Homeಮುಖಪುಟ‘ಮೂಕನಾಯಕ - 100’ : ತಮ್ಮ ಪತ್ರಿಕೆಗೆ ಬಾಬಾ ಸಾಹೇಬರು ಬರೆದ ಮೊದಲ ಸಂಪಾದಕೀಯ..

‘ಮೂಕನಾಯಕ – 100’ : ತಮ್ಮ ಪತ್ರಿಕೆಗೆ ಬಾಬಾ ಸಾಹೇಬರು ಬರೆದ ಮೊದಲ ಸಂಪಾದಕೀಯ..

1920ರಲ್ಲಿ ತಮ್ಮ ಮೊದಲ ಪತ್ರಿಕಾ ಪ್ರಯೋಗವಾಗಿ ಅಂಬೇಡ್ಕರ್‌ ಅವರು ಆರಂಭಿಸಿದ್ದ ’ಮೂಕನಾಯಕ’ ಪತ್ರಿಕೆಗೆ ಇಲ್ಲಿಗೆ ನೂರು ವರ್ಷ ತುಂಬಿದೆ. ಆ ನೆನಪಿನಲ್ಲಿ...

- Advertisement -
- Advertisement -

ಡಾ ಅಂಬೇಡ್ಕರ್ ಅವರು 100 ವರ್ಷಗಳ ಹಿಂದೆ ಆರಂಭಿಸಿದ್ದ ‘ಮೂಕನಾಯಕ’ ಮರಾಠಿ ಪತ್ರಿಕೆಯ ಶತಮಾನೋತ್ಸವದ ಸಂದರ್ಭದಲ್ಲಿ, ಅದರ ಉದ್ಘಾಟನಾ ಸಂಚಿಕೆಯಲ್ಲಿ ಡಾ. ಅಂಬೇಡ್ಕರ್ ಅವರು ಬರೆದಿದ್ದ ಲೇಖನದ ಸಂಕ್ಷಿಪ್ತ ಅನುವಾದ ಇಲ್ಲಿದೆ. ಈ ಬರಹದಲ್ಲಿ, ಬಾಬಾಸಾಹೇಬರು ಜಾತಿ ತಾರತಮ್ಯದ ವಿರುದ್ಧ ನೇರವಾಗಿ ದಾಳಿ ನಡೆಸಿದ್ದಾರೆ.

‘ಮೂಕನಾಯಕ’ ವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊದಲ ಪತ್ರಿಕಾ ಪ್ರಯೋಗ. ಈ ಪಾಕ್ಷಿಕ ಪತ್ರಿಕೆಯನ್ನು ಅವರು ತಮ್ಮ ಮಾರ್ಗದರ್ಶಕರಾದ ಶಾಹೂಜಿ ಮಹಾರಾಜ್ ಅವರ ನೆರವಿನಿಂದ 1920ರಲ್ಲಿ ಆರಂಭಿಸಿದರು. ಇದನ್ನು ಆರಂಭಿಸುವುದರ ಹಿಂದೆ ಅಂಬೇಡ್ಕರ್ ಅವರಿಗಿದ್ದ ಉದ್ದೇಶ, ಈವರೆಗೆ ಮುಖ್ಯವಾಹಿನಿಯ ಹಿಂದಿ ಪತ್ರಿಕೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿದ್ದ ತನ್ನ ಅನಿಸಿಕೆಗಳನ್ನು ಮುಂದಿಡುವುದಾಗಿತ್ತು. ಈ ಅನಿಸಿಕೆಗಳು ಸ್ವರಾಜ್ಯ, ‘ಅಸ್ಪೃಶ್ಯ’ರ ಶಿಕ್ಷಣ, ಅಸ್ಪೃಶ್ಯತೆಯ ಕೇಡು- ಇವೇ ಮೊದಲಾದ ವಿಷಯಗಳಿಗೆ ಸಂಬಂಧಿಸಿದವುಗಳಾಗಿದ್ದವು.

