Homeದಲಿತ್ ಫೈಲ್ಸ್ಉತ್ತರ ಪ್ರದೇಶ: ದಲಿತ ಯುವಕನ ಹಣೆ ಮೇಲೆ ಆ್ಯಸಿಡ್‌‌ನಿಂದ ‘ತ್ರಿಶೂಲ’, ‘ಓಂ’ ಚಿತ್ರ ಬರೆದು ಚಿತ್ರಹಿಂಸೆ

ಉತ್ತರ ಪ್ರದೇಶ: ದಲಿತ ಯುವಕನ ಹಣೆ ಮೇಲೆ ಆ್ಯಸಿಡ್‌‌ನಿಂದ ‘ತ್ರಿಶೂಲ’, ‘ಓಂ’ ಚಿತ್ರ ಬರೆದು ಚಿತ್ರಹಿಂಸೆ

- Advertisement -
- Advertisement -

ಉತ್ತರ ಪ್ರದೇಶ ಜಿಲ್ಲೆಯ ಸಹರನಪುರ ಜಿಲ್ಲೆಯಲ್ಲಿ ನಾಚಿಕೆಗೇಡಿನ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಹೋಳಿಹಬ್ಬದಂದು ದಲಿತ ಯುವಕನಿಗೆ ಹಣೆಯ ಮೇಲೆ ತ್ರಿಶೂಲ ಹಾಗೂ ಓಂ ಎಂದು ಬರೆದು ಚಿತ್ರಹಿಂಸೆ ನೀಡಲಾಗಿದೆ. ಆ್ಯಸಿಡ್‌‌ನಿಂದ ಚಿತ್ರ ಬರೆಯಲಾಗಿದೆ ಎಂದು ಆರೋಪಿಸಲಾಗಿದೆ.

ವೈನ್ ಗ್ಲಾಸ್ ಬಿದ್ದಿದ್ದರಿಂದ ಮೇಲ್ಜಾತಿ ಯುವಕರು ದಲಿತನನ್ನು ಥಳಿಸಿದ್ದು ಮಾತ್ರವಲ್ಲದೆ ಹಣೆಯ ಮೇಲೆ ಆ್ಯಸಿಡ್ ಎರಚಿದ್ದಾರೆ. ಅಷ್ಟೇ ಅಲ್ಲ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಸಂತ್ರಸ್ತ ಯುವಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಹಣದ ವಿಚಾರವಾಗಿ ಗಲಾಟೆ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಠಾಣಾ ಸದರ್ ಬಜಾರ್ ವ್ಯಾಪ್ತಿಯ ಕಾನ್ಶಿರಾಂ ಕಾಲೋನಿ ನಿವಾಸಿ ದಲಿತ ಯುವಕ ಆದೇಶ್ ಅವರು ಕೃಷ್ಣಾಪುರಿ ಕಾಲೋನಿ ಬಳಿ ಕಟ್ಟಡ ಅಡಿಪಾಯದ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹೋಳಿ ದಿನದಂದು ವಿಶಾಲ್ ರಾಣಾ ಎಂಬ ಸವರ್ಣಿಯ ಯುವಕ ಫೋನ್ ಕರೆ ಮಾಡಿ ಕರೆಸಿಕೊಂಡಿದ್ದಾಗಿ ಆದೇಶ್‌ ತಿಳಿಸಿದ್ದಾರೆ. ವಿಶಾಲ್ ವೈನ್ ಗ್ಲಾಸ್ ಕ್ಲೀನ್ ಮಾಡಲು ಹೇಳಿದ್ದಾಗಿ ಆದೇಶ್ ತಿಳಿಸಿದ್ದಾರೆ. ಗ್ಲಾಸ್ ತೊಳೆದ ನಂತರ ನೀರು ತರುವಾಗ ವೈನ್ ತುಂಬಿದ ಲೋಟ ಸವರ್ಣೀಯ ಯುವಕನ ಕಾಲಿನ ಮೇಲೆ ಬಿದ್ದಿದೆ. ಇದರಿಂದ ಸಿಟ್ಟಾದ ವಿಶಾಲ್ ಮತ್ತು ಆತನ ಜೊತೆಗಾರ ಟಿಂಕು ನನಗೆ ಥಳಿಸಲು ಆರಂಭಿಸಿದರು ಎಂದು ಆದೇಶ್ ದೂರಿದ್ದಾರೆ.

