Homeಮುಖಪುಟಜಮ್ಮು-ಕಾಶ್ಮೀರ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ; ಜ. 30ಕ್ಕೆ ಸಮಾರೋಪ ಕಾರ್ಯಕ್ರಮ

ಜಮ್ಮು-ಕಾಶ್ಮೀರ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ; ಜ. 30ಕ್ಕೆ ಸಮಾರೋಪ ಕಾರ್ಯಕ್ರಮ

- Advertisement -
- Advertisement -

ಪ್ಯಾನ್-ಇಂಡಿಯಾ ಪಾದಯಾತ್ರೆ ‘ಭಾರತ್ ಜೋಡೋ ಯಾತ್ರೆ’ಯು ಗುರುವಾರ ಪಂಜಾಬ್‌ನಿಂದ ಜಮ್ಮುವಿಗೆ ಪ್ರವೇಶಿಸಿದೆ. ಇದು ಯಾತ್ರೆಯ ಕೊನೆಯ ರಾಜ್ಯವಾಗಿರಲಿದೆ. ಇಂತಹ ಚಳಿಗಾಲದಲ್ಲೂ ಉತ್ತರ ಭಾರತದಾದ್ಯಂತ ಕೇವಲ ಟೀ ಶರ್ಟ್ ಧರಿಸಿಯೇ ಮೆರವಣಿಗೆ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮೊದಲ ಬಾರಿಗೆ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳಗ್ಗೆಯಿಂದ ಜಮ್ಮುವಿನ ಹಲವು ಭಾಗಗಳಲ್ಲಿ ತುಂತುರು ಮಳೆಯಾಗುತ್ತಿರುವುದರಿಂದ ರಾಹುಲ್ ಗಾಂಧಿ ಜಾಕೇಟ್ ಧರಿಸಿದ್ದರು ಎಂದು ಹೇಳಲಾಗುತ್ತದೆ. ನಂತರ ಅವರು ಜಾಕೆಟ್ ತೆಗೆದು, ಎಮದಿನಂತೆ ಬಿಳಿ ಟೀ ಶರ್ಟ್‌ನಲ್ಲಿ ನಡೆಯುತ್ತಿರುವುದು ಕಂಡುಬಂದಿತು.

ಭಾರತ್ ಜೋಡೊ ಯಾತ್ರೆ ಇಂದು 125 ದಿನಗಳನ್ನು ಪೂರೈಸಿದ್ದು, ಒಟ್ಟು 3,400 ಕಿಲೋಮೀಟರ್‌ಗಳ ದೂರ 52ವರ್ಷದ ರಾಹುಲ್ ಗಾಂಧಿಯವರು ಯಾತ್ರೆಯನ್ನು ಮುನ್ನಡೆಸಿದ್ದಾರೆ. ಈ ಯಾತ್ರೆಯುದ್ದಕ್ಕೂ ಬಿಳಿ ಬಣ್ಣದ ಟಿಶರ್ಟ್ಸ್‌ಗಳಿಂದಲೇ ಎಲ್ಲರ ಗಮನ ಸೆಳೆದಿದ್ದ ರಾಹುಲ್ ಅನೇಕರ ಮೆಚ್ಚುಗೆ ಗಳಿಸಿದ್ದಾರೆ. ರಾಹುಲ್ ಗಾಂಧಿಯವರ ಆಕರ್ಷಕ ಉಡುಪು ವಿರೋಧ ಪಕ್ಷಗಳಿಗೆ ಕೆರಳಿಸಿದ್ದಂತು ಸುಳ್ಳಲ್ಲ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಪಾಕ್ ಪರ ಘೋಷಣೆ ಎಂದು ತಿರುಚಿದ ವಿಡಿಯೋ ಪೋಸ್ಟ್: ಬಿಜೆಪಿ ಮುಖಂಡನ ಮೇಲೆ FIR

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಜನವರಿ 25 ರಂದು ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್‌ನಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಎರಡು ದಿನಗಳ ನಂತರ – ಜನವರಿ 27 ರಂದು ಅನಂತನಾಗ್ ಮೂಲಕ ಶ್ರೀನಗರವನ್ನು ಪ್ರವೇಶಿಸಲು ನಿರ್ಧರಿಸಿದ್ದಾರೆ.

ರಾಹುಲ್ ಗಾಂಧಿಯವರನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸ್ವಾಗತಿಸುವ ಕಾರ್ಯಕ್ರಮದ ವೇಳೆ ವೇದಿಕೆಗೆ ಜೈರಾಮ್ ರಮೇಶ್, ಅಶೋಕ್ ಗೆಹ್ಲೋಟ್, ದಿಗ್ವಿಜಯ್ ಸಿಂಗ್, ಅಬ್ದುಲ್ಲಾ, ಶಿವಸೇನಾ ನಾಯಕ ಸಂಜಯ್ ರಾವುತ್, ಡೋಗ್ರಾ ಸ್ವಾಭಿಮಾನ್ ಸಂಘಟನೆ ಪಕ್ಷ ಮತ್ತು ಮಾಜಿ ಸಚಿವ ಲಾಲ್ ಸಿಂಗ್, ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮುಜಾಫರ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಸ್ವಾಗತಿಸಲಾಯಿತು.