ಮೂಕನಾಯಕ ಪತ್ರಿಕೆ ಮೂರು ವರ್ಷ ಚಾಲ್ತಿಯಲ್ಲಿತ್ತು. ಈ ಬರಹವು, 1920ರ ಜನವರಿ 31ರಂದು ಪ್ರಕಟವಾದ ಮೂಕನಾಯಕದ ಮೊಟ್ಟಮೊದಲ ಸಂಚಿಕೆಯ ಸಂಪಾದಕೀಯದ ಸಂಕ್ಷಿಪ್ತ ಅನುವಾದ.

ನಮ್ಮ ದೇಶವನ್ನು ರೂಪಿಸಿರುವ ಎಲ್ಲ ಅಂಶಗಳ-ಮನುಷ್ಯ ಮೂಲದ್ದು ಮತ್ತು ಮನುಷ್ಯೇತರ ಮೂಲದ್ದು, ಎಲ್ಲದರ-ಒಟ್ಟು ಮೊತ್ತವನ್ನು ಯಾರಾದರೂ ಲೆಕ್ಕ ಹಾಕಿದ್ದೇ ಆದರೆ, ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಕಂಡುಬರುವುದೇನೆಂದರೆ, ಭಾರತದ ರಚನೆಯನ್ನು ರೂಪಿಸುವ ಅನೇಕ ಬಗೆಯ ಅಸಮಾನತೆಗಳಿಂದಲೇ ಅದು ಗುರುತಿಸಲ್ಪಡುತ್ತದೆ ಎಂಬುದು. ಅಂತಹ ಎಲ್ಲ ಅಸಮಾನತೆಗಳಲ್ಲಿ, ಬದುಕಿನ ಭೌತಿಕ ಮಟ್ಟದಲ್ಲೇ ಕಂಡುಬರುವ ತೀವ್ರರೂಪದ ಅಸಮಾನತೆಯು ಅತ್ಯಂತ ನಾಚಿಕೆಗೇಡಿನದ್ದು.

ಭಾರತೀಯರು ಹಲವು ಬಗೆಯ ಭೇಧಗಳಿಂದಾಗಿ ವಿಭಾಗಿಸಲ್ಪಟ್ಟಿದ್ದರೂ, ಧಾರ್ಮಿಕ ಸಹಭಾಗಿತ್ವದ ಕಾರಣಕ್ಕೆ ಉಂಟಾಗುವ ವಿಭಜನೆಯು ಅವುಗಳಲ್ಲೆಲ್ಲ ಅತ್ಯಂತ ಅಪಾಯಕರ ಸ್ವರೂಪದ್ದು. ಇದು ದೈಹಿಕ ಅಥವಾ ಬೌದ್ಧಿಕ ಕಾರಣಗಳಿಂದ ಉಂಟಾಗುವ ಬೇಧಗಳಿಗಿಂತ ಅತಿಹೆಚ್ಚು ಅಪಾಯಕರ. ಅನೇಕ ಸಲ, ಈ ಧಾರ್ಮಿಕ ನೆಲೆಯಿಂದುಂಟಾಗುವ ಬೇಧಗಳು ಎಂತಹ ವಿಪರೀತದ ವರ್ತನೆಯ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತವೆಂದರೆ, ಅವೇ ರಕ್ತಪಾತದ ಮೂಲಗಳಾಗಿರುತ್ತವೆ. ಹಿಂದೂಗಳು, ಪಾರ್ಸಿಗಳು, ಯಹೂದೀಯರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು- ಇವರುಗಳ ನಡುವೆ ಹಾಗೂ ಇನ್ನೂ ಅನೇಕ ಧಾರ್ಮಿಕ ಪಂಥಗಳ ನಡುವೆ ಇರುವ ಭಿನ್ನತೆಗಳು ಹಲವು ರೂಪಗಳನ್ನು ಪಡೆದುಕೊಂಡಿವೆ. ಆದರೆ, ಹಿಂದೂಗಳಲ್ಲೇ ಇರುವ ಬೇರೆ ಬೇರೆ ಸ್ತರಗಳನ್ನು ಹತ್ತಿರದಿಂದ ಪರಿಶೀಲಿಸಿದಾಗ ಕಂಡುಬರುವ ಸಂಪೂರ್ಣ ಪ್ರತ್ಯೇಕತೆ ನಿಜಕ್ಕೂ ಖಂಡನೀಯ ಮತ್ತು ನಂಬಲಸಾಧ್ಯ!