4 ಯುವಕರು ಆದೇಶ್‌ನ ಕೈಕಾಲು ಹಿಡಿದುಕೊಂಡಿದ್ದರು. ಇದರ ನಂತರ ವಿಶಾಲ್ ಮತ್ತು ಟಿಂಕು ದಲಿತ ಯುವಕನ ಹಣೆಯ ಮೇಲೆ ಆಸಿಡ್‌ನಿಂದ ತ್ರಿಶೂಲ ಬರೆದಿದ್ದಾರೆ. ಹೇಗೋ ಅವರಿಂದ ತಪ್ಪಿಸಿಕೊಂಡು ಹೊರಬಂದು ಆದೇಶ್‌ ಮನೆಗೆ ತಲುಪಿದ್ದು ಕಷ್ಟವನ್ನು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದಾದ ಬಳಿಕ ಆದೇಶ್‌ ತನ್ನ ಸಂಬಂಧಿಕರೊಂದಿಗೆ ಸದರ್ ಬಜಾರ್ ತಲುಪಿದ್ದು, ತಪ್ಪಿತಸ್ತರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಆರೋಪಿ ಯುವಕರು ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರಲ್ಲದೆ, ದೂರು ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ಹೇಳುತ್ತಾರೆ.

ಸಂತ್ರಸ್ತ ಆದೇಶ್ ಮತ್ತು ಆರೋಪಿ ಯುವಕರು ಹೋಳಿ ದಿನದಂದು ಒಟ್ಟಿಗೆ ಮದ್ಯ ಸೇವಿಸಿದ್ದಾರೆ ಎಂದು ಎಸ್‌ಎಸ್‌ಪಿ ಆಕಾಶ್ ತೋಮರ್ ಹೇಳಿದ್ದಾರೆ. ಸಂತ್ರಸ್ತನ ಮೇಲೆಯೇ ಆರೋಪ ಹೊರಿಸುವ ಷಡ್ಯಂತ್ರಗಳು ನಡೆದಿವೆ ಎಂಬ ಆರೋಪಗಳು ಬಂದಿವೆ.

ವಿಶಾಲ್ ರಾಣಾ ಮತ್ತು ಟಿಂಕುವಿನ ಹಣವನ್ನು ಆದೇಶ್ ಎಂಬ ಯುವಕ ಪಾವತಿಸಬೇಕಾಗಿತ್ತು. ಹಣ ವಾಪಸ್ ನೀಡಲಾಗದೆ ಈ ರೀತಿ ದೂರಲಾಗುತ್ತಿದೆ ಎಂದು ಪ್ರಕರಣವನ್ನು ತಿರುಚಲು ಯತ್ನಿಸಲಾಗಿದೆ ಎಂಬ ಆರೋಪಗಳು ಬಂದಿವೆ. ದುಷ್ಕರ್ಮಿಗಳು ಆ್ಯಸಿಡ್ ಬಳಸಿದ್ದಾರೆಂಬುದನ್ನು ಅಲ್ಲಗಳೆದಿರುವ ಪೊಲೀಸರು, ರಾಸಾಯನಿಕದಿಂದ ಹಣೆಯ ಮೇಲೆ ಚಿತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ತಮಿಳುನಾಡು: ಬೆತ್ತಲೆ ಚಿತ್ರೀಕರಿಸಿ ಬ್ಲಾಕ್‌ಮೇಲ್‌; ದಲಿತ ಮಹಿಳೆಯ ಮೇಲೆ ನಿರಂತರ ಗ್ಯಾಂಗ್ ರೇಪ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

0
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯಾ? ಹೌದು ಈಗೊಂದು ಆರೋಪವನ್ನು ಸ್ಪರ್ಧೆಯ ಆಕಾಂಕ್ಷಿಗಳಾಗಿದ್ದ ಹಲವು ಅಭ್ಯರ್ಥಿಗಳು ಮಾಡಿದ್ದಾರೆ. ವಾರಾಣಾಸಿಯಲ್ಲಿ ಚುನಾವಣಾಧಿಕಾರಿಗಳು ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿದ್ದ...