Homeಮುಖಪುಟಗದ್ದಲ, ವಿರೋಧಗಳ ನಡುವೆ ರಾಜ್ಯಸಭೆಯಲ್ಲೂ ದೆಹಲಿ ಮಸೂದೆ ಅಂಗೀಕಾರ

ಗದ್ದಲ, ವಿರೋಧಗಳ ನಡುವೆ ರಾಜ್ಯಸಭೆಯಲ್ಲೂ ದೆಹಲಿ ಮಸೂದೆ ಅಂಗೀಕಾರ

- Advertisement -

ಚುನಾಯಿತ ಸರ್ಕಾರಕ್ಕಿಂತ ಕೇಂದ್ರದ ಪ್ರತಿನಿಧಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌‌‌ಗೆ ಹೆಚ್ಚಿನ ಅಧಿಕಾರವನ್ನು ನೀಡುವ ಪ್ರಸ್ತಾಪವಿರುವ ವಿವಾದಾತ್ಮಕ ಮಸೂದೆಯನ್ನು ಬುಧವಾರ ರಾಜ್ಯಸಭೆಯು ಅಂಗೀಕರಿಸಲಾಯಿತು.
ಗೌಜು-ಗದ್ದಲಗಳ ನಡುವೆ ಮಸುದೆ ಅಂಗೀಕಾರ ಪಡೆಯಿತು.

ರಾಜ್ಯಸಭೆಯಲ್ಲಿ ಈ ಶಾಸನವನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಸರ್ಕಾರವು ಮಸೂದೆ ಪರಿಗಣನೆಗೆ ಮುಂದಾದಾಗ ಪ್ರತಿಪಕ್ಷಗಳು ವಿಭಜನೆ (ಡಿವಿಜನ್ ಆಫ್ ವೋಟ್ಸ್) ಕೋರಿದವು. ಮತದಾನದ ವೇಳೆ 83 ಸದಸ್ಯರು ಪರವಾಗಿದ್ದರೆ, 45 ಮಂದಿ ಮಸೂದೆಯನ್ನು ವಿರೋಧಿಸಿದರು.
ಕಾಂಗ್ರೆಸ್ ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಸದಸನದಿಮದ ಹೊರ ನಡೆದಿದ್ದವು.

ಇದನ್ನೂ ಓದಿ: ನಾಲ್ಕು ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಗೆ ಉದ್ಯೋಗ ಖಾತ್ರಿಯ ವೇತನ ನೀಡಿದ ಇಲಾಖೆ!

ಈ ಮಸೂದೆ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ, ಇದು 2013 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ಸಂಘರ್ಷ ನಡೆಸುತ್ತಿದ್ದ ಸರ್ಕಾರಕ್ಕೆ ಈಗ ಹಿನ್ನಡೆ ಆಗಿದೆ.

ಇದರೊಂದಿಗೆ ದೆಹಲಿಯಲ್ಲಿ “ಸರ್ಕಾರ” ಎಂಬ ಪದವು ಲೆಫ್ಟಿನೆಂಟ್ ಗವರ್ನರ್ ಎಂದರ್ಥವಾಗುತ್ತದೆ. ದೆಹಲಿ ಸರ್ಕಾರವು ಯಾವುದೇ ಕಾರ್ಯಾಂಗೀಯ ಕ್ರಮ ತೆಗೆದುಕೊಳ್ಳುವ ಮೊದಲು ಲೆಫ್ಟಿನೆಂಟ್ ಗವರ್ನರ್‌‌ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ರಾಜಧಾನಿ (ತಿದ್ದುಪಡಿ) ಮಸೂದೆ ಸ್ಪಷ್ಟಪಡಿಸುತ್ತದೆ.

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, “ರಾಜ್ಯಸಭೆ ಜಿಎನ್‌ಸಿಟಿಡಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಇಂದು ಭಾರತೀಯ ಪ್ರಜಾಪ್ರಭುತ್ವಕ್ಕೆ ದುಃಖದ ದಿನ. ಜನರ ಅಧಿಕಾರವನ್ನು ಪುನಃಸ್ಥಾಪಿಸುವ ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ಅಡೆತಡೆಗಳು ಏನೇ ಇರಲಿ, ನಾವು ಉತ್ತಮ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಕೆಲಸವೂ ನಿಲ್ಲುವುದಿಲ್ಲ ಅಥವಾ ನಿಧಾನಗೊಳ್ಳುವುದಿಲ್ಲ…’ ಎಂದಿದ್ದಾರೆ.

