿಗಳನ್ನು ಕೇಳಿಸಿಕೊಳ್ಳದೆ ನೀವು ಯಾವತ್ತಿಗೂ ನ್ಯಾಯಬದ್ಧ ತೀರ್ಮಾನಕ್ಕೆ ಬರಲಾರಿರಿ ಎಂಬುದು ನನ್ನ ದೃಢವಾದ ನಂಬಿಕೆ. ಹಿಂದೆಲ್ಲ ದೇಶವನ್ನು ಮುನ್ನಡೆಸಿದ ಹಾಗೂ ಸರ್ಕಾರಗಳನ್ನು ರಚಿಸಿದಂತಹ ನಾಯಕರುಗಳನ್ನು ನೀವು ಜೈಲಿನಲ್ಲಿ ಬಂಧಿಸಿಡುವುದರ ಅಥವಾ ಗೃಹಬಂಧನದಲ್ಲಿ ಇಡುವುದರ ಮೂಲಕ ಪ್ರಜಾಪ್ರಭುತ್ವದ ಗಟ್ಟಿಗೊಳಿಸಿದ ಬೇರುಗಳ ಮೇಲೆಯೇ ದಾಳಿ ಮಾಡಿದಂತಾಗಿದೆ ಎಂದವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಫರೂಕ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಸೇರಿದಂತೆ ಪೀಪಲ್ ಕಾನ್ಫರೆನ್ಸ್‌ನ ನಾಯಕರಾದ ಸಜದ್ ಲೋನ್, ಜಮ್ಮುಕಾಶ್ಮೀರ ಪೀಪಲ್ಸ್ ಮೂವ್‌ಮೆಂಟಿನ ನಾಯಕ ಶಾ ಫೇಸಲ್, ರಾಜ್ಯ ಕಾಂಗ್ರೆಸ್ ನಾಯಕ ಗುಲಾಂ ಅಹ್ಮದ್ ಮಿರ್ ಸೇರಿದಂತೆ ಹಲವಾರು ರಾಜಕೀಯ ನಾಯಕರುಗಳನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ತನ್ನ ನಿರ್ಧಾರದ ವಿರುದ್ಧ ಭುಗಿಲೇಳಲಿದ್ದ ಪ್ರತಿಭಟನೆ ಮತ್ತು ಅದರಿಂದ ಉಂಟಾಗಲಿದ್ದ ಜೀವಹಾನಿ ಹಾಗು ಆಸ್ತಿಪಾಸ್ತಿ ನಷ್ಟವನ್ನು ತಪ್ಪಿಸುವ ಸಲುವಾಗಿ ಇಡೀ ರಾಜ್ಯವನ್ನು ಬೃಹತ್ ಸೇನಾ ಹೊದಿಕೆಯಡಿ ಮುಚ್ಚಿಹಾಕಿರುವ ಕೇಂದ್ರದ ಕ್ರಮವನ್ನು ಸೇನ್‌ರವರು ವಸಾಹತುಶಾಹಿ ಪ್ರಮಾದ ಎಂದು ಕರೆದಿದ್ದಾರೆ. ಬ್ರಿಟಿಷರು ಇನ್ನೂರು ವರ್ಷ ಭಾರತವನ್ನು ಆಳಿದ್ದು ಹೀಗೇ ಅಲ್ಲವೇ ಎಂದಿದ್ದಾರೆ.

ಇದನ್ನೂ ಓದಿ: ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಶಾ ಫೈಸಲ್ ಬಂಧನದ ಹಿಂದಿನ ನಿಜ ಕಾರಣಗಳೇನು ಗೊತ್ತೆ?

ಆಗಸ್ಟ್ ೫ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಅದನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಸಂಸತ್ತಿನಲ್ಲಿ ಎಂಟು ಪಕ್ಷಗಳು ಸರ್ಕಾರದ ಈ ನಡೆಯನ್ನು ವಿರೋಧಿಸಿದ್ದವು. ಆದಾಗ್ಯೂ ಕಾಂಗ್ರೆಸ್ ನಾಯಕರುಗಳಾದ ಜ್ಯೋತಿರಾದಿತ್ಯ ಸಿಂಧಿಯಾ, ಜನಾರ್ಧನ್ ದ್ವಿವೇದಿ, ಕರಣ್ ಸಿಂಗ್, ಜೈವೀರ್ ಶೆರ್ಗಿಲ್, ಮಿಲಿಂದ್ ದಿಯೋರಾ, ಅದಿತಿ ಸಿಂಗ್ ಮತ್ತು ಭುಬನೇಶ್ವರ್ ಕಲಿತಾ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದೋರ್: ಪೊಲೀಸರಿಂದ ಹಣಕ್ಕಾಗಿ ಬೇಡಿಕೆ, ಹಲ್ಲೆ ಆರೋಪ; 25 ವರ್ಷದ ಟ್ಯಾಕ್ಸಿ ಚಾಲಕ ಆತ್ಮಹತ್ಯೆ: ಪೊಲೀಸ್ ಅಮಾನತು

ಇಂದೋರ್: ಪೊಲೀಸರ ಹಲ್ಲೆ ಮತ್ತು ಭ್ರಷ್ಟಾಚಾರವನ್ನು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿದ ನಂತರ 25 ವರ್ಷದ ಟ್ಯಾಕ್ಸಿ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅಧಿಕಾರಿಗಳು ಸಬ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಅಭಿಷೇಕ್...

ಅಮೆರಿಕ ಕೋರ್ಟ್ ಮೆಟ್ಟಿಲೇರಿದ ಅದಾನಿ : ಎಸ್‌ಇಸಿ ವಂಚನೆ ಪ್ರಕರಣ ವಜಾಗೊಳಿಸುವಂತೆ ಮನವಿ

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಮೆರಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್...

ಜಮ್ಮು-ಕಾಶ್ಮೀರ: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಆರೋಪ; ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ ಮನೋಜ್ ಸಿನ್ಹಾ

ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಬುಧವಾರ ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ್ದಾರೆ ಎಂದು...

ಭಾರಿ ಜನ ಬೆಂಬಲದ ನಡುವೆ ಭವಾನಿಪುರದಲ್ಲಿ ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ: ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟ ಮೆರವಣಿಗೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತಮ್ಮ ಕಾಲಿಘಾಟ್ಕಾಲ್ ನಿವಾಸದಿಂದ ಹೊರಬಂದು ಭಬಾನಿಪುರ ವಿಧಾನಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕಾಲ್ನಡಿಗೆಯಲ್ಲಿ ತೆರಳಿದರು, ಆ ಸಮಯದಲ್ಲಿ ಬೆಂಬಲಿಗರ ದೊಡ್ಡ ಗುಂಪೊಂದು ತೃಣಮೂಲ ಕಾಂಗ್ರೆಸ್...

‘ಜ್ಞಾನೇಶ್ ಕುಮಾರ್ ನಮಗೆ ‘ಗೆಟ್ ಲಾಸ್ಟ್’ ಅಂದ್ರು’ : ಮುಖ್ಯ ಚುನಾವಣಾ ಆಯುಕ್ತರೊಂದಿಗಿನ ಸಭೆ ಬಳಿಕ ಟಿಎಂಸಿ ನಾಯಕರಿಂದ ಆರೋಪ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರೊಂದಿಗೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ನಾಲ್ವರು ಸದಸ್ಯರ ನಿಯೋಗ ನಡೆಸಿದ ಸಭೆಯು ಬುಧವಾರ ಕಾವೇರಿದ ಚರ್ಚೆಗೆ ಸಾಕ್ಷಿಯಾಯಿತು. ಈ ವೇಳೆ ಚುನಾವಣಾ ಆಯುಕ್ತರು ನಮಗೆ...

ಅಸ್ಸಾಂ ಸಿಎಂ ಪತ್ನಿ ದೂರಿನ ಮೇರೆಗೆ ಪವನ್ ಖೇರಾ ವಿರುದ್ಧ ಮಾನನಷ್ಟ, ಕ್ರಿಮಿನಲ್ ಪಿತೂರಿ ಆರೋಪದಡಿ ಪ್ರಕರಣ ದಾಖಲು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ನೀಡಿದ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಪವನ್ ಖೇರಾ ವಿರುದ್ಧ ಮಾನನಷ್ಟ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ...

ಅಮೆರಿಕ-ಇರಾನ್ ಕದನ ವಿರಾಮಕ್ಕೆ ಪಾಕ್ ಮಧ್ಯಸ್ಥಿಕೆ, ಬೆತ್ತಲಾದ ವಿಶ್ವಗುರು : ಕಾಂಗ್ರೆಸ್

ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿಯವರ 'ಅತ್ಯಂತ ವೈಯಕ್ತಿಕ ರಾಜತಾಂತ್ರಿಕತೆಗೆ' ಉಂಟಾದ...

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಸಿಎಂ ನಿಂದನೀಯ ಪದ ಬಳಕೆ; ‘ಸಂಪೂರ್ಣ ನಾಚಿಕೆಗೇಡಿನ ಸಂಗತಿ’ ಎಂದ ಪ್ರಿಯಾಂಕಾ ಗಾಂಧಿ 

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು "ಅವಾಚ್ಯ" ಭಾಷೆ ಬಳಸಿರುವುದು "ಸಂಪೂರ್ಣವಾಗಿ ನಾಚಿಕೆಗೇಡಿನ" ಸಂಗತಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ...

ಇರಾಕ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಬಿಡುಗಡೆ

ಇರಾಕಿನ ರಾಜಧಾನಿ ಬಾಗ್ದಾದ್‌ನಲ್ಲಿ ಒಂದು ವಾರದ ಹಿಂದೆ ಅಪಹರಿಸಲ್ಪಟ್ಟಿದ್ದ ಅಮೆರಿಕದ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಮಾರ್ಚ್ 31ರಂದು ಶೆಲ್ಲಿ...

ಅಸ್ಸಾಂನ ನಾಗಾಂವ್‌ನಲ್ಲಿ ದರೋಡೆ ಶಂಕೆಯ ಮೇಲೆ ಗುಂಪು ದಾಳಿ: ಮೂವರು ಮುಸ್ಲಿಂ ಪುರುಷರು ಸಾವು

ದರೋಡೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದ ಗುಂಪು ದಾಳಿಯಲ್ಲಿ ಮೂವರು ಮುಸ್ಲಿಂ ಪುರುಷರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸೈಫುಲ್ಲಾ, ಅಜೀಬುರ್ ಅಲಿಯಾಸ್ ಖೈರುಲ್ ಮತ್ತು ಇನಾಮುಲ್...