Homeಕರ್ನಾಟಕದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

- Advertisement -
- Advertisement -

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4, 2026) ಸಂಜೆ 6.10ರ ಸುಮಾರಿಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಅರಣ್ಯ ಇಲಾಖೆ, ಪೊಲೀಸರು, ನಕ್ಸಲ್ ನಿಗ್ರಹ ದಳದ (ಎಎನ್‌ಎಫ್‌) ಸಿಬ್ಬಂದಿ, ಸ್ಥಳೀಯ ಕುಡಿಯ ಜನಾಂಗದ ಜನರು ಹಾಗೂ ಸ್ಥಳೀಯ ಮುಖಂಡರು, ಸ್ವಯಂ ಸೇವಕರ ಜಂಟಿ ಪರಿಶ್ರಮದ ಫಲವಾಗಿ ಶರಣ್ಯ ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ಶರಣ್ಯ ನಾಪತ್ತೆಯಾದ ಕ್ಷಣದಿಂದ, ಆಕೆ ಪತ್ತೆಯಾಗುವವರೆಗೆ ಹಗಲಿರುಳು ಸತತವಾಗಿ ಹುಡುಕಾಟ ನಡೆಸಿದ್ದರು. ಡ್ರೋನ್, ಶ್ವಾನದಳ ಕೂಡ ಹುಡುಕಾಟಕ್ಕೆ ಸಾಥ್ ನೀಡಿತ್ತು. ಶಾಸಕರು, ಸಚಿವರು, ಸಂಸದರು ಸೇರಿದಂತೆ ಸರ್ಕಾರದ ಮಟ್ಟದಲ್ಲಿ ಕೂಡ ಶರಣ್ಯ ಪತ್ತೆಗೆ ಪ್ರಯತ್ನ ನಡೆದಿತ್ತು.

ಕೇರಳ ಸರ್ಕಾರ ಕೂಡ ಶರಣ್ಯ ನಾಪತ್ತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿತ್ತು. ಕರ್ನಾಟಕ-ಕೇರಳ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲೂ ಮಾಧ್ಯಮಗಳಲ್ಲಿ ಶರಣ್ಯ ನಾಪತ್ತೆ ವಿಚಾರ ಸುದ್ದಿಯಾಗಿತ್ತು. ಸ್ಥಳೀಯ ಆದಿವಾಸಿ ಜನರು ಶರಣ್ಯಳ ಸುರಕ್ಷಿತ ಹಿಂದಿರುಗುವಿಕೆಗಾಗಿ ಹರಣಕೆಯನ್ನೂ ಹೊತ್ತಿದ್ದರು. ಮಲೆ‌ಕುಡಿಯ ಜನಾಂಗ ತಮ್ಮ ದೈವದ ಮೊರೆ ಹೋಗಿತ್ತು. “ಶರಣ್ಯ ಬಳಲಿ ಒಂದೆಡೆ ಆಶ್ರಯ ಪಡೆದಿದ್ದಾಳೆ. ಸುರಕ್ಷಿತವಾಗಿ ಸಿಗಲಿದ್ದಾಳೆ‌” ಎಂದು ದೈವ ಮಲೆ ತಚ್ಚನ್ ನುಡಿದಿತ್ತು.

ಶರಣ್ಯ ಪತ್ತೆಯಾಗಿದ್ದು ಹೇಗೆ ಮತ್ತು ಎಲ್ಲಿ?

ಭಾನುವಾರ ಸಂಜೆಯ ವೇಳೆಗೆ, ಹುಡುಕಾಟದಲ್ಲಿ ನಿರತರಾದ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ಕೂಗಾಟ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ ಎನ್ನಲಾಗಿದೆ. “ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು” ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಶರಣ್ಯ ಪತ್ತೆಯಾದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹುಡುಕಾಟಕ್ಕೆ ಶ್ರಮಿಸಿದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

ತಡಿಯಂಡಮೋಳ್ ಬೆಟ್ಟದ ತಪ್ಪಲಿನಿಂದ ಸುಮಾರು 3.5 ರಿಂದ 6 ಕಿ.ಮೀ ದೂರದಲ್ಲಿರುವ ಮಲೆತಿರಿಕೆ ಎಂಬ ದಟ್ಟ ಅರಣ್ಯ ಪ್ರದೇಶದಲ್ಲಿ ಶರಣ್ಯ ಸ್ಥಳೀಯರಿಗೆ ಸಿಕ್ಕಿದ್ದಾರೆ ಎಂದು ವರದಿಯಾಗಿದೆ. ಕೆಲವು ವರದಿಗಳ ಪ್ರಕಾರ ಅವರು ಅಲ್ಲಿನ ಪಾಳು ಬಿದ್ದ ಬಂಗಲೆ ಅಥವಾ ದೇವಸ್ಥಾನವೊಂದರಲ್ಲಿ ಆಶ್ರಯ ಪಡೆದಿದ್ದರು ಎಂದು ಹೇಳಲಾಗ್ತಿದೆ. ಸ್ಥಳೀಯ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡಕ್ಕೆ ಶರಣ್ಯ ಮೊದಲು ಕಾಣ ಸಿಕ್ಕಿದ್ದಾರೆ ಎಂದು ವರದಿಯಾಗಿದೆ.

ಶರಣ್ಯ ನಾಪತ್ತೆಯಾಗಿದ್ದು ಹೇಗೆ?

ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಝಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2ರಂದು ಕೊಡಗಿಗೆ ಚಾರಣಕ್ಕೆ ಬಂದಿದ್ದರು. ಆನ್‌ಲೈನ್ ಮೂಲಕ ಚಾರಣ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು ಎನ್ನಲಾಗಿದೆ.

ಅರಣ್ಯದಿಂದ ಹೊರ ಬಂದ ಶರಣ್ಯ ಹೇಳಿದ್ದೇನು?

ಅರಣ್ಯದಿಂದ ಹೊರ ಬಂದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಶರಣ್ಯ, “ದಾರಿ ತಪ್ಪಿ ನಾನು ಕಾಡಿನಲ್ಲಿ ಬಾಕಿಯಾಗಿದ್ದೆ. ನಾನು ಬೆಟ್ಟದ ಇಳಿಜಾರು ಪ್ರದೇಶಕ್ಕೆ ಇಳಿದ ವೇಳೆ ನನ್ನ ಚಾರಣ ತಂಡದವರು ಬೆಟ್ಟದ ತುದಿಯಲ್ಲಿದ್ದರು. ನಾನು ಅವರತ್ತ ತೆರಳಲು ಎಡ ಬದಿಗೆ ಅರಣ್ಯದೊಳಗೆ ಮೇಲಕ್ಕೆ ನಡೆದೆ. ನಾನು ಮೇಲ್ಬಾಗಕ್ಕೆ ಬಂದು ತಲುಪಿದಾಗ, ಅವರು ಮೇಲೆಯೂ ಇರಲಿಲ್ಲ, ಕೆಳಗಡೆಯೂ ಇರಲಿಲ್ಲ. ಹಾಗಾಗಿ, ನಾನು ಮತ್ತೆ ಬೆಟ್ಟದ ಕೆಳ ಭಾಗಕ್ಕೆ ಹೋದೆ, ಸ್ವಲ್ಪ ಕೆಳಗೆ ಹೋದಾಗ ಮೊಬೈಲ್ ನೆಟ್‌ವರ್ಕ್ ಹೋಯಿತು” ಎಂದಿದ್ದಾರೆ.

“ನಾನು ಇಳಿದ ಬೆಟ್ಟದ ಕೆಳಗಿನ ಭಾಗ ದಟ್ಟಾರಣ್ಯವಾಗಿತ್ತು. ಅಲ್ಲಿ, ನಾನು ಏಕಾಂಕಿಯಾಗಿ ಸಂಜೆ 6.45ರವರೆಗೆ ಕಾಡಿನಲ್ಲಿ ನಡೆದೆ. ಕೊನೆಗೆ ನಾನು ನನ್ನ ಆಫೀಸ್ ಗೆಳೆಯ ಯಧುಗೆ ಕಾಲ್ ಮಾಡಲು ಮುಂದಾದೆ, ಅದು ಸಾಧ್ಯವಾಗಲಿಲ್ಲ. ನಂತರ ಅರಣ್ಯ ಇಲಾಖೆಯ ಸಹಾಯವಾಣಿಯನ್ನು ಸಂಪರ್ಕಿಸಲು ಮೆಸೇಜ್ ಟೈಪ್ ಮಾಡಿದ್ದೆ. ಮೆಸೇಜ್ ಟೈಪ್ ಮಾಡಿ ಮುಗಿಯುವಾಗ ಮೊಬೈಲ್ ಚಾರ್ಜ್ ಒಂದು ಪರ್ಸೆಂಟ್‌ಗೆ ಬಂದು ಮೊಬೈಲ್ ಸ್ವಿಚ್ ಆಫ್ ಆಯಿತು” ಎಂದು ತಿಳಿಸಿದ್ದಾರೆ.

“ಮೊಬೈಲ್ ಸ್ವಿಚ್ ಆಫ್ ಆದ ಬಳಿಕ, ನಾನು ಒಂದು ತೊರೆ ಮತ್ತು ಬಂಡೆ ಇರುವ ಜಾಗಕ್ಕೆ ತಲುಪಿದೆ. ಮೊದಲ ದಿನ (ಗುರುವಾರ) ರಾತ್ರಿ ಅಲ್ಲೇ ಉಳಿದುಕೊಂಡೆ. ಮರುದಿನ (ಶುಕ್ರವಾರ) ಬೆಳಗೆದ್ದಾಗ ಹಿಂದಿನ ದಿನ ನಡೆದ ಪರಿಣಾಮ, ಸ್ವಲ್ಪ ಕಾಲು ನೋವು ಇತ್ತು. ಹಾಗಾಗಿ, ಅಲ್ಲೆ ಉಳಿದುಕೊಂಡೆ. ರಕ್ಷಣಾ ತಂಡ ಡ್ರೋನ್ ಏನಾದರು ಹಾರಿಸಿದರೆ ನನ್ನನ್ನು ಕಾಣಲಿ ಎಂದು ಆಕಾಶ ಕಾಣುವ ಜಾಗದಲ್ಲೇ ಇದ್ದೆ” ಎಂದು ವಿವರಿಸಿದ್ದಾರೆ.

“ಮೂರನೇ ದಿನ (ಶನಿವಾರ) ಬೆಟ್ಟದ ತುದಿಯನ್ನು ಗುರಿಯಾಗಿಸಿ ನಡೆಯಲು ಪ್ರಯತ್ನಿಸಿದೆ. ಆದರೆ, ಅಂದು ಭಾರೀ ಮಳೆಯಾಯಿತು. ಪರಿಣಾಮ ನನ್ನ ಬಟ್ಟೆಯೆಲ್ಲ ಒದ್ದೆಯಾಯಿತು. ಸುಮಾರು ಒಂದು ಗಂಟೆ ಮಳೆ ಸುರಿಯಿತು. ಹಾಗಾಗಿ, ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಸಂಪೂರ್ಣ ಚಳಿಯ ವಾತಾವರಣ ಇತ್ತು”