ಇದನ್ನೂ ಓದಿ: ದಶಕಗಳಿಂದ ದುಡಿದರೂ ಕನಿಷ್ಟ ಭದ್ರತೆಯಿಲ್ಲ: ಕೂಲಿ ನೇಕಾರ ಕಾರ್ಮಿಕರ ಗೋಳು ಕೇಳುವವರ್ಯಾರು?

ಮೇಲ್ಮನೆಯಲ್ಲಿ ಎರಡು ದಿನಗಳ ಗದ್ದಲಗಳ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು. ಪ್ರತಿಪಕ್ಷದ ಸಂಸದರು ಈ ಮಸೂದೆ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತದೆ ಎಂದು ಪದೇ ಪದೇ ಹೇಳಿದರು. ಮಸೂದೆಯನ್ನು ಆಯ್ಕೆ ಸಮಿತಿಗೆ (ಸೆಲೆಕ್ಟ್ ಕಮೀಟಿಗೆ) ಕಳುಹಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು.

“ದ್ರೌಪದಿಯ ಬಟ್ಟೆಗಳನ್ನು ಕಿತ್ತುಹಾಕಿದ ರೀತಿ ಸಂವಿಧಾನಕ್ಕೂ ಮಾಡಲಾಗುತ್ತಿದೆ” ಎಂದು ಹೇಳಿದ ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋತ ಕಾರಣ ಬಿಜೆಪಿ ಈ ಮಸೂದೆಯನ್ನು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಯಾವುದೇ ಸಾಂವಿಧಾನಿಕ ತಿದ್ದುಪಡಿ ಇಲ್ಲದೆ ದೇಶದ ಸಂವಿಧಾನವನ್ನು ಬದಲಾಯಿಸಲಾಗುತ್ತಿದೆ” ಎಂದು ಸಿಂಗ್ ಹೇಳಿದರು, ದೆಹಲಿಯ ಈಗಿನ ಆಡಳಿತ ವ್ಯವಸ್ಥೆಯು 69 ಸಾಂವಿಧಾನಿಕ ತಿದ್ದುಪಡಿಗಳ ನಂತರ ಬಂದಿದೆ. ಸಾಂವಿಧಾನಿಕ ತಿದ್ದುಪಡಿಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ – ಸರಳ ಬಹುಮತವಲ್ಲ – ಇದಕ್ಕಾಗಿ ಮೇಲ್ಮನೆಯಲ್ಲಿ ಬಿಜೆಪಿಗೆ ಸಂಖ್ಯೆಗಳ ಕೊರತೆಯಿದೆ. ಆದರೆ ಸರಳ ಬಹುಮತದಲ್ಲಿ ಇದನ್ನು ಸಾಧಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಮದುವೆಗಳಲ್ಲಿಯೂ ರೈತ ಹೋರಾಟಕ್ಕೆ ಬೆಂಬಲ!: ಹರಿಯಾಣ-ಪಂಜಾಬ್‌ನಲ್ಲಿ ವಿಭಿನ್ನ ಪ್ರತಿರೋಧ

ಲೆಫ್ಟಿನೆಂಟ್-ಗವರ್ನರ್ ಎಂಬ ಪ್ರಾಕ್ಸಿ ಮೂಲಕ ದೆಹಲಿಯನ್ನು ಆಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಎಪಿ ಸರ್ಕಾರ ಆರೋಪಿಸುತ್ತಲೆ ಬಂದಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆರ್‌ಜೆಡಿ, ಶಿವಸೇನೆ, ವೈಎಸ್‌ಆರ್ ಕಾಂಗ್ರೆಸ್ ಮತ್ತು ಅಕಾಲಿ ದಳ ಸೇರಿದಂತೆ ಹೆಚ್ಚಿನ ವಿರೋಧ ಪಕ್ಷಗಳು ಈ ಮಸೂದೆಯನ್ನು ವಿರೋಧಿಸಿದ್ದವು. ವೈಎಸ್‌ಆರ್ ಕಾಂಗ್ರೆಸ್ ಚರ್ಚೆಯ ಮಧ್ಯದಲ್ಲಿ ಹೊರನಡೆಯಿತು.

