Homeಕರ್ನಾಟಕಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! - ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ

ಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! – ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ

ಎಸ್ಪಿ ಆದ ಬಳಿಕ ಕೊನೆ ಕೊನೆಗೆ ಸೆಲೆಬ್ರೆಟಿಯಂತೆ ಕಂಡುಬಂದಿದ್ದೂ ಸುಳ್ಳಲ್ಲಾ.

- Advertisement -
- Advertisement -

| ಡಿ.ಎಸ್.ಬಿ |

ಪೊಲೀಸ್ ಇಲಾಖೆಯಲ್ಲಿದ್ದೂ ಪ್ರಾಮಾಣಿಕ ಮತ್ತು ಕರ್ತವ್ಯದಲ್ಲಿ ದಕ್ಷನಾಗಿರುವುದರ ಜೊತೆಗೆ ಮಾನವೀಯ ಮನಸ್ಸುಳ್ಳ ಸಮಾಜವಾದಿಯಾಗಿದ್ದರು ಮಧುಕರ ಶೆಟ್ಟಿ. ಅವರ ಅಸೌಖ್ಯದ ಸಾವಿನ ಬಳಿಕ ಜ್ಞಾನೋದಯ ಉಂಟಾಗಿದ್ದರಿಂದ ಅಣ್ಣಾ ಮಲೈ ರಾಜಿನಾಮೆಗೆ ಮುಂದಾಗಿರುವಂತಿದೆ ಎಂಬ ಪ್ರಚಾರ ವ್ಯಾಪಕವಾಗುವ ಲಕ್ಷಣಗಳ ಹಿನ್ನೆಲೆಯಲ್ಲಿ ಈ ಶೀರ್ಷಿಕೆ ನೀಡಲಾಗಿದೆ. ಇಬ್ಬರೂ ಒಂದೇ ಇಲಾಖೆಯವರಾದರೂ ಇಬ್ಬರದ್ದೂ ಪ್ರತ್ಯೇಕ ವ್ಯಕ್ತಿತ್ವ!
ವೃತ್ತಿ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲದಲ್ಲೇ ಕೆಲಸ ನಿರ್ವಹಿಸಿದ್ದು ಅಣ್ಣಾ ಮಲೈ ಎಂದರೇ ಅತಿಶಯೋಕ್ತಿಯಾಗಲಾರದು
ಸಾಮಾಜಿಕ ತುಡಿತ ಇದ್ದರೂ ಉಡುಪಿಯ ಸೇವೆಯ ಅವಧಿಯಲ್ಲಿ ಕೋಮುವಾದಿಗಳಿಂದ ಕಂಗೆಟ್ಟಿದ್ದೂ ಇದೇ ಅಣ್ಣಾ ಮಲೈ.
ಮಟ್ಕಾ ನಿರ್ಮೂಲನೆ ಮಾಡಲು ಮಟ್ಕಾ ದೊರೆಯ ಮನೆಗೆ ನುಗ್ಗಿ ದೊರೆಸಾನಿಯನ್ನೇ ಎಸ್ಪಿ ಕಚೇರಿಗೆ ತಂದಿರಿಸಿಕೊಂಡು ಮಟ್ಕಾ ದೊರೆಗೆ ಬಂಧನದ ಭೀತಿ ಹುಟ್ಟಿಸಿದ್ದ ಅಣ್ಣಾ ಮಲೈ. ಪರಿಸರ ರಕ್ಷಣೆಯ ಹೆಸರಿನ ಸೈಕಲ್ ಸವಾರಿಯ ಕಾರ್ಯಕ್ರಮಕ್ಕೆ ಉಡುಪಿಯ ಪರಿಸರ ವಿರೋಧಿ ಯುಪಿಸಿಎಲ್ ನ ಮಾಲಿಕತ್ವದ ಅದಾನಿ ಫೌಂಡೇಶನ್‍ನ ನೆರವು ಪಡೆದು ವಿಸ್ಮಯ ಹುಟ್ಟಿಸಿದ್ದರು.
