Homeಮುಖಪುಟ₹ 371 ಕೋಟಿಯ ಬೃಹತ್ ಹಗರಣ | ಚಂದ್ರಬಾಬು ನಾಯ್ಡುಗೆ ಕ್ಲೀನ್ ಚಿಟ್ ಕೊಟ್ಟ ಇಡಿ

₹ 371 ಕೋಟಿಯ ಬೃಹತ್ ಹಗರಣ | ಚಂದ್ರಬಾಬು ನಾಯ್ಡುಗೆ ಕ್ಲೀನ್ ಚಿಟ್ ಕೊಟ್ಟ ಇಡಿ

ಮೋದಿಯ ವಾಷಿಂಗ್‌ ಮೆಷಿನ್‌ನಲ್ಲಿ ಸ್ವಚ್ಛಗೊಂಡ ನಾಯ್ಡು ಎಂದ ಕಾಂಗ್ರೆಸ್

- Advertisement -
- Advertisement -

ಕೌಶಲ್ಯಾಭಿವೃದ್ಧಿ ನಿಗಮದ 371 ಕೋಟಿ ರೂಪಾಯಿ ಹಗರಣದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಕ್ಲೀನ್ ಚಿಟ್ ನೀಡಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಜಗನ್‌ಮೋಹನ್‌ ರೆಡ್ಡಿ ಸರ್ಕಾರ ರಚಿಸಿದ್ದ ಸಿಐಡಿ ತನಿಖೆ ಆಧರಿಸಿ ಚಂದ್ರಬಾಬು ನಾಯ್ಡು ಅವರನ್ನು 2023ರಲ್ಲಿ ಬಂಧಿಸಲಾಗಿತ್ತು. 53 ದಿನಗಳ ಕಾಲ ಜೈಲಿನಲ್ಲಿದ್ದ ಅವರು ಅಕ್ಟೋಬರ್ 31, 2023ರಂದು ರಂದು ಜಾಮೀನು ಪಡೆದು ಹೊರ ಬಂದಿದ್ದರು.

ಪ್ರಕರಣ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಡಿಸೈನ್‌ಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ಇತರರಿಗೆ ಸೇರಿದ 23.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹಣ ಅಕ್ರಮ ವರ್ಗಾವಣೆ (ತಡೆ) ಕಾಯ್ದೆಯಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಇಡಿಯ ಹೈದರಾಬಾದ್ ಘಟಕ ಮುಂದಾಗಿದೆ.

ಆದರೆ, ಸೀಮೆನ್ಸ್ ಕಂಪನಿಯ ಸಹಭಾಗಿತ್ವದ ಸರ್ಕಾರದ ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ಧಿಯ ಯೋಜನೆಯ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಪಾತ್ರವಿಲ್ಲ ಎಂದಿದೆ.

ಕಳೆದ ಜೂನ್‌ನಲ್ಲಿ ಪ್ರಕಟಗೊಂಡ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತು ಲೋಕಸಭೆಯ ಚುನಾವಣೆಯ ಫಲಿತಾಂಶದಲ್ಲಿ ಚಂದ್ರಬಾಬು ನಾಯ್ದು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಅಭೂತಪೂರ್ವ ಜಯಗಳಿಸಿದೆ. ಪ್ರಸ್ತುತ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶದ ಸಿಎಂ ಆಗಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಿ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

ಇದಕ್ಕೂ ಎರಡು ತಿಂಗಳ ಮುಂದೆ, ಅಂದರೆ ಏಪ್ರಿಲ್ 5ರಂದು ಚಂದ್ರಬಾಬು ನಾಯ್ದು ಮತ್ತು ಇತರರ ವಿರುದ್ದ ವಿಜಯವಾಡದ ಭ್ರಷ್ಟಾಚಾರ ವಿರೋಧಿ ಬ್ಯೂರೋ (ಎಸಿಬಿ) ಕೋರ್ಟ್‌ಗೆ ಸಿಐಡಿ ಚಾರ್ಜ್‌ಶೀಟ್ ಸಲ್ಲಿಸಿದೆ.