ಒಬ್ಬ ಯುರೋಪಿಯನನ್ನು ನೀನು ಯಾರೇಂದು ಪ್ರಶ್ನಿಸಿದರೆ, ತನ್ನ ರಾಷ್ಟ್ರೀಯತೆಯನ್ನು ಗುರುತಿಸಿ ಆತ ನೀಡುವ ಉತ್ತರ-ಇಂಗ್ಲೀಷ್, ಜರ್ಮನ್, ಫ್ರೆಂಚ್ ಅಥವಾ ಇಟಾಲಿಯನ್ ಎಂಬುದು-ಅದು ಯಾವುದೇ ಆಗಿದ್ದರೂ ಸಮಸ್ಯೆಯನ್ನು ಪರಿಹರಿಸಲು ಸಾಕಾಗುತ್ತದೆ. ಇದೇ ಸಂಗತಿಯನ್ನು ಹೀಗೆಯೇ ಹಿಂದೂ ಧರ್ಮದ ಬೇರೆ ಬೇರೆ ಸ್ತರಗಳಿಗೆ ಸೇರಿದ ಜನರ ಬಗ್ಗೆ ಹೇಳಲು ಸಾಧ್ಯವಿಲ್ಲ. ‘ನಾನೊಬ್ಬ ಹಿಂದೂ’ ಎಂಬ ಉತ್ತರದಿಂದ ಯಾರೋಬ್ಬರಿಗೂ ಸಮಾಧಾನ ದೊರೆಯಲಾರದು. ಒಬ್ಬ ಹಿಂದೂ ತನ್ನ ನಿರ್ದಿಷ್ಟ ಗುರುತನ್ನು ಹೇಳಿಕೊಳ್ಳಬೇಕಾದರೆ, ತನ್ನ ಜಾತಿಯನ್ನು ಗುರುತಿಸಿ ಹೇಳುವುದು ಅತ್ಯಗತ್ಯವಾಗಿರುತ್ತದೆ.

ಹಿಂದೂ ಎಂಬ ಈ ಧರ್ಮವನ್ನು ರೂಪಿಸುವ ಜಾತಿಗಳು ಏಣಿಶ್ರೇಣಿಯ ರೂಪದಲ್ಲಿ ಶ್ರೇಣೀಕೃತವಾಗಿ ಜೋಡಿಸಲ್ಪಟ್ಟಿವೆ. ಹಿಂದೂ ಸಮುದಾಯವೆಂಬುದು ಒಂದು ಗೋಪುರ ಇದ್ದಂತೆ-ಅದರಲ್ಲಿ ಪ್ರತಿಯೊಂದು ಜಾತಿಗೂ ಒಂದೊಂದು ಮಹಡಿಯನ್ನು ಕೊಡಲಾಗಿರುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಮುಖ್ಯವಾದ ಅಂಶವೆಂದರೆ, ಈ ಗೋಪುರದ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಮೆಟ್ಟಿಲುಗಳಿರುವುದಿಲ್ಲ ಅಥವಾ ಏಣಿ ಇರುವುದಿಲ್ಲ, ಆದ್ದರಿಂದ ಒಂದು ಮಹಡಿಯಲ್ಲಿರುವ ಯಾರೂ ಕೂಡಾ ಮೇಲಿನ ಮಹಡಿಗೆ ಹತ್ತುವ ಅಥವಾ ಕೆಳಗಿನ ಮಹಡಿಗೆ ಇಳಿಯುವ ಸಾಧ್ಯತೆ ಇರುವುದಿಲ್ಲ. ಯಾವ ಮಹಡಿಯಲ್ಲಿ ಯಾರು ಹುಟ್ಟಿದ್ದಾರೋ, ಅವರು ಅಲ್ಲಿಯೇ ಸಾಯುತ್ತಾರೆ. ಕೆಳಗಿನ ಮಹಡಿಯಲ್ಲಿ ಹುಟ್ಟಿರುವ ಒಬ್ಬ ವ್ಯಕ್ತಿ ಎಷ್ಟೇ ಪ್ರತಿಭಾಶಾಲಿಯಾಗಿದ್ದರೂ, ಆತ ಮೇಲಿನ ಮಹಡಿಗೆ ಹತ್ತುವ ಯಾವುದೇ ಮಾರ್ಗ ಇರುವುದಿಲ್ಲ. ಅದೇ ರೀತಿ, ಒಬ್ಬ ವ್ಯಕ್ತಿ ಯಾವುದೇ ಬಗೆಯ ಪ್ರತಿಭೆ ಅಥವಾ ಜ್ಞಾನವನ್ನೂ ಹೊಂದಿದವನಲ್ಲದಿದ್ದರೂ, ತಾನು ಹುಟ್ಟಿರುವ ಮತ್ತು ತನಗೆ ವಹಿಸಲ್ಪಟ್ಟಿರುವ ಮಹಡಿಯಿಂದ ಕೆಳಗಿನ ಮಹಡಿಗೆ ಆತನನ್ನು ಇಳಿಸುವ ಯಾವ ಸಾಧ್ಯತೆಯೂ ಇರುವುದಿಲ್ಲ.

ಜಾತಿಗಳ ನಡುವಿನ ಅಂತರ್ ಸಂಬಂಧವು, ಮನುಷ್ಯನ ನಿಜವಾದ ಅರ್ಹತೆ ಅಥವಾ ಸತ್ವದೊಂದಿಗೆ ಯಾವುದೇ ತಾರ್ಕಿಕ ಸಂಬಂಧ ಹೊಂದಿರುವುದಿಲ್ಲ. ಒಬ್ಬ ಮೇಲ್ಜಾತಿಯ ವ್ಯಕ್ತಿಯು ಎಷ್ಟೇ ಅನರ್ಹನೂ ನಿಷ್ಪ್ರಯೋಜಕನೂ ಆದರೂ, ಆತ ಹುಟ್ಟಿದ ಜಾತಿಯು ಏಣಿಶ್ರೇಣಿಯಲ್ಲಿ ಮೇಲುಗಡೆಯಿರುವುದೇ ಆದಲ್ಲಿ, ಆತನ ಸಾಮಾಜಿಕ ಸ್ಥಾನಮಾನ ಯಾವಾಗಲೂ ಮೇಲಿನದ್ದಾಗಿಯೇ ಇರುತ್ತದೆ. ಅದೇ ರೀತಿ, ಒಬ್ಬ ಅರ್ಹನಾದ ಕೆಳಜಾತಿಯ ವ್ಯಕ್ತಿಯು ತನ್ನ ‘ಕೆಳ’ತನವನ್ನು ಕಳೆದುಕೊಳ್ಳಲು ಸಾಧ್ಯವಿರುವುದಿಲ್ಲ. ಕೆಳಜಾತಿ ಮತ್ತು ಮೇಲುಜಾತಿಯ ಜನರ ನಡುವೆ ಸಹಭೋಜನ ಮತ್ತು ಅಂತರ್‌ಜಾತಿ ವಿವಾಹಗಳ ಮೇಲೆ ವಿಧಿಸಲಾಗಿರುವ ಅತ್ಯಂತ ಕಟ್ಟುನಿಟ್ಟಿನ ನಿಷೇಧಗಳ ಕಾರಣಕ್ಕೆ, ಈ ಜಾತಿ ಸಂರಚನೆಗಳು ಸದಾ ಇತರ ಜಾತಿಗಳಿಂದ ಪ್ರತ್ಯೇಕಿತವಾಗಿಯೇ ಇರುತ್ತವೆ. ಒಂದು ವೇಳೆ ಆತ್ಮೀಯತೆಯ ಕೆಲವು ಸಂಬಂಧಗಳು, ಜಾತಿಯ ಪರಿಗಣನೆ ಅಥವಾ ಚೌಕಟ್ಟಿನ್ನು ಹೊರಗಡೆ ಇಟ್ಟು, ಅವುಗಳಿಂದ ಮುಕ್ತವಾಗಿ ರೂಪುಗೊಂಡಿದ್ದರೂ, ಆ ಸಂಬಂಧಗಳ ಮೇಲೆ ಕಠಿಣ ನಿಗರಾನಿ ಇಟ್ಟಿರಲಾಗುತ್ತದೆ. ಆ ಸಂಬಂಧಗಳು ಎಲ್ಲೂ ಜಾತಿಯ ಕಟ್ಟಳೆಗಳನ್ನು ಮುರಿದು ಮುಂದುವರೆಯದಂತೆ ಗಮನಿಸಲಾಗುತ್ತದೆ. ಕೆಲವೊಮ್ಮೆ, ಕೆಲವು ಜಾತಿಗಳಿಗೆ, ಈ ಜಾತಿ ಶ್ರೇಣೀಕರಣದ ಚೌಕಟ್ಟಿನೊಳಗಡೆಯೇ ಒಂದು ಸೀಮಿತವಾದ ‘ಚಲನೆ’ಗೆ ಅವಕಾಶ ನೀಡಲಾಗಿರಬಹುದು. ಆದರೆ, ‘ಅಪವಿತ್ರ’ ಎಂದು ಹಣೆಪಟ್ಟಿ ಕಟ್ಟಲಾದ ಅನೇಕ ಜಾತಿಗಳಿಗೆ, ಆ ಸಣ್ಣ ಪ್ರಮಾಣದ ಚಲನೆಯ ಸ್ವಾತಂತ್ರ್ಯವೂ ಇಲ್ಲದೆ, ಅವೆಲ್ಲವನ್ನೂ ಕಟ್ಟುನಿಟ್ಟಾಗಿ ನಿರಾಕರಿಸಲಾಗಿರುತ್ತದೆ. ಇವುಗಳು ‘ಅಸ್ಪೃಶ್ಯ’ ಜಾತಿಗಳು; ಇವುಗಳ ಜೊತೆಗಿನ ಸಂಪರ್ಕ ‘ಜಾತಿ ಹಿಂದೂಗಳ’ನ್ನು ಅಪವಿತ್ರಗೊಳಿಸುವ ಆತಂಕ ಉಂಟು ಮಾಡುವಂಥದ್ದಾಗಿರುತ್ತದೆ.

ಈ ಜಾತಿ ಶ್ರೇಣೀಕರಣದ ತುತ್ತ ತುದಿಯಲ್ಲಿ ಬ್ರಾಹ್ಮಣ ಜಾತಿಗಳವರಿದ್ದಾರೆ. ಅವರು ತಮ್ಮನ್ನು ತಾವು ಭೂಲೋಕದ ಮೇಲಿನ ದೇವರುಗಳೆಂದು ಪರಿಗಣಿಸಿಕೊಳ್ಳುತ್ತಾರೆ. ಇನ್ನಿತರ ಎಲ್ಲ ಗಂಡು ಹೆಣ್ಣುಗಳೂ ಅವರ ಸೇವೆ ಮಾಡಲು ಹುಟ್ಟಿದವರಾಗಿದ್ದಾರೆ; ಅಥವಾ ಹಾಗೆಂದು ಬ್ರಾಹ್ಮಣರು ನಂಬುತ್ತಾರೆ. ಆದ್ದರಿಂದ ಅವರು, ಈ ತಮ್ಮ ‘ಸೇವಕ’ರ ಸಂಪೂರ್ಣ ಭಕ್ತಿ ಮತ್ತು ನಿಷ್ಠೆಯನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿದ್ದೇವೆಂದು ಭಾವಿಸಿಕೊಂಡಿದ್ದಾರೆ. ತಾವು ಈ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಲು ಹಿಂದೂ ಧರ್ಮಗ್ರಂಥಗಳನ್ನು ರಚಿಸಿರುವ ತಮ್ಮ ಶ್ರೇಷ್ಠತೆ ಕಾರಣವೆಂದು ಬ್ರಾಹ್ಮಣರು ನಂಬಿದ್ದಾರೆ-ಆ ಪವಿತ್ರ ಹಿಂದೂ ಧರ್ಮಗ್ರಂಥಗಳು ಎಂತಹ ಕಟ್ಟುನಿಟ್ಟಿನ ಪಾಠಗಳನ್ನು ಬೋಧಿಸಿದರೂ ಕೂಡಾ.

ಇನ್ನೊಂದೆಡೆ ಅಬ್ರಾಹ್ಮಣರು ಸಾಕಷ್ಟು ಪ್ರಮಾಣದ ಆಸ್ತಿ ಮತ್ತು ಶಿಕ್ಷಣದ ಮೇಲಿನ ಅಧಿಕಾರವಿಲ್ಲದ ಕಾರಣದಿಂದಾಗಿ ಹಿಂದುಳಿದವರಾಗಿಯೇ ಇದ್ದಾರೆ. ಅವರು ಹಿಂದುಳಿದಿದ್ದಾರೆ ಎಂಬುದು ನಿಜ. ಆದರೆ ಆ ಹಿಂದುಳಿದಿರುವಿಕೆಯು ಸಂಪೂರ್ಣ ಇಲ್ಲದಿರುವಿಕೆಯಿಂದ ಉಂಟಾಗುವಂತಹ ಸಂಕಟವನ್ನು ಉಂಟುಮಾಡಲೇಬೇಕೆಂದೇನಿಲ್ಲ. ಏಕೆಂದರೆ, ಹಿಂದೂ ಅಬ್ರಾಹ್ಮಣರಿಗೆ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಕೃಷಿಯ ಉತ್ಪನ್ನಗಳು, ಕೈಗಾರಿಕೆಗಳ ಉದ್ಯೋಗಗಳು, ವ್ಯಾಪಾರ ಮತ್ತು ವಾಣಿಜ್ಯ, ಕುಲಕಸುಬುಗಳು ಇವೇ ಮೊದಲಾದ ಜೀವನೋಪಾಯದ ಮಾರ್ಗಗಳು ಅವರಿಗೆ ತೆರೆದಿರುತ್ತವೆ. ಎಲ್ಲಕ್ಕಿಂತ ಕೆಟ್ಟರೀತಿಯಲ್ಲಿ ಜಾತಿ ವ್ಯವಸ್ಥೆಗೆ ಬಲಿಪಶುಗಳಾಗಿರುವವರು ‘ಬಹಿಷ್ಕೃತ’ರು. ಅವರು ತಮ್ಮನ್ನು ತಾವು ಎಲ್ಲ ರೀತಿಯಲ್ಲೂ ದುರ್ಬಲ ಸ್ಥಾನಗಳಲ್ಲಿರುವಂತೆ ಅಂದುಕೊಳ್ಳುವಂತಹ ಸ್ಥಿತಿ ಇರುತ್ತದೆ-ಆತ್ಮಸಮ್ಮಾನ ಮತ್ತು ಭೌತಿಕ ಬದುಕಿನಲ್ಲಿ ಕೊರತೆಯುಳ್ಳವರಾಗಿ, ದುರ್ಬಲರಾಗಿ ಮತ್ತು ಕಡಿಮೆ ದರ್ಜೆಯವರಾಗಿ ಪಡಿಗಣಿಸಿಕೊಳ್ಳುತ್ತಾರೆ. ಅವರ ಈ ದುಸ್ಥಿತಿಯು ಪ್ರಜ್ಞಾಪೂರ್ವಕವಾಗಿ ಎತ್ತಿತೋರಿಸಲೇ ಬೇಕಾಗಿರುವಂಥದ್ದು. ಅವರ ಮುಕ್ತಿಯ ಏಕೈಕ ಸಾಧ್ಯತೆ ಇರುವುದು ಅವರ ಸ್ವಯಂ ಸಬಲೀಕರಣದಲ್ಲಿ. ಸಂತೋಷದ ಸಂಗತಿಯೆಂದರೆ, ಈ ಬೆಳವಣಿಗೆ ಈಗ ಆರಂಭವಾಗಿದೆ.