ಉಡುಪಿಯ ಎಸ್ಪಿಯಾಗಿ ಪ್ರಭಾರಕ್ಕೆ ಬಂದಾಗಲೇ ದಲಿತ ಸಂಘಟನೆಯವರನ್ನು ಏಕ ವಚನದಲ್ಲಿ ಗದರಿಸಿ, ಸಂಘಟನೆಯನ್ನು ಹೀಯಾಳಿಸಿ ಕೊನೆಗೆ ತನ್ನ ಕನ್ನಡ ಭಾಷೆಯ ತಿಳಿವಳಿಕೆಯ ಕೊರತೆಯ ನೆರವಿನಲ್ಲಿ ಅದನ್ನು ಮರೆಯಾಗಿಸುವಲ್ಲಿ ಯಶಸ್ವಿಯಾಗಿದ್ದರು.
80 ರ ದಶಕದ ಆರಂಭದಲ್ಲಿ ನಡುಮನಿ ನಾರಾಯಣ ಎಂಬ ಎಸ್ಪಿಯ ಬಳಿಕ ಅಕ್ರಮ ದಂಧೆಯವರಲ್ಲಿ ಭೀತಿ ಹುಟ್ಟುವಂತೆ ಮಾಡಿದ್ದೂ ಇದೇ ಅಣ್ಣಾ ಮಲೈ.
ಎಸ್ಪಿಯಾಗುವ ಮೊದಲು ಕಾರ್ಕಳದ ಎಸ್ಪಿಯಾಗಿ ಬಂದಾಗ ಮಾಡಿದ ಸದ್ದೇ ಅವರನ್ನು ಉಡುಪಿ ಎಸ್ಪಿ ಗಾದಿಯಲ್ಲಿ ಕುಳ್ಳಿರಿಸುವಂತೆ ಮಾಡಿತ್ತು!
ಎಸ್ಪಿ ಆದ ಬಳಿಕ ಕೊನೆ ಕೊನೆಗೆ ಸೆಲೆಬ್ರೆಟಿಯಂತೆ ಕಂಡುಬಂದಿದ್ದೂ ಸುಳ್ಳಲ್ಲಾ.
ಮಹತ್ವಾಕಾಂಕ್ಷೆಯಿಂದ ಇಲಾಖೆಗೆ ಬಂದಿದ್ದ ಅಣ್ಣಾ ಮಲೈ ಪ್ರಚಾರ ಬಯಸುವ ಅಧಿಕಾರಿಯಾಗಿ ಇಲ್ಲಿಂದ ವರ್ಗಾವಣೆಯಾಗಿದ್ದನ್ನು ಯಾರೂ ನಿರಾಕರಿಸಲಾರರು.
ಪೊಲೀಸ್ ಇಲಾಖೆಯಲ್ಲಿ ಇದೂ ಅಗತ್ಯ ಇದೆಯೇನೋ ಅನ್ನಿಸುವುದೂ ಸುಳ್ಳಲ್ಲ. ಜನರಲ್ಲಿ ಇಲಾಖೆಯ ಬಗ್ಗೆ ಬರೇ ಭಯ ತುಂಬಿಕೊಂಡಿದ್ದರೇ ಬದಲಾವಣೆ ಆಗದೇನೋ?!
ಕಾರ್ಕಳ ಎಎಸ್ಪಿಯಾಗಿದ್ದಾಗ ಎಸ್ಪಿ ಅವರ ರಿವ್ಯೂ ಮೀಟಿಂಗಿನಲ್ಲಿ ಮಟ್ಕಾ ಹಾವಳಿ ನಿಗ್ರಹಿಸಿದ್ದೇನೆಂದು ಬಡಾಯಿ ಕೊಚ್ಚಿದ್ದ ಅಂದಿನ ಉಡುಪಿ ಡಿವೈಎಸ್ಪಿ ಪ್ರಭುದೇವ ಮಾನೆಯ ಸುಳ್ಳನ್ನು ಬಯಲಾಗಿಸಲು ತಾನು ಆ ಹುದ್ದೆಯ ಪ್ರಭಾರಕ್ಕೆ ಬಂದಾಗ ಮುಂದಾಗಿದ್ದು ಪ್ರಚಾರ ಪ್ರಿಯತೆಯೋ? ಇಲಾಖೆಯನ್ನು ಸರಿಪಡಿಸುತ್ತೇನೆಂಬ ಆಕಾಂಕ್ಷೆಯೋ? ವೃತ್ತಿಯ ವೈ ಮನಸ್ಸೋ ಅರ್ಥವಾಗಿಲ್ಲಾ. ಆದರೂ ಎಸ್ಪಿಯಾಗಿದ್ದಾಗ ಮಟ್ಕಾ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಂಡಿದ್ದನ್ನು ಅಲ್ಲಗಳೆಯಲಾಗದು.
ಗಂಗೊಳ್ಳಿಯಲ್ಲಿ ಹುಟ್ಟಿಕೊಂಡ ಮತೀಯವಾದದ ನಿಗ್ರಹಕ್ಕೆ ನಿಯೋಜಿತರಾದಾಗ ತನ್ನ ಸಿಂಗಂ ಗಿರಿ ಧರ್ಮಾಂಧರ ಗುಂಪಿನ ಎದುರು ನಡೆಯಲಾರದು ಎಂಬ ವಾಸ್ತವ ಅರಿತ ಅಣ್ಣಾ ಮಲೈ ಮತಾಂಧರ ಒತ್ತಾಯಕ್ಕೆ ಮಣಿದು ಆರೋಪಿಗಳ ಬಂಧ ಮುಕ್ತತೆ ಮಾಡುವಂತಾಗಿತ್ತು.