ಆದರೆ ಲಾಲ್ ಸಿಂಗ್ ಅವರು ತಡವಾಗಿ ಬಂದಿದ್ದರಿಂದ ವೇದಿಕೆಯಲ್ಲಿ ಹಾಜರಿರಲಿಲ್ಲ. ತಡವಾಗಿ ಬಂದ ಅವರು, ಸಮಾರಂಭ ಮುಗಿಯುವವರೆಗೂ ಜನರ ಗುಂಪಿನಲ್ಲಿಯೇ ನಿಂತಿರುವುದು ಕಂಡುಬಂದಿತು. ಕಾರ್ಯಕ್ರಮಕ್ಕೆ ಆಗಮಿಸಿದ ನಾಯಕರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಲಾಲ್ ಸಿಂಗ್ ಹೆಸರನ್ನು ಉಲ್ಲೇಖಿಸಲಿಲ್ಲ. ಹಾಗಾಗಿ ಮುಜುಗರಕ್ಕೀಡಾಗಿ ಅಲ್ಲಿಂದ ಅವರು ಹೊರಟುಹೋದರು.

ಇಂದು ಬೆಳಿಗ್ಗೆ ಕಥುವಾದ ಹಟ್ಲಿ ಮೋರ್ಹ್‌ನಿಂದ ಪುನರಾರಂಭಗೊಂಡ ಯಾತ್ರೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಗಾಂಧಿ ಕುಟುಂಬ ಮತ್ತು ಅವರ ಸಹ-ಹಿಂಬಾಲರನ್ನು ಸುತ್ತುವರಿದಿವೆ. ಕೆಲವೆಡೆ ಜಾಮರ್‌ಗಳನ್ನೂ ಹಾಕಲಾಗಿದೆ. ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಹೆಚ್ಚು ಜನ ಸೇರಿ ಪಾದಯಾತ್ರೆ ನಡೆಸದಂತೆ ಭದ್ರತಾ ಏಜೆನ್ಸಿಗಳು ರಾಹುಲ್ ಗಾಂಧಿಗೆ ಈ ಹಿಂದೆ ಸಲಹೆ ನೀಡಿದ್ದವು.

ರಾಹುಲ್ ಗಾಂಧಿಯವರು ಜಮ್ಮು ಪ್ರವೇಶಿಸಿದಾಗ ಕಾಶ್ಮೀರಿ ಪ್ರಮುಖ ನಾಯಕ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಭವ್ಯ ಸ್ವಾಗತ ಕೋರಿದ್ದಾರೆ. ಲಖನ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ, ರಾಹುಲ್ ಗಾಂಧಿ ಅವರು ಜನರೊಂದಿಗೆ ಸ್ವರಮೇಳವನ್ನು ಭಾರಿಸಲು ತಮ್ಮ ಕಾಶ್ಮೀರಿ ಪೂರ್ವಜರನ್ನು ಕರೆದರು. ಈ ವೇಳೆ ಅಲ್ಲಿಯ ನಿವಾಸಿಗಳ ನೋವು ಮತ್ತು ಸಂಕಟಗಳ ಬಗ್ಗೆ ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಪಂಜಾಬ್‌ನ ಮಾಧೋಪುರದಲ್ಲಿ ರಾಹುಲ್ ಗಾಂಧಿಗೆ ಹಾಡು ಮತ್ತು ನೃತ್ಯದ ನಡುವೆ ಭವ್ಯವಾದ ಸ್ವಾಗತವನ್ನು ನೀಡಲಾಯಿತು. ಕೊನೆಯ ಹಂತಕ್ಕೆ ಪ್ರವೇಶಿಸುವ ಯಾತ್ರೆಯನ್ನು ನೂರಾರು ಜನರು ಸೇರಿ ಬರಮಾಡಿಕೊಂಡರು. ಜನವರಿ 30 ರಂದು ಶ್ರೀನಗರದಲ್ಲಿ ಸಮಾರೋಪ ಕಾರ್ಯಕ್ರಮದೊಂದಿಗೆ ಯಾತ್ರೆ ಮುಕ್ತಾಯಗೊಳ್ಳಲಿದೆ.

(ರಾತ್ರಿ ಚಡ್ವಾಲ್‌ನಲ್ಲಿ ಯಾತ್ರೆ ನಿಲ್ಲಲಿದೆ. ನಾಳೆ ಬೆಳಗ್ಗೆ ಹೀರಾನಗರದಿಂದ ದುಗ್ಗರ್ ಹವೇಲಿಗೆ ಹೊರಟು ಜನವರಿ 22ರಂದು ವಿಜಯಪುರದಿಂದ ಸತ್ವಾರಿಗೆ ತೆರಳಲಿದೆ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...