Homeಮುಖಪುಟಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಈಜಿಪ್ಟ್ ಅಧ್ಯಕ್ಷ

ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಈಜಿಪ್ಟ್ ಅಧ್ಯಕ್ಷ

- Advertisement -
- Advertisement -

ಭಾರತದ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್‌ ಸಿಸ್ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ವರದಿಯಾಗಿದೆ. ಭಾರತ ಗಣರಾಜ್ಯೋತ್ಸದ ಅತಿಥಿಯಾಗಿ ಆಗಮಿಸುವ ಮೊದಲ ಈಜಿಫ್ಟ್‌‌‌ ಅಧ್ಯಕ್ಷ ಎಂಬ ಗೌರವಕ್ಕೆ ಎಲ್‌ ಸಿಸ್‌ ಪಾತ್ರರಾಗಲಿದ್ದಾರೆ. ಜೊತೆಗೆ ಅವರು ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಲಿರುವ ಆರನೇ ಪಶ್ಚಿಮ ಏಷ್ಯಾ ಮತ್ತು ಅರಬ್ ನಾಯಕರಾಗಲಿದ್ದಾರೆ.

ಈಜಿಫ್ಟ್‌‌‌‌ ಅಧ್ಯಕ್ಷ ಎಲ್‌ ಸಿಸ್‌ ಅವರು ಜನವರಿ 24 ರಂದು ದೆಹಲಿಗೆ ಆಗಮಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅವರನ್ನು ಸ್ವಾಗತಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈಜಿಪ್ಟ್‌ನ 180 ಸದಸ್ಯರ ಬಲಿಷ್ಠ ಪಡೆ ಕೂಡ ಪರೇಡ್‌ನಲ್ಲಿ ಭಾಗವಹಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು  ಅವರನ್ನು ಭೇಟಿ ಮಾಡಲಿದ್ದು, ಭಾರತ ಮತ್ತು ಈಜಿಪ್ಟ್ ನಡುವಿನ 75 ವರ್ಷಗಳ ರಾಜತಾಂತ್ರಿಕ ಬಾಂಧವ್ಯವನ್ನು ಸೂಚಿಸುವ ಅಂಚೆಚೀಟಿ ಕೂಡ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ.

ಇದೆ ವೇಳೆ ಉಭಯ ರಾಷ್ಟ್ರಗಳ ನಡುವೆ ಸರಣಿ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಸುಧಾರಿತ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಈಜಿಪ್ಟ್ ಆಸಕ್ತಿ ವ್ಯಕ್ತಪಡಿಸಿರುವುದರಿಂದ ಭಾರತ ಮತ್ತು ಈಜಿಪ್ಟ್ ರಕ್ಷಣಾ ಸಂಬಂಧಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧಗಳು ಅದರಲ್ಲೂ ಗೋಧಿ ಪೂರೈಕೆಯ ಮೇಲೆ ಪ್ರಮುಖ ಚರ್ಚೆ ನಡೆಸಲಾಗುವುದು.

2022 ರಲ್ಲಿ, ಗೋಧಿ ರಫ್ತು ನಿಯಮಗಳಲ್ಲಿ ಭಾರತವು ಮೂರು ಹಂತಗಳಲ್ಲಿ 61,000 ಟನ್‌ಗಳನ್ನು ತಲುಪಿಸಲು ವಿನಾಯಿತಿ ನೀಡಿದೆ. ಈಜಿಪ್ಟ್ ಸಾಂಪ್ರದಾಯಿಕವಾಗಿ ರಷ್ಯಾ ಮತ್ತು ಉಕ್ರೇನ್‌ನಿಂದ ಗೋಧಿಯನ್ನು ಆಮದು ಮಾಡಿಕೊಂಡಿದೆ. ಆದರೆ ಅಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಈಗ ಭಾರತೀಯ ಗೋಧಿಯ ಮೇಲಿನ ನಿಷೇಧವನ್ನು ಈಜಿಫ್ಟ್‌‌ ತೆಗೆದುಹಾಕಿದ್ದು, ಹೆಚ್ಚಿನ ಸರಬರಾಜುಗಳನ್ನು ವಿನಂತಿಸಿದೆ.

ಇದನ್ನೂ ಓದಿ: ತೂತುಬಿದ್ದ ಬೆಂಗಳೂರಿನ ಮತ್ತೊಂದು ರಸ್ತೆ; ಅವ್ಯವಸ್ಥೆಗೆ ಕೊನೆ ಎಂದು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...