ಸೀಮೆನ್ಸ್ ಯೋಜನೆಯಲ್ಲಿ ರಾಜ್ಯವು ಹೂಡಿಕೆ ಮಾಡಿದ ಹಣವನ್ನು ಬೇರೆಡೆಗೆ ತಿರುಗಿಸುವ ಮೂಲಕ ಆಂಧ್ರ ಸರ್ಕಾರವನ್ನು ವಂಚಿಸಿದ ಆರೋಪದ ಮೇಲೆ ಡಿಸೈನ್‌ಟೆಕ್ ಸಿಸ್ಟಮ್ಸ್ ಮತ್ತು ಇತರರ ವಿರುದ್ಧ ಸಿಐಡಿ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಪ್ರಾರಂಭಿಸಿತ್ತು.

ಕಂಪನಿಯ ಎಂಡಿ ವಿಕಾಸ್ ವಿನಾಯಕ್ ಖಾನ್‌ವಾಲ್ಕರ್, ಸೌಮ್ಯಾದ್ರಿ ಶೇಖರ್ ಬೋಸ್, ಅಲಿಯಾಸ್ ಸುಮನ್ ಬೋಸ್ (ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾಜಿ ಎಂಡಿ), ಮತ್ತು ಅವರ ಸಹಚರರಾದ ಮುಕುಲ್ ಚಂದ್ರ ಅಗರ್ವಾಲ್ ಮತ್ತು ಸುರೇಶ್ ಗೋಯಲ್ ಅವರು, ಸಾಮಾಗ್ರಿ/ಸೇವೆಗಳನ್ನು ಪೂರೈಸುವ ನೆಪದಲ್ಲಿ ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಬಹು-ಪದರದ ವಹಿವಾಟುಗಳ ಮೂಲಕ ಶೆಲ್ ಕಂಪನಿಗಳು ಅಥವಾ ನಿಷ್ಕ್ರಿಯ ಘಟಕಗಳ ಮೂಲಕ ಸರ್ಕಾರಿ ಹಣವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂಬುವುದು ತನಿಖೆಯಿಂದ ತಿಳಿದು ಬಂದಿರುವುದಾಗಿ ಇಡಿ ಹೇಳಿದೆ.

ಡಿಸೈನ್‌ಟೆಕ್ ಕಂಪನಿಯ 31.2 ಕೋಟಿ ಮೊತ್ತದ ಸ್ಥಿರ ಠೇವಣಿಯನ್ನು ಈ ಹಿಂದೆಯೇ ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಖಾನ್‌ವಾಲ್ಕರ್, ಬೋಸ್, ಅಗರ್ವಾಲ್ ಮತ್ತು ಗೋಯಲ್ ಅವರನ್ನು ಬಂಧಿಸಿದೆ. ವಿಶಾಖಪಟ್ಟಣ ಪಿಎಂಎಲ್ಎ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.

ಮೋದಿಯ ವಾಷಿಂಗ್‌ ಮೆಷಿನ್‌ನಲ್ಲಿ ಸ್ವಚ್ಛಗೊಂಡ ನಾಯ್ಡು – ಕಾಂಗ್ರೆಸ್

ಬಿಜೆಪಿಯನ್ನು ಬೆಂಬಲಿಸಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಅವರಿಗೆ ಇಡಿ ಕ್ಲೀನ್ ಚಿಟ್‌ ನೀಡಿರುವುದಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕಾಂಗ್ರೆಸ್ “ಮೋದಿಯವರ ವಾಷಿಂಗ್ ಮೆಷಿನ್ ಬಗ್ಗೆ ನಿಮಗೆ ಗೊತ್ತಾ? ಈ ವಾಷಿಂಗ್ ಮೆಷಿನ್‌ನಲ್ಲಿ ಭ್ರಷ್ಟಾಚಾರಿಗಳನ್ನು ಹಾಕಿದರೆ ಕೊಳೆಯೆಲ್ಲ ಹೋಗುತ್ತದೆ. ಈ ಬಾರಿ ಚಂದ್ರಬಾಬು ನಾಯ್ಡು ಅವರ ಸರದಿ. ಅವರ ವಿರುದ್ದ ಭ್ರಷ್ಟಾಚಾರದ ಕೊಳೆ ಹೋಗಿದೆ. ಇದು ಬಿಜೆಪಿ ವಾಷಿಂಗ್ ಮೆಷಿನ್” ಎಂದಿದೆ.

ಇದನ್ನೂ ಓದಿ : ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ | ಸೆಕ್ಷನ್ 6ಎ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಿತೃತ್ವ ರಜೆಗೆ ಕಾನೂನು ತನ್ನಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಪಿತೃತ್ವ ರಜೆಯನ್ನು (paternity leave) ಸಾಮಾಜಿಕ ಭದ್ರತಾ ಸೌಲಭ್ಯವೆಂದು ಪರಿಗಣಿಸಿ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಮಾ.17) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ರಜೆಯ ಅವಧಿಯು ಪೋಷಕರು ಮತ್ತು ಮಗು ಇಬ್ಬರ...

‘ಕಾಲ ಎಲ್ಲಕ್ಕೂ ಉತ್ತರಿಸುತ್ತದೆ’; ಟಿವಿಕೆ ನಾಯಕನ ‘ಡಿಎಂಕೆ ಬೆದರಿಕೆ’ ಆರೋಪ ‘ಸತ್ಯಕ್ಕೆ ದೂರವಾದ ಮಾತು’ ಎಂದ ರಜನಿಕಾಂತ್

ರಾಜಕೀಯ ಪ್ರವೇಶಕ್ಕೆ ಯತ್ನಿಸಿದಾಗ ಡಿಎಂಕೆಯಿಂದ ಬೆದರಿಕೆ ಇತ್ತು ಎಂಬ ಟಿವಿಕೆ ನಾಯಕ ಆಧವ್ ಅರ್ಜುನ ಅವರ ಆರೋಪವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಮಂಗಳವಾರ ನಿರಾಕರಿಸಿದ್ದಾರೆ ಮತ್ತು "ಕಾಲವೇ ಉತ್ತರ ನೀಡುತ್ತದೆ" ಎಂದು ಹೇಳಿದ್ದಾರೆ. ತಮ್ಮ ಅಧಿಕೃತ...

ಕಾಂಗ್ರೆಸ್‌ ಮಾನನಷ್ಟ ಪ್ರಕರಣ : ಅರ್ನಾಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿಗೆ ದೆಹಲಿ ಹೈಕೋರ್ಟ್ ಸಮನ್ಸ್

ಟರ್ಕಿ ದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಅಂತಾರಾಷ್ಟ್ರೀಯ ಕಚೇರಿ ಹೊಂದಿದೆ ಎಂಬ ವರದಿಗೆ ಸಂಬಂಧಿಸಿದಂತೆ, ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿ ವಿರುದ್ಧ ಕಾಂಗ್ರೆಸ್ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಹೈಕೋರ್ಟ್ ಮಂಗಳವಾರ (ಮಾ.17)...

ನಾಗಾಲ್ಯಾಂಡ್‌| ಕೇಂದ್ರದ ‘ವಂದೇ ಮಾತರಂ’ ಕಡ್ಡಾಯ ನಿರ್ದೇಶನ ವಿರೋಧಿಸಿ ನಾಗಾ ವಿದ್ಯಾರ್ಥಿ ಒಕ್ಕೂಟದಿಂದ ಪ್ರತಿಭಟನೆ

ಸರ್ಕಾರದ ಅಧಿಕೃತ ಕಾರ್ಯಕ್ರಮಗಳ ಸಮಯದಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನವನ್ನು ವಿರೋಧಿಸಿ ಸೋಮವಾರ ನಾಗಾ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಎಫ್) ಬ್ಯಾನರ್...

‘ಹೇಡಿತನದ, ಅವಿವೇಕದ ಹಿಂಸಾಚಾರ’: 400 ಜನರನ್ನು ಬಲಿತೆಗೆದುಕೊಂಡ ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕ್ ದಾಳಿ ಖಂಡಿಸಿದ ಭಾರತ 

ಕಾಬೂಲ್‌ನ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಭಾರತ ಮಂಗಳವಾರ ಖಂಡಿಸಿದೆ. ಈ ದಾಳಿಯಲ್ಲಿ ಕನಿಷ್ಠ 400 ಜನರು ಅಸ್ವಸ್ಥರಾಗಿ 250 ಜನರು ಗಾಯಗೊಂಡಿದ್ದರು. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)...