ಅದಕ್ಕಾಗಿಯೇ ಹೇಳಿದ್ದು ಅಣ್ಣಾ ಮಲೈನೇ ಬೇರೆ : ಮಧುಕರ ಶೆಟ್ಟರೇ ಬೇರೆ ಅಂತ.
ಸಿಂಗಂ ಹೆಸರು ಅಂಟಿಕೊಂಡಿದ್ದು ಉಡುಪಿಯಿಂದ!
ಅಣ್ಣಾ ಮಲೈ ಎಂಬ ತಮಿಳಿಗ ಕಾರ್ಕಳ ದ ಎಎಸ್ಪಿಯಾಗಿ ಬಂದಾಗ .ಮಾಡಿದ ಖದರು ಅವರೇ ಉಡುಪಿ ಎಸ್ಪಿಯಾಗಬೇಕು ಅಂತ ಮಾಡಿತ್ತು. ಮುಖ್ಯವಾಗಿ ಆಗ ಜನಪರ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಮಧ್ಯಾವಧಿಯ ಸಂಸದಗಿರಿಯಲ್ಲಿದ್ದರು. ಸಮಾಜವಾದಿ ಸಿದ್ಧರಾಮಯ್ಯರ ಮುಖ್ಯಮಂತ್ರಿತ್ವದಲ್ಲಿ ಕೆಲಸÀಗಾರ ವಿನಯಕುಮಾರ ಸೊರಕೆಯ ಉಸ್ತುವಾರಿ ಗಿರಿಯಲ್ಲಿದ್ದ ಉಡುಪಿಗೆ ಒಬ್ಬ ಖಡಕ್ ಖಾಕಿಯನ್ನು ತರಬೇಕೆಂಬ ನಿರ್ಧಾರ ಮಾಡಲಾಯಿತು. ಅದರಿಂದಲೇ ಜಿಲ್ಲೆಯಲ್ಲೇ ಪ್ರೊಬೇಷನ್ ಗಿರಿಯ ಎಎಸ್ಪಿ ಹುದ್ದೆ ನಿರ್ವಹಿಸಿದ್ದ ಅಣ್ಣಾ ಮಲೈ ಅದೇ ಜಿಲ್ಲೆಯ ಎಸ್ಪಿಯಾಗುವಂತಾಗಿತ್ತು.
ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದಾಗ ಮೊದಲಿಗೆ ಇಲಾಖೆಯ ಒಳಗೇ ಸ್ವಚ್ಛತೆಗೆ ಮುಂದಾಗಿದ್ದರು. ಅದು ಆರಂಭದಲ್ಲೇ ಆಯಕಟ್ಟಿನಲ್ಲಿದ್ದವರಿಗೆ ಅಪಾಯ ತಂದಿರಿಸಿತ್ತು. ಎರಡನೆಯದಾಗಿ ಕ್ರೈಮ್ ಮಟ್ಟಹಾಕಲು ಫೀಲ್ಡಿಗಿಳಿವಾಗಲೂ ಅದು ಎಲ್ಲೂ ಸುದ್ದಿಯಾಗದಂತೆ ಮಾಡಿದರು. ಹಾಗಾಗಿ ಎಸ್ಪಿ ಚಡ್ಡಿ ಹಾಕಿಕೊಂಡು ಸೈಕಲಲ್ಲಿ ಬಂದರಂತೆ. ಜುಗಾರಿಯಲ್ಲಿಗೆ ಸಾಮಾನ್ಯರಂತೆ ಬಂದರಂತೆ. ಫ್ರೋಟೋಕಾಲ್ ನ ಹಂಗು ಹರಿದು ಏಕಾಂಗಿಯಾಗಿ ಓಡಾಡಿದ್ದ ಅಣ್ಣಾ ಮಲೈ ಅಪರಾಧ ಕೃತ್ಯದವರ ಎದೆಯಲ್ಲಿ ಒಂದಷ್ಟು ಭೀತಿಯನ್ನು ಆರಂಭದಲ್ಲಿ ಹುಟ್ಟು ಹಾಕಿದ್ದಂತೂ ನಿಜ. ಆಗಲೇ ಸಿಂಗಂ ಸಿನೆಮಾ ದ ಪ್ರಭಾವಕ್ಕೆ ಒಳಗಾಗುವ ಭಾವುಕ ಜೀವಿಗಳು ಅಣ್ಣಾ ಮಲೈರಲ್ಲೂ ಸಿಂಗಂ ಅನ್ನು ಕಂಡು ಉಡುಪಿಯ ಸಿಂಗಂ ಅನ್ನಲಾರಂಭಿಸಿದ್ದು.
ಮತಾಂಧತೆ ಅಳಿಸುವ ನಿಟ್ಟಿನಲ್ಲಿ ನಿಯೋಜಿತರಾದ ಇವರು ಮತ್ತೆ ಸುಧಾರಣೆಗಾಗಿ ಎಲ್ಲರನ್ನೂ ಒಲೈಸುವಂತಾಗಿದ್ದು ಕೂಡಾ ಇಲ್ಲದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...