Homeಚಳವಳಿಅಂಬೇಡ್ಕರ್ ಜನ್ಮದಿನ ವಿಶೇ‍ಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

ಅಂಬೇಡ್ಕರ್ ಜನ್ಮದಿನ ವಿಶೇ‍ಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

ಭಾರತದ ಪ್ರತಿಯೊಂದು ಶೋಷಿತ ಸಮುದಾಯದ ಹಕ್ಕುಗಳ ಬಗ್ಗೆಯೂ ಇಷ್ಟೊಂದು ಕಳಕಳಿವಹಿಸಿ ಚಿಂತಿಸಿದ ಮತ್ತು ಹೋರಾಡಿದ ಇನ್ನೊಂದು ಜೀವ ಈ ದೇಶದಲ್ಲಿ ಹುಟ್ಟಿರಲಿಕ್ಕಿಲ್ಲ....

- Advertisement -
- Advertisement -

ಸುದೀರ್ಘ ಕಾಲ ವಿಸ್ಮೃತಿಯೇ ತಾವಾಗಿಹೋಗಿದ್ದ ಈ ದೇಶದ ದೊಡ್ಡ ಸಂಖ್ಯೆಯ ಶೋಷಿತ ಸಮುದಾಯದ ಎದೆಗಳಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿ, ಅರಿವಿನ ದೀಪ ಮತ್ತು ಸಂಘಟನೆಯ ಶಕ್ತಿಗಳನ್ನು ಕೈಗಿತ್ತಿದ್ದು ಬಾಬಾಸಾಹೇಬರು. ಆ ಶಕ್ತಿಗಳೊಂದಿಗೆ ಮುಂದಿನ ದಾರಿ ಹುಡುಕಿಕೊಳ್ಳಿರೆಂದು ಬೀಳ್ಕೊಂಡ ಅದಮ್ಯ ಚೇತನ ಡಾ. ಅಂಬೇಡ್ಕರ್ ಅವರ ಮತ್ತೊಂದು ಜಯಂತಿಯ ಬೆಳಕಿನಲ್ಲಿ ಕೆಲವು ಸಂಗತಿಗಳನ್ನು ದಾಖಲಿಸಬೇಕೆನಿಸಿತು.

ಸ್ವಲ್ಪ ಸಮಯದ ಹಿಂದೆ ಅಂಬೇಡ್ಕರ್ ಪರಿಭಾವಿಸಿದ ಭಾರತದ ಬಗ್ಗೆ ಮಾತನಾಡಲಿಕ್ಕಾಗಿ ಟಿಪ್ಪಣಿ ಮಾಡಿಕೊಳ್ಳುತ್ತಾ, ಅವರ ಕೆಲವು ಬರಹಗಳನ್ನು ಮತ್ತೊಮ್ಮೆ ತಿರುವಿ ಹಾಕುತ್ತಿದ್ದಾಗ, ಭಾರತದ ಪ್ರತಿಯೊಂದು ಶೋಷಿತ ಸಮುದಾಯದ ಹಕ್ಕುಗಳ ಬಗ್ಗೆಯೂ ಇಷ್ಟೊಂದು ಕಳಕಳಿವಹಿಸಿ ಚಿಂತಿಸಿದ ಮತ್ತು ಹೋರಾಡಿದ ಇನ್ನೊಂದು ಜೀವ ಈ ದೇಶದಲ್ಲಿ ಹುಟ್ಟಿರಲಿಕ್ಕಿಲ್ಲ ಎನಿಸಿತ್ತು. ಅನೇಕ ಮಹಾನುಭಾವರು ಮತ್ತು ಮಹಾನುಭಾವೆಯರು ಇತಿಹಾಸದಲ್ಲಿ ತಮ್ಮ ಕೈಚಾಚಲು ಸಾಧ್ಯವಾದಷ್ಟು ಅಗಲಕ್ಕೂ ಮಾನವತೆಯ ತಂಪನ್ನು ಹರಡಲು ನೋಡಿದವರು ನಮ್ಮ ಇತಿಹಾಸದಲ್ಲಿದ್ದಾರೆ; ಆದರೆ ಹೀಗೆ ಎಲ್ಲ ಕೋನಗಳಿಂದ, ಎಲ್ಲ ದಿಕ್ಕುಗಳಿಂದಲೂ ಆಲೋಚಿಸಿದವರು? ಜಾತಿಯಿಂದಲೋ, ವರ್ಗದಿಂದಲೋ, ಲಿಂಗದಿಂದಲೋ ಅಥವಾ ಇನ್ಯಾವುದೇ ಮಾನದಂಡವನ್ನು ತೆಗದುಕೊಂಡು ನೋಡಿದಾಗಲೂ ಕಡುಹಿಂದುಳಿದವರೆಂದು ಕಂಡುಬಂದ ಎಲ್ಲ ವರ್ಗ-ಸಮುದಾಯಗಳನ್ನು ಅಂಬೇಡ್ಕರ್ ಅವರು ತನ್ನ ಮಡಿಲಿಗೆಳೆದುಕೊಂಡಿದ್ದಾರೆ. ಭವಿಷ್ಯದ ಭಾರತದಲ್ಲಿ ಅಂತಹ ಎಲ್ಲರ ಸಾಮಾಜಿಕ, ಆರ್ಥಿಕ, ರಾಜಕೀಯ ಹಕ್ಕುಗಳು ಖಾತ್ರಿಯಾಗಬೇಕೆಂದು ಅವಿರತವಾಗಿ ಇನ್ನಿಲ್ಲದಂತೆ ಶ್ರಮಿಸಿದ್ದಾರೆ. ಅವರು ಬಯಸಿದ್ದು:

