Homeಮುಖಪುಟಅಂಬೇಡ್ಕರ್‌ ಅನುಯಾಯಿಗಳು ಸಮಾಜವಾದಿ ಪಕ್ಷಕ್ಕೆ ಕೈಜೋಡಿಸಬೇಕು: ಅಖಿಲೇಶ್ ಯಾದವ್

ಅಂಬೇಡ್ಕರ್‌ ಅನುಯಾಯಿಗಳು ಸಮಾಜವಾದಿ ಪಕ್ಷಕ್ಕೆ ಕೈಜೋಡಿಸಬೇಕು: ಅಖಿಲೇಶ್ ಯಾದವ್

- Advertisement -
- Advertisement -

“ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಸಮಾಜವಾದಿ ಪಕ್ಷದ ಪ್ರಯತ್ನಕ್ಕೆ ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಅನುಯಾಯಿಗಳು ಕೈಜೋಡಿಸಬೇಕು. ಇದರಿಂದಾಗಿ ಪ್ರಜಾಪ್ರಭುತ್ವವನ್ನು ಉಳಿಸಬಹುದು ಮತ್ತು ಜನರ ಹಕ್ಕನ್ನು ರಕ್ಷಿಸಬಹುದು” ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅಖಿಲೇಶ್ ಯಾದವ್ ಈ ಬಗ್ಗೆ ಮಾತನಾಡಿದ್ದಾರೆ.

’ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾವು ಉಳಿಸಬೇಕಾಗಿರುವುದರಿಂದ ಅಂಬೇಡ್ಕರ್‌ವಾದಿಗಳು (ಅಂಬೇಡ್ಕರ್‌ರ ಅನುಯಾಯಿಗಳು) ಸಮಾಜವಾದಿಗಳೊಂದಿಗೆ ಬರಬೇಕು. ಇವುಗಳನ್ನು ಉಳಿಸದಿದ್ದರೆ ನಮ್ಮ ಹಕ್ಕುಗಳಿಗೆ ಏನಾಗುತ್ತದೆ ಎಂದು ಯೋಚಿಸಿ’ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ: ಬಿಜೆಪಿ ಮೈತ್ರಿ ಆಹ್ವಾನ ತಿರಸ್ಕರಿಸಿದ RLD ಮುಖ್ಯಸ್ಥ ಜಯಂತ್ ಚೌಧರಿ

“ನಾವು ಬಹು ವರ್ಣದ ಜನರು. ಕೆಂಪು, ಹಸಿರು, ಬಿಳಿ ಮತ್ತು ನೀಲಿ ಎಲ್ಲವೂ ನಮ್ಮೊಂದಿಗಿದೆ. ಜೊತೆಗೆ ತಮ್ಮ ಸಂಘಟನೆಗೆ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ವಿವಿಧ ಪಕ್ಷಗಳ ಬೆಂಬಲವಿದೆ” ಎಂದು  ಹೇಳಿದ್ದಾರೆ.

ರಾಜ್ಯದಲ್ಲಿ ತಮ್ಮ ಪಕ್ಷವು ಸರ್ಕಾರ ರಚಿಸಿದರೆ, ಯುವಕರಿಗೆ ಉದ್ಯೋಗ ನೀಡಲಾಗುವುದು. ಪ್ರತಿಯೊಬ್ಬ ಯುವಕರು ತಮ್ಮ ಕೆಲಸ ಕಳೆದುಕೊಂಡಂತೆ ಈ ಬಾರಿ ಬಿಜೆಪಿಯನ್ನು ಸೋಲಿಸುತ್ತಾರೆ ಎಂದಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವವರು ಎರಡೂ ಪಕ್ಷಗಳ (ಎಸ್‌ಪಿ-ಆರ್‌ಎಲ್‌ಡಿ) ನಡುವಿನ ಏಕತೆಯನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಆರೋಪಿಸಿದ್ದಾರೆ.

ನಮ್ಮ ತಂಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಇದು ಬಿಜೆಪಿಗರ ಕೋಪವನ್ನು ಹೆಚ್ಚಿಸಿದೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಯಾವುದೇ ವ್ಯಕ್ತಿ ಹಿಂದೆಂದೂ ಬಳಸದ ಭಾಷೆಯನ್ನು ಈ ಸಿಎಂ ಬಳಸುತ್ತಿದ್ದಾರೆ. ಯೋಗಿ ಆದಿತ್ಯನಾಥ್‌ ಪಶ್ಚಿಮ ಯುಪಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ತೋರುತ್ತದೆ. ಅವರು ನಮಗೆ ಎಷ್ಟು ಬೆದರಿಕೆ ಹಾಕುತ್ತಾರೋ, ನಾವು ಹೆಚ್ಚು ಸಂಘಟಿತರಾಗುತ್ತೇವೆ, ಶಕ್ತಿಶಾಲಿಯಾಗುತ್ತೇವೆ” ಎಂದು ಜಯಂತ್ ಚೌಧರಿ ಹೇಳಿದ್ದಾರೆ.


ಇದನ್ನೂ ಓದಿ: ಯುಪಿ ಚುನಾವಣೆ: ಅಯೋಧ್ಯೆಯಿಂದ ಪವನ್ ಪಾಂಡೆ ಎಸ್‌ಪಿ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ಬಗ್ಗೆ ಕುತೂಹಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read