Homeಮುಖಪುಟಜಮ್ಮು-ಕಾಶ್ಮೀರ: ಅವಳಿ ಬಾಂಬ್ ಸ್ಪೋಟ; 7 ಜನರಿಗೆ ಗಾಯ

ಜಮ್ಮು-ಕಾಶ್ಮೀರ: ಅವಳಿ ಬಾಂಬ್ ಸ್ಪೋಟ; 7 ಜನರಿಗೆ ಗಾಯ

- Advertisement -
- Advertisement -

ಶನಿವಾರ ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಅವಳಿ ಸ್ಫೋಟಗಳು ಸಂಭವಿಸಿದ್ದು, ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರದೇಶದಲ್ಲಿ 30 ನಿಮಿಷಗಳಲ್ಲಿ ಅಂತರದಲ್ಲಿ ಎರಡು ಪ್ರಭಲ ಸ್ಫೋಟಗಳು ಸಂಭವಿಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಬೆಳಿಗ್ಗೆ 10.45 ರ ಸುಮಾರಿಗೆ ಸಂಭವಿಸಿದ ಮೊದಲ ಸ್ಫೋಟದಲ್ಲಿ ಐವರು ಗಾಯಗೊಂಡಿದ್ದಾರೆ. ಸುಮಾರು ಅರ್ಧ ಗಂಟೆಯ ನಂತರ ಸಂಭವಿಸಿದ ಎರಡನೇ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಇಡೀ ಪ್ರದೇಶವನ್ನು ಸುತ್ತುವರೆಯಲಾಗಿದೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಿಪೇರಿಗಾಗಿ ವರ್ಕ್‌ಶಾಪ್‌ಗೆ ಕಳುಹಿಸಲಾಗಿದ್ದ ವಾಹನದಲ್ಲಿ ಮೊದಲ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಜಸ್ವಿಂದರ್ ಸಿಂಗ್ ಹೇಳಿದ್ದಾರೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ. ಮೊದಲ ಸ್ಫೋಟದಲ್ಲಿ ಮಹೇಂದ್ರ ಬೊಲೆರೊ ಬಳಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿವೆ.

ಸ್ಫೋಟದಲ್ಲಿ ಗಾಯಗೊಂಡವರನ್ನು ಸುಹೇಲ್ ಇಕ್ಬಾಲ್ (35), ಸುಶೀಲ್ ಕುಮಾರ್ (26), ವಿಶ್ವ ಪ್ರತಾಪ್ (25), ವಿನೋದ್ ಕುಮಾರ್ (52), ಅರುಣ್ ಕುಮಾರ್, ಅಮಿತ್ ಕುಮಾರ್ (40) ಮತ್ತು ರಾಜೇಶ್ ಕುಮಾರ್ (35) ಎಂದು ಗುರುತಿಸಲಾಗಿದೆ.

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಮತ್ತು ಮುಂಬರುವ ಗಣರಾಜ್ಯೋತ್ಸವದ ನಡುವೆ ಘಟನೆ ನಡೆದಿದ್ದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಭದ್ರತಾ ಪಡೆಗಳು ಹೆಚ್ಚು ಜಾಗರೂಕರಾಗಿರುವ ಸಮಯದಲ್ಲೆ ನರ್ವಾಲ್‌ನ ಸಾರಿಗೆ ಯಾರ್ಡ್‌ನಲ್ಲಿ ಸ್ಫೋಟಗಳು ಸಂಭವಿಸಿದೆ.

ತಪ್ಪಿತಸ್ಥರನ್ನು ಗುರುತಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೋರಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ಅವರು ಘೋಷಿಸಿದ್ದಾರೆ.

“ಇಂತಹ ಹತಾಶ ಕೃತ್ಯಗಳು ಹೊಣೆಗಾರರ ಹತಾಶೆ ಮತ್ತು ಹೇಡಿತನವನ್ನು ಎತ್ತಿ ತೋರಿಸುತ್ತವೆ. ತಕ್ಷಣ ಮತ್ತು ದೃಢವಾದ ಕ್ರಮ ತೆಗೆದುಕೊಳ್ಳಿ. ಅಪರಾಧಿಗಳನ್ನು ಕಾನೂನಿನ ಮುಂದೆ ತರುವ ಯಾವುದೇ ಪ್ರಯತ್ನಗಳನ್ನು ಬಿಡಬಾರದು” ಎಂದು ಲೆಫ್ಟಿನೆಂಟ್ ಗವರ್ನರ್ ಭದ್ರತಾ ಅಧಿಕಾರಿಗಳಿಗೆ ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ; ಜ. 30ಕ್ಕೆ ಸಮಾರೋಪ ಕಾರ್ಯಕ್ರಮ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read