ಎಎಪಿ ಈ ಮಸೂದೆಯನ್ನು ಜನರು ಒಪ್ಪುವುದಿಲ್ಲ ಮತ್ತು ರೈತರ ಪ್ರತಿಭಟನೆಯಂತೆಯೇ ಪ್ರತಿಭಟನೆಗಳು ನಡೆಯಲಿವೆ ಎಂದು ಹೇಳಿತು. ಮಸೂದೆಯನ್ನು ತರಲು ಒಂದು ಪ್ರಮುಖ ಕಾರಣವೆಂದರೆ ಪ್ರತಿಭಟನಾ ನಿರತ ರೈತರಿಗೆ ಕೇಜ್ರಿವಾಲ್ ಅವರು ಬೆಂಬಲ ನೀಡಿದ್ದು ಎನ್ನಲಾಗಿದೆ.

“ಎರಡು ಕೋಟಿ ಜನರು ಸರ್ಕಾರವನ್ನು ಆಯ್ಕೆ ಮಾಡಿದರು. ನಮ್ಮ ಅಪರಾಧವೇನು? ಕೇಜ್ರಿವಾಲ್ ಅವರು ದೆಹಲಿಗೆ ಬಂದಾಗ ರೈತರನ್ನು ಜೈಲಿಗೆ ಹಾಕದ ಕಾರಣ ಇದನ್ನು ಮಾಡಲಾಗಿದೆ. ಮಸೂದೆಯನ್ನು ರದ್ದುಗೊಳಿಸಬೇಕು” ಎಂದು ಸಿಂಗ್ ಹೇಳಿದರು.

ಇದನ್ನೂ ಓದಿ: ಲಸಿಕೆ ಪಡೆದ ಎರಡೇ ದಿನದಲ್ಲಿ ಕೊರೊನಾ ಪಾಸಿಟಿವ್‌ ಆದ ಪಾಕಿಸ್ತಾನ ಪ್ರಧಾನಿ

’ಇಲ್ಲಿ ಚುನಾಯಿತ ಸರ್ಕಾರದ ಅಧಿಕಾರವನ್ನು ಕಿತ್ತುಕೊಂಡು ಅದನ್ನು ಲೆಫ್ಟಿನೆಂಟ್‌‌ ಗವರ್ನರ್‌ಗೆ ನೀಡಲಾಗುತ್ತಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಇದು ಕಾನೂನಾಗಬಾರದು” ಎಂದು ಕಾಂಗ್ರೆಸ್‌ನ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.

ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ಪ್ರತಿಪಕ್ಷಗಳ ಕಳವಳಗಳಿಗೆ ಸ್ಪಂದಿಸಲು ಪ್ರಯತ್ನಿಸಿದರು. 1991 ರ ಕಾಯಿದೆಯಲ್ಲಿನ ಅಸ್ಪಷ್ಟತೆಗಳನ್ನು ತೆಗೆದುಹಾಕಲು ತಿದ್ದುಪಡಿಗಳನ್ನು ತರಲಾಗಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ದಿನನಿತ್ಯದ ಆಡಳಿತದ ಪ್ರತಿಯೊಂದು ವಿಷಯದ ಬಗ್ಗೆ ದೆಹಲಿ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಅವರ “ಸಮ್ಮತಿಯನ್ನು” ಪಡೆಯುವ ಅಗತ್ಯವಿಲ್ಲ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಕಾಯ್ದೆಯಲ್ಲಿನ ತಿದ್ದುಪಡಿಗಳು ದೆಹಲಿಯಲ್ಲಿ ಉತ್ತಮ ಸರ್ಕಾರಿ ಕಾರ್ಯವಿಧಾನವನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಜಯ್ ಶಾ ಮಾನಹಾನಿ ಪ್ರಕರಣದಲ್ಲಿ ದಿ ವೈರ್ ಕ್ಷಮೆ ಕೇಳಿತೆ? ಅಸಲಿ ಸಮಾಚಾರ ಇಲ್ಲಿದೆ!

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial