Homeದಲಿತ್ ಫೈಲ್ಸ್ಬೂಟು ನೆಕ್ಕುವಂತೆ ದಲಿತನನ್ನು ಒತ್ತಾಯಿಸಿ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ವಿರುದ್ಧ ಎಫ್‌ಐಆರ್‌

ಬೂಟು ನೆಕ್ಕುವಂತೆ ದಲಿತನನ್ನು ಒತ್ತಾಯಿಸಿ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ವಿರುದ್ಧ ಎಫ್‌ಐಆರ್‌

- Advertisement -
- Advertisement -

ನವಿ ಮುಂಬೈನ ಕಲಾಂಬೋಲಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಪೊಲೀಸ್ ಠಾಣೆ ಆವರಣದಲ್ಲಿ 28 ವರ್ಷದ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ವಿಕಾಸ್ ಉಜ್ಗರೆ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಅಧಿಕಾರಿ ದಿನೇಶ್ ಪಾಟೀಲ್ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿ ದಿನೇಶ್ ಪಾಟೀಲ್‌, ಉಜ್ಗರೆ ಅವರ ಮುಖದ ಮೇಲೆ ಉಗುಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಅವರ ಬೂಟುಗಳನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸೈಬರ್ ವಂಚನೆ ಸಂಬಂಧ ದೂರು ದಾಖಲಿಸಿಕೊಳ್ಳಲು ಕಲಂಬೋಳಿ ಠಾಣೆಯ ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದ ಉಜ್ಗರೆ ವಿರುದ್ಧ ಪಾಟೀಲ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ನೊಂದಿಗೆ ಮಾತನಾಡಿದ ಉಜ್ಗರೆ, “ಜನವರಿ 6ರಂದು ರಾತ್ರಿ 8 ಗಂಟೆಯ ಸುಮಾರಿಗೆ, ನಾನು ನನ್ನ ಸ್ನೇಹಿತನೊಂದಿಗೆ ಚೈನೀಸ್ ರೆಸ್ಟೋರೆಂಟ್‌ನಲ್ಲಿದ್ದೆ. ಅವರು ರೆಸ್ಟೋರೆಂಟ್ ಮಾಲೀಕರೊಂದಿಗೆ ಜಗಳವಾಡಿದರು. ಮಾಲೀಕರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದೆ. ಶೀಘ್ರದಲ್ಲೇ, ಕಲಾಂಬೋಲಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ತಲುಪಿತು” ಎಂದು ವಿವರಿಸಿದ್ದಾರೆ.

“ಸ್ನೇಹಿತ ಗಾಯಗೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸ್ ಅಧಿಕಾರಿಗಳಲ್ಲಿ ಕೋರಿದೆ. ಆದರೆ ಅವರು ನಿರಾಕರಿಸಿದರು. ಸಾಕಷ್ಟು ಮನವಿ ಮಾಡಿದ ನಂತರ, ಅಧಿಕಾರಿಗಳು ನನ್ನನ್ನು ಪನ್ವೇಲ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಪೊಲೀಸರಿಗೆ ಸೂಚಿಸಿದರು. ಆದರೆ, ಅಧಿಕಾರಿಗಳು ನನ್ನನ್ನು ಕಾಲಂಬೋಲಿ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ನಾನು ನೆಲದ ಮೇಲೆ ಕುಳಿತುಕೊಳ್ಳುವಂತೆ ಒತ್ತಾಯಿಸಲಾಯಿತು. ಆಗ ಪಾಟೀಲ ಬಂದು ನನಗೆ ಕಪಾಳಕ್ಕೆ ಹೊಡೆದರು” ಎಂದು ಹೇಳಿದರು.

“ಪೊಲೀಸರ ವಿರುದ್ಧವೇ ದೂರು ನೀಡಿದ ವ್ಯಕ್ತಿ ಈತನೆಂದು ಪೊಲೀಸರು ಗುರುತಿಸಿದ್ದಾರೆ” ಎಂದು ಉಜ್ಗರೆ ಹೇಳಿದ್ದಾರೆ.

“ಅಸಮಾಧಾನದಿಂದ ಪಾಟೀಲ್ ನನ್ನ ಮುಖ ಮತ್ತು ಕುತ್ತಿಗೆಗೆ ಹೊಡೆಯಲು ಪ್ರಾರಂಭಿಸಿದರು. ನಂತರ ಅವರು ನನ್ನನ್ನು ಕೋಣೆಯೊಂದಕ್ಕೆ ಎಳೆದೊಯ್ದರು, ಅಲ್ಲಿ ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ನಂತರ ನನ್ನ ಜಾತಿಯ ಬಗ್ಗೆ ಕೇಳಿದರು. ನಾನು ದಲಿತ ಎಂದು ಹೇಳಿದಾಗ, ಆತ ನನ್ನ ಜಾತಿಯನ್ನು ನಿಂದಿಸಿದರು. ಕೆಳ ಜಾತಿಗೆ ಸೇರಿದವನೆಂದು ನನ್ನ ಮೇಲೆ ಉಗುಳಿದರು. ಪಾಟೀಲ್ ತನ್ನ ಬೂಟುಗಳನ್ನು ನೆಕ್ಕುವಂತೆ ಒತ್ತಾಯಿಸಿದರು” ಎಂದು ಆರೋಪಿಸಿದ್ದಾರೆ.

ಜನವರಿ 7 ರಂದು ಮುಂಜಾನೆ 3 ಗಂಟೆಯ ಸುಮಾರಿಗೆ ಕಾಲಂಬೋಲಿ ಪೊಲೀಸರು ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಉಜ್ಗರೆ ಮಾಹಿತಿ ನೀಡಿದ್ದಾರೆ.

ಗಾಯಗೊಂಡಿದ್ದ ಉಜ್ಗರೆ ಅವರು ಮೂರು ದಿನಗಳ ಕಾಲ ಎಂಜಿಎಂ ಆಸ್ಪತ್ರೆಯಲ್ಲಿದ್ದರು. “ನನ್ನನ್ನು ಬಿಡುಗಡೆ ಮಾಡಿದ ನಂತರ, ನಾನು ವಕೀಲರನ್ನು ನೇಮಿಸಿ ದೂರು ಸಲ್ಲಿಸಿದೆ. ನನ್ನ ಹೇಳಿಕೆಯನ್ನು ಜನವರಿ 14 ರಂದು ವಲಯ ಉಪ ಆಯುಕ್ತರು ಮತ್ತು ಸಹಾಯಕ ಪೊಲೀಸ್ ಆಯುಕ್ತರು ದಾಖಲಿಸಿಕೊಂಡಿದ್ದಾರೆ” ಎಂದು ಉಜ್ಗರೆ ಹೇಳಿದ್ದಾರೆ.

ಆದರೆ ಎಫ್‌ಐಆರ್‌ ದಾಖಲಿಸಲು ವಿಳಂಬವಾದ ಕಾರಣ ಉಜ್ಗರೆ ಅವರು ನವಿ ಮುಂಬೈ ಪೊಲೀಸ್‌ ಆಯುಕ್ತರನ್ನು ಸಂಪರ್ಕಿಸಿದ್ದು, ಗುರುವಾರ ತಡರಾತ್ರಿ ಪ್ರಕರಣ ದಾಖಲಾಗಿದೆ.

ಕಲಂಬೋಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂಜಯ್ ಪಾಟೀಲ್ ಅವರನ್ನು ಸಂಪರ್ಕಿಸಿದಾಗ, ದಿನೇಶ್ ಪಾಟೀಲ್ ಅನಾರೋಗ್ಯದ ರಜೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. “ನಾವು ಪೊಲೀಸ್ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಸಹಾಯಕ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...