ಇಂದು (ಭಾನುವಾರ) ಮಧ್ಯಾಹ್ನ 12 ಗಂಟೆಯವರೆಗೆ ಅದೇ ಜಾಗದಲ್ಲಿ ನಾನು ಕಾದೆ. ನಂತರ ಇನ್ನೂ ಕಾದರೆ ಆಗುವುದಿಲ್ಲ ಎಂದು ಬೆಟ್ಟದ ತುದಿಯತ್ತ ನಡೆಯಲು ಪ್ರಾರಂಭಿಸಿದೆ. ಈ ವೇಳೆ ನನಗೆ ಸ್ಥಳೀಯರು ಸಿಕ್ಕಿದರು. ದಾರಿ ತಪ್ಪಿದ ದಿನದಿಂದ ಸ್ಥಳೀಯರು ಸಿಗುವವರೆಗೆ ನಾನು ಆಗಾಗ ಕೂಗುತ್ತಿದೆ. ಯಾರಾದರು ಕೇಳಿಸಿಕೊಂಡಾರು ಎಂಬ ಭರವಸೆ ನನಗಿತ್ತು. ಇಂದು ಬೆಟ್ಟದ ತುದಿಯ ಭಾಗಕ್ಕೆ ಸ್ವಲ್ಪ ಮೇಲಕ್ಕೇರಿ ಮರವೊಂದರ ಬುಡದಲ್ಲಿ ಕುಳಿತಾಗ ಯಾರದ್ದೋ ಶಬ್ದ ಕೇಳಿತು. ನಾನು ಕೂಗುವಾಗ ಆ ಕಡೆಯಿಂದ ಪ್ರತಿಕ್ರಿಯೆ ಬರುತ್ತಿತ್ತು. ನನ್ನ ಕೂಗು ಕೇಳುವಾಗ ಇವರು (ಸ್ಥಳೀಯರು) ಸುಮಾರು 3-4 ಕಿ.ಮೀ ದೂರದಲ್ಲಿದ್ದರು. ನಂತರ ತಕ್ಷಣ ಅವರು ನನ್ನ ಬಳಿ ತಲುಪಿದರು” ಎಂದು ತಿಳಿಸಿದ್ದಾರೆ.

“ನನ್ನ ಬಳಿ ಆಹಾರ ಏನು ಇರಲಿಲ್ಲ. ಚಾರಣಕ್ಕೆ ಹೋಗುವಾಗ ಕೊಂಡೊಯ್ದ ಅರ್ಧ ಲೀಟರ್ ನೀರಿನ ಬಾಟಲಿ ಮಾತ್ರ ಇತ್ತು. ದಿನಕ್ಕೆ ಮೂರು ಲೀಟರ್ ನೀರು ಕುಡಿಯುತ್ತಿದ್ದೆ. ನಾನಿದ್ದ ಜಾಗ ಆನೆ ಇರುವ ಪ್ರದೇಶ ಎಂದು ಅನಿಸುತ್ತದೆ. ನನಗೆ ಭಯ ಆಗಿರಲಿಲ್ಲ, ಏಕೆ ಭಯ ಆಗಿಲ್ಲವೋ ನನಗೇ ಗೊತ್ತಿಲ್ಲ” ಎಂದು ಶರಣ್ಯ ಹೇಳಿದ್ದಾರೆ.

“ನಿಮ್ಮ ಬಳಿ ಗೈಡ್ ಅಥವಾ ಮ್ಯಾಪ್ ಏನಾದರು ಇತ್ತ?” ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶರಣ್ಯ,”ನಾವು ಸಣ್ಣದೊಂದು ಚಾರಣಕ್ಕೆ ಪ್ಲ್ಯಾನ್ ಮಾಡಿದ್ದೆವು. ಹಾಗಾಗಿ, ಮೊಬೈಲ್, ಕ್ಯಾಮರಾ ಮತ್ತು ನೀರಿನ ಬಾಟಲಿ ಮಾತ್ರ ಇತ್ತು” ಎಂದಿದ್ದಾರೆ.

ಶರಣ್ಯ ಅವರನ್ನು ಮೊದಲು ಕಂಡ ಸ್ಥಳೀಯರು ಮಾತನಾಡಿ, “ನಮಗೆ ಯಾರೋ ಕೂಗುವುದು ಕೇಳಿಸಿತು. ನಾವು ಅದಕ್ಕೆ ಲಕ್ಷ್ಯವಾಗಿಸಿ ಹೋದೆವು ಎಂದಿದ್ದಾರೆ. ಶರಣ್ಯ ಇದ್ದ ಜಾಗದ ಬಗ್ಗೆ ಮಾತನಾಡಿದ ಸ್ಥಳೀಯರು, “ಅದು ಯಾರೂ ಉಳಿದುಕೊಳ್ಳುವ ಸ್ಥಳವಲ್ಲ. ಅಲ್ಲಿಗೆ ಯಾರೂ ಹೋಗುವುದಿಲ್ಲ” ಎಂದು ತಿಳಿಸಿದ್ದಾರೆ.