• ಹುಟ್ಟಿನ ಆಧಾರದಲ್ಲಿ ತಾರತಮ್ಯ ಮಾಡದಂತಹ ಸಾಮಾಜಿಕ ವ್ಯವಸ್ಥೆ
• ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶಗಳು, ಸವಲತ್ತುಗಳು, ನ್ಯಾಯ ಮತ್ತು ಹಕ್ಕುಗಳು
• ಸರ್ಕಾರದ ಕಡೆಯಿಂದ ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಅಗತ್ಯವಿರುವಂತಹ ನೀತಿಗಳು- ಭಾರತದ ಸಮಾಜದ ಮೂಲಸ್ವರೂಪವನ್ನು ಬದಲಿಸುವ ಶಕ್ತಿ ಹೊಂದಿರುವ ಭೂಮಿಯ ಹಂಚಿಕೆ ಮತ್ತು ಸಹಕಾರಿ ಬೇಸಾಯ ಪದ್ಧತಿ, ಉದ್ಯೋಗಗಳಲ್ಲಿ ಅತ್ಯಂತ ಶೋಷಿತ ಸಮುದಾಯಕ್ಕೆ ಮೀಸಲಾತಿ, 14 ವರ್ಷದವರೆಗೆ ಉಚಿತ, ಕಡ್ಡಾಯ ಶಿಕ್ಷಣ, ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಹಕ್ಕುಗಳು…………. ಇಂತಹ ಇನ್ನೂ ಎಷ್ಟೋ ಕ್ರಮಗಳು
• ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವ ಮತ್ತು ಘನತೆಯಿಂದ ಬದುಕಲು ಬೇಕಿರುವಂತಹ ಮೂಲಭೂತ ಹಕ್ಕುಗಳು
• ಎಲ್ಲ ಸಮುದಾಯಗಳನ್ನು ಪ್ರಾತಿನಿಧಿಕವಾಗಿ ಒಳಗೊಳ್ಳಬಲ್ಲ ಚುನಾವಣಾ ವ್ಯವಸ್ಥೆ
• ಜನರ ಮನಸ್ಸಿನಾಳದಲ್ಲಿ ಬೇರೂರಿರುವ ಜಾತಿ-ಅಸ್ಪೃಶ್ಯತೆಯ ವಿಷವನ್ನು ತೊಳೆದು ನಿರ್ಮಲಗೊಳಿಸಲು ಬೇಕಿರುವ, ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಒಳದನಿಯನ್ನು ಜಾಗೃತಗೊಳಿಸಿ ನಿಜವಾದ ಮನುಷ್ಯರನ್ನಾಗಿಸಬಲ್ಲ ಆಧ್ಯಾತ್ಮಿಕ (ಧರ್ಮ) ಸಂರಚನೆ

ಇಂತಹ ರಚನೆಗಳನ್ನು ರೂಪಿಸಿಕೊಂಡ ಭಾರತ ಮಾತ್ರ ಸದೃಢವಾಗಿಯೂ, ಸಮಾನವಾಗಿಯೂ ಮತ್ತು ನಿಜಕ್ಕೂ ಆಧುನಿಕವಾಗಿಯೂ ಬೆಳೆದು ಅಭಿವೃದ್ಧಿ ಹೊಂದಲು ಸಾಧ್ಯ; ಹಾಗಿಲ್ಲವಾದರೆ ಭಾರತವನ್ನು ಸೋಲಿಸಲು ಹೊರಗಿನ ಯಾವ ಶತ್ರುವೂ ಬೇಕಿಲ್ಲ, ಇಲ್ಲಿರುವ ಶೋಷಣೆ, ತಾರತಮ್ಯ, ಅಸಮಾನತೆಗಳೇ ಸಾಕು ಈ ದೇಶವನ್ನು ಹಿಂದೆ ತಳ್ಳಲು ಎಂಬ ಬಗ್ಗೆ ಅವರಿಗೆ ಖಚಿತವಾದ ಅಭಿಪ್ರಾಯವಿತ್ತು.

ಆದ್ದರಿಂದಲೇ, ಸಂವಿಧಾನದಲ್ಲಾಗಲೀ, ಅದಕ್ಕೂ ಮೊದಲೇ ಬರೆದಿದ್ದ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ ಎಂಬ ತಮ್ಮ ದೀರ್ಘ ಪ್ರಬಂಧದಲ್ಲಾಗಲೀ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಮಾನತೆಗೆ ಅಂಬೇಡ್ಕರ್ ಅವರು ಅಷ್ಟು ಪ್ರಾಮುಖ್ಯತೆ ನೀಡಿದ್ದರು.

ಆದರೆ, ಸಮಾನವಾದ, ಮಾನವತೆಯ ಮೇಲೆ ನಿಂತಿರುವ ದೇಶವೊಂದನ್ನು ಕನಸುತ್ತಾ ಅದಕ್ಕಾಗಿ ಹೋರಾಟ ಮತ್ತು ಶಾಸನಾತ್ಮಕ ಪ್ರಯತ್ನಗಳಲ್ಲಿ ತೊಡಗಿರುವಾಗಲೇ, ಅವರಿಗೆ ತಾನು ಪರಿಭಾವಿಸುತ್ತಿರುವ ಭಾರತ ವಾಸ್ತವದಲ್ಲಿ ಸಾಕಾರಗೊಳ್ಳುತ್ತಿಲ್ಲ ಎಂಬ ಆತಂಕ ಮನದಾಳದಲ್ಲಿ ಮನೆ ಮಾಡಿತ್ತೇ? ತನ್ನ ಕಣ್ಣೆದುರು ಸ್ವಾತಂತ್ರ್ಯಾನಂತರ ಕಟ್ಟಲ್ಪಡುತ್ತಿದ್ದದ್ದು ತಾನು ಬಯಸಿದ್ದ ದೇಶವಲ್ಲ ಎಂದು ಅವರು ಪರಿಭಾವಿಸಿದ್ದರೇ? ಈ ಪ್ರಶ್ನೆ ಹುಟ್ಟಿ, ಖಚಿತ ಉತ್ತರವಿಲ್ಲದೆ ಹಾಗೆಯೇ ಉಳಿದುಬಿಡುತ್ತದೆ!

ಅಂದರೆ, ಅಂಬೇಡ್ಕರ್ ಅವರು ಆತಂಕದೊಂದಿಗೆ ಮುಂದೆ ಏನಾಗಲಿದೆಯೆಂದು ಊಹಿಸಿದ್ದರೋ ಅದೇ ಭಾರತ ಇಂದು ನಮ್ಮ ಕಣ್ಣಮುಂದಿದೆಯೇ?

“ಸಮಾನತೆಯಿಲ್ಲದ ಸ್ವಾತಂತ್ರ್ಯ ಅರ್ಥಹೀನ” ಎಂದು ಅಂಬೇಡ್ಕರ್ ಅವರು ಹೇಳಿದ್ದಂತೆಯೇ, ಪ್ರಜಾತಂತ್ರವೆಂದು ಕರೆಯಲು ಕಷ್ಟವಾಗುವಂತಹ ಸಮಾಜವೊಂದರಲ್ಲಿ ಬದುಕುತ್ತಿದ್ದೇವೆ. ಅದರಲ್ಲೂ ಈ ಒಂದೆರಡು ದಶಕಗಳಂತೂ, ಎಲ್ಲ ಬಗೆಯ ಕಾನೂನುಗಳನ್ನು, ನೀತಿ-ನಿಯಮಗಳನ್ನೂ ಗಾಳಿಗೆ ತೂರುತ್ತಾ, ತಮ್ಮ ಅಜೆಂಡಾದಲ್ಲಿದ್ದ ಹಿಂದಿನ ಶೋಷಣೆ, ದಬ್ಬಾಳಿಕೆ, ದಮನಗಳ ಸಾಮಾಜಿಕ ವ್ಯವಸ್ಥೆಯನ್ನೇ ಪುನರ್ ಸ್ಥಾಪಿಸಲು ಬಯಸುವ ಮನುವಾದಿ ಬಿಜೆಪಿಯ ಕಪಿಮುಷ್ಟಿಯೊಳಕ್ಕೆ ಈ ದೇಶ ಸಿಲುಕುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಈ ಐದು ವರ್ಷಗಳು, ಸುಮಾರು ನೂರು ವರ್ಷಗಳ ನಡಿಗೆಯ ಗುರುತುಗಳನ್ನು ಅಳಿಸಿಹಾಕಿ ದೇಶವನ್ನು ಹಿಂದಕ್ಕೆಳೆದಿದೆ. ಎರಡು ವಿಶ್ವಯುದ್ಧಗಳಿಗಿಂತ ಮುಂಚೆ ಬದುಕಿದ್ದ ಸಮಾಜದ ಯುವಜನರು ಮುಗ್ಧವಾಗಿ ಯೋಚಿಸಬಹುದಾಗಿದ್ದಂತೆ, ಇಂದಿನ ತಲೆಮಾರಿಗೆ ಯುದ್ಧವೆಂಬುದು ಆತಂಕವನ್ನಲ್ಲ ಬದಲಿಗೆ ಸಂಭ್ರಮೋತ್ಸಾಹವನ್ನು ತರುತ್ತಿದೆ. ಇನ್ನೊಂದು ಸಮುದಾಯವನ್ನು ದಮನಿಸಿ, ತಲೆ ಎತ್ತಲಾಗದಂತೆ ಮುಗಿಸಿಬಿಡುವುದೆಂದರೆ, ವರ್ತಮಾನದ ಸಾಮಾನ್ಯ ಜನರಿಗೆ ತಮ್ಮ ಸ್ವಾಭಾವಿಕ ಹಕ್ಕುಗಳ ಮರುಸ್ಥಾಪನೆಯಂತೆ ಕಾಣುತ್ತಿದೆ. ಇತರರ ನಂಬಿಕೆಗಳನ್ನು ಗೌರವಿಸುವುದು ಬಲಹೀನತೆಯಾಗಿಯೂ, ಪ್ರಶ್ನಿಸುವುದು ಮತ್ತು ಟೀಕಿಸುವುದು ದೇಶದ್ರೋಹವಾಗಿಯೂ ಬಿಂಬಿಸಲ್ಪಟ್ಟಿದೆ.

ತಮ್ಮ ಕುಟುಂಬದ ಯುವಜನರಿಗೆ ಉದ್ಯೋಗ ಸಿಗದಿರುವುದು ಮೀಸಲಾತಿ ನೀತಿಯ ‘ಹುನ್ನಾರ’ವಾಗಿ (ಸ್ವತಃ ತಾವೇ ಮೀಸಲಾತಿಯ ಪರಿಧಿಯೊಳಗಡೆಯೇ ಇದ್ದರೂ ಕೂಡಾ) ವಿವರಿಸಲ್ಪಟ್ಟಿದೆಯೇ ಹೊರತು, ಸರ್ಕಾರದ ಕುಟಿಲ ನೀತಿಯ ಪರಿಣಾಮವೆಂದಲ್ಲ. ಇಳಿಯುತ್ತಿರುವ ತಲಾ ಆದಾಯ, ಏರುತ್ತಿರುವ ಬೆಲೆಗಳು ಆ ಕ್ಷಣಕ್ಕೆ ಚಿಂತೆ ಮೂಡಿಸಿದರೂ, ಅವುಗಳಿಗೂ ಆಳುತ್ತಿರುವ ಸರ್ಕಾರಕ್ಕೂ ಸಂಬಂಧವಿದೆಯೆಂಬ ಅರಿವಿನ ತಂತುಗಳು ಕಡಿದುಹೋಗಿವೆ. ‘20ನೇ ಶತಮಾನದ ಫ್ಯಾಸಿಸಂ ಕಾಲದ ಟಿವಿ ಆಂಕರ್’ ಗೋಬೆಲ್ಸ್‌ನ ಸಿದ್ಧಾಂತವನ್ನೇ ನಂಬಿ ಬೆಳೆಯುತ್ತಿರುವ ಇಂದಿನ ಮಾಧ್ಯಮಗಳ ಗಿಳಿಪಾಠವೇ ಇಂದು ಜಗತ್ತಿನ ಆತ್ಯಂತಿಕ ಸತ್ಯವಾಗಿ ಹೋಗಿರುವ ವಿಪರ್ಯಾಸವನ್ನು ನಮ್ಮ ಶುಷ್ಕ ಕಣ್ಣುಗಳು ನೋಡುತ್ತಿವೆ.

ಮತ್ತೊಮ್ಮೆ ಶೋಷಿತ ಜಗತ್ತು ವಿಸ್ಮೃತಿಯ ವಿಷದೊಳಕ್ಕೆ ಜಾರಿಸಲ್ಪಡುತ್ತಿದೆ……….. ಜಾರುವಿಕೆ ವೇಗವನ್ನು ತಡೆದು ನಿಲ್ಲಿಸಲು ಶಕ್ತಿ ಸಾಲದೆ ನೊಂದ ಕಾಲುಗಳು ಮತ್ತು ಮನಸ್ಸಿನೊಂದಿಗೆ ಚಳುವಳಿಗಳು ನಿಂತಂತಿದೆ.
ನನ್ನ ಪ್ರಕಾರ, ಅಂಬೇಡ್ಕರ್ ಪರಿಭಾವಿಸಿದ್ದು ಒಂದು ಭಾರತವನ್ನಲ್ಲ!! ಅವರ ದಾರ್ಶನಿಕ ಕಣ್ಣುಗಳ ಎದುರಿಗಿದ್ದದ್ದು ಎರಡು ಭಾರತಗಳು; ತಮ್ಮ ಹಕ್ಕುಗಳಿಗಾಗಿ ಎಚ್ಚರವಾಗಿದ್ದು ಎಲ್ಲ ಶೋಷಿತ, ದಮನಿತ ಸಮುದಾಯಗಳು ಸೇರಿ ಹೋರಾಡಿದ್ದೇ ಆದಲ್ಲಿ ಮೂಡಿಬರಬಹುದಾಗಿದ್ದ ಸಮಾನ ಭಾರತ ಮತ್ತು ಹಾಗಿಲ್ಲದೆ ಮತ್ತೆ ಮೋಸದ ಜಾಲದೊಳಕ್ಕೆ ಬಿದ್ದು ತಮ್ಮ ಐಕ್ಯತೆಯನ್ನು ಒಡೆದುಕೊಂಡು ಜನಸಾಮಾನ್ಯರು ದಿಕ್ಕುತಪ್ಪಿದ್ದೇ ಆದಲ್ಲಿ ಮೂಡಬಹುದಾಗಿದ್ದ ‘ಮಸಾಣ’ ಭಾರತ!! ಇಂದು ನಮ್ಮ ಪಯಣ ವೇಗವಾಗಿ ಸಾಗುತ್ತಿರುವುದು ಈ ಎರಡನೇ ಭಾರತದೆಡೆಗೆ………………..

ಅಂಬೇಡ್ಕರ್ ಅವರೇ ಈ ಅರಿವು ರಹಿತ ಸ್ಥಿತಿಯಿಂದ ಹೊರಬರಲು ಕೆಲವು ಹತಾರಗಳನ್ನೂ ನೀಡಿದ್ದಾರೆ. ಚಿಂತನೆಗಳಿಂದ ನಾವು ಪಡೆಯಬೇಲಾದ ಅನೇಕ ಸಂಗತಿಗಳಿದ್ದರೂ, ಬಹಳ ಮುಖ್ಯವಾಗಿ, ಸದಾ ಅರಿವು, ಐಕ್ಯತೆ ಮತ್ತು ಪ್ರಯತ್ನಶೀಲತೆಯನ್ನು ಉಳಿಸಿಕೊಂಡಿರಬೇಕೆಂಬ ಅವರ ಮೂಲಮಂತ್ರಗಳು; ಅವರ ಬದುಕು ಮತ್ತು ಆಚರಣೆಯಿಂದ ಕಲಿಯಬೇಕಾದ್ದು, ತನ್ನ ಮೂಲ ಆಶಯಕ್ಕಾಗಿ ಎಂದೂ ದಣಿವರಿಯದ ದುಡಿಮೆ, ನಂಬಿದ ತತ್ವಕ್ಕಾಗಿ ಭಾರೀ ಪ್ರಯೋಗಗಳಿಗಿಳಿಯುವ ದಿಟ್ಟತನ ಮತ್ತು ಆಶಾವಾದ.

ಇಂದು, ಈ ಕಾಲ ನಮ್ಮೆದುರು ದೀರ್ಘ ನಡಿಗೆಯ ಸವಾಲನ್ನು ಇರಿಸಿದೆ. ಸವಾಲನ್ನು ಸ್ವೀಕರಿಸಿ ಮುನ್ನಡೆಯಲು ಅಂಬೇಡ್ಕರ್ ಎಂಬ ಚೇತನದಿಂದ ಸ್ಪೂರ್ತಿ ಮತ್ತು ವಿಶ್ವಾಸವನ್ನು ಕಡ ಪಡೆದುಕೊಳ್ಳೋಣ; ಉತ್ತಮ ನಾಳೆಗಳನ್ನು ಕಟ್ಟಿಕೊಂಡು ಮರಳಿಸುವ ವಾಗ್ದಾನದೊಂದಿಗೆ!

ಆತಂಕದ ತೂಗುಯ್ಯಾಲೆಯಲ್ಲಿರುವ ಎಲ್ಲ ಜೀವಪರ ಮನಸ್ಸುಗಳಿಗೆ ಅಂಬೇಡ್ಕರ್ ದಿನಾಚರಣೆಯ ಆಶಾವಾದಿ ಶುಭಾಶಯಗಳು.

  • ಮಲ್ಲಿಗೆ ಸಿರಿಮನೆ

(ಸಾಮಾಜಿಕ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ)


ಇದನ್ನೂ ಓದಿ:  ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ನಾನಕ್ ಚಂದ್ ರತ್ತುರವರ ’ಬಾಬಾ ಸಾಹೇಬರ ಕೊನೆ ದಿನಗಳು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...