ಆದರೆ ಅವರ ಸಮಸ್ಯೆಗಳು ಇನ್ನೂ ಸಾಕಷ್ಟಿವೆ. ದುರದೃಷ್ಟದ ಸಂಗತಿಯೆಂದರೆ, ಬಹಿಷ್ಕೃತರನ್ನು ಕಾಡುತ್ತಿರುವ ಅನೇಕಾನೇಕ ಸಮಸ್ಯೆಗಳನ್ನು ನೇರವಾಗಿ ಮತ್ತು ನಿರ್ಭೀತವಾಗಿ ಮುನ್ನೆಲೆಗೆ ತರಲು ಸಿದ್ಧವಾಗಿರುವ ಸಾಂಸ್ಥಿಕ ವೇದಿಕೆಗಳು ಅಥವಾ ಸಂವಹನ ಮಾಧ್ಯಮಗಳು ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ‘ಕೆಳಜಾತಿ’ಗಳೆಂದು ಕರೆಯಲ್ಪಟ್ಟಿರುವ ಸಮುದಾಯಗಳಿಗೆ ಸೇರಿದ ಜನರ ಸಮಸ್ಯೆಗಳನ್ನು ಪಡಿಹರಿಸಬೇಕಾದ ಅಗತ್ಯವನ್ನು ಒತ್ತಿಹೇಳುವಂತಹ ವಿಷಯಗಳಿಗೆ ಸಂಬಂಧಪಟ್ಟ ಸಂಗತಿಗಳನ್ನು ಬರೆಯುವ ಕೆಲವು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ಯಾವ ಪತ್ರಿಕೆಗಳು ಕೂಡಾ ‘ಅಸ್ಪೃಶ್ಯರ’ ಹಕ್ಕುಗಳಿಗೆ ಸಂಬಂದಿಸಿದ ವಿಚಾರಗಳಿಗೆ ಪ್ರತ್ಯೇಕವಾದ ಗಮನ ಕೊಡುವುದಿಲ್ಲ. ಈ ನಿರ್ವಾತವನ್ನು ತುಂಬಬೇಕೆಂಬ ಉದ್ದೇಶದಿಂದಲೇ, ‘ಮೂಕನಾಯಕ’ ಎಂಬ ನಿಯತಕಾಲಿಕವನ್ನು ಆರಂಭಿಸುವ ಯೋಜನೆ ರೂಪಿಸಲಾಯಿತು ಮತ್ತು ಪತ್ರಿಕೆಯ ವಿತರಣೆಗೆ ಚಾಲನೆ ನೀಡಲಾಯಿತು.

· ಮರಾಠಿಯಿಂದ ಹಿಂದಿ ಅನುವಾದ: ಪ್ರೊ.ಶಿಯೋರಾಜ್ ಸಿಂಗ್ ಬೇಚೈನ್, ಹಿಂದಿ ವಿಭಾಗ, ದೆಹಲಿ ವಿಶ್ವವಿದ್ಯಾಲಯ.

· ಹಿಂದಿಯಿಂದ ಇಂಗ್ಲೀಷಿಗೆ ಅನುವಾದ: ಪ್ರೊ. ತಪನ್ ಬಸು, ಇಂಗ್ಲೀಷ್ ವಿಭಾಗ ದೆಹಲಿ ವಿಶ್ವವಿದ್ಯಾಲಯ

· ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ: ಮಲ್ಲಿಗೆ ಸಿರಿಮನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...