ಶರಣ್ಯ ಮನೋಸ್ಥರ್ಯಕ್ಕೆ ಮೆಚ್ಚುಗೆ

ದಟ್ಟ ಅರಣ್ಯದೊಳಗೆ ಮೂರು ದಿನಗಳನ್ನು ಕಳೆದ ಶರಣ್ಯ ಆರೋಗ್ಯವಾಗಿ ಪತ್ತೆಯಾಗಿದ್ದಾರೆ. ಕಾಡಿನಿಂದ ಹೊರ ಬಂದ ಬಳಿಕ ಅವರು ಮಾಧ್ಯಮಗಳ ಮುಂದೆ ಲವಲವಿಕೆಯಿಂದ ಮಾತನಾಡಿದ್ದಾರೆ. ಕಾಡಿನಲ್ಲಿ ಬಾಕಿಯಾದ ಬಗ್ಗೆ ಅವರು ಯಾವುದೇ ಭಯವನ್ನು ವ್ಯಕ್ತಪಡಿಸಿಲ್ಲ. ಇದನ್ನು ಗಮನಿಸಿದ ಸಾರ್ವಜನಿಕರು ಅಥವಾ ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ವೀಕ್ಷಕರು ಮತ್ತು ಬಳಕೆದಾರರು ಶರಣ್ಯಳ ಮನೋಸ್ಥೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಶರಣ್ಯ ಸುರಕ್ಷಿತವಾಗಿ ಮನೆಗ ಮರಳಿದ್ದಾರೆ.

ತಡಿಯಂಡಮೋಳ್ ಚಾರಣ

ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರವಾದ ತಡಿಯಂಡಮೋಳ್ ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ಗ್ರಾಮದ ಸಮೀಪದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1,748 ಮೀಟರ್ ಎತ್ತರವಿದೆ. ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುರುವ ಈ ಬೆಟ್ಟ, ಚಾರಣಿಗರ ನೆಚ್ಚಿನ ತಾಣವಾಗಿದೆ.

ತಡಿಯಂಡಮೋಳ್ ಚಾರಣವು ಕಕ್ಕಬ್ಬೆಯ ಅರಮನೆ ಸ್ಟಾಪ್‌ನಿಂದ ಪ್ರಾರಂಭವಾಗುತ್ತದೆ. ಇಲ್ಲಿಂದ ಶಿಖರ ತಲುಪಲು ಸುಮಾರು 6-8 ಕಿ.ಮೀ ನಡೆಯಬೇಕಾಗುತ್ತದೆ. ಬೆಟ್ಟದ ಬುಡದಲ್ಲಿರುವ ಐತಿಹಾಸಿಕ ನಾಲ್ಕುನಾಡು ಅರಮನೆ ಮತ್ತು ಶಿಖರದ ಮೇಲಿನಿಂದ ಕಾಣುವ ಮೋಡಗಳ ಸುಂದರ ನೋಟ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗೆ ಇಲ್ಲಿನ ಹವಾಮಾನವು ಚಾರಣಕ್ಕೆ ಅತ್ಯಂತ ಪೂರಕವಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಂದೆಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...

ಹನೂರು ಶೂಟೌಟ್ ಪ್ರಕರಣ: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು.!

ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ವ್ಯಾಪ್ತಿಯಲ್ಲಿ ಮೂವರು ಮೃತಪಟ್ಟಿದ್ದ ವಿವಾದಾತ್ಮಕ ಗುಂಡಿನ ದಾಳಿ ಪ್ರಕರಣಕ್ಕೆ ಇದೀಗ ಕಾನೂನು ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೂವರು ಅರಣ್ಯ ಸಿಬ್ಬಂದಿಗೆ ಕೊಳ್ಳೇಗಾಲದ ಮೊದಲ ಹೆಚ್ಚುವರಿ...

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...