Homeಮುಖಪುಟಗುಜರಾತ್: ನಾಲ್ಕು ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಗೆ ಉದ್ಯೋಗ ಖಾತ್ರಿಯ ವೇತನ ನೀಡಿದ ಇಲಾಖೆ!

ಗುಜರಾತ್: ನಾಲ್ಕು ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಗೆ ಉದ್ಯೋಗ ಖಾತ್ರಿಯ ವೇತನ ನೀಡಿದ ಇಲಾಖೆ!

- Advertisement -
- Advertisement -

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 (MGNREGA) ಗೆ ಸಂಬಂಧಿಸಿದ ಹಗರಣಗಳಲ್ಲಿ ಇತ್ತೀಚಿನ ಉದಾಹರಣೆಯಾಗಿ ನಾಲ್ಕು ವರ್ಷದ ಹಿಂದೆ ಮೃತಪಟ್ಟವರಿಗೆ ಉದ್ಯೋಗ ಕಾರ್ಡ್ ನೀಡಿ, ವೇತನ ನೀಡಿರುವುದು ಪತ್ತೆಯಾಗಿದೆ.

ಗುಜರಾತ್‌ನ ಛೋಟ್ಟಾ ಉದಯಪುರ ಜಿಲ್ಲೆಯ ಬೊಡೆಲಿ ತಹಸಿಲ್ ಎಂಬ ವ್ಯಕ್ತಿ ನಿಧನರಾಗಿ ನಾಲ್ಕು ವರ್ಷಗಳು ಸಂದಿವೆ. ಆದರೆ ಇವರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಕಾರ್ಡ್ ನೀಡಲಾಗಿದೆ. ಜೊತೆಗೆ ಕೆಲಸ ಮಾಡಿರುವುದಕ್ಕಾಗಿ ವೇತನವನ್ನುಅವರ ಖಾತೆಗೆ  ಪಾವತಿಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಈ ಹಗರಣವನ್ನು ಸ್ಥಳೀಯ ಶಾಸಕ ಮೋಹನ್‌ಸಿನ್ಹ್ ರಾಥ್ವಾ ಗುಜರಾತ್ ರಾಜ್ಯ ವಿಧಾನಸಭೆಯಲ್ಲಿ ಬೆಳಕಿಗೆ ತಂದಿದ್ದಾರೆ. ಇದನ್ನು ಗುಜರಾತ್ ಕೃಷಿ ಸಚಿವರು ಸಹ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ದಲಿತ ಆರ್‌ಟಿಐ ಕಾರ್ಯಕರ್ತನ ಹತ್ಯೆ ವಿರೋಧಿಸಿ ಪ್ರತಿಭಟನೆ: ಗುಜರಾತ್‌ ಶಾಸಕ ಜಿಗ್ನೇಶ್ ಮೇವಾನಿ ಬಂಧನ

ಉದ್ಯೋಗ ಖಾತ್ರಿ ಯೋಜನೆಯಡಿ ವೇತನ ಪಾವತಿಗೆ ಸಂಬಂಧಿಸಿದ ಹಗರಣಗಳು ಗುಜರಾತ್‌ನಲ್ಲಿ ಮುಂದುವರೆದಿದೆ ಎಂದು ಬಜೆಟ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಮೋಹನ್‌ಸಿನ್ಹ್ ರಾಥ್ವಾ,  ತಮ್ಮ ಕ್ಷೇತ್ರವಾದ ಛೋಟ್ಟಾ ಉದಯಪುರದ ಹಲವಾರು ಅಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ. ಎಂಜಿಎನ್‌ಆರ್‌ಇಜಿಎ ದಾಖಲೆಗಳಲ್ಲಿ, ಅಪ್ರಾಪ್ತ ವಯಸ್ಕರಿಗೆ ಮತ್ತು ಸರ್ಕಾರಿ ವಲಯದಲ್ಲಿ ಉದ್ಯೋಗದಲ್ಲಿರುವವರಿಗೆ ಸಹ ಅನೇಕ ಬಾರಿ ವೇತನ ಪಾವತಿ ಮಾಡಲಾಗಿದೆ ಎಂದು ಸದನದಲ್ಲಿ ತಿಳಿಸಿದ್ದಾರೆ.

“ನಾಲ್ಕು ವರ್ಷಗಳ ಹಿಂದೆ ನಿಧನರಾದ ವ್ಯಕ್ತಿಯೊಬ್ಬನಿಗೆ ಪಾವತಿ ಮಾಡಲಾಗಿದೆ. ಅದೇ ರೀತಿ, ಪ್ರಾಥಮಿಕ ಶಾಲಾ ಶಿಕ್ಷಕ ಮಲ್ಸಿಂಹ ರಾಥ್ವಾ ಅವರಿಗೆ ಈ ಯೋಜನೆಯಡಿ 1,120 ರೂ. ನೀಡಲಾಗಿದೆ. ಜಿಇಬಿಯಲ್ಲಿ ಕೆಲಸ ಮಾಡುತ್ತಿರುವ ಅಶ್ವಿನ್ ರಾಥ್ವಾ ಅವರಿಗೆ 1,120 ರೂ. ನೀಡಲಾಗಿದೆ. ಇಂತಹ ಘಟನೆಗಳು ಈ ಹಗರಣದಲ್ಲಿ ಅನೇಕ ಕಂಡುಬಂದಿವೆ” ಎಂದಿದ್ದಾರೆ.

ಸರ್ಕಾರಿ ನೌಕರರಾಗಿರುವ ವ್ಯಕ್ತಿಗಳಿಗೆ ಅನೇಕ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ರಾಜ್ಯ ವಿಧಾನಸಭೆಯ ಹಿರಿಯ ಶಾಸಕರು ಹೇಳಿದ್ದಾರೆ. “ಹಗರಣದ ಮತ್ತೊಂದು ದುರಂತವೆಂದರೆ, 13 ವರ್ಷದ ಮತ್ತು 15 ವರ್ಷದ ಮಕ್ಕಳನ್ನು ಸಹ ಫಲಾನುಭವಿಗಳೆಂದು ತೋರಿಸಲಾಗಿದೆ ಮತ್ತು 1,120 ರೂ.ಗಳ ಪಾವತಿಯನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ” ಎಂದಿದ್ದಾರೆ.

ಇದಕ್ಕೆ ಉತ್ತರಿಸಿದ ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಸಾರಿಗೆ ಸಚಿವ ಆರ್.ಸಿ.ಫಾಲ್ಡು, ಶಾಸಕ ಮೋಹನ್‌ಸಿನ್ಹ್ ರಾಥ್ವಾ ಅವರ ಆರೋಪ ಮತ್ತು ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಒಪ್ಪಿಕೊಂಡಿದ್ದಾರೆ. “ಪಾವತಿಯಲ್ಲಿ ಕೆಲವು ಅಕ್ರಮಗಳನ್ನು ನಾವು ಕಂಡುಕೊಂಡಿದ್ದೇವೆ ಮತ್ತು 2020 ರಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೆಲವು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ” ಎಂದಿದ್ದಾರೆ.


ಇದನ್ನೂ ಓದಿ: ಗುಜರಾತ್: ಮಗಳ ಕಣ್ಣ ಮುಂದೆಯೆ ದಲಿತ ಹೋರಾಟಗಾರನನ್ನು ಕೊಂದ ಮೇಲ್ಜಾತಿಯ ದುಷ್ಕರ್ಮಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...