ಬೆಂಗಳೂರಿನ ಇಟ್ಟಮಡು ಮುಖ್ಯರಸ್ತೆಯ ಒಂದು ಭಾಗ ಇಂದು ಬೆಳಿಗ್ಗೆ ತೂತುಬಿದ್ದಿದೆ. ಆ ಮೂಲಕ ಸರಣಿ ರಸ್ತೆ ಅವಗಢಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಸದ್ಯಕ್ಕೆ ಯಾವುದೇ ಜೀವಹಾನಿ ಸಂಭವಿಸದಂತೆ ರಸ್ತೆ ಕುಳಿ ಬಿದ್ದ ಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ ಎಂದು ವರದಿಯಾಗಿದೆ.
ಇಟ್ಟಮಡು ಮುಖ್ಯರಸ್ತೆಯ ಸಮೀಪದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಯೇ ಈ ಅವಘಡ ಸಂಭವಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
#WATCH | Karnataka: A portion of Ittamadu Main Road in Bengaluru caved in this morning. The affected portion has been barricaded to prevent any mishap. Smart City work is going on nearby. pic.twitter.com/1V84COHZdV
— ANI (@ANI) January 21, 2023
ಕಳೆದ ವಾರ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಇದೇ ರೀತಿಯ ರಸ್ತೆಯ ಕುಳಿಬಿದ್ದ ಪ್ರಕರಣ ವರದಿಯಾಗಿತ್ತು. ಮೆಟ್ರೋ ನಿಲ್ದಾಣದ 50 ಮೀಟರ್ ದೂರದಲ್ಲಿ 4-5 ಅಡಿಯಷ್ಟು ಆಳದ ಗುಂಡಿ ಕಂಡುಬಂದಿತ್ತು. ಬಿಬಿಎಂಪಿಯ ಕಾರ್ಯವೈಖರಿ ಬಗ್ಗೆ ಟೀಕೆ ವ್ಯಕ್ತವಾಗಿತ್ತು.
ಅದಕ್ಕೂ ಒಂದು ವಾರಗಳ ಹಿಂದೆ ಬ್ರಿಗೇಡ್ ರಸ್ತೆಯಲ್ಲಿ ದೊಡ್ಡ ತೂತು ಬಿದ್ದಿದ್ದು ಪರಿಣಾಮ ಬೈಕ್ ಸವಾರನೊಬ್ಬ ಅಪಘಾತಕ್ಕೀಡಾಗಿದ್ದಾನೆ. ಅಪಘಾತಕ್ಕೀಡಾದ ವ್ಯಕ್ತಿಯನ್ನು ಪುನೀತ್ ಎಂದು ಗುರುತಿಸಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಇಡೀ ದೃಶ್ಯಾವಳಿ ಸಿಸಿಕ್ಯಾಮರದಲ್ಲಿ ದಾಖಲಾಗಿದೆ.

ಬೆಂಗಳೂರಿನ ವಾಣಿಜ್ಯ ಪ್ರದೇಶವಾದ ಜನನಿಬಿಡ ಬ್ರಿಗೇಡ್ ಟವರ್ಸ್ ಬಳಿಯ ಶೂಲೆ ಸರ್ಕಲ್ ರಸ್ತೆ ಮಧ್ಯೆದಲ್ಲಿ ದೊಡ್ಡ ಕುಳಿ ಬಿದ್ದಿತ್ತು. ಬಹುಭಾಗ ಕುಸಿದ ಬಿದ್ದ ಪರಿಣಾಮ ದೊಡ್ಡ ತೂತು ಉಂಟಾಗಿದೆ. ಬೈಕ್ ಸವಾರನೊಬ್ಬ ರಸ್ತೆಯಲ್ಲಿ ಚಲಿಸುತ್ತಿದ್ದಾಗ ರಸ್ತೆ ಮಧ್ಯೆದಲ್ಲಿ ಮಣ್ಣು ಕುಸಿದಿದೆ. ಪರಿಣಾಮ ಆಯತಪ್ಪಿ ಸವಾರ ನೆಲಕ್ಕುರುಳಿದ್ದನು.
ಅದಕ್ಕೂ ಎರಡು ದಿನಗಳ ಹಿಂದೆ ಬೆಂಗಳೂರಿನ ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಒಂದರ ಕಬ್ಬಿಣದ ರಾಡ್ ಕುಸಿದು ತಾಯಿ ಹಾಗೂ ಮಗು ಮೃತಪಟ್ಟಿರುವ ದುರ್ಘಟನೆ ಜರುಗಿತ್ತು.
ಒಟ್ಟಾರೆಯಾಗಿ ಪ್ರತಿದಿನವೂ ಕಳಪೆ ಕಾಮಗಾರಿಗಳ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗುತ್ತಲೇ ಇವೆ. ಹಲವಾರು ಜೀವಹಾನಿಗಳು ಸಂಭವಿಸಿವೆ. ಆದರೆ ಆ ಅವ್ಯವಸ್ಥೆಗಳನ್ನು ನಿಲ್ಲಿಸಲು ಸರ್ಕಾರವಾಗಲಿ, ಬಿಬಿಎಂಪಿಯಾಗಲಿ ಗಮನ ಹರಿಸಿದಂತೆ ಕಾಣುತ್ತಿಲ್ಲ. ಈ ನಡುವೆ ಗುತ್ತಿಗೆದಾರರು ಸರ್ಕಾರದ ಮಂತ್ರಿಗಳು, ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂದು ಹಲವಾರು ಬಾರಿ ಆರೋಪಿಸುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಹಲವು ರಂಗದಲ್ಲಿ ಜನರಿಂದ ವಿರೋಧ ಎದುರಿಸುತ್ತಿದೆ.
ಇದನ್ನೂ ಓದಿ: ಬೆಂಗಳೂರು ರಸ್ತೆಯಲ್ಲಿ ದೊಡ್ಡ ತೂತು: ಬೈಕ್ ಸವಾರನಿಗೆ ಅಪಘಾತ