ಮೂಡುಬಿದಿರೆ ಠಾಣೆ ಇನ್‌ಸ್ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ತನಿಖೆಗೆ ಕಮಿಷನರ್ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಮಹಿಳೆಯರಿಗೆ ಲೈಂಗಿಕ, ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ಹಣ ಕೊಡುವಂತೆ ಪೀಡಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಈ...

ಅಸ್ಸಾಂ: ರಂಜಾನ್ ಆಹಾರ ವ್ಯವಸ್ಥೆಗಾಗಿ ಮೀನು ಹಿಡಿಯುತ್ತಿದ್ದ ಮುಸ್ಲಿಂ ಸಹೋದರರ ಮೇಲೆ ಬಿಎಸ್‌ಎಫ್ ಗುಂಡಿನ ದಾಳಿ: ಗಂಭೀರ ಗಾಯ

ಅಸ್ಸಾಂನ ದಕ್ಷಿಣ ಸಲ್ಮಾರಾ–ಮಂಕಚಾರ್ ಜಿಲ್ಲೆಯ ಇಬ್ಬರು ಸಹೋದರರು ಭಾರತದ ಭೂಪ್ರದೇಶದೊಳಗಿನ ನದಿನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುಂಡು ಹಾರಿಸಿ ಪ್ರಾಣಕ್ಕಾಗಿ ಹೋರಾಡುತ್ತಿದ್ದಾರೆ. ಈ ಘಟನೆ ಮಾರ್ಚ್ 8-9, 2026...

ಊನಾ ದಲಿತ ದೌರ್ಜನ್ಯ ಪ್ರಕರಣ: ಐವರು ದೋಷಿಗಳೆಂದು ತೀರ್ಪು ನೀಡಿದ ನ್ಯಾಯಾಲಯ; 37 ಆರೋಪಿಗಳು ಖುಲಾಸೆ

ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಗುಜರಾತ್‌ನ ಊನಾ ದಲಿತರ ಮೇಲೆ ಹಲ್ಲೆ ಪ್ರಕರಣದಲ್ಲಿ, ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ನ್ಯಾಯಾಲಯವು ಸೋಮವಾರ ತನ್ನ ತೀರ್ಪು ನೀಡಿದ್ದು,...

ರಾಜ್ಯಸಭೆ ಚುನಾವಣೆ : ಬಿಹಾರದ ಎಲ್ಲಾ ಐದು ಸ್ಥಾನಗಳು ಎನ್‌ಡಿಎ ಪಾಲು; ಒಡಿಶಾದ ಮೂರು ಸ್ಥಾನಗಳಲ್ಲಿ ಗೆಲುವು

ರಾಜ್ಯಸಭೆಯ 37 ಸ್ಥಾನಗಳಿಗೆ ಸೋಮವಾರ (ಮಾ.16) ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 21 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಪೈಕಿ ಬಿಜೆಪಿ ಮಾತ್ರ 11 ಸ್ಥಾನಗಳನ್ನು ಪಡೆದಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಒಟ್ಟು 11 ಸ್ಥಾನಗಳನ್ನು...

ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನದಿಂದ ವಾಯುದಾಳಿ ; ಕನಿಷ್ಠ 400 ಸಾವು : ವರದಿ

ರಾಜಧಾನಿ ಕಾಬೂಲ್‌ನಲ್ಲಿ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮೇಲೆ ಪಾಕಿಸ್ತಾನದ ಮಿಲಿಟರಿ ವಾಯು ದಾಳಿ ನಡೆಸಿದ್ದು, ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ ಆರೋಪಿಸಿದೆ. ಅಲ್‌-ಜಝೀರಾ ವರದಿಯ ಪ್ರಕಾರ, ಅಫ್ಘಾನಿಸ್ತಾನದ ಆರೋಪವನ್ನು...